Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀ ಕೈಹಿಡಿದು ಮೇಲೆ......

ನೀ ಕೈಹಿಡಿದು ಮೇಲೆ
ಕೈ ರೇಖೆಗಳು ಬದಲಾದವು ಹುಡುಗಿ
ಬದಲಾದ ರೇಖೆಗಳು ನೀ ಕೊಟ್ಟ ಮುತ್ತುಗಳಿಗೆ
ನಾಚಿ ಮರೆಯಾದವು
ಶಾಸ್ತ್ರ ಕೇಳಲಿಲ್ಲ ಪಂಚಾಂಗ ನೋಡಲಿಲ್ಲ
ಆದರು ನಾವಿಬ್ಬರು ಮನ ಮೆಚ್ಚಿದ ಸತಿ ಪತಿಯರು!
ಅನಾಮಿಕ.........

- ಅನಾಮಿಕ..........

03 May 2017, 04:28 pm

ಶಶಿ

ಮಿಂಚುವ ತಾರೆಗಳು ಅಂಬರದಲ್ಲಿ
ಅಂದವಾದ ತಂಪಿನ ಮನೆ ಕಟ್ಟಿರಳು
ಬಂದುವಾಗಿ ನನ್ನ ಕರೆದರು....... ☄

ನಾಲಿನದಿನಕೆ ಸೊಗಸಾದ ನಗುತುಂಬಲು
ಸಿರಿನಗೆಯ ಚಲ್ಲುತ್ತಾ ನಾನೊರಟೇ
ಶಶಿಯಾಗಿ ನಕ್ಷತ್ರಗಳ ಅತಿಥ್ಯ ಸ್ವೀಕರಿಸಲು...☄

- ಶಶಿ

03 May 2017, 02:56 pm

ಹೊಸದೊಂದು ಅಧ್ಯಾಯ...

ಕನಸಗಳಲ್ಲೊಂದು ಕನಸು
ಅವಿತಿರುವ ಕನಸು ಕಲ್ಪನೆಗಳು ನೂರು
ಕಲ್ಲಾಗಿ ಇರಲಾರೆ ನಾ ಕೊನೆಯವರೆಗೆ
ಮನಸ್ಸಿನ ನೊರೆಂಟು ಪ್ರಶ್ನೆಗಳಿಗೆ
ಪ್ರತಿದಿನ ಕದನ ನಡೆವುದು ಮನದೊಳಗೆ
ಏಳು-ಬೀಳುಗಳ ಸಹಜ ಜೀವನ
ಬೇವು-ಬೆಲ್ಲ,ನೋವು-ನಲಿವಿನ ಹೂರಣ
ಹೆಜ್ಜೆ ಹೆಜ್ಜೆಗೂ ಸಿಗುವುದು ಕಾರಣ
ಹಳೆಯ ಪುಟಗಳ ನಡುವೆ
ಹೊಸದೊಂದು ಅಧ್ಯಾಯ
ಈಗ ನಾ ಬರೆಯಲಾರೆ
ಉತ್ತರ ಕೊಡಲಾಗದೆ ಒದ್ದಾಡುತಿದೆ
ಈ ಹೃದಯ...!!!

- Pb

03 May 2017, 10:39 am

ಹೊಂಗನಸು

ನಾನೆಂಬ ಈ ವಯಸ್ಸಿನಲ್ಲಿ
ಕರಿ ಕಾಡಿಗೆಯ ಹಚ್ಚಿ, ನನ್ನ
ಕನಸಿನ ಹಾದಿಗೆ ನಾ ಜಾರುವೆ
ಈ ಚಂಚಲ ಮನಸ್ಸಿಗೆ
ಕೈ ಕೊಡದೆ ಇದರ ಜೊತೆಯಲ್ಲೆ
ಸಾಗುವೆ ಏಕೆಂದರೆ ಮತ್ತೆ ಮತ್ತೆ
ಈ ವಯಸ್ಸು ನನಗೆ ತಳಿಸದೆ
ಮುಂದೆ ಹೋಗುವುದಿನ್ನೊಂದರ
ಕನಸಿನ ಲೋಕಕ್ಕೆ....ಅದಾಗುವುದೆ?
ಮುಪ್ಪಿನ ಆಸರೆಯಗನಸು!

*ನನ್ನಿ ನಾಮ ವಿಭಿನ್ನ..*

- ನನ್ನಿನಾಮವಿಭಿನ್ನ

03 May 2017, 10:07 am

ಮುಖವಾಡ

ತೋರದಿರೆನ್ನ ಮೊಗವ
ನಾ ನೋಡಲಾರೆ ತಿರುಗಿ
ಯಾತಕ್ಕಾಗಿ ಧರಿಸಿರುವೆ ನೀ
ಬೇಡವಾಗಿದೆಯಾ ಮೂಲ?
ಸಾಕು ನಿಲ್ಲಿಸು ಈ ಡೊಂಬರಾಟ
ಶಾಶ್ವತವಲ್ಲ ಬಹುದಿನಗಳಗಾಲ
ಬಿಟ್ಟು ಬಿಡೆನ್ನ ಕ್ಷಣಿಕ ಹರಣ
ತುಂಬು ಸಿಹಿನುಡಿಯ ಹೂರಣ
ಅಳಿಸು ನಾನೆಂಬ ಹುಳು
ಉಳಿಸು ನಾವೆಂಬ ಬಾಳು*

ಇಂತಿ,

ನನ್ನಿ ನಾಮ ವಿಭಿನ್ನ

- ನನ್ನಿನಾಮವಿಭಿನ್ನ

02 May 2017, 08:30 pm

.

ಒಮ್ಮೆ ಕಣ್ಣಲ್ಲಿ ಸಿಹಿ ಕನಸಾಗಿ ಬಾ..
ಮತ್ತೊಮ್ಮೆ ಹೃದಯದಲ್ಲಿ ಸವಿ ನೆನಪಾಗಿ ಬಾ...
ಮಗದೊಮ್ಮೆ ತ೦ಗಾಳಿಯಲ್ಲಿ ಬೆರೆತ ಪರಿಮಳದ೦ತೆ ತೇಲಿ ನನ್ನೆಡೆಗೆ ಬಾ....
ಕಣ್ಣಿನ ರೆಪ್ಪೆಯಲ್ಲಿ ಬಚ್ಛಿಟ್ಟು ಪ್ರೀತಿಸುವೆ,
ಹೃದಯದ ಗುಡಿಯಲ್ಲಿ ದೀಪವಾಗೆ ಬೆಳಗಿಸುವೆ,
ತ೦ಗಾಳಿ ತ೦ದ ಪರಿಮಳದಲ್ಲಿ ಲೀನವಾಗಿ ಮೈ ಮನ ಮರೆಯುವೆ....
ಅನಾಮಿಕ.......

- ಅನಾಮಿಕ..........

02 May 2017, 07:20 pm

ನನ್ನೊಲವ ವೈಣಿಕ

ನಿನ್ನೊಲವ ವೀಣೆ ನಾನು
ಮೀಟದಿರು ನನ್ನೆದೆಯ ತಂತಿಯನು ಓ ವೈಣಿಕ
ಉನ್ಮಾದದಿ ಮನಸಾಗಿದೆ ಭಾವುಕ

ಹುಣ್ಣಿಮೆಯ ತಂಗಾಳಿಯಲಿ
ನುಡಿಸದಿರು ಮೋಹಕ ರಾಗವನು ಕೈ ಮುಗಿವೆ
ಹುಚ್ಚೆದ್ದು ಕುಣಿಯುತಿದೆ ಸ್ವರ ತಾಳ ತ್ರೋಟಕ

ನೀ ಮೀಟಲು ತಂತಿಯನು
ಉಲಿಯದಿರಲು ಶಿಲೆಯೇ ತಾನು
ಕೂಡಲಿ ಇರು ನಮ್ಮಿಬ್ಬರ ಜಾತಕ

ನೀನು ನುಡಿಸೆ ನಾನು ನುಡಿಯೆ
ಹೊಸರಾಗದ ಹೊನಲು ಹರಿಯೇ
ಸಪ್ತಪದಿಯ ಸುರಾಪನದಿ ಸ್ವರ್ಗವಾಗದೇ ನಾಕ

ಸಾಕು ನಿಲ್ಲಿಸು ವೈಣೆಕನೇ ಶೃತಿ ಮೀರುವುದು ಪಾತಕ
ನಿನ್ನೆದೆಯ ವೀಣಿ ನಾನು ಅದ ನುಡಿಸಲಿರುವ ಬೆರಳು ನೀನು,
ಇನ್ನೇಕೆ ಈ ತಳಮಳ ತವಕ ಸ್ವರಕೆ ರಾಗವಾಗುವ ಕೌತುಕ

ಹಂಸಿನಿ

- ವಿಸ್ಮಯ

02 May 2017, 07:13 pm

ಜಗನ್ನಿಯಾಮಕ ವೈಣಿಕ

ನಿನ್ನ ಮಡಿಲ ಪುಟ್ಟ ವೀಣೆ ನಾನು
ನುಡಿಸುತಲಿರುವೆ ಜಗವೆಂಬ ವೀಣೆಯನು
ಎಲ್ಲೋ ಅಡಗಿ ಓ ವೈಣಿಕ

ನೀನು ನುಡಿಸೆ ನಾನು ನುಡಿವೆ
ನುಡಿಸಿದರು ಅಪಶೃತಿಯನು
ಕೈಮುಗಿದು ಬೇಡುವೆ ಜಗದ್ವ್ಯಾಪಕ

ನಿನ್ನ ಸ್ವರ ಲಯದ ತಾನವ ಅರಿತವರು ಯಾರಿಲ್ಲ
ನಿನ್ನ ಕಲಾಶಕ್ತಿಯಲಿ ಒಂದಿನಿತೂ ಕುಂದಿಲ್ಲ
ಆಲಿಸಿಯೂ ಅರಿಯದೆ ಹೋದೆ ಸಹೃದಯ ನಾನಲ್ಲ

ಒಂದೊಮ್ಮೆ ನುಡಿಸುವೆ ಶೋಕ ಗೀತೆಯನು
ಮತ್ತೊಮ್ಮೆ ನುಡಿಸುವೆ ಆನಂದದ ಭೈರವಿಯನು
ಮುಂದೇನೋ ಅರಿಯದೆ ಮೂಕರಾಗ ಹಾಡುತಿಹೆನು

ತಂತಿಮುರಿದ ವೀಣೆ ನಾನು
ಹೊಮ್ಮಿಸಲು ಸಾಧ್ಯವೇ ಹೊಸನಾದವನ್ನು
ಸರಿಪಡಿಸು ಬಾರಾ ಬದುಕೆಂಬ ವೀಣೆಯ ತಂತಿಯನು ಓ ವೈಣಿಕಾ

ನಿನ್ನ ಕಾಣದೆ ನಡುಗುತಿದೆ ಸ್ವರ
ಬಾಳ ಧ್ವನಿಯನು ಸೇರಿಸು ತೀರ
ಬಾ ರಸಧಾರ ಓ ಜಗನ್ನಾಟಕ ಸೂತ್ರಧಾರ

ಹಂಸಿನಿ

- ವಿಸ್ಮಯ

02 May 2017, 07:13 pm

ಅವಳ ನೆನಪು

ಬಣ್ಣಗಳು ಕರಗಿ ಮಬ್ಬಾದ
ಅವಳ ಚಿತ್ರವೊಂದು
ನೆನಪಿನ ಪುಟದೊಳಗಿಂದ
ನನ್ನನು ಕಾಡುತ್ತಿತ್ತು

ಮೊದಲ ನೋಟದಲ್ಲೇ
ಅಚ್ಚೊತ್ತಿದ ಚಿತ್ರದ
ಭಾವಗಳು ಅಯೋಮಯವಾಗಿ
ಅವಳ ನಗು ಅಸ್ಪಷ್ಟವಾಗಿತ್ತು

ನಿನ್ನ ದಟ್ಟ ಹೆರಳ ವರ್ಣದ 
ವರ್ಣನೆ ನಾ ಮಾಡಲೇ?
ಬೆಂಡೋಲೆ ಕಳಿಸಿದ ಪ್ರೇಮದೋಲೆಯ
ನಿನ್ನ ಮುಂದೆಯೇ ಓದಲೇ?
ಬೊಗಸೆ ಕಣ್ಗಳ ಹಾದಿಯಿಂದ
ನಿನ್ನ ಕನಸ ಸೇರಲೇ?
ತುಟಿಯಂಚಲಿ ಬಂದ ನಗುವಿಗೆ
ಬಿದ್ದ ಕೆನ್ನೆ ಗುಳಿಯಲಿ ನಾ ಬೀಳಲೇ?

ವರ್ಣಹೀನ ಚಿತ್ತಾರದೊಂದಿಗೆ
ನನ್ನ ವರ್ಣರಂಜಿತ ಸಲ್ಲಾಪವು...
ನೋಡಿ ವರುಷಗಳು ಕಳೆದರೂ
ಮನದ ಪೇಚಾಟಕ್ಕೆ ಎಲ್ಲಿ ಕೊನೆ...

ಅವಳೊಮ್ಮೆ ಸಿಕ್ಕರೆ? ಒಮ್ಮೆ ನಕ್ಕರೆ?
ಮಾಸಿದ ಚಿತ್ರಕೆ 
ರಂಗಿನೋಕುಳಿ ಚೆಲ್ಲಿ ಹೋದರೆ...!!

"ಫೇಸ್ ಬುಕ್ಕಿನಲ್ಲಿ ಅವಳಿರಬಹುದು
ಹುಡುಕಿ ನೋಡೊಮ್ಮೆ"
ನನ್ನ ಪಾಡಿಗೆ ಕೊರಗಿದ  
ಗೆಳೆಯನ ಸಲಹೆ ಬಂತು.

ಕಣ್ಣಂಚಿಗೆ ಆಸೆಯ ನೀರನೆರಚಿ
ನಡೆಸಿದ ತಡರಾತ್ರಿಯ ತಡಕಾಟದಲ್ಲಿ
ಸಿಕ್ಕಿ ಬಿಟ್ಟಿತು ಅವಳ ಮುಖ!!

ಹುಡುಗನೊಬ್ಬನ ಕೆನ್ನೆಗೆ
ಗುಳಿಬಿದ್ದ ಕೆನ್ನೆ ಅಂಟಿಸಿ
ತನ್ನ ಕೈಯ್ಯಾರೆ ತಗೆದ ಚಿತ್ರಕೆ
"ನಾನೂ-ನನ್ನವನೂ" ಶೀರ್ಷಿಕೆ

"ಮುಖ ಪುಸ್ತಕ" ನಾಶವಾಗಲಿ,
ಕ್ರುದ್ಧ ಮನಸು ಹಾಕಿತು ಶಾಪ 
ನೆನಪಿನ ಪುಟಕೆ ಕಿಡಿ ಸೋಕಿ
ಮಾಸಿದ ಚಿತ್ರವೀಗ ಕಪ್ಪು ಮಸಿ

- ಅರೆಯೂರು ಚಿ. ಸುರೇಶ್

02 May 2017, 07:02 pm

....

ಅಂದು!
ಪ್ರೀತಿ ಮಾಡಲು ಹೋಗಿ
ಹೃದಯ ಸುಟ್ಟುಕೊಂಡೆ,
ಸ್ನೇಹ ಬೆಳೆಸಲು ಹೋಗಿ
ಕನಸು ಕಟ್ಟಿಕೊಂಡೆ,

ಇಂದು!
ಪ್ರೀತೀನು ಜೊತೆಗಿಲ್ಲ
ಸ್ನೇಹಾನೂ ಉಳಿದಿಲ್ಲ....

ಅನಾಮಿಕ

- ಅನಾಮಿಕ..........

02 May 2017, 06:25 pm