ಮನಸ್ಸಿನಲ್ಲಿರೊ ನೋವು ಹೇಳಲಾಗುತ್ತಿಲ್ಲ
ಕಣ್ಣಂಚಿನ ನೀರು ನಿಲ್ಲುತ್ತಿಲ್ಲ
ನಿನ್ನ ಮರೆಯಲಾಗುತ್ತಿಲ್ಲ
ನಿನ್ನ ನೆನಪನ್ನು ಸಾಯಿಸಲು ಆಗುತ್ತಿಲ್ಲ
ನಿನ್ನ ನೆನಪು ನನ್ನನು ಪದೇ ಪದೇ ಸಾಯಿಸುತ್ತಿದೆ
ಯಾಕೆ ನೀ ನನ್ನಿಂದ ದೂರ ಇರುವೆ
ಯಾವುದೋ ಸಣ್ಣ ತಪ್ಪಿಗೆ ....
ಚಂದ್ರ ಇಲ್ಲದೆ ಆಕಾಶ ಇಲ್ಲ
ಕಣ್ಣು ಇಲ್ಲದೆ ರೆಪ್ಪೆ ಇಲ್ಲ
ಹೃದಯ ಇಲ್ಲದೆ ಬಡಿತ ಇಲ್ಲ
ನೀ ಇಲ್ಲದೆ ನಾ ಇಲ್ಲ
ಕೈ ಚಾಚ್ಚಿ ನಿಂತಿರುವೆ ಚಲುವೆ
ನಿನ್ನ ಕೈ ಹಿಡಿದು ಬಾಳ ಬಂಡಿ ನೆಡೆಸಲು
ಈ ನನ್ನ ಬಾಳಿಗೆ ನೀನೇ ಬೆಳದಿಂಗಳ ದೀಪ
ನಾ ಎಷ್ಟೇ ವರ್ಣಿಸಿದರು ಮುಗಿಯಾದು
ನನ್ನ ಹೃದಯದ ಚಲುವೆ.
"ಮರೆತರು ಮರೆಯಲಾಗದು ಚಲುವೆ
ನಿನ್ನ ನೆನಪು ಈ ಹೃದಯ
ಅರಿತರು ಅರಿಯಲಾಗದು ಚಲುವೆ
ನಿನ್ನ ಒಲವು ಈ ಮನಸ್ಸು
ಹೆಂಗೆ ಮರೆಯಲಿ ಹೇಳು ಚಲುವೆ
ಈ ಹೃದಯಕ್ಕೆ, ಮನಸ್ಸಿಗೆ,
ನೀನೇ ಜೀವಾ ಕಣ್ಣೇ ಚಲುವೆ.
"ನೀ ಎಂದು ಬರುವೆ ಚಲುವೆ
ಈ ನಿನ್ನ ಗೆಳೆಯನ ಬಾಳಿನಲ್ಲಿ
ನೀ ಎಂದು ತರುವೆ ಹರುಷವ
ಈ ನಿನ್ನ ಗೆಳೆಯನ ಮನಸ್ಸಿನಲ್ಲಿ
ನೀ ಎಂದೆಂದಿಗೂ ಸಿಗದ ನಕ್ಷತ್ರವಾದರು
ಆ ನಕ್ಷತ್ರನ ಪ್ರೀತಿಸೋ ಹುಚ್ಚು ಪ್ರೇಮಿ ನಾ,
ನೀ ನೋಟಕ್ಕೆ ದೂರವಾದರು
ಆ ನಿನ್ನ ಮುದ್ದಾದ ಪ್ರತಿಬಿಂಬ
ನನ್ನ ಕಣ್ಣಗಳಲಿ ಮೀನುಗುತಿರು ಚಲುವೆ
ಪ್ರೀತಿ ಅರ್ಥ ತಿಳಿಯದ ನನಗೆ ,ಪ್ರೀತಿ ಅರ್ಥ ತಿಳಿಸಿದವ ನೀನು .
ಇಂದು ನನಾಗಿ ಪ್ರೀತಿಸುವಾಗ ನೀನೇಕೋ ದೂರಾಗುವ ಮಾತನಿಟ್ಟೆ .
ಈ ಹೃದಯದ ಬಡಿತ ನಿನಗೆ ಕೇಳಿಸಲೇ ಇಲ್ವಾ ?ಪ್ರತಿ ದಿನ, ಪ್ರತಿ ಕ್ಷಣ ನೀನೇ ಬೇಕು ,ನೀನೇ ಬೇಕು ಎನ್ನುವ ಹುಚ್ಚು ಹಂಬಲಕ್ಕೆ ಒಳಗಾಗಿದೆ .
ನೀನಾಡ ಬೇಡ ತಮಾಷೆಗೂ ನೀ ನನ್ನಿಂದ ದೂರಾಗುವ ಕಲ್ಪನೆ ಕೂಡ ಕಲ್ಪಿಸಲು ಅಸಾದ್ಯವೇನಿಸಿದೆ ಈ ಮನಸ್ಸಿಗೆ ...ಇಂದು ನೀನೇ ಹೇಳುವೆಯಾ ಸಾಂತ್ವನದ ಮಾತಿಗಾಗಿ ಕಾಯುತ್ತಿದೆ ಮನಸು....
ನನ್ನ ಕಲ್ಪನೆಗೂ ಮೀರಿದಷ್ಟು ನಾ ನಿನ್ನನ್ನೇ ಹಚ್ಚಿಕೊಂಡು ,ಮನಸಾರೆ ಪ್ರೀತಿಸುತ್ತಿರುವೆ .........ಹೇಳಲಾಗದಷ್ಟು ,ಬೆಟ್ಟದಷ್ಟು ಈ ಹೃದಯದಲ್ಲಿ ಪ್ರೀತಿ ಮುಡಿಸಿದವನು ನೀನೇ ಆಗಿರುವಾಗ ,,, ಈ ಹೃದಯದ ಅರಮನೆಗೆ ನೀನೇ ಒಡೆಯ ಅಲ್ವನೋ ........
ಇಂದು ,ಎಂದೂ ನೀನೇ ಈ ಜೀವಕ್ಕೆ ಉಸಿರಾಗಿರುವಾಗ ನಾ ಬಿಟ್ಟು ಹೋಗೋ ಮಾತಾದರು ಎಲ್ಲಿದೆ ? ಗೆಳೆಯ
ಮುಗುಳು ನಗೆಯೇ
ನೀನಿರುವುದು ಹೀಗೆಯೇ?
ನೀನೊಂದು ಮಾಯೆಯೆ
ಮೊಗದ ಮೇಲೆ ನೀನಿದ್ದರೆ ಬಲು ಸವಿಯೇ
ನೋವಿಗೂ ಸುಳಿವುದು ಆ ಕ್ಷಣ ಸಾವಿನ ಛಾಯೆಯೆ
ಏನು ನಿನ್ನ ರೀತಿ ನೀತಿ
ಮನಸೊಳಗಿದ್ದರು ಸಾವಿರ ಭೀತಿ
ನೀ ಕಂಡರೇನೆ ಮೊಗದ ಮೇಲೆ ಎಲ್ಲರಿಗೂ ಪ್ರೀತಿ
ನಗುವಾಗ ಮನದೊಳಗಿರದಿರುವುದೆ ಪಜೀತಿ
ನಿನ್ನ ವ್ಯಾಪ್ತಿಗೆ ಇಲ್ಲದಾಗಿದೆ ಪರಿಮಿತಿ
ನಿನ್ನಗನಿಸದೆ ನಿನ್ನಾದಾಯಿತು ಕೊಂಚ ಅತಿ
ಹುಡುಕಿ ಬರುವರು ಎಲ್ಲರೂ ನಿನ್ನ
ನೀ ಬಂದು ಮನಸಿಗಳಿಗಾಕುವೆ ಕನ್ನ
ನೀನಿದ್ದರಂತೂ ಎಲ್ಲರಿಗೂ ನೋಡಲು ಚೆನ್ನ
ಏನೇ ನೋವಿದ್ದರು ನೀ ಬರುವ ಮುನ್ನ
ಬಂದಮೇಲೆ ಬೇಸರಕೂ ಹೇಳಬೇಕು ಹೊರಡು ನೀನಿನ್ನ
ಬೇಕೊ ಬೇಡವೊ ತಿಳಿಯೆ ಆದರೂ ನಾನಗುವೆ ಮತ್ತೆ ನೀ ಬರುವ ಮುನ್ನ
ಪಾಠಿ ಪುಸ್ತಕ ಹಿಡಿದ ಬೆರಳಿನ್ನು
ಬರೆಯುವುದು ಕಲಿತಿಲ್ಲ ಸರಿಯಾಗಿ,
ಬಂಧನದ ಬಲಿ ಏತಕೆ ಬಡವಿಯಾದ
ಕಾರಣಕ್ಕೆ ಮದುವೆ ಎಂಬ
ಜೀವಿತಾವಧಿಯ ಸೆರೆಮನೆಯಲ್ಲಿ?
ಮೊಡವೆಯು ಮೂಡಿಲ್ಲ
ಮುಖದ ಅಂದವ ಹೆಚ್ಚಿಸಲಿಂದು
ಮೂಗುತಿ ಏಕೆ ಸಂಪ್ರದಾಯದ ಹೆಸರಿನಲ್ಲಿ ,
ಬೆಳ್ಳಿ ಕಾಲುಂಗುರದ ಬೆಲೆಯೂ ತಿಳಿದಿಲ್ಲ
ಕಟ್ಟಿ ಹಾಕುವಿರಿ ಏತಕೆ ಸವಿ ಬಾಲ್ಯವ
ಸಾಯಿಸಿ ಇಂದು?
ಗುರುತು ತಿಳಿಯದ ಸರಿ ಸುಮಾರು
ವಯಸ್ಕನ ಪರಿಚಯ ಏತಕೆ ನನಗೆ
ಅವನ ಕಟುವಾದ ಕಣ್ಣ ಕೆಳಗೆ
ಹೂವಿನಂತೆ ಬಾಡಿ ಹೋಗಲಿಂದು,
ವಿದ್ಯೆ ನನ್ನ ಹಕ್ಕು ಎಂದು ತಿಳಿಯದ ತಂದೆ - ತಾಯಿ
ಅವರು ಹೆತ್ತ ಕಾರಣಕ್ಕೆ ಕಟ್ಟಿ ಹಾಕಿ ಕಳಿಸುವರು
ಮೂರು ಗಂಟು ನೇಣಿನಂತೆ
ಊರ ಮಂದಿ ಎದುರಿಗೆ ಮೀಸೆ ತಿರುವಿ ಗರ್ವದಿ.
ಪರಿಚಯವೇ ಇಲ್ಲದ ಪಾಮರರಿಂದು
ತನ್ನ ಮನೆ ಆಳಿನಂತೆ ನೋಡುವರು,
ಅತ್ತೆ-ಮಾವಂದಿರರು ನಾದಿನಿ-ಮೈದುನರು,
ಹೆಜ್ಜೆ ಸದ್ದು ಆದಿತೆಂದರೆ ಬೈಯುವಳು ಅತ್ತೆವ್ವ
ಎಂತ ಬುದ್ದಿ ಕಲಿಸಿರುವಳು ನಿನ್ನ ಹೆತ್ತವಳೆಂದು,
ಎಲ್ಲಿ ಕಲಿಸಿದವಳು ಬುದ್ದಿ
ನನಗೆ ತಿಳುವಳಿಕೆ ಬರುವಷ್ಟರಲ್ಲೇ
ಹಣದ ಆಸೆ ತೋರಿ ಅವರಿಗೆ ಕೊಂಡುಕೊಂಡರಲ್ಲ
ನನ್ನ ವಯಸ್ಸಾದ ನಿಮ್ಮ ಮಗನಿಗೆ ವಧುವಾಗಿ.
ಇರುವಳೊಬ್ಬಳು ಸೊಸೆ
ಹಡೆದಿರುವಳು ಒಂದು ವಂಶೋದ್ದಾರಕನನ್ನ
ಎಂದು ಹೇಳಿಕೊಳ್ಳಲು ಹೆಮ್ಮೆಯಿಂದ
ತಮ್ಮ ಮಗನು ಗಂಡು ಎಂದು,
ನನ್ನ ದೇಹ ರಚನೆ ಪೂರ್ತಿಯಾಗುವ ಅಷ್ಟರಲ್ಲಿ
ದಾರುಣವಾಗಿ ನನ್ನ ಮೇಲೆ ಹಲ್ಲೆ ನಡೆಸಿ
ಚಿತ್ರವದೆಯ ಕೊಡುವಿರಾ?
ಆಡಿದರೆ ಮಾತೊಂದು
ಮತ್ತೆಲ್ಲಿ ತಮ್ಮ ಪಾಪ ಹೊರ ಬೀಳುವುದೆಂದು,
ನನ್ನ ಬಾಯಿಗೆ ಬೀಗ ಹಾಕಿ
ಹೆಣ್ಣು ಹೆಚ್ಚು ಮಾತನಾಡಬಾರದೆಂದು
ಸೆರಗಿನಿಂದ ನನ್ನ ಸರಪಳಿಯಲ್ಲಿ ಕಟ್ಟಿ ಹಾಕುವಿರಾ?
ಬಾಲ್ಯ ನನ್ನ ಸುಂದರ ಕನಸು,
ಹೆಣ್ಣೆಂದು ಮುರಿಯದಿರಿ ಅದನ್ನ
ಬಾಲ್ಯ ವಿವಾಹದ ಕಾರಣಕ್ಕೆ ಇಂದು,
ಅಂಗಲಾಚಿ ಬೇಡುತಿರುವೆ ನಿಮ್ಮನ್ನ
ನಾನಿಂದು ಅರಿತು ನಡೆಯಿರಿ
ನಾನು ಒಂದು ಉಸಿರಾಡುವ ಜೀವವೆಂದು......
"ಜೀವಕ್ಕೆ ಉಸಿರು
ದೇಹಕ್ಕೆ ಪ್ರಾಣ
ಸೋತಾಗ ಸಮಾಧಾನ
ಗೆದ್ದಾಗ ಪ್ರೋತ್ಸಾಹ
ದಣಿದಾಗ ಮೃಷ್ಟಾನ
ಸತ್ತಾಗ ಕಂಬನಿಯ
ಮಹಾಪುರ ಸುರಿಸುವ
ನನ್ನ "ತಾಯಿ" ನಿನಗೆ
ನಾ ಚಿರಋಣಿ.
"ಜೀವಕ್ಕೆ ಜೀವ
ಪ್ರಾಣಕ್ಕೆ ಪ್ರಾಣ
ಪ್ರೀತಿಗೆ ಪ್ರೀತಿನಾ
ಇದ್ದಾಗ
ಯಾರಿಗೂ ಕೊಡದಿದ್ದರೂ
ಸತ್ತಾಗ
ಭೂ ತಾಯಿಗೆ ಕೊಟ್ಟೆ ಕೊಡ್ತೀವಿ
ಏಕೆಂದರೆ
ಈ ಜೀವ,ದೇಹ,ಪ್ರೀತಿ,ಮನಸ್ಸು. ಕೊಟ್ಟಿದು
ಈ ನನ್ನ "ಭೂ" ತಾಯಿ.