Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬೆಳಕ ನೆರಳು

ಕತ್ತಲ ಹೊದ್ದ ರಾತ್ರಿಯಲ್ಲೊಂದು
ಮರೀಚಿಕೆ ಬಯಕೆ ಜನಿಸುತ್ತದೆ
ಎಂದೆಂದೂ ನೀ ಒಟ್ಟಿಗೆ ಇರಬೇಕು
ಮುಂಗಾರಿನ ಹನಿಯಲ್ಲೊಂದು ನಾ
ಅರಿಯದ ಕವಿತೆ ನೀ ಆಗಬೇಕು
ಒಡೆಯದ ಮೋಡವೂ ನಾಚಿ
ನೀರಾಗುವುದು ಆವಾಗಲೇ

ಅಮಾವಾಸ್ಯೆ ಕಪ್ಪಿಗೆ ಹುಣ್ಣಿಮೆ
ಮುತ್ತನೊಂದು ಆಶಿಸುವ ಹೃದಯ
ಒಡಂಬಡಿಕೆ ಮುರಿಯದ ರಾಗಿಣಿ
ರಾಗ ನೀ ಆಗಬೇಕು
ಪರವಶಳಾಗದ ಒಲವಿನ ರೆಕ್ಕೆಗೆ
ಪುಳಕ ನಾ ಕೊಡುವುದು ಅನಾಮಧೇಯ ಸತ್ಯ

ಟಾರು ದಾರಿಯ ಬೆಳಕ ನೆರಳಿಗೆ
ಇರುವೆಗಳೆರಡು ಗಸ್ತು ತಿರುಗುತ್ತದೆ
ಕೂಲಂಕುಷ ನಡೆಯ ಬಳಿಕ
ಅನಂತ ಪಯಣಕೆ ನನ್ನೊಳಗೆ
ಆವಾಹನೆ ನೀ ಅರಿಯದ ವಿಚಾರ

ಎದೆಯುಬ್ಬಿ ಹೆಸರನ್ನೊಮ್ಮೆ ಉಸುರಿ
ಬಿಡುತ್ತೇನೆ ರೋಮ ಸೆಟೆಯುವುದು
ನಾ ಕಳೆದು ಹೋದ ಸ್ಪಷ್ಟ ನಿದರ್ಶನ
ನೀ ಸೋಕದ ಬಟ್ಟೆಯನ್ನೊಮ್ಮೆ
ತದನಂತರ ಅಣುಕಿಸುತ್ತೇನೆ
ನಿನ್ನ ಹೆಸರ ನೆಪದಿಂದ ಘಮವೊಂದು
ಗಾಳಿಗೆ ಸೇರುವುದು ಗೊತ್ತಾಗದೇ

ಹಲ್ಕಾ ಕವಿತೆ

*ಅವಿಜ್ಞಾನಿ*

- ಅವಿಜ್ಞಾನಿ

13 Apr 2017, 12:02 pm

ಪ್ರೀತಿ ಎಂದರೇನು

ನಾ ನೊಡದ ನೀನ್ನನು...
ನೀ ನೊಡದ ನನ್ನನು...
ಅರಿಯುವದು ಪ್ರೀತಿನಾ....??

ಒಬ್ಬರನೊಬ್ಬರು ಬಿಟ್ಟಿರದೇ ...
ಎದರು ಬದರು ಕುಳಿತುಕೊಂಡು
ಕಣ್ಣುಗಳನ್ನು ನೋಡುವುದು ಪ್ರೀತಿನಾ...???

ಇಬ್ಬರು ಇನ್ನೊಬ್ಬರ ಹಸರಲ್ಲಿ
ಕವನ ಕವಿತೆಗಳನ್ನ ಬರಯುವುದು
ಪ್ರೀತಿನಾ...??

ಕನಸುಗಳ ಕಣ್ಣಲ್ಲಿ ಬಚ್ಚಿಟ್ಟು
ಮನಸು ಯಾವಗಲು ಕಾಯುತ್ತಿರುವ ಕಾತುರ ಪ್ರೀತಿನಾ...??

ಪ್ರೀತಿ ಎಂದರೇನು ....ಆರಿಯದೆ ಹೋದೆ ನಾನು....

- Chinnu

13 Apr 2017, 11:50 am

ಗೆಳತಿ

ನಿನ್ನ ಅಂತರಾಳವ
ಅರಿಯಲು ಹೋದ ನನಗೆ
ಸಿಕ್ಕಿದ್ದು!!!
ಒಲವುಗಳ ಅಪ್ಪುಗೆ :)

- Chinnu

13 Apr 2017, 11:47 am

ಪ್ರೀತಿ

ದಾರಿ ಮರೆತಿರುವಾಗ
ಊರು ಬಲು ದೂರ
ಪ್ರೀತಿ ಇಲ್ಲದಿರು ವಾಗ
ಮಾತು ಬಲು ಬಾರ

- SMITHA

13 Apr 2017, 08:20 am

ಕೊಕ್ಕರೆ....

ಓ ಕನಸಿನ ಕೊಕ್ಕರೆ
ನಿನ್ನ ಮಾತು ಅಕ್ಕರೆ
ನನಸಲಿ ನೀ ನನಗೆ ಸಿಕ್ಕರೆ
ನನ್ನ ಬಾಳು ಹಾಲು ಸಕ್ಕರೆ...

- Irayya Mathad

12 Apr 2017, 09:31 pm

ಚಂದಿರ

ಆಕಾಶದ ಹಣೆಯಲ್ಲಿ ಸಿಂಧೂರ ಚಂದಿರ
ನಕ್ಷತ್ರದ ಸಾಮ್ರಾಜ್ಯಕ್ಕೆ ರಾಜನಿವ ಸುಂದರ
ಕಪ್ಪಾದ ರಾತ್ರಿಯಲ್ಲಿ ನಗುವ ನಕ್ಷತ್ರಗಳನಿಟ್ಟು
ಜಗಕೆಲ್ಲಾ ನೀಡುವ ತಂಪಾದ ತಂಗಾಳಿ.....

ಬೆಳಕೆಲ್ಲಾ ನಮಗಿಟ್ಟು ಕಳೆಗಳನ್ನು ಅಡಗಿಟ್ಟು
ಆಕಾಶದ ಅಂಚಲವ ಕಾಣದಂತೆ ಮಾಡಿರುವ
ಬೆರಳೆಣಿಕೆಗೆ ಸಿಗದಷ್ಟೂ ಆಕಾರಗಳ ರಚಿಸಿರುವ
ಸೂರ್ಯನನ್ನು ವಿಶ್ರಾಂತಿ ಭವನಕ್ಕೆ ಕಳಸಿ.....

ಕಗ್ಗತ್ತಲೇ ಕಳೆಯುವ ಕೆಲಸವನ್ನು ಕೈಗೊಂಡಿರುವ
ಅವನ ಅಂದದಿ ನಮ್ಮೆಲ್ಲರ ಗಮನವನ್ನು ಸೆಳೆದು
ಮೋಡಗಳ ಮಧ್ಯದಿಂದ ಇಣುಕಿಣುಕಿ ನೋಡುತಿರುವನು ...........

ನನ್ನ ನೋಡಲೆಂದು ಆ ನೀಲಿ ಭಾನಿನಲ್ಲಿ.......

- ಚುಕ್ಕಿ

12 Apr 2017, 08:39 pm

ಬರ ಮತ್ತು ರೈತನ ಗೋಳು

ಬರಬೇಕೆ ಬರ ರೈತನಾ ಬಾಳಲಿ ಹೆಮ್ಮಾರಿಯಂತೆ
ಕಿತ್ತುತಿನ್ನುವ ಬಡತನದ ಬೇಗೆ
ಬಿತ್ತಿದಾ ಬೆಳೆಯೂ ನಾಶವಾಗೆ
ಭೂಮಿಯೆಲ್ಲಾ ಬೆತ್ತಲಾಗಿ
ಬದುಕುವಾಸೆ ಕತ್ತಲಾಗಿ
ಕಾರ್ಮುಗಿಲಿಗಾಗಿ ಕಂಬನಿಗರೆದಿದೆ

ಸಾಲ ಸೋಲ ಖಾಲಿಯಾಗಿ
ಮೀಟರ್ ಬಡ್ಡಿ ದುಪ್ಪಟ್ಟಾಗಿ
ದನಕರುಗಳನು ಕಸಾಯಿಖಾನೆ ಗೆ ನೂಕಿ
ನಾಕವೆಲ್ಲ ನರಕವಾಗಿ ಹನಿ ನೀರಿಗೆ ಕಾದಿದೆ
ಇನ್ನು ನಿಮಗೆ ಕೊಡಲು ನನಗೆಲ್ಲಿಂದ ಹಣ ಬರುವುದೇ?

ಮಾನಕಂಜುವ ಮಕ್ಕಳು ನಾವು
ಕಾವ ದೈವಗಳೇ ಮನ್ನಿಸಿರಿ ನೀವು
ಮಳೆಯನು ತರಿಸಿ ವುಳಿಸಿರಿ ಪ್ರಾಣವ
ಮನೆ ಮಾನ ಹರಾಜಿಗಿದೆ ನಡೆಯಿಸಿ ಪವಾಡವ
ಚುನಾವಣೆಗೆ ನಿಂತ ರಾಜಕಾರಣಿಯಂತೆ
ನೀಡದಿರಿ ಪೊಳ್ಳು ಭರವಸೆಯ

ಮಾನವೇ ಹೋಗಿರೆ ಪ್ರಾಣಕೇನು ಬೆಲೆ
ಕಾಯುವವ ಬರದಿರೆ ಕೊಲ್ಲುವವನ ಕರೆಯದೆ ದಾರಿ ಇದೆಯೇ?
ಈಸಬೇಕಂತೆ ಇದ್ದು ಜಯಿಸಬೇಕಂತೆ
ತತ್ವ ಹೇಳುವ ಮಠಾಧೀಶರು ಇಲ್ಲಿ ನೂರುನೂರು.
ಭಾಷಣ ಬಿಗಿಯುವ ಪುಢಾರಿಗಳಿಗೆ ಹೇಳಿಕೊಡಬೇಕೇ ಮೊಸಳೆ ಕಣ್ಣೀರು

ಮುಗ್ಧ ಮಕ್ಕಳ ಬೀದಿಪಾಲು ಮಾಡಿ ಹೋಗಲೇ ಅಯ್ಯೋ ನನ್ನ ಕೈಯಾರೆ ವಿಷ ವುಣಿಸಲೇ
ಮುದ್ದು ಮಡದಿಯೇ ಅಂದು ನಿನ್ನೊಸಲಿಗಿಟ್ಟೆ ಕೆಂಪು ಕುಂಕುಮ
ಇಂದುಣಿಸುತಿರುವೆ ಪಾಷಾಣದ ಉಂಡಿಗೆಯ ಸಂಭ್ರಮ

ಅಜ್ಜನ ತುತ್ತು, ಅಜ್ಜಿಯ ತುತ್ತು, ಅಪ್ಪನ ತುತ್ತು, ಅಮ್ಮನ ತುತ್ತು, ಬರದ ತುತ್ತು, ದೇವರ ತುತ್ತು, ಸಾಲಿಗನ ತುತ್ತು, ಪುಢಾರಿ - ಪಾಶಂಢಿಗಳ ತುತ್ತು, ಬೆವರ ಕಂಬನಿಯ ತುತ್ತು.
ಬನ್ನಿ ಹೋಗೋಣ ಮನುಜರನು ಮನುಜರಂತೆ ನೋಡುವಾ ತಾಣಕೆ,ಹಸಿವಿರದ, ನೋವಿರದ, ಅಪಮಾನವಿರದ ಜಾಗಕೆ, ಚಿರಶಾಂತಿಯ ನಿದ್ರೆಗೆ

ಎಂದಿನಂದದಿ ಮಾಧ್ಯಮದಿ ವಿಜೃಂಭಿಸುತಿದೆ ರೈತಕುಟುಂಬ ದುರ್ಮರಣದ ವಿಶೇಷ ಸುದ್ದಿ
ದೌಡಾಯಿಸಿ ಬಂದಿತು ರಾಜಕೀಯದ ಆಶಾಡಭೂತಿ.
ಬದುಕಿದಾಗ ಬೊಬ್ಬೆಇಟ್ಟರೂ ಬಾರದಾ ಇವರು, ಸತ್ತಾಗ ಬಂದು ಸಾಂತ್ವಾನ ಮಾಡುವರು.
ರೈತರ ಸಾವು-ಬದುಕಿನ ಹೋರಾಟ ಇವರಿಗಂತೆ ಚದುರಂಗದಾಟ

ಸತ್ತ ಹೆಣದಮೇಲೆ ಮದಿರೆಯ ಕಾಯಿಸಿ ಮದದಿ ಮೆರೆದಾಡುವ ಮಾನಗೇಡಿಗಳು, ರಾಜಕಾರಣದ ಹೇಸಿಗೆಯಲ್ಲಿ ಹೊರಳಾಡುವ ಜಂತು ಹುಳುಗಳು.
ರೈತರಾಸಾವು ಇವರಿಗೊಂದು ಪ್ರಚಾರದ ಗಿಮಿಕ್ಕು,
ನೀವ್ ಸತ್ತರೆ ಬೆಂಕಿ ಇಡರು ಯಾರು ನಿಮ್ಮ ಹೆಣಕ್ಕೂ

ಹಂಸಿನಿ

- ವಿಸ್ಮಯ

12 Apr 2017, 07:52 pm

ಕೂಡಿ ಕಳೆವ ಬದುಕು

ಕೂಡಿ ಕಳೆವ ಆಟವಂತೆ‌ ಬದುಕು
ಎಲ್ಲಾ ಕೂಡಿದಾಗ ಕಂಡ ನಗುವೇ ಸೊಗಸು
ಕಳೆವ ‌ಆಟ ನೋಡಿದಾಗ ಮರಗುವುದು‌ ಮನಸು

ಕೂಡಿ‌ ಕಂಡ ನೋವು‌‌ ಖುಷಿಗಳಿಗೆ‌ ಕೊಡಲಾಗುವುದೆ ಬಿರುದು
ದೂರ‌‌ ಸರಿದು‌ ಒಂಟಿಯಲಿ ಕಂಡ ಖುಷಿಯು ಏನೋ ಮನದಾಳದಲ್ಲಿ ಬರಿದು

ಕೂಡಿದಾಗ ಮೌನದ ಕಟ್ಟೆಯ ಕೊನೆಯು
ಕಳೆದ ಕ್ಷಣವೆ ಮನದಲ್ಲಿ ಮುಗಿಯದ ಮಾತಿನ ಬರವು

ಎಲ್ಲ ಕೂಡುವ ಕ್ಷಣಕ್ಕೆ‌ ಕಾಯುವುದೆ ಕನಸು
ಕೂಡಿದ ಕ್ಷಣವೇ ನಲಿವುದು ಮನಸು
ಆ ಕ್ಷಣವ ನೆನೆವುದೇ‌ ಬಾಳ ಸೊಗಸು

- ಶ್ರೀಕಾವ್ಯ

12 Apr 2017, 06:02 pm

ಮನಸ್ತಾಪದ ಮರ್ಕಟ..

ಪ್ರೀತಿಯಲ್ಲಿ ಕಲಹಗಳು ಸಹಜ ಆದರೆ ಆ ಕಲಹಗಳು ಪ್ರೀತಿಗೆ ಮುಳ್ಳಾಗಬಾರದು,
ಏಕೆಂದರೆ ಉಳಿಪೆಟ್ಟು ಬಿದ್ದಾಗಲೆ ಒಂದು ಕಲ್ಲು ಅದ್ಭುತ ಮೂರ್ತಿಯಾಗುತ್ತದೆ. ಉಳಿಪೆಟ್ಟು ಬಿದ್ದಾಕ್ಷಣ ಕಲ್ಲು ಕುಪಿತಗೊಳ್ಳವುದಿಲ್ಲ, ಸಹನೆಯಿಂದ ಅದು ದೈವ ಸ್ವರೂಪವನ್ನು ಪಡೆಯುತ್ತದೆ. ಹಾಗೆಯೆ ಸಣ್ಣಪುಟ್ಟ ಮನಸ್ತಾಪಗಳನ್ನು ಮೀರಿ ಪ್ರೀತಿಯನ್ನು ಗೆದ್ದು ಪ್ರೇಮ ಮೂರುತಿಯನ್ನು ನಿರ್ಮಿಸಬೇಕು....

- Irayya Mathad

12 Apr 2017, 05:59 pm

... ಕ್ಷಣ ಸುಖದ ವ್ಯಾಮೋಹಿ ನಾನಲ್ಲ...

ಕಣ್ಣೋಟದ ಒಂದು ಸ್ಪರ್ಶಕೆ ಕಾಯಲು ನಾನೂ, ನೋಡದೆ ನೀನು.
ತುಟಿಯಂಚಿನ ಪ್ರೀತಿ ಮಾತಿಗೆ ಕಾಯಲು ನಾನೂ, ಆಡದೆ ನೀನು.
ಕ್ಷಣ ಸುಖದ ಬಿಸಿ ಅಪ್ಪುಗೆಯ ವ್ಯಾಮೋಹಿ ನಾನಲ್ಲ,?
ನನ್ನನೊಮ್ಮೆ ನೋಡಿ ತುಟಿ ಮಲ್ಲಿಗೆ ಅರಳಿದರೆ, ನನ್ನನೆ ಕುರಿತು ಮಾತ್ತೊಂದು ಆಡಿದರೆ,
ಆ.. ಕ್ಷಣಕೆ ಸಾಟಿ ಮತ್ತೊಂದಿಲ್ಲ....!!!

- ಪಿ ಅನಿ...

12 Apr 2017, 05:00 pm