Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಣ್ಮಣಿಯೇ ಕಣ್ಣಿಗೆ ಕಾಣಿಸಬಾರದೇ???

ಎಷ್ಟು ದಿವಸವ ಕಳೆದೆ ನಿನ್ನಿಂದ
ಎಷ್ಟು ಹರುಷವ ಪಡೆದೆ ನಿನ್ನಿಂದ ॥೧॥

ಜೀವನರಾಗವ ಅನುಭೋಗಿಸಿ ನಿನ್ನ ಸ್ಮೃತಿ ಮಾಡಲು
ಕನಸಿನ ಕನ್ಯೆಯರು ಕರೆದರೂ ನಿನ್ನ ಬೇಡಿದೆ
ಕಾಣದ ಶರೀರಕ್ಕೇ ಬಯೆಕೆಯ ತೋರ್ಪಡಿಸುತ
ನಿನ್ನ ಆಗಮನವೋಂದೆ ಚಟಪಡಿಸುತ
ಎಷ್ಟು ದಿವಸವ ಕಳೆದೆ ನಿನ್ನಿಂದ
ಎಷ್ಟು ಹರುಷವ ಪಡೆದೆ ನಿನ್ನಿಂದ॥೧॥

ಮಳೆಯ ಆಗಮನವ ಕಾಯುತಂತೆ ಮರವು
ಭುವಿಯ ನೀರ ಕುಡಿದು ಹಸಿರಾಯಿತು
ನಾಳೆಗೆ ಕಾಯುತಂತೆ ಇಂದು ನಾಳೆಯಾಯಿತು
ನಿಷ್ಟುರನಾದೆ ದಿನವ ಕಳೆಯುತ ವರುಷವ ದಾಟುತ
ಎಷ್ಟು ದಿವಸವ ಕಳೆದೆ ನಿನ್ನಿಂದ
ಎಷ್ಟು ಹರುಷವ ಪಡೆದೆ ನಿನ್ನಿಂದ॥೧॥

ಸಾಕೀನ್ನು ಎಂದೆನಿಸಲು ನೀ ನೆನೆಪಾದೆ
ಅದೇ ಪ್ರಥಮದಿವಸದ ಭರವಸೆ ಮೂಡಿಸಿದೆ
ಪ್ರಕೃತಿಯೆ ಬದಲಾಗಿ ಕಲ್ಲೋಲವಾದರೂ
ನೀ ಅಚಲವಾಗಿ ಕುಳಿತೆ ಕೃತಿಯಾಗಿ
ಈ ಕರ್ಮವೇ ಸಾಗಿಸುತ ನಿನ್ನ ತವಕಿಸುತ
ಎಷ್ಟು ದಿವಸವ ಕಳೆದೆ ನಿನ್ನಿಂದ
ಎಷ್ಟು ಹರುಷವ ಪಡೆದೆ ನಿನ್ನಿಂದ॥೧॥
::::::ಸchi

- ಸಚ್ಚಿದಾನಂದಗುರುಮಠ

06 Oct 2018, 11:58 pm

ಎಲೆ ಮನವೇ..!

ಎಲೆ ಮನವೇ ನೀ
ಏಕೆ ಪರದಾಡುವೆ!
ಒಂದಿಷ್ಟು ದಿನ ಬಾಳಲು
ಪರರನ್ನೇಕೆ ತುಳಿಯುವೆ ?
ಹೆಮ್ಮರವಾಗಿ ಬೆಳೆದ
ವೃಕ್ಷದ ಎಲೆಗಳು
ಉದುರಿದರಲ್ಲವೇ
ಅದರ ಬೆಳವಣಿಗೆ.
ಹುಟ್ಟಿರುವ ರವಿ
ಮುಳುಗಿದರಲ್ಲವೇ
ತೆಂಗದಿರನ ಆಗಮನ
ಮರುದಿನ ಮತ್ತೆ ಚೇತನ.
ಹುಚ್ಚನಾಗಿ ಬದುಕದಿರು
ಅಚ್ಚನ್ನೊಂದ ಅಳಿಸದಿರು
ಮಚ್ಚಿನೊಂದಿಗೆ ಆಡುವ
ನೀಚ ಬುದ್ದಿಯ ಬೆಳೆಸದಿರು
ಹುಲಿಯೆಂದು ಭಾವಿಸಿದರೆ
ಕೊನೆಗೆ ಹುಲ್ಲು ತಿನ್ನುವೆ
ಕಲಿಯುಗದ ಕೊನೆಯಲಿ
ನಿನಗೆ ನೀನೆ ಬಲಿಯಾಗುವೆ.!

- vasu

06 Oct 2018, 10:33 pm

ನೆನಪಿನ ಹೃದಯ

ಸಮುದ್ರ ದಡದಲ್ಲಿ ಕುಳಿತು ಅಲೆಗಳನ್ನು ನೋಡುತ್ತಾ
ನಮ್ಮಿಂದ ದೂರವಾದ ಹೃದಯಗಳು
ಮತ್ತೆ ಮತ್ತೆ ಸಮುದ್ರದ ಅಲೆಗಳಂತೆ
ಎದೆಯ ಬಾಗಿಲಿಗೆ ಬಂದು ಹೃದಯವನ್ನು
ತಟ್ಟುತಲೇ ಇರುತ್ತವೇ....

- Prakash Angadi

06 Oct 2018, 01:29 pm

ಗೊಂಬೆಗಳ ಭಾವನೆಯ ಒಡತಿ....

ಯಾರೇ ಯಾರೇ ನೀ ಯಾರೇ
ಮನದಲ್ಲಿ ಮನೆಯ ಮಾಡಿದವಳೇ
ಕಣ್ಣಿಗೂ ಕಾಣದೇ ಮನಸ್ಸಿಗೂ ಬಾರದೇ
ಮರೆಯಲಿ ನೋಡುವ ಚೆಲುವೇ
ನೀ ಯಾರೇ ಯಾರೇ ನೀ ಯಾರೇ

ಗೊಂಬೆ ಗೊಂಬೆ ಚಂದದ ಗೊಂಬೆ
ಹೃದಯವ ದೊಚುವ ಅಂದದ ಗೊಂಬೆ
ನಿನ್ ನೋಡಿದ ಮರುಕ್ಷಣವೇ
ಮರೆತೆ ಹೋಯಿತು ನನ್ನ ಮನವೇ
ಯಾರೇ ನೀ ಯಾರೇ

ನಿನ್ ನೋಟದಲ್ಲಿ ನನ್ನ ಉಸಿರು ಉಂಟು
ಕಣ್ಣು ಮುಚ್ಚ್ದೀರು ಒಂದು ಕ್ಷಣದಂಟು
ರೆಪ್ಪೆಯಾಗಿ ಕಾಯವೇ ಎಂದೆಂದೂ
ನಂಬಿ ನೀಡು ಮನವು ಕೊನೆವರೆಗೂ
ಹುಟ್ಟಿ ಬರುವ ಮತ್ತೆ ನಿನಗಾಗಿ ನಿನಗಾಗಿ
ಯಾರೇ ನೀ ಚೆಲುವೇ

ಅಮ್ಮನ ಗುಣಗಳ ನೋಡಿದೆ ನಿನ್ಲ್ಲೇ
ಬರುವೆಯಾ ನೀನು ನನ್ನ ಈ ಅರಮನೆ ಅಂಗಳ
ಹೆಜ್ಜೆ ಇಟ್ಟರೆ ನವಿಲಂತೆ ನಗು ನೋಡಿದರೆ ಮಗುವಂತೆ ನಿನ್ ನೋಟವೇ ಬಳು ಚಂದ
ಯಾರೇ ನೀ ಯಾರೇ

ಅವಳೊಂದು ಹೃದಯ ಕದ್ದ ಗೊಂಬೆಗಳ
ಭಾವನೆ ಅವಳು

- Prakash Angadi

06 Oct 2018, 11:35 am

ಜಗಳಗಂಟಿ ಮರ

ಅದೊಂದು ಮರ
ಹೆಸರು ಜಗಳಗಂಟಿಮರ
ಶಾಂತವಾಗಿ ನಿಂತಿತ್ತು
ನನ್ನ ಮನೆ ಬಳಿಯಲ್ಲೇ

ನಾನು ಹುಟ್ಟಿದಾಗ
ನನ್ನ ಆ ಮನೆ ಜಗಳದ ಮನೆಯಾಗಿ
ಹೊಸಲು ದಾಟಿದಾಗ
ನನ್ನ ಕೇರಿ ಜಗಳದ ಕೇರಿಯಾಗಿ
ಬೆಳೆಯುತ್ತ ಬೆಳೆಯುತ್ತ
ನನ್ನ ಗೆಳೆಯರು ಜಗಳಗಂಟರಾಗಿ
ನನ್ನ ಊರೇ ಜಗಳದ ಊರಾಗಿ
ಪಾದ ಬೆಳೆಸುತ್ತ ಹೋದಂತೆಲ್ಲ
ನನ್ನ ರಾಜ್ಯವೂ ಜಗಳದ ರಾಜ್ಯವಾಗಿ
ಈಗ ನೋಡುತ್ತೇನೆ
ನನ್ನ ಇಡೀ ದೇಶಕ್ಕೆ ದೇಶವೇ
ಜಗಳದ ದೇಶವಾಗಿ
ಹೊತ್ತಿ ಉರಿಯುತ್ತಲಿದೆ!

ಹೇಗೆ ಹೇಳಲಿ
ಈ ಜಗಳಗಳ ಈ ಉದ್ದಕೂ
ಆ ಜಗಳಗಂಟಿ ಮರ
ಮತ್ತದರ ಶಾಂತಿ
ನನ್ನನು ಅದೆಷ್ಟು ಕದಡಿಹಾಕಿದೆಯೆಂದು

ಮತ್ತು
ನಾನೀಗ ಬಾಯಿ ಮುಚ್ಚಿಕೊಳ್ಳುತ್ತೇನೆ
ಉಳಿಯಲಿ ಬಿಡಿ
ನನ್ನ ತಳಮಳಗಳು ನನ್ನೊಳಗೇ

ಹಾಂ, ಹೇಳುವುದು ಮರೆತೆ..
ಆ ಶಾಂತವಾಗಿ ನಿಂತ ಮರವನು
ಎಂದೋ ಕಡಿದುಹಾಕಲಾಗಿತ್ತು
ಅದಿರುವುದರಿಂದಾಗಿಯೇ
ಮನೆಯಲಿ ಜಗಳವಾಗುವುವೆಂದು!
- ಕಾದಂಬಿನಿ

- ಕಾದಂಬಿನಿ

06 Oct 2018, 07:06 am

ನನ್ನ ಬದುಕು

ರಾತ್ರಿ ಆದಷ್ಟೂ ಬೇಗನೆ ಮಲಗಿ
ಮುಂಜಾನೆ ಬೇಗನೇ ಎದ್ದುಬಿಡುವ
ನಿರ್ಧಾರವ ನಾನೆಂದೂ ಮಾಡುವುದಿಲ್ಲ
ಪ್ರತಿದಿನ ಬೇಗನೇ ಏಳುವ
ಆ ಹೆಂಗಸರು
ರಾತ್ರಿ ಮಲಗುವ ತನಕ
ಏನೇನು ಮಾಡಬೇಕಾಗಿದೆಯೋ
ಅದು ನನಗೆ ತಿಳಿಯದ್ದೇನಲ್ಲ

ನನ್ನನ್ನು ಹೀಗೆ ಪಂಜರದೂಳಗೆ
ಕೂಡಿಸಿಟ್ಟಾಗಲೂ
ಈ ಪುಟ್ಟ ವ್ಯಾಪ್ತಿಯಲ್ಲೂ
ನಾನು ಬದುಕುವುದು
ನನ್ನ ಮನದ ಇಚ್ಛೆಯಂತೆಯೇ!
'ಸ್ವತಂತ್ರವಾಗಿ ಬದುಕಲು
ವಿಶಾಲ ಜಗತ್ತೇ ಬೇಕು' ಎಂದು
ಎಂದೂ ಅನಿಸುವುದಿಲ್ಲ ನನಗೆ!

ಹೊರಗೆಲ್ಲ ಅಡ್ಡಾಡಿಕೊಂಡಿರುವ
ಆ ಮಹಿಳೆಯರ ಕಂಡಾಗ
ಮನಕೆ ಖೇದವೆನಿಸುವುದು
ಯಾರ ಆಜ್ಞೆ, ಆಣತಿಗಳ
ಒಂದು ಹೆಜ್ಜೆಯಾದರೂ ಮೀರಲಾಗದ
ಅವರ ಗುಲಾಮಿತನವ
ಕಂಡು ಮನಕೆ ಖೇದವೆನಿಸುವುದು

ಬಲ್ಲೆ ಈ ಪಂಜರದೊಳಗಿರುವವಳ ಕಂಡು
ಮುಸು ಮುಸು ನಗುತ್ತೀರಿ
ನಾನಾದರೂ
ಪಂಜರದ ಪುಟ್ಟ ವ್ಯಾಪ್ತಿಯ ಇತಿಮಿತಿಗಳಲೂ
ಹೀಗೆ ಸಡ್ಡು ಹೊಡೆದು ಬದುಕಬಹುದು
ಎಂಬ ಪ್ರಾಯೋಗಿಕ ಮಾದರಿ ತೋರುತ್ತಿದ್ದೇನಷ್ಟೇ

ಪಂಜರವ ತೊರೆದುಹೋದ
ಅವೆಷ್ಟೋ ಹಕ್ಕಿಗಳ ನಾನು ಕಂಡೆ
ಹಾಗೆ ಹಾರಿದವುಗಳಲಿ
ಕೆಲವು ಮತ್ತೊಂದು ಪಂಜರದ
ಖೈದಿಯಾದವು
ಮತ್ತೆ ಕೆಲವು ಬೆಕ್ಕುಗಳ ಪಾಲಾದವು!

ನನ್ನ ಪೀಹೂ ನನಗೆ
ಅದೆಷ್ಟೋ ಪಾಠಗಳ ಕಲಿಸುತ್ತಿದ್ದಳು
ನಾನು ಕೊಟ್ಟ ಹಣ್ಣುಗಳಲಿ
ಒಂದನ್ನು ಬಿಸುಟು ಮತ್ತೊಂದನು
ತಿನ್ನುತ್ತಿದ್ದಳು
ತನಗೆ ಬೇಕೆನಿಸಿದಾಗ ಹಾಡಿಕೊಳ್ಳುತ್ತಿದ್ದಳು
ತನಗೆ ಬೇಕನಿಸಿದಾಗೊಮ್ಮೆ
ಹಾರಿಯೂ ಹೋದಳು
ತನಗೆ ಬೇಕೆನಿಸಿದರೆ
ಹಿಂದಿರುಗಿಯೂ ಬಂದಾಳು

ದೀಪಗಳನು
ಬೆಳಕು ಹೊರಗಿಣುಕಲು ಬಿಡದ ಹಾಗೆ
ಅದೆಷ್ಟು ಕಾಲ
ನಿಮ್ಮ ಬೊಗಸೆಗಳಲಿ ಬಚ್ಚಿಡುವಿರಿ?
ಉರಿವಷ್ಟೂ ಕಾಲ
ನಿಮ್ಮ ಅಂಗೈಗಳನೇ ಸುಟ್ಟೀತು
ಅಥವಾ
ಗಾಳಿ ಸೋಕದೇ ಸತ್ತು ಹೋದೀತು
ನಿಮಗೆ ಇರುವುದು ಎರಡೇ ಆಯ್ಕೆ
- ಕಾದಂಬಿನಿ

- ಕಾದಂಬಿನಿ

05 Oct 2018, 10:49 pm

ನನ್ನ ಎದೆಯ ಅಂಗಳದಲ್ಲಿ

ನನ್ನ ಎದೆಯ ಅಂಗಳದಲ್ಲಿ
ನೀ ಇಟ್ಟೆ ರಂಗೋಲಿ!!
ಕಂಗಳ ಕಾಂತಿಯ ತುಂಬ
ಬಣ್ಣಗಳನು ನೀ ಚೆಲ್ಲಿ!!

ಕೋಗಿಯ ಕಂಠ ಕೂಡ
ಕೂಗಿದೆ ನಿನ್ನಯ ಹೆಸರ!!
ಮಾಮರದ ಮರೆಯಲ್ಲಿ
ಎಲ್ಲೋ ಕಾಣದ ಸ್ವರದಲ್ಲಿ!!

ಮರುಭೂಮಿ ಆದರೂನು
ಹುಲ್ಲು ಹಾಸಿಗೆಯ ಬೀಡು!!
ನೀ ಹೆಜ್ಜೆ ಇಡುವಲೆಲ್ಲ
ಇಬ್ಬನಿಯ ಸಾಲುಗಳು!!

ಕತ್ತಲ ಹಾದಿ ಇದೋ
ಬೆಳಕಂತೆ ನೀ ನೋಡು!!
ತಾರೆಗಳ ತೋಟದಲ್ಲಿ
ನೀ ನನ್ನ ಕೂಡಿ ನಲಿದಾಡು!!

- ಪಿ.ಜಿ.ಜ್ಯೋತಿ

05 Oct 2018, 02:36 pm

ಕೂಸು

ಹೆಣ್ಣಾದ ಮರದಲ್ಲಿ
ಹಣ್ಣಂತೆ ಈ ಕೂಸು!!
ಮಣ್ಣಿನ ಮಡಿಕೆಯಲ್ಲಿ
ಹೊನ್ನಿನ ನಿಧಿಯಂತೆ!!

ರನ್ನದ ಬನದಲ್ಲಿ
ಮೊಗ್ಗಂತೆ ಈ ಕೂಸು!!
ಸಿಗ್ಗು ಇಲ್ಲದೆನೇ
ಹಿಗ್ಗು ತರುವಂತೆ!!

ಕರಿದಾದ ಮುಗಿಲಲ್ಲಿ
ಬೆಳಕಂತೆ ಈ ಕೂಸು!!
ಚಂದಾದ ಚಂದಿರ
ಮೂಡಿ ಬಂದಂತೆ!!

ತಂಪಾದ ತಂಗಾಳಿ
ಹಾಡಂತೆ ಈ ಕೂಸು!!
ಜೋ ಲಾಲಿ ಸುವ್ವಾಲಿ
ಹಾಡಿ ಕರೆದಂತೆ!!

- ಪಿ.ಜಿ.ಜ್ಯೋತಿ

05 Oct 2018, 02:28 pm

ಹಿಂದೆಂದೂ ಕಂಡ ಕನಸು..

ಹಿಂದೆಂದೂ ಕಂಡ ಕನಸು
ಇಂದೆಕೋ ನೆನಪಾಗಿದೆ
ನಿನಗಾಗೆ ಮಿಡಿದ ಮನಸು
ಒಳಗೊಳಗೆ ನಗುತಿದೆ
ಇನ್ನೇತಕೆ ನನ್ನಲಿ ಮುನಿಸು
ಮಳೆ ನಿಂತೇ ಹೋಗಿದೆ

ಆಮಂತ್ರಣ ಸ್ವೀಕರಿಸು
ನೀ ನನ್ನನ್ನೇ ಆವರಿಸು
ನಿನ್ನ ನೋಟವೇ ಸೋಗಸು
ಚಿಗುರುತ್ತಿದೆ ಹೊಂಗನಸು
ಅಬಿಸಾರಿಕೆ ನನ್ನನ್ನೇ ಪ್ರೀತಿಸು

ಬೆಳ್ಮುಗಿಲ ಆ ಚಪ್ಪರ
ಸವಿಗನಸುಗಳ ಹೂ ಹಂದರ
ನಿನ್ನ ನೆನಪೇ ಬಲು ಸುಂದರ
ಇರುಳು ಅರಳೋ ಚಂದಿರ
ನನ್ನೀ ಹೃದಯವೇ ನಿನದು ನಿರಂತರ

- Chaithanya Holla

04 Oct 2018, 09:37 pm

ಅದೃಷ್ಟ ಚೆನ್ನಾಗಿರುವ ಕಾಲದಲ್ಲಿ

ಅದೃಷ್ಟ ಚೆನ್ನಾಗಿರುವ ಕಾಲದಲ್ಲಿ
ಕಾಗದದಲ್ಲಿ
ಕಲ್ಲೊಂದನ್ನು ಸುತ್ತಿಕೊಟ್ಟರೂ
ಅದಕ್ಕೂ ಮಹತ್ವ ಒದಗಿ ಬರುವುದು

ಹೆಣದ ಮೇಲಿನ ಹೂ
ವಿಚಿತ್ರವಾಗಿ ನಕ್ಕಿತು
ಕಾರಣ ಹುಡುಕುವುದು ನನ್ನ ಹಳೆಯ ಚಾಳಿ
ಅಂತೂ ಅದು ಗುಟ್ಟು ಬಿಟ್ಟಿತು-
'ಅವನು ಬದುಕಿದ್ದಾಗ
ದೂರ ಸರಿದುಹೋದ ಆ ಪ್ರತಿಯೊಬ್ಬನೂ
ಅವನ ಶವಯಾತ್ರೆಯ
ಈ ಚರಮಗೀತೆಯಲ್ಲಿ ದನಿಗೂಡಿಸುವುದನ್ನು
ನೀನೊಮ್ಮೆ ಗಮನವಿಟ್ಟು ನೋಡು
ಇದು ನಿನ್ನ ಮರಣದಲ್ಲೂ ಜರುಗುವುದು!'

ರಾತ್ರಿ ಪೂರ ಬಾರದ ನಿದ್ದೆ
ಮುಂಜಾವದಲಿ ಕಣ್ಣ ತಬ್ಬುವಾಗ
ಅದೆಷ್ಟೇ ಇಂಪಾದ
ಅಲಾರಂ ಸಂಗೀತವಾದರೂ ಕ್ರೂರ!

ಮೀನಿನವನು ಮೀನುಗಳನ್ನು
ತಕ್ಕಡಿಯಲ್ಲಿ ತೂಗತೊಡಗಿದಾಗಿನಿಂದಲೂ
ಯೋಚಿಸುತ್ತಲೇ ಇದ್ದೇನೆ
ಈ ಮೀನುಗಳ ಸಾವಿನಲ್ಲಿ
ನನ್ನ ಪಾತ್ರವೆಷ್ಟೆಂದು

ದೂರ ಸರಿದವರು
ಮತ್ತೆ ಬರುವರೆಂಬ ಭರವಸೆಯನೇ
ಬದುಕಿಬಿಡುವುದನು
ಅಮರ ಪ್ರೇಮವೆಂದಿತು ಲೋಕ
ಮತ್ತೆ ಯೋಚಿಸುತ್ತೇನೆ...
ಅಮರ ಪ್ರೇಮಕೆ ಹೇತುವಾದ ಆ ದ್ರೋಹಕ್ಕೆ
ಯಾವ ಉಡುಗೊರೆಯ ಕೊಡುವುದೆಂದು!

ನನ್ನನು ತೊರೆದುಹೋದವರು
ನನ್ನ ಮರಣದ ಚರಮಗೀತೆಯಲ್ಲಿ
ದನಿಗೂಡಿಸುತ್ತಾರೆಂದು ಕೇಳಿ
ಖುಷಿಯಾಯಿತು
ನಾನದನು ನೋಡಲು ಸಾಧ್ಯವಾಗಿದ್ದಿದ್ದರೆ
ಇನ್ನಷ್ಟು ಹೆಚ್ಚು ಖುಷಿಯಾಗುತ್ತಿತ್ತು
- ಕಾದಂಬಿನಿ

- ಕಾದಂಬಿನಿ

04 Oct 2018, 09:25 am