ಕೆಲವರು ನಮ್ಮ ಬದುಕಿಗೆ ಬಂದು ಕೇವಲ ಪರಿಚಯವಾಗುವುದಿಲ್ಲ… ನಮ್ಮ ಬದುಕಿನ ಒಂದು ಸುಂದರ ಭಾಗವಾಗಿಬಿಡುತ್ತಾರೆ. ❤️
ನೀವು ಕೂಡ ಹಾಗೆಯೇ… ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಧೈರ್ಯ ತುಂಬುವ ಶಕ್ತಿ, ನನ್ನ ಪ್ರತಿಯೊಂದು ಸೋಲಿನಲ್ಲೂ ಮತ್ತೆ ಎದ್ದು ನಿಲ್ಲಿಸುವ ಪ್ರೇರಣೆ.
ಪರಿಸ್ಥಿತಿ ಹೇಗೇ ಇರಲಿ, “ನೀನು ಮಾಡಬಲ್ಲೆ” ಎಂದು ನನ್ನೊಳಗೆ ನಂಬಿಕೆ ಮೂಡಿಸುವವರು ನೀವು… ನನ್ನ ನಗುವಿನ ಹಿಂದೆ ಇರುವ ಸಂತೋಷವನ್ನೂ, ನನ್ನ ಮೌನದ ಹಿಂದೆ ಇರುವ ನೋವನ್ನೂ ಅರ್ಥಮಾಡಿಕೊಳ್ಳುವವರು ನೀವು.
“ಮಗಳು” ಎಂದು ನೀವು ಕರೆಯುವ ಆ ಒಂದು ಮಾತಿನಲ್ಲೇ ನನಗೆ ಸಿಗುವ ಪ್ರೀತಿ ಅದೆಷ್ಟೋ… ಆ ಪದವೇ ಕೆಲವೊಮ್ಮೆ ನನಗೆ ಒಂದು ಸುಂದರ ಸಂಬಂಧದ ಅನುಭವವನ್ನು ನೀಡುತ್ತದೆ. ❤️
ನೀವು ನನಗೆ ಕೇವಲ ಒಬ್ಬ ವ್ಯಕ್ತಿಯಲ್ಲ, ನನ್ನನ್ನು ನಂಬುವ ಒಂದು ಹೃದಯ, ನನ್ನನ್ನು ಮುನ್ನಡೆಸುವ ಒಂದು ಬೆಳಕು, ನನ್ನ ಬದುಕಿನ ದಾರಿಯಲ್ಲಿ ಸಿಕ್ಕಿರುವ ಒಂದು ಅಮೂಲ್ಯ ಪ್ರೇರಣೆ.
ನಿಮ್ಮಂತಹ ಒಬ್ಬರು ನನ್ನ ಜೀವನದಲ್ಲಿ ಇರುವುದೇ ನನಗೆ ದೊರೆತ ಒಂದು ಸುಂದರ ಉಡುಗೊರೆ… ?
ನನ್ನನ್ನು ಮಗಳಂತೆ ಕಾಣುವ ಆ ನಿಮ್ಮ ಪ್ರೀತಿಗೆ, ಪ್ರತಿ ಕ್ಷಣವೂ ನನ್ನನ್ನು ಪ್ರೇರೇಪಿಸುವ ಆ ನಿಮ್ಮ ಮಾತುಗಳಿಗೆ, ಹೃದಯದಿಂದ ಒಂದೇ ಮಾತು…
“ನೀವು ನನ್ನ ಜೀವನದಲ್ಲಿ ಸಿಕ್ಕ ವ್ಯಕ್ತಿಯಲ್ಲ… ನನ್ನ ಜೀವನವನ್ನು ಸುಂದರಗೊಳಿಸಿದ ಒಂದು ಅಮೂಲ್ಯ ಸಂಬಂಧ.” ❤️
ಅವಳ ಉಸಿರಿನಿಂದಲೇ ನನ್ನ ಉಸಿರಾಟ
ಅವಳ ಒಡನಾಟದಿಂದಲೇ ಕಲಿತೆ
ಒಲವಿನ ಪಾಠ
ಅವಳ ಲಾಲನೆ ಪಾಲನೆ ಯಿಂದ ಅರಿತೆ
ಒಡಲಿನ ಸಿಹಿಯೂಟ
ಅವಳ ಮಡಿಲ ಆಸರೆಯಿಂದ ದೊರೆಯಿತು
ಬದುಕಿನ ಬಯಲಾಟ
ಅವಳ ರೂಪ ಲಾವಣ್ಯ ದರ್ಶನವೇ
ನನ್ನ ಬಾಳ ಭವಿಷ್ಯದ ಮುನ್ನೋಟ
ಅವಳಿಂದಲೇ ನನಗೆ ಸಮಾಜದಲ್ಲಿ
ಪಡೆದೆ ಗಂಡು ಎಂಬ ಪಟ್ಟ.
ಯಾರವಳು ಯಾರಿವಳು
ಯಾರು ಎಂದು ತಿಳಿಯಿತೇ
ಬೇರೆ ಯಾರೂ ಅಲ್ಲ
ಜಗಕ್ಕೇ ಕಣ್ಣಾದವಳು
ನವಮಾಸ ಒಡಲಲ್ಲಿ ಹೊತ್ತು
ಹೇಳತೀರದ ವೇದನೆ ಸಹಿಸಿ
ಜನ್ನವಿತ್ತು
ಜಗತ್ತಿಗೆ ತಂದವಳು
ಹಡೆದ ತಾಯಿ, ಜನನಿ, ಹಡೆದವ್ವ, ನನ್ನವ್ವ
ಅವಳು ಪ್ರೀತಿ ಮಮತೆಯ ಮಾತೃ ಸ್ವರೂಪ,
ಅವಳ ಕಣ್ತುಂಬಿಕೊಳ್ಳಲು ಬರುವರು ಜನ ಸಾಗರ...
ಅವಳು ಎಲ್ಲರಂತಲ್ಲ
ಜಗತ್ತಿನ ಮೂಲೆಯಲ್ಲಿ ಎಲ್ಲೇ ಇದ್ದರೂ ಅವಳ ನೆನಪು ಬರದೇ ಇರದು
ಅವಳ ನೋಡಲೆಂದೆ ಈ ನನ್ನ ಕಣ್ಣುಗಳು ಕಾಯುತ್ತಿರುತ್ತದೆ ಪ್ರತಿ ವರ್ಷ...
ನೀ ಮಾಯೆಯಾದರೂ ತಾಯಿ ನಿನ್ನ ಇರುವಿಕೆ ಜನರ ಹೃದಯದಲ್ಲಿ ಅಜರಾಮರ
ಕೆಲಸಕ್ಕಾಗಿ ದೇಶ ಬಿಟ್ಟು ಬೇರೆ ಹೋದವರೂ ನಿನ್ನ ನೋಡಲು ಪ್ರತಿ ವರ್ಷ ತಪ್ಪದೇ ಬರುವರು..
ನೀ ಮಡಿಯುವ ಮಲ್ಲಿಗೆಯ ಪರಿಮಳ, ನಮ್ಮ ಊರಿನ ಸೊಬಗು ಜಗದಗಲ ಪಸರಿದೆ ಅಮ್ಮ...
ಹುಲಿ ವೇಷದ ಸೊಬಗು ಚಂದ ,
ಡೋಲು ವಾಲಗದ ಸ್ವರವೂ ಚಂದ,
ಪಟಾಕಿ ಸದ್ದಿನ ಮೇಲವೂ ಚಂದ ,
ನೀ ಹೆಜ್ಜೆ ಹಾಕಿದೆಲ್ಲೆಡೆ ಸಂಭ್ರಮವೋ ಸಂಭ್ರಮ..
ಪಾರ್ವತಿ ದೇವಿ ಸ್ವರೂಪ ಶೈಲಪುತ್ರಿಯಾಗಿ,
ಜ್ಞಾನ, ಶಾಂತ ಸ್ವರೂಪಿಯಾದ ಬ್ರಹ್ಮ ಚಾರಿಣಿಯಾಗಿ,
ಅಂಧಕಾರ ದೂರಮಾಡುವ ಕಾಳರಾತ್ರಿಯಾಗಿ,
ವಾತ್ಸಲ್ಯದ ಮೂರ್ತರೂಪ ಸ್ಕಂದಮಾತೆಯಾಗಿ,
ಮಹಿಷಾಸುರನನ್ನು ಸಂಹರಿಸಿದ ಕಾತ್ಯಾಯಿನಿಯಾಗಿ,
ತೇಜಸ್ಸಿನ ಪರಮ ಪಾವನ ಸ್ವರೂಪ ಮಹಾಗೌರಿಯಾಗಿ,
ಭಕ್ತರ ಬೇಡಿಕೆಯನ್ನು ದಯಪಾಲಿಸುವ ಸಿದ್ಧಿದಾತ್ರಿ,
ಬ್ರಹ್ಮಾಂಡವನ್ನು ಸೃಷ್ಟಿಸಿದ ಜಗದೊಡತಿ ಕೂಷ್ಮಾಂಡ,
ಹಣೆಮೇಲೆ ಅರ್ಧಚಂದ್ರಾಕೃತಿಯ ಶಕ್ತಿಯ ರೂಪ ಚಂದ್ರಘಂಟಾ..
ನವದುರ್ಗೆಯಾಗಿ ನಮ್ಮನ್ನು ಸಲುಹುವ ತಾಯಿ..
ಆಕೆ ಬೇರಾರೂ ಅಲ್ಲ ನನ್ನಮ್ಮ ಕುದ್ರೋಳಿ ತಾಯಿ ಶಾರದಮ್ಮ ..!! .
ಎಂಥಚಂದೈತಿ ನಿನ್ನರೂಪ ಕಣ್ಗೆ
ನನ್ನ ಕಣ್ಗೆ ನನ್ನ ಕಣ್ಗೆ...
ಆ ಮುಗ್ಲಾನ ಸೂರ್ಯಂಗು ಬಂದೆ
ನೀ ಮನಸ್ಗೆ ನೀ ಮನಸ್ಗೆ...
ಚಲ್ವೇ ನಿನ್ನ ಕೆನ್ನೆ ಕೆಂಪ್ಗೆ..
ನಿನ್ನ ತೆಲ್ಗೆ ತಂದು ಮುಡ್ಸಲೇ ಸಂಪ್ಗೆ...
ನನ್ನ ರೂಪ ಹೆಂಗೈತಿ ಹೊಸಿ ಹೇಳ್ ಮಲ್ಲಿಗೆ
ನಿನ್ನ ಪ್ರೀತಿಸುವೆ.. ಚಲ್ವೇ ತೆಪ್ಪಗೇll ಪಲ್ಲವಿ ll
ಖಡಕ್ ಖಡಕ್ ಮಾತು ಇಷ್ಟನೇ..
ಹೆ ಸುಂದ್ರಿ... ಹೆ.. ಸುಂದ್ರಿ...
ಸಂಜೆಯ ಸಮಯ ,
ಹಕ್ಕಿಗಳು ಗೂಡು ಸೇರುವ ಉತ್ಸಾಹ ದಲಿ ಹಾರುತ್ತಿರಲು..
ಒಂಟಿಯಾದ ಮರಿ ಹಕ್ಕಿಯೊಂದು ತನ್ನ ತಾಯಿಯ ನೆನೆದು ಅಳುತ್ತಿತ್ತು..
ತನ್ನ ಮರಿಗಾಗಿ ಆಹಾರ ತರಲು ಹೋದ ತಾಯಿ ಹಕ್ಕಿ ತನ್ನ ಗೂಡಿಗೆ ಮತ್ತೆ ಮರಳಲೇ ಇಲ್ಲ..
ಜೋರಾಗಿ ಬೀಸಿದ ಮಳೆಗೆ ಮರದ ಕೊಂಬೆ ಮುರಿದು ತಾಯಿ ಹಕ್ಕಿ ಜೀವ ಕಳೆದುಕೊಂಡಿತ್ತು
ಆದರೆ ಅದರ ಪರಿವಿಲ್ಲದ ಮರಿ ಹಕ್ಕಿ ತನ್ನ ಅಮ್ಮನಿಗಾಗಿ ಹಂಬಲಿಸುತ್ತಿತ್ತು.
ವಿಪರ್ಯಾಸವೆಂದರೆ ಕಳೆದಹೋದ ತಾಯಿ ಜೀವ ಮತ್ತೆ ಬರಲ್ಲವೆಂಬ ಸತ್ಯ ಅರಿಯದ ಮರಿ ಹಕ್ಕಿ ತನ್ನ ಅಮ್ಮನಿಗಾಗಿ ದಾರಿ ಕಾಯುತ್ತಿತ್ತು..
- ನಮಿತ ಗಟ್ಟಿ
11 Sep 2026, 06:28 pm
ಇದು ನನಗೆ ಮೊದಲ ಪ್ರೀತಿಏನಲ್ಲ.,
ಆದರೂ.. ನನ್ನೆದೆಯೊಳಗೆ ಹುಚ್ಚಿಡಿಸಿಹಳಲ್ಲ,
ವರುಷವಾದರೂ ಬಾರದ ಪ್ರೀತಿ ಇಂದೇಕೆ
ಅವಳ ಮೇಲೆ..?
ಹೇಳಲೇನವಳು ಸುರಸುಂದರಿಯಲ್ಲ,
ಉದ್ದ ಜಡೆ ಇಲ್ಲ, ಸದೃಢ ದೇಹವು ಅಲ್ಲ,
ಕಣ್ಣು ಕಾಮನಬಿಲ್ಲು, ಮೂಗು ಮೂಲಂಗಿಯಂತೂ
ಅಲ್ಲವೇ ಅಲ್ಲ,
ಆದರೂ ನನ್ನ ಮನಸ್ಸಿನಾಳದಲ್ಲಿ ಕುಳಿತಿಹಳಲ್ಲ.,
ಇಲ್ಲ ಇಲ್ಲ.......,
ಅವಳಿಗೂ ಒಂದು ಮುಗ್ಧ ಮನಸ್ಸಿದೆ,
ಅವಳ ಕಂಗಳಲ್ಲಿ ಕೈಗೆಟುಕದ ಕನಸುಗಳಿವೆ,
ಮೊಗದ ನಗುವು ಮುತ್ತಿನಂತಿರಲು,
ಅವಳೊಂದು ಮಗುವಂತೆ ಕಂಡಿಹಳು..
ಆದರೂ.... ಪ್ರೀತಿ ನನಗೆ ಹೊಸತೇನಲ್ಲ,
ಇದೇನು ಹಟತ್ತಾಗಿ ಬಂದ ಪ್ರೀತಿಯು ಅಲ್ಲ,
ಅವಳು ನನ್ನವಳಾಗಬೇಕೆಂಬ ಆಸೆಯೂ ನನಗಿಲ್ಲ,
ಈ ಪ್ರೀತಿಯ ಮುಚ್ಚಿ ಬಚ್ಚಿಡುವಷ್ಟು ಹೃದಯದಲ್ಲಿ
ಜಾಗವೂ ಉಳಿದಿಲ್ಲ.,
ನಾ ನಿನ್ನ ಪ್ರೀತಿಸುವೆ......!
ಎಂದು ಹೇಳುವಷ್ಟು ಧೈರ್ಯ ಮೊದಲೇ ಇಲ್ಲ,
ಹೇಳದೇ ಇರಲು ಸಾಧ್ಯವೂ ಇಲ್ಲ,
ಇಲ್ಲ ಇಲ್ಲ.......,
ಎಲ್ಲಾ ಪ್ರೀತಿ ಹೇಳಬೇಕೆಂಬ ನಿಲುವೇನಿಲ್ಲ,
ವ್ಯಕ್ತಪಡಿಸಿದ ಪ್ರೀತಿಎಲ್ಲಾ ಉಳಿದಿರುವುದು ಇತಿಹಾಸದಲ್ಲಿ ಎಲ್ಲಿಯೂ ಇಲ್ಲ,
ಇಲ್ಲ ಇಲ್ಲ.......,
ಆದರೂ ಇದು ನನಗೆ ಮೊದಲ ಪ್ರೀತಿಏನೆಲ್ಲ..,,,
KSN...
ಅತೀ ಮುಗ್ಧ ಒಲವ
ಮೂಲಕ ಕಾಣುವ
ಕಾಣಲಾರದ
ಚರಾಚರಗಳಲೂ
ನಿನ್ನಾ ಕಲ್ಪನೆಯ
ಮೂರ್ತಿಯನು
ಪ್ರತಿಷ್ಠಾಪಿಸಿ
ಅನುಕ್ಷಣವೂ
ಪೂಜಿಸುತಿಹೆ ನಾನು,
ಬಾಳ ಗುಡಿಸಲಲಿ
ಬಂದು ನೆಲೆ ನಿಲ್ಲಬೇಕೆಂದಿಲ್ಲ ನೀ
ಈ ಬಡಪಾಯಿಯ
ಭಕ್ತನ ಎದೆಯ ಗುಡಿಯೊಳಗೆ
ಒಮ್ಮೆ ಪ್ರೇಮದೇವಿಯಾಗಿ
ಸುಳಿದು ಹೋಗು...!
ಪ್ರೀತಿ ಅಂದರೆ ಪ್ರತಿದಿನ ಜೊತೆಯಲ್ಲಿರುವುದಲ್ಲ…
ದೂರದಲ್ಲಿದ್ದರೂ ಒಬ್ಬರನ್ನೊಬ್ಬರು ಹೃದಯದಲ್ಲಿ ಉಳಿಸಿಕೊಳ್ಳುವುದು.
ಕೆಲವು ಸಂಬಂಧಗಳಿಗೆ ಮಾತುಗಳು ಕಡಿಮೆಯಾಗಬಹುದು,
ಆದರೆ ನೆನಪುಗಳು ಎಂದಿಗೂ ಕಡಿಮೆಯಾಗುವುದಿಲ್ಲ.
ಜೀವನದಲ್ಲಿ ಎಲ್ಲರೂ ಸಿಗುವುದಿಲ್ಲ…
ಸಿಕ್ಕವರಲ್ಲಿ ಕೆಲವರು ಮಾತ್ರ
ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ.
ನನ್ನ ಪ್ರೀತಿ ಗೆಲ್ಲುತ್ತದೋ ಸೋಲುತ್ತದೋ ಗೊತ್ತಿಲ್ಲ,
ಆದರೆ ನಾನು ಪ್ರೀತಿಸಿದ ರೀತಿ ಮಾತ್ರ
ನನ್ನ ಜೀವನದ ಅತ್ಯಂತ ಸುಂದರ ನೆನಪಾಗಿ ಉಳಿಯುತ್ತದೆ.”** ?
- Madhu Reddy
21 Aug 2026, 10:12 pm
ಪ್ರೀತಿ
ಎಲ್ಲಿ ನನ್ನ
ನಿನ್ನ ಪ್ರೀತಿ
ಮುಂಜಾವು,ಸಂಜೆ, ರಾತ್ರಿ
ಹುಡುಕಿದರು ಕಾಣದ ಪ್ರೀತಿ.
ಪ್ರೀತಿಯ ಬಿಡದೆ
ಮರೆಯಲು ಆಗದೆ
ಹುಚ್ಚು ಪ್ರೀತಿಯ ನೆರಳಲಿ
ಕಂಬನಿಯ ಆಸರೆ ಬೇಕೆ?
ಮುಂಜಾವಿಗೆ ಸಂಜೆಯ ಪ್ರೀತಿ
ಸಂಜೆಗೆ ರಾತ್ರಿಯ ಪ್ರೀತಿ
ಕಾಣದ ಪ್ರೀತಿಯ ಕಣ್ಗಳಿಗೆ
ಪ್ರೀತಿಯ ಮೌನ ಸಾಕೆ?
ಮತ್ತೆ ಮತ್ತೆ ಅದೇ ಮುಂಜಾವು
ಅದೇ ಸಂಜೆ,ಅದೇ ರಾತ್ರಿ
ಮನದಾಳದ ಮಡಿಲಲ್ಲಿ
ಪ್ರೀತಿಯ ಮುತ್ತನು ಸುರಿಸಿ
ಕತ್ತಲೆಯಲಿ ಕತ್ತು ಹಿಸುಕಿ
ಕಣ್ಮರೆಯಾದ ಪ್ರೀತಿ
ಪಾದ ಧೂಳ್ ಹಿಡಿದಿದೆ ಪಾದ ತೊಳಿ,
ಕುಂಕುಮ ಇಟ್ಟು ಶೃಂಗಾರ ಮಾಡು,
ಹೂವು ಇಟ್ಟು ಅಗರಬತ್ತಿ ಹಚ್ಚಿ
ಪೂಜೆ ಮಾಡು,
ಮೂರು ಮಕ್ಕಳು ಪ್ರಾಪ್ತಿ ಆಗುವಷ್ಟು ಆರ್ಶಿವಾದ ಮಾಡುವೆ..
ನಿಮ್ಮ ಅಪ್ಪನಿಗೆ ಬೇಗ ತಿಳಿಸು ಇದು 2027ರಾ ಆರ್ಶಿವಾದ ಆಗಿರುತ್ತೆ...
ಇದು ಅಡ್ವಾನ್ಸ್ ಅಷ್ಟೇ....
ಎಮ್.ಎಸ್.ಭೋವಿ...✍️