Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನ ಮನೆಯ ಅಂಗಳದಲ್ಲಿ

ನನ್ನ ಮನೆಯ ಅಂಗಳದಲ್ಲಿ
ಹುಣ್ಣಿಮೆಯ ನಗು ಚೆಲ್ಲಿ!!
ಮೋಡ ಕವಿದ ಎದೆಯಲ್ಲಿ
ಇಟ್ಟೆ ನೀನು ರಂಗೋಲಿ!!

ಆಸೆಯ ಬುರುಕನು ನಾನು
ನನ್ನಯ ಆಸೆಯೇ ನೀನು!!
ಮನದ ಈ ಬಾನಂಗಳದಿ
ಬೆಳಗುವ ಆರತಿ ನೀನು!!

ಸಾಗರದ ಮೋಡಿಗೆ ನಿನ್ನ
ಸಿಲುಕಿಸಿದನೇ ಆ ಚಂದ್ರ!!
ನನ್ನ ಪ್ರೇಮದ ಅರಮನೆಯಲ್ಲಿ
ನೀನೇ ನನ್ನ ಒಲವಿನ ಮಂತ್ರ!!

- ಪಿ.ಜಿ.ಜ್ಯೋತಿ

21 Jul 2018, 11:58 am

ಮಕ್ಕಳ ಕವನ

ಆಟ ಪಾಟ ಊಟ ಓಟ
ಶಾಲೆ ವೇಳೆ ಮಳೆಯ ಕಾಟ
ಚಳಿಯ ರಂಪಾಟ.....
ಕೊಡೆಯ ಪರದಾಟ....

ಬಾಯಿ... ....ಮಿಠಾಯಿ
ಅಂಗೈ ತುಂಬ..ಶಾಯಿ..
ಅಪ್ಪ .....ರುಪಾಯಿ...
ದಾರಿ ಕಾಯೋ ತಾಯಿ

ಸಾವಿರ ಕನಸು...
ಚಿಗುರೋ ಮನಸು
ಚಿಲ್ಲರೆ ಮುನಿಸು....
ಮುಂದಿದೆ ..ಯಶಸ್ಸು...
ರವಿ.....

- Ravi prasad

20 Jul 2018, 11:56 pm

ಸಾಧನೆ

ಸಾಧಿಸಿದವರಿಗೆ ಗೊತ್ತು ಸಾಧನೆಯ ಬೆಲ್ಲದ ರುಚಿಯ
ನಾನೇನು ಬಲ್ಲೇ ಸಿಹಿ ಕಹಿಯಾ
ಮಾಡಿದ್ದರೆ ಕರಾರಾಗಿ ಹೇಳುವೆನಯ್ಯ ನನ್ನ ಸಾಧನೆಯ

ಮಾಡದೇ ಹೇಳುವೆನು ಸಾಧನೆ ಸಿಹಿ ಕಲ್ಪನೆಯ
ಕೇಳಿ ಓದಿರುವೆ ಅವರ ಜೀವನದ ಕಥೆಯ
ಆದ್ರು ತಿಳಿಯಲಿಲ್ಲ ನೋಡಯ್ಯ !!!!!!!!

ಆದರೂ ಹೇಳುತ್ತೇನೆ ಕೇಳಯ್ಯ
ಸಾಧನೆ ಹೇಳುವತಹದು ಅಲ್ಲ.
ಮಾಡುವಂತಹದು!!!

- Prakash Angadi

20 Jul 2018, 09:58 pm

ಗುಂಡಿ ತೆಗೆದ ಅಂಗಿ..

ಗುಂಡಿ ತೆಗೆದ ಅಂಗಿ ತೊಟ್ಟರೆ ಧೀರನಲ್ಲ
ದಮ್ಮು ಎಳೆದು ಗಾಳಿ ಬಿಟ್ಟರೆ ವೀರನಲ್ಲ
ಹಿಂದೆ ಹುಡುಗಿ ಕೂತ ಗಾಡಿ ಒಡೆದರೆ ಶೂರನಲ್ಲ
ಈ ಎಲ್ಲ ಮಾಡಿದ ಮಲ್ಲರ ಮಲ್ಲ ಈಗ ಹಿಂದೆ ಉಳಿದನಲ್ಲ..

ಮಾತೆಗೆ ಮಮತೆಯ ಮಗನಾಗಿ,
ತರುಣೆಗೆ ಸಲಹೆಯ ಸ್ನೇಹಿತನಾಗಿ,
ತಂದೆಗೆ ಬೆವರಿನ ಬೆಂಬಲವಾಗಿ,
ಸೋದರಿಗೆ ಅರಿವಲಿ ಸಲಹುವ ಅಣ್ಣನಾಗಿ,
ಸತಿಗೆ ಸಂತೈಸುವ ಪತಿಯಾಗಿ,
ಜಗಕೆ ಮಣ್ಣಿನ ಮಗನಾಗಿ,
ಹರಿಸು ನಿನ್ನಯ ಋಣವ..
ಈ ಎಲ್ಲರ ಒಳಿತಿಗೆ ಭರಿಸು ಎದೆಯಲಿ ಛಲವ
ಏ ನಲ್ಲ ಆಗು ನೀ ಈ ಎಲ್ಲ ಬಲ್ಲ ಜಗದೇಕ ಮಲ್ಲ

- Manju..

20 Jul 2018, 12:09 pm

ಅರಸಿ

ಸಿಂಧೂರ ತಿಲಕ ಹಚ್ಚಿ ಮುತ್ತು ಇಡುವೆ ಬಾರೆ
ಗೆಜ್ಜೆಯ ನಾದಕ್ಕೆ ನಾ ಧ್ವನಿಯಾಗುವೆ ಬಾರೆ
ಕೊರಳಿಗೆ ಮಾಂಗಲ್ಯ ಕಟ್ಟಿ ರಕ್ಷಕನಾಗುವೆ ಬಾರೆ
ಸಪ್ತಪದಿ ತುಳಿದು ಜೀವನ ಸವಿಯೋಣ ಬಾರೆ
ಅಂದದ ಗೂಡಿಗೆ ನೀ ಅರಸಿ ಆಗು ಬಾರೆ...

- ಎ ಜಿ ಶರಣ್

20 Jul 2018, 09:38 am

ಹೊಸ ಆಸೆ

ಕನಸುಗಳಿಗೆ ಇಲ್ಲ ಇಲ್ಲಿ ಬೇಲಿ
ಆಕಾಶಕ್ಕೆ ಯಾರು ಬಳಿದರೋ ನೀಲಿ
ಅಂಬಾರದಾಗೆ ಬನಾಡಿಗಳು ತೇಲಿ
ಹಾಡುತ್ತಿವೆ ಬುವಿಗೆ ಸುವ್ವಾಲಾಲಿ..

ಚಿಂತ್ಯಾಕೆ ಮಾಡುತಿಯ ತಮ್ಮಾ
ನಿನ್ನಷ್ಟಕ್ಕೆ ಮಾಡುತಿರು ನಿನ್ನ ಕಮ್ಮ
ಮನದೊಳಗೆ ಇಣುಕದಿರಲಿ ಕೆಟ್ಟ ಗುಮ್ಮ
ಕೈಕಟ್ಟಿ ಕೂರದಿರು ಎಂದೆಂದೂ ನೀ ಬಿಮ್ಮ.

ಹಗಲಿರುಳು ನಿಲ್ಲದೆ ಸುತ್ತೋ ಭೂಮಿ
ಕಡಲೊಳಗೆ ಹುದುಗಿರುವ ಚಿಪ್ಪೊಂದು ಚಿಮ್ಮಿ
ನೆಗೆದೀತು ಬಾನೆಡೆಗೆ ಮಿನುಗುತಲಿ ಮುತ್ತು
ಮೈ ಕೊಡವೀತು ತಾರುಣ್ಯ ಹೊಸ ಆಸೆ ಹೊತ್ತು.

- ಶ್ರೀಗೋ.

19 Jul 2018, 10:05 pm

ಸಂಜೆಯನ್ನು ಕರೆದರಿಲ್ಲಿ

ಸಂಜೆಯನ್ನು ಕರೆದರಿಲ್ಲಿ
ಚಂದಿರನು ಬರುವನೇನು!!
ಅಲೆಗಳ ಮೇಲೆ ನನ್ನ
ಹೊತ್ತುಕೊಂಡು ಹೋಗುವನೇನು!!

ತಂಪು ತಂಗಾಳಿಯಲಿ
ತೇಲಿ ಮೇಲೆ ಸಾಗುವನೇನು!!
ಮೋಡದ ಉಯ್ಯಾಲೆಯಲಿ
ನನ್ನ ಕೂಡಿ ಜೀಗುವನೇನು!!

ತಾರೆಗಳ ತೋಟದಲ್ಲಿ
ನನ್ನ ಕೂಡಿ ಆಡುವನೇನು!!
ಇರುಳು ಕಳೆದೊಡನೆ ಅವನು
ಮರೆಯಲಿ ನಿಲ್ಲುವನೇನು!!

- ಪಿ.ಜಿ.ಜ್ಯೋತಿ

19 Jul 2018, 09:28 pm

ಆ ನೂರು ಸವಿ ನೆನಪುಗಳೊಂದಿಗೆ ನಾ....

ನೂರು ಮಾತುಗಳೊಂದಿಗೆ ನಾ..
ಜಗತ್ತನ್ನು ಅರಿದೆ.
ನೂರು ಉಪಾಯಗಳೊಂದಿಗೆ ನಾ..
ಅಪಾಯವನ್ನು ಜಾರಿದೆ.
ನೂರು ವಿಷ್ವಾಸಗಳೊಂದಿಗೆ ನಾ..
ನಿನ್ನನ್ನು ಪಡಿದೆ.
ನೂರು ಸಂಶಯಗಳೊಂದಿಗೆ ನಾ..
ನಿನ್ನನ್ನು ಕಳಿದೆ.

ಆದರೆ.. ಈಗ,
ನಿನ್ನೊಂದಿಗೆ ಕಳೆದ ಆ....
ನೂರು ಸವಿ ನೆನಪುಗಳೊಂದಿಗೆ ನಾ..
ನಿನ್ನನ್ನು ಸವಿಯುತ್ತಿರುವೆ.

-ಆಶ್ರಿತ.

- ashu

19 Jul 2018, 04:06 pm

ಪ್ರೀತಿಯ ತವಕದಲ್ಲಿ

ಕಂಬನಿಯ ಮಿಡಿತಕ್ಕೆ
ಕಲ್ಲು ಕರಗುವ ಸಮಯದಲ್ಲಿ
ಪರವಶ ನಾದೇನು ನನ್ನೊಳಗೆ

ನಿನ್ನ ನೋಟಕೆ ಮೂಕ ವಿಸ್ಮಯನಾಗಿ
ಕುಳಿತಿರುವೇ ಮೌನ ಧ್ಯಾನದಲ್ಲಿ
ಮಾಸದ ಮನಸಿನಲ್ಲಿ ಪ್ರೀತಿಯ ಅಂಕುರಿಸಿ
ಕನಸಿನಲ್ಲಿ ತುಂತುರು ಮಳೆ ಹನಿಯಾಗಿ
ನಗೆ ಬೀರುವ ಮನದಲ್ಲಿ
ಪ್ರೀತಿ ಅರಳಿಸು ಎದೆಯಲ್ಲಿ

ನನ್ನ ಮನದ ಪುಟದಲ್ಲಿ ನಿನ್ನದೇ ಚಹರಿ
ಕನಸಿನ ಗೂಡಿನಲ್ಲಿ ನಿನ್ನದೇ ಲಹರಿ
ಬಾಳೆ ಪಯಣಕ್ಕೆ ಜೊತೆಯಾಗಲು ನೀ..
ಸ್ವರ್ಶಿಸು ಬಾ ನನ್ನ ಮನವ...

ಎ ಜಿ ಶರಣ್

- ಎ ಜಿ ಶರಣ್

19 Jul 2018, 09:50 am

ನೆಮ್ಮದಿ....

ನಿನಗೇನೂ ಧೀಮಾಕೇ ಹುಡುಗಿ....
ನಾ ಕಳಿಸಿದ ಸಂದೇಶ
ನೋಡಿದ್ರು
ರಿಪ್ಲೇ ಮಾಡದ ಬೆಡಗಿ...
ನಿನ್ನ ಸಂದೇಶಕ್ಕಾಗಿ
ಕಾದು ಕಾದು ಸಾಕಾಗಿ...
ಕೊನೆಗೊಂದು ತೀರ್ಮಾನಕ್ಕೆ ಬಂದಾಗಿ...
ಈ ಫೋನಿಂದ ದೂರಾವಾಗಿ...
ಬದುಕೊಣ ಎಂದಿರುವೆ
ನೆಮ್ಮದಿಯಾಗಿ.....

- Vishwa Shilpi

19 Jul 2018, 12:07 am