ಅಲಂಕರಿಸಿದ ಅಂದದ ಐಸಿರಿಯೇ
ಮೆಲ್ಲನೆ ನನ್ನನೆ ಸೆಳೆದು ಆಕರ್ಶಿಸದಿರು
ನಿನ್ನ ಆಕರ್ಷಣೆಗೆ ಕ್ಷಣಾರ್ಧದಲ್ಲಿ
ನಿನಗಾಗಿ ಎಲ್ಲಿ ಈ ಜೀವ
ಜಾರುವುದೊ ತಿಳಿಯದಾಗಿದೆ
insta:- unique_abhyaa
- abhi.s.j
21 Nov 2025, 07:52 pm
ಹೆಜ್ಜೆಗಳೇ ತಾಳಕ್ಕೆ ತಕ್ಕಂತೆ
ಸಂಗೀತದಲಿ ಮುಳುಗಿ ಕುಣಿಯದಿರಿ
ನಿನ್ನ ಕುಣಿತಕೆ ಮನದಾಳದಲಿ
ತಾಳ ತಪ್ಪಿದಂತಾಯಿತು
ಕಾಲ್ ಗೆಜ್ಜೆಗಳೆ
ಸುಮ್ಮನೇ ನಲಿಯದಿರಿ
ನಿಮ್ಮ ಗಲ್ ಗಲ್ ಶಬ್ದವು
ಮನಸ್ಸಲಿ ಸೇರಿ ಮನಸೇ
ಚಂಚಲವಾದಿತು
ಮಲ್ಲಿಗೆಯ ಹೂವುಗಳೆ
ನಿಮ್ಮ ಕಂಪನು ಬೀರದಿರಿ
ಆ ಕಂಪಲ್ಲಿ ಮನಸ್ಸಿನಾ ಮನಸನ್ನು
ಸೆಳೆಯುವಂತಾಯಿತು
ಕಂಗಳೆ ಸುಮ್ಮನೆ ಮಾತಡಬೇಡಿ
ನಿಮ್ಮ ಮೌನದ ಮಾತುಗಳ
ಅರಿಯಾಲಾಗದೆ
ಹೊಸದಾದ ಭಾಷೆಯೊಂದನು
ಕಲಿಯುವಂತಾಯಿತು
ಅಲಂಕರಿಸಿದ ಅಂದದ ಐಸಿರಿಯೇ
ಮೆಲ್ಲ ಮೆಲ್ಲನೆ ಆಕರ್ಷಿಸದಿರು
ನಿನ್ನ ಆಕರ್ಷಣೆಗೆ
ಜೀವ ಎಲ್ಲಿ ಜಾರುವುದೊ
ತಿಳಿಯದಾಗಿದೆ
ಎಲ್ಲಿರಿವೆ ಹೃದಯದ ಚೋರಿ..!
ಹೆಗಿರುವೆ ಮನ ಮೆಚ್ಚಿದ ನಾರಿ..!ನಿನ್ನ ವೈಯಾರದ ಸೀರೆಯ ಸೆರಗಿನಲ್ಲಿ ನಿನ್ನ ಮೊಗವನ್ನು ಕಂಡೆ ಕನಸ್ಸಿನಲಿ..!ನೀನು ನಗುವಿನಲ್ಲಿ ಸದ್ದಿಲ್ಲದೆ ನನ್ನ ಮನಸ್ಸು ಕದ್ದೆ..!ನೀನು ಮೊಗವನ್ನು ತೋರಿಸದೆ ಹೊದೆ..!ಯಾರೇ ನೀ ಮದನಾರಿ..!ಈ ಭುವನದಲಿ ಎಲ್ಲೇ ಅಡಗಿದ್ದರೂ ನಿನಗಾಗಿ ನನ್ನ ಹೃದಯದ ಅಂಭಾರಿಯನ್ನು ಕಳಿಸಿ ಕೊಡುವೆ..!ನನಗಾಗಿ ಕುಳಿತು ಬಿಡು..!ನಿನ್ನ ಮನಸ್ಸನ್ನು ನನಗೆ ಕೊಟ್ಟು ನೋಡು..!ನಿನ್ನನ್ನು ಪ್ರೀತಿಯಿಂದ ಸ್ವಾಗತಿಸುವೆ..!ಹೃದಯದ ದೇವತೆ ನಿನಗಾಗಿ ಕದಿರುವೆ..!ನಿನಗಾಗಿ ಬರೆದಿರುವೆ ಈ ಸಾಲೂಗಳನು..
- Dyamanna Talawar
15 Nov 2025, 09:44 am
- Dyamanna Talawar
15 Nov 2025, 08:59 am
ಮುಗ್ದ ಮನಸಿನ ಹೂವುಗಳೇ,
ಬೇಧ ಭಾವವನರಿಯದ ಸೂರ್ಯ ಚಂದ್ರರೆ,
ಸುಭದ್ರ ಭಾರತದ ಕನಸುಗಳೆ,
ನಗುವ ತೇರನೋಯ್ಯುವ ರಥಗಳೇ,
ಮುಂದಿನ ಭವಿಷ್ಯದ ಕಣ್ಮಣಿಗಳೇ
ಇಂದು ನಿಮ್ಮದೇ ದಿನ.
ಮಕ್ಕಳ ಪ್ರೀತಿಯ ಚಾಚಾ ನೆಹರುರವರ ನೆನಪಿಗಾಗಿ,
ಆಚರಿಸುವೆವು ಮಕ್ಕಳ ದಿನವಾಗಿ.
ಮಕ್ಕಳ ದಿನಾಚರಣೆಯ
ಶುಭಾಶಯಗಳು ?
--ಶ್ರೀದೇವಿ ಉದಯ್-