ಹಳಿತಪ್ಪಿದ ರೈಲಿನಂತಾಗಿದೆ ನನ್ನ ಜೀವನ...
ಎತ್ತ ಸಾಗುತಿದೆ ಎಂದು ತಿಳಿಯದಾಗಿದೆ ಮನ...
ಉಳಿವಿಗಾಗಿ ಮಾಡಬಹುದು ಸಕಲ ಪ್ರಯತ್ನ...
ಅದೃಷ್ಟವಿದ್ದರೆ ನಡೆಸಬಹುದು ಜೀವನ...
ಇಲ್ಲವಾದರೆ ಬದುಕಿಗೆ ಅಂತಿಮ ನಮನ...
✍️ಮಲ್ಲ...
ಅಲೆಗ್ಝಾಂಡರ ಜಗತ್ತೆ ಗೆದ್ದುಬಿಡುವೆ ಎಂದು ಹೊರಟಿದ್ದ ;
ಆದರೆ ಹಾದಿ ಬೀದಿ ಯಲ್ಲಿ ಬಿದ್ದು ಹೆಣವಾಗಿದ್ದ.
ಕೋಟೆ ಕೊತ್ತಲು ಮಹಲು ಅರಮನೆಗಳ ಕಟ್ಟಿ
ಹಾಡು, ನೃತ್ಯ, ವಾದ್ಯ, ತಾಳ-ಮೇಳ, ಬಡಸಿ; ಹೊನ್ನು-ಹೆಣ್ಣು - ಮಣ್ಣು ಗಳ ಮೈ ಕುಣಿಸಿ,
ಏರಿ ಮೇಲೆ ಏರಿ ಕುಳಿತೇ ನೀನು.
ಗುರು ಬಸವ ಪ್ರಿಯ ರೇವಣಸಿದ್ದೇಶ್ವರ ಕೈ ಹಿಡಿದು ಕರೆದಾಗ,
ಕೈ ಝಾಡಿಸಿ ಹೋದ ಮರುಳೆ ನೀ ಹಳೆ ಮರುಳೆ.
ರಚಣೆ: ಆರ್ ವಿ ಗೌಡರ
ಕೃಪೆ: ಎಲ್ಲ ಶರಣರು
Mobil: 7892256063
ಗೆಳತಿ...
ಮನಸಾರೆ ಪ್ರೀತಿಸಿರುವೆ ನಾ ನಿನ್ನ...
ನೀ ದೂರ ಸರಿಸಿದರೆ ಹೇಗೆ ನನ್ನ...
ಮನದೊಳಗೆ ನೋವು ಕಾಡುತಿದೆ ನನ್ನ...
ತಿಳಿಸಿಬಿಡು ಗೆಳತಿ ನಿನ್ನ ನಿರ್ಧಾರವನ್ನ...
ನನ್ನ ಪ್ರಾಣ ಹೋಗುವ ಮುನ್ನ...
ಇಲ್ಲವಾದರೆ ನಾ ಸೇರುವೆ ಮರಳಿ ಬಾರದ ಲೋಕವನ್ನ...
ಇಂತಿ.... ಮಲ್ಲ....
ಬೆಂಕಿ ಈ ಜಗದಲಿ ಇದ್ದು ಇಲ್ಲದಂತಿದೆ.
ಅದು ಯಾವದರ ಜಾಗವನ್ನು ಸ್ವಯಂ ಪ್ರೆರಿತವಾಗಿ ಆಕ್ರಮಿಸುವುದಿಲ್ಲ.
ಆದರೆ ಘರ್ಷಣೆಯಾದಾಗ ಮಾತ್ರ ಹೊತ್ತಿಕೊಳ್ಳತ್ತದೆ.
ಹಾಗೆಯೇ ಘರ್ಷಣೆ ಇಲ್ಲದಾಗ ಅಲ್ಲಿಯೇ ಅಡಗುತ್ತದೆ.
ಹಾಗೇಯೇ ಗುರು ಲಿಂಗ ಜಂಗಮ ಮತ್ತು ಭಕ್ತರ ತಂಟೆಗೆ ಬಂದರೆ;
ಬಸವ ಪ್ರಿಯ ರೇವಣಸಿದ್ದೇಶ್ವರ ಅಗ್ನಿಯ ಜಾಗದಲ್ಲಿ ಬಂದುನಿಲ್ಲುವನು ನೋಡಾ.
ರಚಣೆ: RV Goudar
ಕೃಪೆ: ಎಲ್ಲ ಶರಣರು
Mobil: 7892256063
// ದೇವನ ಬೆಳಕು //
---------------------
ನೂರಾರು ದೇಶಗಳ ಸಾವಿರಾರು
ಭಾಷೆಗಳ ಮೆರಗು!
ಸತ್ಯ ಸೌರಭ
ದೇವನ ಬೆಳಕಾಗಿ
ಮೂಡಿತು;ದೇಶ,ಕಾಲ,
ಜನಾಂಗಗಳನ್ನೂ ಮೀರಿ.
ಅರಳುವ ಹೂವಿಗಿಲ್ಲ
ಬೇಧ ಭಾವದ ಹಣೆಪಟ್ಟಿ
ತಿಪ್ಪೆಯ ಮೇಲೆ ಉಪ್ಪರಿಗೆ
ಸಾಮ್ರಾಜ್ಯ ಕಟ್ಟುವುದು.
ಎಲ್ಲಿ ನೋಡಿದಲ್ಲೆಲ್ಲಾ ಮಲ್ಲಿಗೆಯ ಹೂಗಳು.
ಅಧಿಷ್ಟಾನ ತಿಪ್ಪೆಯಾದರೂ ಮೇಲೆ
ಸುಗುಂಧ,ಸುವಾಸನೆ;
ಸೌಂದರ್ಯದ ಉಪಾಸನೆ ಅದಕ್ಕೆ
ಅಗಮ್ಯ,ಅಗೋಚರ,ಅಪ್ರತಿಮ.
ಕಲಿತವರು,ಕಲಿಯದವರು
ಉಳ್ಳವರು,ಇಲ್ಲದವರು; ಯಾರು ನೋಡಿದರೂ
ಮನಸು ವಿಕಾಸಗೊಳ್ಳುವುದು
ಆನಂದದ ಸುವಾಸನೆ
ಕಣ್ಣುಗಳು ಅರಳಿ.
ಸಂತರ ಹಾಡಾಗುವುದು
ಗಿಡದ ಒಂದು ಬೇರು
"ಯಾವ ದೇಶದಲ್ಲಿ ಸಂತರಿಲ್ಲ,
ಇನ್ನಾವ ದೇಶದಲ್ಲಿ ಮಹಂತರಿಲ್ಲ!"
ಯಾವುದು ಅಮೇರಿಕಾ,ಯಾವುದು ಚೀನಾ?
ಇನ್ನಾವುದೇ ಭಾರತವಿರಲಿ
ದೇಶ ಕೋಶ ಎಲ್ಲವೂ ಭೂಮಂಡಲ.