ಸಾಧನೆಯ ಹಾದಿಯಲಿ ಕಲ್ಲುಮುಳ್ಳುಗಳುಂಟು
ದೃಢ ನಿರ್ಧಾರಗಳು ಮನಸಿನಲ್ಲಿ ಹಾಗೇ ಉಳಿಯಲಿ
ಮಾಡಿದ ಸಂಕಲ್ಪವು ಮರೆಮಾಚದಿರಲಿ ಬದುಕಲಿ
ನೆನಪಿರಲಿ ನಮಗೆ ನಾನೊಬ್ಬ ಸಾಧಕನೆಂಬುವದ.
ಕೆಲಸದಲ್ಲಿ ನೂರೆಂಟು ಅಡಕು ತೊಡಕುಗಳುಂಟು
ಧೈರ್ಯವಿರಲಿ ನಷ್ಟವೊ ಲಾಭವೊ ಅದರೊಳಗುಂಟು
ಹಿಡಿದ ಕಾರ್ಯದಲಿ ಕೈ ಬಿಡದೆ ನಡಿಯುವದು ಬದುಕು
ಅಂಜದಿರಿ ಅಳುಕದಿರಿ ಸಾಧನೆಗೆ ಬೆಳಕು ನಿಮಗುಂಟು.
ಕಷ್ಟಗಳು ಬರುವದು ಮನುಷ್ಯನಿಗೆ ಹೊರೆತು
ಗಿಡ ಮರ ಬಳ್ಳಿ ಕಳ್ಳಿಗಳಿಗಲ್ಲ
ಗಿಡ ಮರಗಳ ಪೋಷಿಸಲು ನೂರು ಜನರುಂಟು ಈ ಜಗದೊಳಗೆ
ನಿನ್ನ ಕಾಲ ಮೇಲೆ ನೀ ನಿಲ್ಲುವದು ಆತ್ಮವಿಶ್ವಾಸ ನಿನ್ನ ಬಲ
ಹೆದರದಿರು ಸಾಧಕ ಗುರಿ ಮುಟ್ಟುವರೆಗು ನೀ ನಿಲ್ಲದಿರು.
ಗುರುವಿನ ಗಾದೆಗೆ ನೀ ತಲೆಬಾಗು
ನೀ ಎದ್ದು ನಿಂತಾಗಲೆ ಎಲ್ಲರು ತಲೆಬಾಗುವರು
ಹಿಡಿದ ಪಟ್ಟನು ಸಾಧಿಸಿ ತೋರಿಸು ಈ ಜಗಕೆ
ಎಂದಿಗು ಹಿಂಜರಿಯದಿರು ಬೇರೊಬ್ಬರ ಮನಕೆ.
ರಾತ್ರಿ ಹಗಲಿರುಳು ಶ್ರಮಿಸುವವನು ಸಾಧಕ
ಹೆದರಿ ಹಿಂದೆ ಸರಿಯುವವನು ನಿಸ್ಸಾಯಕ್
ನಿಮ್ಮ ಆಸೆಗಳ ಬೊಕ್ಕಸಕ್ಕೆ ಹಾಕಿರಿ ಕಡಿವಾಣ
ಇವೆಲ್ಲವನ್ನು ಮೀರಿ ನಿಂತವನೆ ಯೆಶಸ್ವಿ ಸಾಧಕನಾಗುವೆ ನೀ ಜಾಣ.
.......✍ಈಶ್ವರ್ ಬಿ
ಕತ್ತಲೋಂದು ಬಂದು
ಜಗವೆ ಮರೆ ಮಾಚಿದರೆನಂತೆ
ಕತ್ತಲನ್ನೆ ನುಂಗಿ ಬೆಳಕೋಂದ
ಚೆಲ್ಲೋಕೆ ಬರುವನೋಬ್ಬ ಚಂದ್ರ
ಆ ಆಗಸಕ್ಕೆ........ಭೂವಿಯಲ್ಲ
ಬೆಳಂದಿಗಳೆಂಬ ಮುತ್ತು ಮಳೆಗಳ
ಸುರಿಸೋಕೆ.........
ಎಲ್ಲವ ಮರೆತು ಮುದ್ದು ಮುದ್ದಾಗಿ
ಮಗುವಿನಂತೆ ಮಲಗಿರುವ
ಎಲ್ಲರ ಎಬ್ಬಿಸಿ ಅವರ ಗುರಿಯ ನೆನಪಿಸಿ
ಎಲ್ಲರ ಬಾಳ ಬೆಳಗಲೆಂದು
ಮುಂಜಾನೆಯ ಜಗದ ಅಂದವ
ಕಣ್ತುಂಬಿಕೊಳ್ಳಿರೋ
ಎಂದು ಎದ್ದು ಬರುವನೋಬ್ಬ ಸೂರ್ಯ
ಇಡಿ ಭೂಲೋಕವ ಬೆಳಗಲೆಂದು.....ಮುಂಜಾನೆಯ
ಸಹಿ ಮುತ್ತಗಳ ನಿಡೋಕೆ......
ದಿನವೆಲ್ಲ ಸಿಹಿಯಾಗಿರಲೆಂದು....
ನೀನೇ ನನ್ನ ಉಸಿರ ಜ್ಯೋತಿ
ತೋರಿ ಮುಗುಳು ನಗುವಿನ ಪ್ರೀತಿ
ಮಾಡಿಕೂಂಡೆ ಕೈ ಕುಣಿತದ ಕೋತಿ
ಕಾಣ ಬೇಕಿದೆ ನಿನ್ನ ಇನ್ನೊಂದು ಸರತಿ
ತಿಳಿಸಬೇಕಿದೆ ನನ್ನೀ ಚಿಂತಾಜನಕ ಸ್ಥಿತಿ
ಎಂದಿಗೂ ಆಗಿರು ಹೃದಯದ ಬಡಿತಕ್ಕೆ ವಿಶೇಷ ಅತಿಥಿ
ಮರುಭೂಮಿಯ ಮನಸಲಿ ಬೀಸಿದೆ ನಿನ್ನದೇ ಗಾಳಿಯು ಅತಿ ಅತೀ....
ನನ್ನ ಆಸೆ ಒಂದು
ಕಣ್ಣ ಕನಸು ನೂರಾ ಒಂದು
ಮನದ ಬಯಕೆ ಪೂರೈಸಲೆಂದು
ಬಂದಿರುವೆ ನಾ ನಿನಗಾಗಿ ಇಂದು.
ಕಳೆದು ಹೋದ ಆ ಬಾಲ್ಯದ ದಿನಗಳು
ಮೂಡಿ ಬಂದವು ನನ್ನ ಕವನದ ರೂಪದಲಿ
ನೆನಪುಗಳು ಬಂದು ನೂಕುತಿವೆ ಭಾವನೆಯ ಕೂಪದಲಿ
ಎನಗೆ ಇದು ಶಾಪವೋ,ನೆನಪುಗಳ ಪ್ರಲಾಪವೋ
ನನಗೆ ತಿಳಿಯದೇ ಹೋದ ಹೊಸ ಆಲಾಪವೋ.
- ಉಮೇಶ್.
ಹೃದಯ ಕಾದಿಹುದು ನಿನ್ನ ನಿರೀಕ್ಷೆಯಲ್ಲಿ,
ಮನಸು ಉಸಿರಾಡುವುದು ನಿನ್ನ ನಿರೀಕ್ಷೆಯಲ್ಲಿ,
ನೋವು ನಲಿವಾಗುವುದು ನಿನ್ನ ನಿರೀಕ್ಷೆಯಲ್ಲಿ,
ಮೌನ ಮಾತಾಗುವುದು ನಿನ್ನ ನಿರೀಕ್ಷೆಯಲ್ಲಿ,
ನಿರ್ಜಿವಿ ಕನಸು ಪುನರ್ಜಿವಿಸುವುದು ನಿನ್ನ ನಿರೀಕ್ಷೆಯಲ್ಲಿ,
ಗಾಳಿ ಘಮಗೊಡುವುದು ನಿನ್ನ ನಿರೀಕ್ಷೆಯಲ್ಲಿ,
ನೀರು ನಿನ್ನ ಪ್ರತಿಬಿಂಬವಾಗುವುದು ನಿರೀಕ್ಷೆಯಲ್ಲಿ,
ಮಣ್ಣು ನನ್ನ ಆಕೃತಿ ಪಡೆವುದು ಬೆಳದಿಂಗಳ ಬೆಳಕಿನ ನಿನ್ನ ನಿರೀಕ್ಷೆಯಲ್ಲಿ,
ನನ್ನ ತನು ಮನ ಕಾದಿವುದು
ಜೊತೆಗಾರ ನಿನ್ನ ನಿರೀಕ್ಷೆಯಲ್ಲಿ,
ಕಾಣಲಾರೆನೋ ಕಾಣೆಯಾದೆಯೋ ಈ
ಕವನ ಚಾಳಿಯಲ್ಲಿ.......