Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಹೀಗೆ ಬಂದು ಹಾಗೆ ಹೋದ
ಒಂದು ಕಳ್ಳ ಪ್ರೇಮ
ಕಲೆತು ಬೆರೆತು ಕಳೆದ ಹೊತ್ತು
ಮರೆತು ಹೋಯಿತೇನು !
ಅಡ್ಡ ಬಂದು ನಿಂತಿತೊಂದು
ದೈತ್ಯ ದೆವ್ವ ಜಾತಿ
ಕೆಡ್ಡದಲ್ಲಿ ಬಿದ್ದುಕೊಂಡು
ನರಳಿ ಸಾಯ್ತು ಪ್ರೀತಿ.
ಹೇಳುವರು ಲೋಕದಲ್ಲಿ
ಇಲ್ಲ ಈಗ ಜಾತಿ ಪ್ರೀತಿ
ಕೇಳುವರು ಇಲ್ಲ ಎಲ್ಲೂ
ನೈಜ ಮನುಜ ನೀತಿ.
- ಶ್ರೀಗೋ.
06 Apr 2017, 06:59 pm
ರಾಧಾ ರಮಣ
ಯೆಶೋಧಾ ನಂದನ
ನವನೀತ ಚೋರಾ
ನಂದನ ಕುಮಾರ .
ಗೋಕುಲ ಕೃಷ್ಣಾ
ಗೋಪಾಲ ಕೃಷ್ಣಾ
ಬೇಗನೆ ಬಾರೋ
ಮುರಳೀಧರ.
ಕದ್ದ ಹೃದಯವ
ಹಿಂತಿರುಗಿಸಬೇಡ.
ಅಲ್ಲಿರುವ ನಿನ್ನ ರೂಪಕೆ
ಉಸಿರಾಗು ಸಾಕು.
ನಿನ ನಾಮ ಸ್ಮರಣೆಯಲಿ
ಇಡೀ ಜೀವನ ಕಳೆಯುವೆ
ನಿನಗಾಗಿ ಕಾದಿರುವ ಈ ಜೀವಕೆ
ನಿನ್ನ ಹೆಸರೇ ಇಡುವೆ.
ಕನಸಲ್ಲಿ ನನಸಾಗು
ನೆನಪಲ್ಲಿ ನಗುವಾಗು
ಮಾತಲ್ಲಿ ಧ್ವನಿಯಾಗು.
ನನ ಎದೆಬಡಿತದ ಸದ್ದಾಗು
ನನ್ನಲ್ಲಿರುವ ಜೀವವಾಗು
ಆ ಜೀವಕ್ಕೆ ಜೊತೆಯಾಗು......
ಶ್ರೀ
- ಚುಕ್ಕಿ
06 Apr 2017, 05:43 pm
ಪ್ರೇಮವೆಂಬ ಸೆರೆಮನೆಯಲ್ಲಿ
ಸೆರೆಯಾದ ಪ್ರೇಮಿ ನಾ!!
ಕಂಬಿ ಹಿಂದೆ ಕನಸ ಹೆಣೆದು
ನಾ ಕುಳಿತಿರುವೆನು ಈ ದಿನ!!
ಬಾ ನೀನು ಇಲ್ಲಿ ಬಂದು
ಜೊತೆಯಾಗು ಸೆರೆವಾಸದಲ್ಲಿ!!
ಇಲ್ಲದಿದ್ದರೂ ಬಂದು
ಕಂಬಿ ಸರಿಸು ನೀನು ಇಂದು!!
ನಾ ಒಂಟಿಯಾಗಿ ನರಳುತಿರುವೆ
ಈ ಪ್ರೇಮವೆಂಬ ಸೆರೆವಾಸದಲ್ಲಿ!!
ನಾ ಹೆಣೆದ ಕನಸೇ ನನ್ನ ಮುತ್ತಿ
ಕೊಲ್ಲುತಿಹುದು ಇಲ್ಲಿ!!
ನೀ ಬರುವ ದಾರಿ ಕಾಯುತಲಿ
ನಾನು ಕುಳಿತಿರುವೆನು ಇಲ್ಲಿ!!
ನೀ ಬಂದು ಬಿಡಿಸು ನನ್ನನ್ನು
ಸರಿಸಿ ಇಂದು ಸೆರೆಯ ಕಂಬಿ!!
- ಪಿ.ಜಿ.ಜ್ಯೋತಿ
06 Apr 2017, 01:52 pm
ಜೇನು ಗೂಡಿನಲಿ ಮೀನು
ವಾಸ ಮಾಡುವುದೇ ತಾನು!!
ಒಲವಿನ ಬಯಕೆ ಮೂಡಿ
ಸೇರುವುದೇ ಭೂಮಿ ಬಾನು!!
ಮನದ ಮರೆಯಲಿ ಅಡಗಿರುವ
ಕೋಟಿ ಕೋಗಿಲೆಯಂತೆ ನೀನು!!
ಕರಗದ ಕನಸು ನೀನು
ದೊರೆಯದ ಮಾಣಿಕ್ಯ ನೀನು!!
ಮುಗಿಲ ಚಂದ್ರ ನಿನ್ನನ್ನು
ಮೋಹದಿ ಬಯಸಿದೆ ನಾನು!!
ಸೇರುವ ಬಯಕೆ ಇಂದು
ತೀರದ ಬಯಕೆ ನನ್ನದು!!
ದುಂಬಿಯ ಮೇಲೆ ಮೋಹ
ಆ ಹೂವಿಗೆ ಪ್ರೇಮ ದಾಹ!!
ದುಂಬಿಯ ಜೊತೆ ನಲಿಯಲು
ಹಾರುವ ಬಯಕೆ ಸಾಲದು!!
- ಪಿ.ಜಿ.ಜ್ಯೋತಿ
06 Apr 2017, 10:31 am
ನವಿಲು ಗರಿಯ ಮುಡಿದು
ಕೊಳಲ ಹಿಡಿದು ಬರುವ
ಶ್ರೀ ಕೃಷ್ಣನ ದಾರಿಯ ಕಾದಿರೋ ರಾಧೆಯ
ಮನಸಿನ ಮಾತದು ಬೇಗನೇ ಬಾರಯ!!
ಸಣ್ಣದೊಂದು ಹೂವ ಮಾಲೆ
ಕರದಿ ಹಿಡಿದು ಕಾದಿರೋ ನಲ್ಲೆ
ಸುತ್ತ ಕಣ್ಣ ಹೋರಳಿಸಿ ಕಾದಳು
ಎತ್ತ ಅವನು ಬರುವನು ಎಂದು!!
ಮನದಿ ಅವನ ಸೇರೋ ತವಕದಿ
ಕಾದು ಕುಳಿತಳು ಒಲವಿನ ಪುಳಕದಿ
ಅವನು ಎದುರಿಗೆ ಕಾಣದೇ ಇರಲು
ಶಪಿಸಿ ನೊಂದಳು ತನ್ನ ಕಂಗಳ!!
ಅವನ ಹುಡುಕಲು ಹೆಜ್ಜೆ ಕಿತ್ತರೆ
ಕೊಳಲ ದನಿಯ ಸ್ವರವು ಕಿವಿಯಲಿ
ದನಿಯ ಮಾರ್ಗವ ಹಿಡಿದು ಓಡಲು
ಕಂಡ ಕೃಷ್ಣನು ಗೋವುಗಳ ಹಿಂಡಲಿ!!
- ಪಿ.ಜಿ.ಜ್ಯೋತಿ
06 Apr 2017, 10:10 am
ನಾನು ಸಾಯಲಿಲ್ಲ
ಅವಳು ಸಾಯಲಿಲ್ಲ
ನಮ್ಮಿಬ್ಬರಿಗೂ ಹುಟ್ಟಿದ
ಪ್ರೀತಿಯ ಕೂಸು ಸತ್ತುಹೋಯಿತು
ಮೂರುದಿನಕೆ ಹಾಲು ತುಪ್ಪ ಬಿಟ್ಟಾಯಿತು
ಗೋರಿಯನು ಕಟ್ಟಾಯಿತು
ಇನ್ನೇನು ಹೇಳುವುದು
ಅವಳ ಬದುಕು ಅವಳಿಗೆ
ನನ್ನ ಬದುಕು ನನಗೆ
ಉಸಿರಿರುವವರೆಗೆ ಜೀವ
ಬದುಕಿರುವವರೆಗೆ ಬದುಕು
- ಚೇತನ್ ಬಿ ಸಿ
06 Apr 2017, 08:05 am
ನೀನೆಲ್ಲಿರುವೆಯೋ ನನಗಾಗಿ
ನನ್ನ ನಗುವಿನ ಹೆಸರಾಗಿ***
ಕಂಬನಿಯ ಸೆರೆಮನೆಯಲ್ಲಿ
ನೀನಿಲ್ಲದೆ ಸೆರೆಯಾಗಿರುವೆನು
ನಾ ನಿನಗಾಗಿ***
- ಚುಕ್ಕಿ
05 Apr 2017, 11:58 pm
ಕರಗಿದ ಕಂಬನಿಯ
ನಗುವಲ್ಲಿ ನಾನಿಂದು
ಮೌನವಾಗಿ ಕುಳಿತಿರುವೆ.
ಯಾರಿಂದ ಈ ನೋವು
ಯಾರಿಗಾಗಿ ಈ ಸಂಘರ್ಷಣೆ
ನನ್ನಲ್ಲಿ ನನಗೀಗ .
ಮರೆಯಾಗು ನೀ ಮಾಯವಾಗು ನೀ
ನನ್ನಿಂದ ದೂರವಾಗು ನೀ
ಹೇ ಕಂಬನಿ ಕಣ್ಮರೆಯಾಗು ನೀ.
- ಚುಕ್ಕಿ
05 Apr 2017, 11:57 pm
ನಾನು ನಿನ್ನ ಕವಿತೆಗಳ ಸಾಲುಗಳಾಗುವೆ ಎಂದಳು, ಸರಿ ಎಂದೆ.
ನಿನ್ನ ಮೆಚ್ಚಿನ ಹಾಡುಗಳ ಜೀವವಾಗುವೆ
ಎನ್ನಲು, ಆಗಲಿ ಎಂದೆ.
ನಿನ್ನ ಕನಸುಗಳ ಒಡತಿಯಾಗಿ ನಿನ್ನ ಕಲ್ಪನೆ ಯಾಗುವೆ ಎಂದಳು.ಹಾಗೆ ಸ್ವಲ್ಪ ಮನಸ್ಸಿಗೆ ಮುದ ನೀಡುವ ಪ್ರೀತಿಯಾಗು ಅಂದೆ.
ಈಗ ನನ್ನ ದಾರಿ ನನಗೆ, ನಿನ್ನ ದಾರಿ ನಿನಗೆ ಎಂದು ಹೊರ ನೆಡೆದಳು.
ಸರಿ ಮೊದಲನಿಂದಲೂ ನನ್ನ ದಾರಿಯಲ್ಲಿ ನಾನು ಸಾಗುತ್ತಿದ್ದೇನೆಂದು ಬೀಳ್ಕೊಟ್ಟೆ.
ಹೀಗೆ ಅನಗತ್ಯ,ಕಾರಣವಿಲ್ಲದ ಪ್ರೀತಿ ತೋರುತ್ತ
ಹತ್ತಿರವಾಗಿ ಮತ್ತೆ ದೂರವಾಗುತ್ತ ನೆಮ್ಮದಿ ಕಳೆದು, ಕಳೆದುಕೋಳ್ಳುವರನ್ನ ನೆನೆದು ಮರುಗುತ್ತ ಮುಂದೆ ಹೆಜ್ಜೆ ಹಾಕಿದೆ.
- ಶಶಿಧರ ಹೆಚ್ ಎನ್
05 Apr 2017, 11:01 pm
ನನಗೆ ಗೊತ್ತು
ನೀ ಬೇರೆಯವರ ಸ್ವತ್ತು
ಜಾಗೃತ ಮನಸು ಹೇಳುವುದು
ನಿನ್ನ ಮರೆತುಬಿಡು ಎಂದು
ನಾನು ಆಕೆಲಸ ಈಕೆಲಸ ಮಾಡುತಾ
ಪ್ರಯತ್ನಿಸುತ್ತಿರುವೆ ಮರೆಯಬೇಕೆಂದು
ನಾ ನಿದ್ರಿಸುವಾಗ ಸುಪ್ತಮನಸಿನಲಿ
ಅಡಗಿರುವ ನಿನ್ನ ನೆನಪು ಕಾಡುವುದು
ಎಚ್ಚರಾದ ಕಣ್ಣುಗಳು ನಿನ್ನ ಹುಡುಕುವವು
ನನ್ನುಸಿರಿರುವವರೆಗೂ ನನ್ನೊಡನೆ ಬರುವ
ನೆನಪುಗಳ ಕೊಟ್ಟಿರುವೆ...
ನೀನೆ ಹೇಳು ನಾ ಏನು ಮಾಡಲೀ...
- ಚೇತನ್ ಬಿ ಸಿ
05 Apr 2017, 10:47 pm