Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಚಿಗುರಿನ ಗೊಂಬೆ

ಅಮ್ಮನ ಮುದ್ದಿನ
ಚಿನ್ನದ ಗೊಂಬೆ!!
ಅಕ್ಕರೆಯ ಗೂಡಿನ
ಸಕ್ಕರೆ ಗೊಂಬೆ!!

ನಗುವಲ್ಲಿ ಮಲ್ಲಿಗೆಯ
ಅರಳಿಸುವ ಗೊಂಬೆ!!
ಅಳುವಲ್ಲಿ ಚಂದಿರನ
ಕರಗಿಸುವ ಗೊಂಬೆ!!

ಮೇಘ ವರ್ಣದ ಗಿರಿ
ತಾಣವು ಗೊಂಬೆ!!
ಹಂಸ ವರ್ಣದ ಸಿರಿ
ಪ್ರಾಣವು ಗೊಂಬೆ!!

ತಾಯಿಯ ಗರ್ಭದಿ
ಉದಿಸಿದ ಗೊಂಬೆ!!
ವಂಶ ಬಳ್ಳಿಯ ಕುಡಿ
ಚಿಗುರಿನ ಗೊಂಬೆ!!

- ಪಿ.ಜಿ.ಜ್ಯೋತಿ

18 Jan 2019, 04:00 pm

ಮರೆಯುವ ಹಾಗಿಲ್ಲ

ಮರೆಯುವ ಹಾಗಿಲ್ಲ
ನಿನ್ನನು ಮರೆಯುವ ಹಾಗಿಲ್ಲ!!
ನಿನ್ನೊಡನಾಡಿದ ಬಾಲ್ಯದ ಆ ದಿನ
ಮರೆಯುವ ಹಾಗಿಲ್ಲ!!

ಯರದೂ ಹಂಗಿಲ್ಲ
ಸ್ನೇಹಕೆ ಯಾರದೂ ಹಂಗಿಲ್ಲ!!
ಅಂಕೆ ಶಂಕೆಯೇ ಇಲ್ಲದ ಸ್ನೇಹವ
ಮೀರಿಸುವರು ಯಾರಿಲ್ಲ!!

ಕಳೆದಿಹ ನೆನಪಲ್ಲಿ
ಮಿಂದಿಹ ಖುಷಿ ಇಲ್ಲಿ!!
ಇಂದಿಗೂ ಎಂದಿಗೂ ಚಂದವು
ಆ ದಿನ ಮರೆಯುವ ಹಾಗಿಲ್ಲ!!

ಮೂರಕ್ಕೆ ಇಳಿದಿಲ್ಲ
ಆರಕ್ಕೂ ಏರಿಲ್ಲ!!
ಯಾರದೋ ಬೇಲಿ ಹಾರಿ ಓಡಿದ
ನೆನಪೂ ಮಾಸಿಲ್ಲ!!

ನಾಳೆಯ ಕನಸಿಗೂ ಅಂದು
ಸ್ಥಳವನು ಕೊಟ್ಟಿಲ್ಲ!!
ಬೆಟ್ಟ ಬಯಲು ಊರು ಕೇರಿ
ಸುತ್ತದ ಸ್ಥಳವಿಲ್ಲ!!

- ಪಿ.ಜಿ.ಜ್ಯೋತಿ

18 Jan 2019, 03:59 pm

ಸಂಕ್ರಾಂತಿ

ಉದಯ ಪಥ ಬದಲಿಸುವ ದಿನ
ಸಡಗರ- ಸಂಭ್ರಮದ ಕ್ಷಣ
ದನ-ಕರುಗಳೆಲ್ಲ ಹಿಗ್ಗಿ
ತಂದಿವೆ ನಮಗೆಲ್ಲ ಸುಗ್ಗಿ

ಅಂಗಳವ ಸಾರಿಸೋಣ
ತೋರಣವ ಕಟ್ಟೋಣ
ಗೋವುಗಳ ಸಿಂಗರಿಸೋಣ
ಅಗ್ನಿ ಸ್ಪರ್ಶ ಮಾಡಿಸೋಣ

ರಾಸುಗಳಿಗೆ ಈ ಹಬ್ಬ
ರಾಶಿಗಳ ಕಟ್ಟುವ ಹಬ್ಬ
ಬನ್ನಿ ಎಳ್ಳು-ಬೆಲ್ಲ ಮೆಲ್ಲುವ
ಕಬ್ಬಿನ ಜಳವೆ ಸವಿಯುವ
ಎಲ್ಲಾ ಕೂಡಿ ನಲಿಯುವ

ರೈತನೇ ಅನ್ನದ ಮೂಲ
ಗೋವುಗಳೆ ಅವನಿಗೆ ಬಲ
ಅವುಗಳಿಗೆ ವರುಷಕೊಂದೆ ಹಬ್ಬ
ಇದು ನಮ್ಮ ಸಂಸ್ಕ್ರತಿಯ ಪ್ರತಿಬಿಂಬ




ಶಾರದ

- ಶಕುಂತಲಾ

15 Jan 2019, 10:29 am

ಸಂಕ್ರಾಂತಿ ಹಬ್ಬ

ಹಬ್ಬವೋ ಹಬ್ಬ ಸಂಕ್ರಾಂತಿ ಹಬ್ಬ
ಹರುಷವೋ ಹರುಷ ಊರಿನ ತುಂಬ..
ಸುಗ್ಗಿಯ ಸೊಬಗು ಎಲ್ಲೆಲ್ಲೂ ಅಬ್ಬಬ್ಬಾ
ಹುಗ್ಗಿಯ ಸೊಗಸು ಮನಸಿನ ತುಂಬ..||ಪ||

ಧಾನ್ಯಗಳು ರಾಶಿರಾಶಿ ಜೀವನವು ಖುಷಿಖುಷಿ
ಈ ಭೂತಾಯಿಯ ವರದಿಂದ ಈ ರೈತನ ಬೆವರಿಂದ..
ತೂಗಿದರೆ ಚಿನ್ನದ ತೆನೆಯಿಂದ ಹೊಲ
ಬೆಳಗುವುದು ನಮ್ಮ ಬಾಳು ನೂರುಕಾಲ..
ಕೈಕಟ್ಟಿ ಕುಳಿತರೆ ರೈತ ಯಾರಿಗೂ ಸಿಗದು ಸುಖಶಾಂತಿ
ಕಾಳು ಬೆಳೆದು ಕೊಟ್ಟರೆ ರೈತ ಪ್ರತಿ ಮನೆಮನೆಯಲ್ಲೂ ಸಂಕ್ರಾಂತಿ..

ಹರುಷದಿ ಹಂಚೋಣ ಎಳ್ಳುಬೆಲ್ಲ
ಪ್ರೀತಿ ಸ್ನೇಹದಿ ಬಾಳೋಣ ಬದುಕೆಲ್ಲ..
ಬಿಡಿಸೋಣ ಒಲವಿನ ಬಣ್ಣದ ರಂಗೋಲಿ ಮನೆಅಂಗಳದಲಿ
ಬೆಳಗೋಣ ಸೂರ್ಯನ ಹಾಗೆ ನಾವೆಲ್ಲ ಈ ಜಗದಲಿ..
ಸಡಗರದಿಂದ ಕುಣಿದು ಕುಪ್ಪಳಿಸೋಣ
ಭೂತಾಯಿಯ ಭಕ್ತಿಯಿಂದ ಭಜಿಸೋಣ..

- ಸುರೇಶ್ ಟಿ ವಿ

14 Jan 2019, 05:14 pm

ಅಮ್ಮ

ಹಸಿವಿಗೆ ಅನ್ನದ ಆಸೆ
ಬಸರಿಗೆ ತವರಿನ ಆಸೆ
ಹೆಣ್ಣಿಗೆ ತಾಯಿಯಾಗುವ ಆಸೆ
ಅದಕ್ಕೆ ಬ್ರಹ್ಮ ಬರೆದಿಟ್ಟ
ಉಸಿರಿನಲ್ಲಿ ಮಮತೆಯ ಇಟ್ಟು
ತ್ಯಾಗದ ಪಣತೊಟ್ಟು ಮಾಡಿದ ಮೂರ್ತಿಯೇ ಅಮ್ಮ
ಎ. ಜಿ. ಶರಣ್

- ಎ ಜಿ ಶರಣ್

13 Jan 2019, 11:26 pm

ಗರತಿ

ಹಳಸಿದನ್ನವ ವಲಸೆ
ತಂದಿಹಳು ನಮ್ಮಾಕಿ,
ಹಸಿವ ನೀಗಿಸಲು ನನ್ನ ಹೊಟ್ಟೆಗಾಕಿ ಅವಳ ಬಾಯಿ ಕಟ್ಟಿಹಾಕಿ.

ಅಂಗಲಾಚಿ ಬೇಡುವಳು ಅಮ್ಮ ಹಸಿವೆಂದು, ಅಳಿದುಳಿದ ನೆನ್ನೆಯ ಅನ್ನವ ಹಾಕಿ ಪುಣ್ಯವ ಕಟ್ಟಿಕೊಳ್ಳಿ ಎಂದು.

ಒಂದು ಮುತ್ತಿಗಾಗಿ ನಾ ಬೇಡಿದೆ ಭಿಕ್ಷೆ ಅಂದು ಅವಳಲ್ಲಿ, ಒಂದಾದರೂ ತುತ್ತಿಗಾಗಿ ಅವಳು ಬೇಡುತಿಹಳು ಭಿಕ್ಷೆ ಪರರಲ್ಲಿ.

ಮಿಂಚು ಅವಳಂದಕೆ ಮೈದುಂಬಿ ಧರಿಸುತ್ತಿದ್ದಳು ಬಗೆ ಬಗೆಯ ಉಡುಗೆ ತೊಡುಗೆ, ಮಾಂಗಲ್ಯವೊಂದೇ ಉಳಿದಿಹುದು ಈಗ ಅರಿಶಿನದ ಕೊಂಬಲ್ಲಿ ನನ್ನ ಆಯಸ್ಸೊತ್ತು ಕಡೆಗೆ.

ನಾದಸ್ವರದ ನಂಟಿಗೆ
ನನ್ನೊಡನೆ ಹಾಕಿದ ಏಳ್ಹೆಜ್ಜೆಗೆ,
ತಾಯಿ ತಾನಾದಳು ನನ್ನೊಡತಿ ಮನೆ ಇಲ್ಲದಿದ್ದರೂ ಮನ ಬೆಳಗಿ ಗರತಿ.

- ಚುಕ್ಕಿ

13 Jan 2019, 06:25 pm

ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದ

ಭರತ ಖಂಡದ ವೀರಸಂನ್ಯಾಸಿ ಸ್ವಾಮಿ ವಿವೇಕಾನಂದ
ನಿನಗೆ ನಮಿಸುವೆ ನಾ ಆನಂದದಿಂದ..
ಜಗ ಮೆಚ್ಚಿದ ಮಹಾಜಗದ್ಗುರು ನೀನಯ್ಯ
ವಿಶ್ವವ ಬೆಳಗಿದ ಜ್ಞಾನದ ಜ್ಯೋತಿ ನೀನಯ್ಯ..||ಪ||

ನರೇಂದ್ರನಾಥ ನಿನ್ನ ನಿಜ ಹೆಸರಯ್ಯ
ಭರತಮಾತ ನಿನ್ನ ಜೀವದ ಉಸಿರಯ್ಯ..
ರಾಮಕೃಷ್ಣ ನಿನ್ನ ಗುರುದೇವನಯ್ಯ
ಗುರುವಿನ ಗುರಿ ಮುಟ್ಟಿದ ಆ ಮಹಾದೇವ ನೀನಯ್ಯ..

ರಾಮಕೃಷ್ಣಮಠ ಎಂಬ ಜ್ಞಾನದ ತೇರನು ಏರಿ
ಮೂಢನಂಬಿಕೆಗಳ ವಿರುದ್ಧ ಸಮರ ಸಾರುತ
ಜನಮನದಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುತ
ಜನರೇ ದೇವರೆಂದು ಜನಸೇವೆ ಮಾಡುತ
ಮಹಾನ್ ಸಮಾಜ ಸುಧಾರಕ ನೀನಾದೆನಯ್ಯ..

ಯುವಶಕ್ತಿ ಎಂಬ ಪ್ರಗತಿರಥವೇರಿ
ಏಳಿಎದ್ದೇಳಿ ಗುರಿಮುಟ್ಟುವತನಕ ನಿಲ್ಲದಿರಿ ಎಂದು ಘೋಷಿಸುತ
ಶಕ್ತಿಯೇ ಜೀವನ ದುರ್ಬಲತೆಯೇ ಮರಣ ಎಂದು ಎಚ್ಚರಿಸುತ
ಯುಗಯುಗದಲೂ ಯುವಜನರ ಸ್ಫೂರ್ತಿಪಥ ನೀನಾದೆನಯ್ಯ..

ವಿಶ್ವಧರ್ಮ ಸಮ್ಮೇಳನ ಎಂಬ ಅಹಂಮನಗಳ ತುಳಿದು
ವೀರಕೇಸರಿಯಂತೆ ಮಾತಿನ ಘರ್ಜನೆ ಮಾಡುತ
ಹಿಂದೂಸಂಸ್ಕೃತಿ ಶ್ರೇಷ್ಠತೆ ಜಗಕೆ ಸಾರುತ
ಸರ್ವಧರ್ಮ ಸಮನ್ವಯ ತತ್ವ ಬಿತ್ತುತ
ಮಹಾನ್ ವಿಶ್ವಮಾನವ ಎಂಬ ಕೀರ್ತೀ ಪಡೆದಿರುವವ ನೀನಯ್ಯ..

- ಸುರೇಶ್ ಟಿ ವಿ

12 Jan 2019, 09:07 am

ಮೌನಿ ಬರೆದನು ಕವಿತೆ

ನೀ ಬಿಟ್ಟೊದ ಮೇಲೆ
ನಿನ್ನ ನೆನಪುಗಳು ಕೂಡ
ಬಿಟ್ಟೋಗುತ್ತವೆ ಎಂದು ಕೊಂಡೆ
ಹಾಗಾಗಲಿಲ್ಲ ಅದು
ನಾನೆ ಆ ನೆನಪುಗಳು ಸುಟ್ಟಾಕಬೇಕು
ಅಂದುಕೊಂಡೆ ಆದರೆ
ಆ ನೆನಪುಗಳೇ ಯಾರನ್ನು
ನಂಬಬಾರದೆಂದು ಪಾಠಕಲಿಸಿದವು
ಕಲಿತ ಪಾಠಕ್ಕೆ ಬೆಲೆ ಕೊಡಬೇಕೆಂದು
ಆ ನಿನ್ನ ನೆನಪುಗಳು ಇನ್ನು
ಜೀವಂತವಾಗಿವೆ, ಬೆಳ್ಳಂಬೆಳಗ್ಗೆ
ಮೌನಿಗೆ ನೀ ನೆನಪಾದೆ
ಆ ನೆನಪಿಗೆ ಮೌನಿ ಬರೆದನು ಈ ಕವಿತೆ
##ಮೌನಿ##

- RajaneeshNandikolmath

10 Jan 2019, 04:33 pm

ಹೊಗಳಿಕೆ-ತೆಗಳಿಕೆ

ನಿನ್ನನರಿಯದವರು
ನಿನ್ನನಿಂದು ಜರಿವರು
ಸಾಧಿಸಿದಾಗ ಸಲಾಮು ಹೊಡೆವರು

ಶ್ರಮಿಕನು ನೀನಾಗು
ಸಾಧನೆಗೆ ಮುಂದಾಗು
ನಿನ್ನವರಿಗೆ ನೀ ಮಾದರಿಯಾಗು

ಜನ್ಮದಾತರ ನಲಿವು ನೀನಾಗು
ಗುರುಗಳ ಹಿರಿಮೆ ನೀನಾಗು
ಕಿರಿಯರ ಪಾಲಿನ ಗುರುನೀನಾಗು

ಅಂದನು ನೀನಾಗಿ
ಮೌಡ್ಯಕೆ ವಶವಾಗಿ
ಮರೆಯಾಗದಿರು ಮೌಲ್ಯಕೆ ಹೊರತಾಗಿ

ವ್ಯರ್ಥ ಪ್ರೀತಿಗೆ ಮರುಳಾಗಿ
ಅವಕಾಶ ವಂಚಿತನಾಗಿ
ಮರುಗದಿರು ಮುಂದೊಮ್ಮೆ ಮೂಕನಾಗಿ

ಪ್ರೀತಿ-ಪ್ರೇಮದ ಸೆಲೆ
ಬಿಡಿಸಲಾಗದ ಜೇಡನ ಬಲೆ
ನಡೆವುದಿಲ್ಲಿ ತಾರುಣ್ಯದ ಕೊಲೆ

ತೆಗಳಿಕೆ ಸಾಧನೆಗೆ ಛಲ
ಹೊಗಳಿಕೆ ಸೋಮಾರಿತನಕ್ಕೆ ಬಲ
ಅರಿತು ಸಾಗಿದರೆ ಉತ್ತಮ ಫಲ



ಶಾರದ

- ಶಕುಂತಲಾ

08 Jan 2019, 02:59 am

ನಿನ್ನ ಹುಡುಕಿ ಬರುವೆ ಚೆಲುವೆ

ನಿನ್ನ ಅಂದಕ್ಕೆ ನಾಚಿ ನೀರಾದೆ ನಿಂತಲ್ಲೆ ನಾ ಚೆಲುವೆ!
ನಿನ್ನ ಅಂದಕ್ಕೆ ಸರಿಸಾಟಿ ಯಾರಿಲ್ಲ ನನ್ನ ಒಲವೆ,
ಚಂದನದ ಗೊಂಬೆಯಂತೆ ಬೆಳದಿಂಗಳ ಬಾಲೆಯಂತೆ
ಹುಣ್ಣಿಮೆಯ ಚಂದ್ರನಂತೆ ಹೊಳೆಯುತ್ತಿರುವೆ ನೀ ಬಾಲೆ!
ಈ ನಿನ್ನ ವರ್ಣಿಸಲಾಗದ ಅಂದಕ್ಕೆ
ಮನಸೋತಿಹೆನೂ ನಾ ಮುದ್ದು ಮನವೆ,
ನೀ ಅಂದಗಾತಿ ಎಂಬ ಗರ್ವದಿಂದ
ನನ್ನ ಪ್ರೀತಿಯ ಕೊಂದು ನನ್ನಿಂದ ದೂರಾಗಬೇಡ
ನೀ ಎಲ್ಲಿದ್ದರು ಹುಡುಕಿ ಬರುವೆ!!

- ರಾಜ್

07 Jan 2019, 03:49 pm