ಲೇಖನಿಯಲ್ಲಡಗಿಹುದು ಅಗೋಚರ ಶಕ್ತಿ
ಬರವಣಿಗೆಯ ಶೈಲಿಯಲ್ಲಡಗಿದೆ ಅದರ ಯುಕ್ತಿ
ಕೊಡಿಸುವುದದು ಎಲ್ಲಾ ಜನಗಳಿಗೆ ದಬ್ಬಾಳಿಕೆಯಿಂದ ಮುಕ್ತಿ
ಲೇಖನಿ ಮೂಡಿಸುವುದು ಜನ ಮಾನಸದಲಿ
ದೇಶ ಭಕ್ತಿ
ಸತ್ಯದಿಂದ ಆಸತ್ಯವ ಕೊಂದು
ಧಮ೯ದಿಂದ ಅಧಮ೯ವ ಕೊಂದು
ಸಂಸ್ಕೃತಿಯಿಂದ ಸಾಹಿತ್ಯ ತಂದು
ದೇಶದ ಜನ ಮನಗಳ ನ್ಯಾಯ ಕಾಯುವ ಲೇಖನಿಯದು
ದೇಶ ಕಾಯುವ ವೀರ ಸೈನಿಕನಂತೆ
ಪತ್ರಕತ೯ರ ಲೇಖನಿಯದು
ಯಾವ ಆಸೆ ಆಮಿಷಗಳಿಗೂ ಲೇಖನಿಯ ತಲೆ ಕೊಡದಿರಿ
ಅದನ್ನು ಯಾರ ಯಾವುದರ ಗುಲಾಮರನ್ನಾಗಿಯೂ ಮಾಡದಿರಿ
ಸತ್ಯವ ಎತ್ತಿ ಹಿಡಿಯುವ ಸತ್ವಯುತ
ಖಡ್ಗವೆಂದೆ ಭಾವಿಸಿರಿ
ಅದು ದೇಶದ ಐದನೇ ಆಧಾರ ಸ್ತಂಭವೆಂಬುದ ಮರೆಯದಿರಿ
ಸೂರ್ಯಾಸ್ತದ ಸಮಯದಲ್ಲಿ
ಇಳಿಬಿಸಿಲ ಹೊತ್ತಿನಲಿ
ನೆನಪಾಗುವಳು ಅವಳು..
ಹೆಂಡ ಕುಡಿದ ಹುಚ್ಚು ಕುದುರೆಯಂತೆ
ಬೀದಿ ಬೀದಿಯಲಿ ತಿರುಗಿ ದಣಿದ ದೇಹಕೆ
ಮುದ ನೀಡಲು ಬೀಸುವ ಗಾಳಿಯಂತೆ..!
ತಂಗಾಳಿಯಂತೆ..!
ಹುಣ್ಣಿಮೆಯ ರಾತ್ರಿಯಲಿ
ತಿಳಿಹಾಲ ಬೆಳಕಿನಲಿ
ನೆನಪಾಗುವಳು ಅವಳು..
ಹಠ ಮಾಡಿ ಅಳುತಿರುವ
ಕರುಳ ಬಳ್ಳಿಗೆ
ಚಂದ ಮಾಮನ ತೋರಿಸುತ
ಲಾಲಿಯನು ಹಾಡುತಾ
ಕೈತುತ್ತು ತಿನಿಸುತ್ತಾ
ರಮಿಸುವ ಆ ತಾಯಿಯಂತೆ...!
ಮಹಾ ಮಾಯಿಯಂತೆ..!
ಆಕಾಶ ಗಂಗೆಯನ್ನು
ಶಿವನ ಮುಡಿಗೆ ಬರುವಂತೆ ಮಾಡಿ
ಶಿವನ ಜಡೆಯಿಂದ ಭುವಿಗೆ ಬರಮಾಡಿ
ತನ್ನ ಬಂಧು ಭಾಂಧವರನ್ನುಳಿಸಿಕೊಂಡ ಭಗೀರಥ ತನ್ನ ಪರಿಶ್ರಮದ ಫಲವಾಗಿ
ಗಂಗೆಯ ಪಾವಿತ್ರ್ಯತೆಯ ಸಲುವಾಗಿ
ಆದರೆ ಅದೇ ಗಂಗೆ ಹರಿಯುತ್ತಿರುವಳು
ಕಲ್ಮಷ ತುಂಬಿದ ನೀರಿನ ಸೆಲೆಯಾಗಿ ಇಂದು
ರೋಗ ರುಜುನೆಗಳ ಹೋತ್ತು ತಂದು
ಸತ್ತ ಶವಗಳ ಸಂಸ್ಕಾರಕ್ಕೆಂದು ಬಂದು
ಜನಗಳೆಲ್ಲಾ ನಿತ್ಯ ಬಂದು ಮಿಂದು
ಗಂಗೆಯ ಕಲುಷಿತ ಮಾಡುವ ಜನಗಳ ಕಂಡು
ಮರುಗುತಿದೆ ಭಾರತಾಂಬೆಯ ಮನ
ಗಂಗೆಯ ವಾಸ್ತವ ಸ್ಥಿತಿಯ ಮನಗಂಡು
ಗಂಗೆಯ ಪಾವಿತ್ರ್ಯವನ್ನೂಳಿಸಲು ಶ್ರಮಿಸಬೇಕಿದೆ
ಮತ್ತೆ ಭಗೀರಥರಂತೆ ಪ್ರಯತ್ನಿಸಬೇಕಿದೆ
ಭಾರತ ಮಾತೆಯ ಮಕ್ಕಳಾಗಿ
ಸ್ವಚ್ಛತೆಯೋಂದಿಗೆ ಹೆಜ್ಜೆಯ ಹಾಕಬೇಕಿದೆ
ಗಂಗೆ ಪರಿಶುದ್ದವಾಗಿ ಹರಿಯುವಂತಹ
ಕೆಲಸಗಳ ಮಾಡಬೇಕಿದೆ
ಒಟ್ಟಾಗಿ ದೃಢ ವಿಶ್ವಾಸದಿ ದುಡಿಯಬೇಕಿದೆ
ಮತ್ತೋಮ್ಮೆ ದೇವಗಂಗೆಯ ಉಳಿಸಬೇಕಿದೆ
ಮನದಾಳದ ಭಾವಗಳು
ಮದುರ ಆ ನೆನೆಪುಗಳು
ಸಿಹಿ ಕಹಿಯ ಸಮ್ಮಿಲನದ
ಜೀವನದ ತಿರುವುಗಳು
ಕಾಡುತಿದೆ ಮನವನ್ನು
ಮರುಕಳಿಸಿ ನೆನಪುಗಳು
ಅನುಭವಿಸಿದ ನೋವುಗಳ
ಕಳೆದ ಸಂತೋಷದ ಕ್ಷಣಗಳ
ಕೈ ಜಾರಿದ ಕನಸ್ಸುಗಳ
ಕೈ ಹಿಡಿದ ಮನಸ್ಸುಗಳ
ಕಳೆದುಕೊಂಡದ್ದನ್ನ
ಪಡೆದು ಕೊಂಡದ್ದನ್ನ
ತನ್ನದೇ ಜೀವನದಲಿ ಬಂದು ಹೋದವರ
ನೆನೆದು ಮನ ನೋಂದು ಬಿಕ್ಕುತ್ತಿದೆ
ಕಣ್ಣಂಚಲಿ ಕಂಬನಿಯು ತಾ ಬಂದು
ಇಣುಕುತಿದೆ
ನೋವು ನಲಿವುಗಳೆಲ್ಲಾ..
ಒಟ್ಟಾಗಿ ಗುಟ್ಟಾಗಿ ಮನಮುಟ್ಟುವಂತಾಗಿ
ಬಿಡನೆಂದರೂ ಬೆಂಬಿಡದೆ,
ಗತ ಕಾಲದ ಜೀವನದ ಚಿತ್ರಪಟಗಳ
ಮತ್ತೋಮ್ಮೆ ಮನದಲ್ಲಿ ಮೂಡಿಸಲು
ನೆನಪಿನ ಅಲೆಗಳು ಜೀವನದ ಬುತ್ತಿಯ
ಹೋತ್ತು ತರುತಲಿವೆ
ಜೀವನವೆಂಬ ಈ ಕಡಲಿನ ಯಾನದಲಿ
ಬದುಕಿರುವೆನು ನಾ ನೆನಪುಗಳ ಜೋತೆಯಲಿ
ಒಬ್ಬಂಟಿಯಾಗಿ ಸಾಗುತಾ..ಈ ಬಾಳ ನೌಕೆಯಲಿ
ನಿನ್ನ ಮೊಗದ ಅಂದ ನೋಡಲು ಬಲು ಚೆಂದ
ನೀ ನಗಲು ಬೀಳುವ ಆ ಗುಳಿ ನೋಡಲು ಬಲು ಚಂದ
ಓ ಮುದ್ದು ಗೊಂಬೆ ನೀನಿರಲು ಜೊತೆಯಲ್ಲಿ
ಗೆಲುವಿರುವುದು ಸದಾ ಜೊತೆಯಲ್ಲಿ
ನಿನ್ನ ಒಲವೆ ನನಗೆ ಜೇನ ಸಿಹಿಯು
ಓ ಪುಟ್ಟ ಕಂದ
ನಿನ್ನದೊಂದು ನಗುವೆ ಸಾಕು
ತನ್ನಲ್ಲ ನೋವ ಮರೆಯೊಕೆ
ಆ ನಗುವ ಕದ್ದು ಚಂದ್ರಲೋಕಕ್ಕೆ
ಕಳಿಸಿಬಿಡಲೇನೋ ಕಂದ ಬೆಳದಿಂಗಳಲ್ಲಿ
ಬೆಳಕೊಂದ ಚುಮ್ಮಿ ಅಂಗಳವೆಲ್ಲ ಸಿಂಗಾರ ಮಾಡಬೆಕಂತೆ.......
ಓ ಮುದ್ದು ಕಂದ
ನೀನ್ನ ತೊದಲು ಮಾತಿಗೆ
ಅಮ್ಮನೆದೆ ಆತುರಿಯುತಿದೆ
ಆ ಮುದ್ದಾದ ಮಾತೋಂದ
ಹಾರಾಡೋ ಹಕ್ಕಿಗಳೂರಿಗೆ
ಕಳಿಸಿಬಿಡಲೆನು ಅವುಗಳಿಗು
ನಿನ್ನಂತೆ ಮಾತಾಡುವ ಬಯಕೆಯಂತೆ.........
ಓ ಅಂದದ ಬಂಗಾರಿ
ನಿನ್ನ ತುಂಟಾಟ ಅಮ್ಮನಿಗೆ ಅದುವೆ
ಕೈತುಂಬ ಕೆಲಸ ನಿನ್ನ ತುಂಟಾಟವ
ದೇವಲೋಕಕ್ಕೆ ಕಳಿಸಿ ಬಿಡಲೇನು
ದೆವತೆಗಳಿಗೆ ಮಾಡಲು ಕೆಲಸಬೆಕಂತೆ..........
ಓ ಅಂದದ ಸಿಂಗಾರಿ
ನಿನ್ನ ಆಟ ಪಾಠಕ್ಕೆ ಅಮ್ಮನುಸಿರು
ಕಾಯುತಿದೆ ನಿನ್ನ ಆಟಪಾಠವ ಹೂವಗಳ
ಲೋಕಕ್ಕೆ ಕಳಿಸಿಬಿಡಲೆನು ಅವುಗಳಿಗೆ
ಆಟಪಾಠ ಕಲಿಯುವ ಆಸೆಯಂತೆ.......
ಓ ಚಿನ್ನಿ ವೈಯ್ಯಾರಿ
ನನ್ನಾಸೆಯೆ ಕೂಸು ನೀ ನಿನ್ನೆಲ್ಲ ಒಲವು
ನಿನ್ನಮ್ಮನಿಗು ಹೆಳಿಕೋಡುವೆಯ
ಅವಳಿಗು ನಿನ್ನಂತೆ ಆಗುವ ಬಯಕೆಯಂತೆ....