ಹೇಳಬೇಕಾಗಿಲ್ಲ ಯಾರೇನೂ
ತುಂಬಾ ಹತ್ತಿರದವ ಅವಳಿಗೆ ನಾನು
ಹೇಳ ಹೊರಟರೆ ನಾನು
ನಿಂತು ನೀವು ಕೇಳುವಿರೇನು???
ಅವಳೆಂದರೆ
ಆಶ್ಚರ್ಯರಿಗಳಿಗೂ ಅಚ್ಚರಿಯ ಕುರುಹು ಅವಳು
ಪ್ರೀತಿಯ ಅಪರಮಿತೆಗೂ ಮಿತಿಯ ಗಡಿಯವಳು
ನನ್ನೆಷ್ಟೋ ಹತಾಶೆಗಳಿಗೆ ಮರಣದಂಡನೆಯ
ದಂಡವಿಧಿಸಿದಳವಳು
ಅವಳೆಂದರೆ
ಉಪಸಂಹಾರಕ್ಕೂ ಮುನ್ನುಡಿಯವಳು
ಈ ಏಕಾಂಗಿಯ ಏಕಾಂತದ ಆಯಸ್ಕಾಂತ ಅವಳು
ಕೊನೆಯಲ್ಲೂ ಕೊನೆಯಾಗದವಳು
ಜಗದ ಗೊಡವೆಯ ಅದ್ಭುತಗಳ ಬೂತ ಅವಳು
ವರ್ತಮಾನದ ಮಾನ ಪ್ರಾಣ ಅವಳು
ಅವಳೆಂದರೆ
ನಾ ಕಂಡ ಸೋಲುಗಳನ್ನು ಸೋಲಿಸಿದವಳು
ನಾ ಕಾಣಬೇಕಾದ ಗೆಲುವ ಮಝಲಿನ ಘಮದವಳು
ಹೆಸರಿಲ್ಲದ ಅನಾಮಿಕ ಹೂವಿನ ಪರಿಮಳದವಳು
ಉತ್ತರವ ಕೇಳಿ ಕೇಳಿ ಸಾಕೆಂಬುದಕ್ಕೂ ಸಾಕಾದವಳು
ಅವಳೆಂದರೆ ನಾನಿಡುವ ಪೂರ್ಣವಿರಾಮಕ್ಕೂ
ಅಲ್ಪವಿರಾಮ ಅವಳು
#ಶಂಭುಗೌಡ_
ಮನಸ್ಸೇಕೋ ಭಾರವನಿಸಿದೇ
ಮನ ತಣಿಸುವ
ನಿನ್ನ ನಗುವಿಲ್ಲದೇ,,,
ಗಿಜಿಗುಡುವ ಸಂತೇಲೂ ಕೂಡಾ
ನೀರವಮೌನ ಭಾಸವಾಂದತಿದೆ
ನಿನ್ನ ಮಾತಿಲ್ಲದೆ,,,
ಬಿಸಿಲಿನ ಬೇಗೆಗೆ ತುಸು ನನ್ನಿ
ಹೃದಯ ಬಡಿತ ಏರುಪೇರದಂತಿದೆ
ನಿನ್ನ ಉಸಿರುವಿಲ್ಲದೆ,,,
ಮನದ ಮೂಲೆಯಲ್ಲಿ ಮುನಿಸು
ನೀನು ಬಂದು ಮನದ ಮಂದಿರ ಬಿಡಿಸು
ಎಷ್ಟು ದಿನ ನನ್ನ ನಿನ್ನ ಭೇಟಿಯ ಮಧುರ ಕ್ಷಣ
ನಿನ್ನ ನೆನೆಪೇ ಕಾಡುತಿದೆ ಪ್ರತಿಕ್ಷಣ
ಚೂರಾದರೂ ಕರುಣೆ ಬಾರದೇ ನನ್ನ ಮೇಲೆ
ಭರವಸೆಯ ಭಾವನೆ ಚೂರಾಗುವ ಮುನ್ನ
ಅಪರೂಪಕ್ಕೊಮ್ಮೆ ಮಾತನಾಡುವ ಗಿಳಿಯೇ,
ಅರಳಿಸಿ ಮನದಿ ಕೆಂದಾವರೆಯ
ಮರಳಿ ಮರೆಯಾಗಿ ಬಿಡುವೆಯಲ್ಲ,
ನಗುವಿನ ಹೂ ಗಿಡಕೆ ನೀರೆರೆವವರು ಯಾರಿಲ್ಲದೇ
ಮತ್ತೆ ಬಾಡುವುದೆಂಬುದನು ಮರೆತು...
ನಿನ್ನ ನಗುವಿನೊಳಗೆ ಹುದುಗಿಹುದೇನೋ
ನನ್ನ ಮನದೊಳಗಣ ಸಿಹಿಯ ಗುಟ್ಟು
ನಿನ್ನ ಮಾತಿನ ಮೋಡಿಯೊಳಗೆ ಬಂದಿಯಾಗಿ
ಮರೆತೇನೆ ನಾನು ಎಲ್ಲಾ ಕಹಿಯ ಒಟ್ಟು.
ಗೆಳತಿ ನೀನು ಆಗಿರುವೆಯ ಅಮಂತ್ರಣವಿಲ್ಲದೆ
ನನಗೆ ಮಮತೆಯ ಕೇಡಿ
ಅರಿವ ಮುನ್ನವೇ ಗೆಳೆತನದ ಅನಿಸುಗಳ
ಬಾವಿಗೆ ಮೆಲ್ಲಗೆ ದೂಡಿ..
ನಗುತಿರು ಹೂವೆ ಕಾಲ ಬದಲಾದರೂ
ಅರಳುತಿರಲಿ ದಿನವೂ ನಿನ್ನ ತುಟಿಯಲ್ಲಿ
ಸದಾ ಮುಗುಳ್ನಗೆಯ ಮೊಗ್ಗು.
ಬಿಕ್ಕಳಿಕೆ ಬಂದಾಗಲಾದರೂ ನೆನೆಸಿಕೊ ನನ್ನ
ಕೆಲಸವಿಲ್ಲದ ಬಡಗಿ ನೆನೆಯುತಿರುವನೆಂದು ನಿನ್ನ !
ಕಂಗಳಂಚಿಗೆ ನಿದ್ದೆ ಬಂದಿದ್ದೆ ಮುದ್ದು ಮಡದಿ ಮಲಗೆ ಕೊಂಚ ಮರೆತು ಎಲ್ಲ ನೋವನ್ನೂ ನನ್ನ ಮಡಿಲಲ್ಲಿ.
ನಿನ್ನ ಮನಕೆ ತಿಳಿಯಲಿಲ್ಲವೇ ನಮ್ಮ ಪುಟ್ಟ ಕಂದಮ್ಮನ ಕೂಗು ಅಳುತಿಹುದು ಮಲಗಮ್ಮ ನಿದ್ದೆ ಬಂದಿದೆ ನನಗೆ ಎಂದು ಇನ್ನು ಕಾಯಿಸದೆ ಅದರ ಕಂಗಳ ನಿದ್ದೆ ನೀ ವಿಶ್ರಮಿಸಿ ಈ ಸಂಗಾತಿ ಹಾಡಿಗಿಂದು.
ಅಲ್ಲೆಲ್ಲೋ ಮೋಡಗಳ ಮರೆಯಲ್ಲಿ ಕದ್ದು ಮುಚ್ಚಿ ನಿನ್ನ ನೋಡುವ ಚಂದಿರನ ತಂದು ನಿನಗಿಂದು ಕೊಡದಿದ್ದರೂ ಪ್ರೀತಿಯಿಂದ ತಲೆಯ ಸವರಿ ಹಣೆಗೊಂದು ಮುತ್ತನಿಡುವೆ ಅಪ್ಪನ ಹಾಗೆ ಅಕ್ಕರೆಯಿಂದ.
ಹೆಜ್ಜೆಯ ಭಾರಕ್ಕೆ ಪಾದ ಸವೆದಿಹುದು ಗೆಜ್ಜೆಗಳು ಹೇಳುತ್ತಿವೆ ಕಿರುಬೆರಳಿಗೆ ನೋವಾಗಿದೆ ಎಂದು. ಎದೆಯ ಮೇಲಿಟ್ಟು ಒಮ್ಮೆ ಬಿಸಿಯ ತಾಗಿಸುವೆ ಕಡಿಮೆ ಆಗಬಹುದೇನೋ ನಿನ್ನ ನೋವು.
ನನ್ನ ಉಸಿರು ನೀನಾಗದಿದ್ದರೂ ಅದಕೆ ಅರ್ಥ ನೀನು, ಮೊದಲ ಒಲವು ಬಿಡದ ಚೆಲುವು ಮನಸ ನೆಲವು ನೀನೇ ನನ್ನ ಮನದರಸಿ.
ನಿನ್ನ ನೋವು ಹಂಚಿಕೊಳ್ಳಲು ನನ್ನಿಂದ ಆಗದಿರಬಹುದು ಕಂಡ ಕಣ್ಣ ಹನಿಯಲ್ಲಿ ಪಾಲು ಪಡೆದುಕೊಳ್ಳುವೆ ನಿನ್ನವನಾಗಿ ನಾನಿರುವರೆಗೂ.
ನಿನ್ನ ನಗುವಿಗಾಗಿ ನನ್ನ ಸರ್ವಸ್ವ ಮಾತಿಲ್ಲದೆ ಮೂಡುಪಾಗಿರಿಸುವೆ ಸಂಗಾತಿ ಚೆಲುವಿನ ಜೊತೆಗಾರ್ತಿ.