ಮುಗ್ಧ ನಗುವಲ್ಲಿ ಸದ್ದೇ ಮಾಡದೆ
ನೀ ನನ್ನ ಸೆಳೆದೆ
ನಿನ್ನ ಪ್ರಬುದ್ಧ ಮಾತುಗಳಿಗೆ
ಮನದಲ್ಲಿ ಪ್ರೀತಿ ಮೇಳೈಸಿದೆ
ಸರಿಯೆನಿಸಿ ನಾ ಮಾಡುತಿರುವ
ತಪ್ಪು ಇದೊಂದೇ
ಈ ತಪ್ಪಿನ ತೆಪ್ಪದಲಿ ನನ್ನ ಬಾಳು
ಬಹುದೂರ ಕ್ರಮಿಸಬೇಕಿದೆ
ನಿನ್ನ ನಲಿವು ಮೂಡಿಸುವ ನಗುವಿಗೆ
ನನ್ನ ಮನವು ಒಲವ ಹೊರಹಾಕಿದೆ
ಹೃದಯವು ನಿನ್ನ ಭಾವನೆಗಳ
ಸಂಗ್ರಹಾಲಯವಾಗಲು ಹಂಬಲಿಸಿದೆ
ಜಗತ್ತಿನ ಎಲ್ಲಾ ಮೌಲ್ಯಗಳಲ್ಲಿ
ನೀನೇ ಅತ್ಯಮೂಲ್ಯವೆನಿಸಿದೆ
ನೀ ನನ್ನ ಕನಸಿನೊಡತಿಯಾಗಿ
ಬಾಳಿನ ಬೆಳಕಾಗಿ ಬರಬೇಕಿದೆ
ಹೆಣ್ಣು ಹೆಣ್ಣು ಎಂದು ಯಾಕೆ ಅವಳ
ಒಂದು ಬಂದಿಯಂತೆ ನೊಡುತ್ತಿರ
ಆವಳ ಮನಸ್ಸು ಬಲ್ಲವರಾರು
ಅವಳ ನೆರಳ ಹಿಡಿಯುಯವರು ಯಾರು
ಅವಳಿಗೆ ಏಕೆ ಈ ಶಿಷ್ಕೆ....
ಅವಳ ಕನಸ ಮನಸ ಬಲ್ಲಿರೇನು ನಿವು
ಅಂದು ಇಂದು ಅವಳು ಪಂಜರದ ಗಿಳಿಯೆ
ಅವಳಿಗು ಹಾರುವ ಮನಸಿದೆ
ಅವಳ ಕನಸನು ಕಟ್ಟಿ ಪಂಜರದಲ್ಲಿ ಹಾಕಿಬಿಟ್ಟಿರಲ್ಲ
ಅವಳನ್ನು ಬಂದಿಸಬಹುದು ಅವಳ ಮನಸ್ಸನ್ನು ಅಲ್ಲ ಅವಳ ಕನಸನ್ನು ಅವಳು
ಅವಳಾಗಿಯೆ ಇರಲು ಬಿಡಿ
ಹೆಣ್ಣು ಆಸೆಗಳ ತವರು ಆಸೆಗಳಿಗೆ ಬೇಲಿ ಆಕುವಿರೇನು.....
ಹೆಣ್ಣು ಹೆಣ್ಣು ಎಂದು ಹಿಂದೆ
.......ದೂಡದಿರಿ ಅವಳನ್ನು.........
ಬಂದಿ ಮಾಡದಿರಿ ಅವಳನ್ನು...........
ಕಪಟವನರಿಯದ ಕರು
ಜೊತೆಯಲ್ಲೇ ಸಮಯ ಸಾಧಕರು
ಮುಖವಾಡಗಳನು ಧರಿಸಿ
ಸಮಯಕ್ಕೆ ಕಾದಿಹರು.
ಒಂದೊಂದೇ ನರಿ ತೋಳ
ಹಾಕತೊಡಗಿದವು ಗಾಳ
ಕರುವಿನ ಸುತ್ತ ವಂಚಕರ ಜಾಲ
ದಿಕ್ಕೆಟ್ಟು ನಿಂತಿತಾ ಕರು ಇದು ಕಲಿಗಾಲ.
ಹೇಗೋ ತಪ್ಪಿಸಿಕೊಂಡು
ನುಸುಳಿ ಓಡಿ ದಿಗಿಲುಗೊಂಡು
ಬಂದು ನಿಂತಿತು ಕರುವು
ಹೆಬ್ಬುಲಿಯ ಎದುರುಗೊಂಡು!
ಒಂಟಿ ಹೆಬ್ಬುಲಿಯದು
ದುಷ್ಟ ನರಿ ತೋಳಗಳ ಕಂಡು
ಗರ್ಜಿಸಿತೊಮ್ಮೆ ಗಂಡು
ಓಡಿತು ದುಷ್ಟ ಕೂಟಗಳ ಹಿಂಡು.
ಮುದ್ದು ಗರುವನು ಕಂಡ ಹುಲಿ
ಮುದ್ದುಗರೆಯಿತು ಪ್ರೀತಿಯಲಿ
ಅಪ್ಪಿ ಮುತ್ತಿಟ್ಟು ಕರೆದೊಯ್ದು
ಸಂತೈಸಿತು ತನ್ನ ಗುಹೆಯಲ್ಲಿ.
ನೆಕ್ಕಿ ನೀಡಿತು ಕರುವು
ಅಕ್ಕರೆಯ ಸಕ್ಕರೆಯ ಕ್ಷಣವ,
ಪ್ರೀತಿ ಕಾಣದ ಹುಲಿಯು
ಕಂಡುಕೊಂಡಿತು ಕರುವಲ್ಲಿ ಹೊಸ ಲೋಕವ.
ಹುಲಿಯ ಜೊತೆಯೇ ಬೆರೆತ ಕರು
ಮರೆಯಿತೊಂದಿಷ್ಟು ಹಳೆಯ ನೆನಪಿನ ಒಗರು
ಕಳೆಯಿತು ಕೆಲವು ದಿನ
ಹುಲಿಯ ತಂದೆ ಪ್ರೀತಿಯಲ್ಲಿ.
ಹೀಗಿರಲು ಒಂದು ದಿನ
ಅರಿಯದೆ ಹುಲಿಯುಗುರು
ಪರಚಿ ಬಿಟ್ಟಿತು ಕರುವ
ಯಾವುದೋ ಯೋಚನೆಯಲಿ.
ಹುಲಿ ಪರಚಿದುದನು ಕಂಡು
ಬೆಚ್ಚಿ ಬಿದ್ದಿತು ಮುದ್ದು ಕರು
ಹುಲಿ ಕೂಡ ಪರರಂತೆ
ಸುಳ್ಳು ನುಡಿದಿಹುದೆಂದು,
ನೊಂದು ದಿಗಿಲ್ಗೊಂಡು
ಹುಲಿ ಸಂಗ ಬೇಡವೆಂದುಕೊಂಡು
ಹೊರ ನಡೆಯಿತು ಕುರುವು
ಹುಲಿ ಪ್ರೀತಿಯ ತೆರವು.
ತನ್ನ ಅಚಾತುರ್ಯಕ್ಕೆ
ತನ್ನನೆ ಹಳಿದುಕೊಂಡ ಹುಲಿ
ಮರುಗಿತು ಕೊರಗಿತು
ಪ್ರೀತಿ ದುರಾಗುವುದ ಕಂಡು
ಕುಸಿದು ಕುಳಿತಿತ್ತು.
ಬೇಡಿತು ಕರುವನ್ನು
ಬಿಟ್ಟು ಹೋಗದಿರು ಎಲೆ ಮುದ್ದೇ
ಕಪಟವರಿಯೆನು ನಾನು
ಕಳೆದುಕೊಂಡು ನಿನ್ನ ಬದುಕಿರುವೆನೇನು ?
ಹುಲಿಯ ಪ್ರಾಮಾಣಿಕತನವನು ಕಂಡು ಕರು
ತಾನು ನೊಂದುಕೊಂಡು ಹಾಕಿತು ಕಣ್ಣೀರು
ಮರಳಿ ಬಂದು ಬಿಗಿದಪ್ಪಿತು ಹುಲಿಯ
ಹೆಬ್ಬುಲಿ ಬಿಟ್ಟಿತು ನೆಮ್ಮದಿಯ ನಿಟ್ಟುಸಿರು!
ನೋವ ನಗರಿ ತಾಣದಲ್ಲಿ ತಂಗಿದ್ದ ಮನವೊಂದು ನೊಂದು ನಿನ್ನ ಮಡಿಲ ಸೇರಿದೆ ಒಂಟಿತನ ಜಂಟಿಯಾಗಿರು ನನ್ನ ನಂಟು ಬಿಡದಂತೆ ಕೊನೆವರೆಗೂ ಮೌನವಾಗಿ.
ಹಣೆಬರಹ ಬರೆಯುವಾಗ ಚತುರ್ಮುಖನ ಚಾವಟಿಯಲ್ಲಿ ಮುಗಿ ಬಿದ್ದ ಹಣೆಗಳೊಂದರಲ್ಲಿ ಅಂಧನ ಕಣ್ಣ ಬೆಳಕು ಹಲಸಿ ಹಾಕುವ ಕ್ರಮದಲ್ಲಿ ಕಣ್ತಪ್ಪಿ ನಾನು ಸಿಕ್ಕೇನೇನೋ ನನ್ನ ನಗುವ ಅಳುವಿನಿಂದೆ ಮುಚ್ಚಿ ಹಾಕಿರುವನು ಅವನು ಕೂಡ ಸ್ವಾರ್ಥಿಯಾದ ಪರಿಯಲ್ಲಿ.
ನನ್ನ ಗೋಳು ಕೇಳುವವರು ದೊರೆಯದಂತ ಸಮಯದಲ್ಲಿ ಜೊತೆಯಾಗಿ ಇಟ್ಟಿರುವನು ಒಂಟಿತನ ನನ್ನ ಬಾಳಲ್ಲಿ ಕಂಬನಿಯ ಜೊತೆಯಲ್ಲಿ...
ಕೆಂಪು ಕಾಂತೀಯ ಕೆನ್ನೆ
ಗುಂಗುರಾದ ಮುಂಗುರುಳು
ಸಿಂಪಲ್ ಆಗಿರುವ ಡಿಂಪಲ್ ಮೊಗ
ಕಾಡಿಗೆಯೊಳಗೆ ಅದ್ದಿದ
ಕೋಮಲವಾದ ಕಣ್ಣು
ಚೆಂದುಟಿ ಮೇಲೆ ಹೂ ನಗೆ
ಬೀರುವ ಚೆಂದನದ ಗೊಂಬೆ
ಮುದುಡಿದ ಮನಸ್ಸಿಗೆ
ಚೆಲುವು ತಂದ ಕನ್ಯೆ
ನಗೆಯ ಬಗೆಗೆ ಸೊಬಗನ್ನು
ತಂದಳು ಮೊನ್ನೆ
ಕಾಣದಂತೆ ಮಾಯವಾದಳು ನಿನ್ನೆ
ಚೆಲುವೆ ನೀ ಯಾರೇ ?
ಕಾಣದ ಕನಸು ಕಂಡರು
ಈಡೆರಿಸುವ ಮನಸ್ಸು ನನ್ನವನಿಗಿಲ್ಲ
ಅದರು ನಾ ಕನಸು ಕಾಣುವುದ ಬಿಡುವುದಿಲ್ಲ
ಏಕೆಂದರೆ ಆ ಕನಸೋಳಗು ಅವನಿರುವನಲ್ಲ
ನನ್ನ ನಲ್ಲ........
ನುಡಿಯ ಬೇಕಾದ ಮಾತು ಎಂದಿಗು ನೀ ನುಡಿಯಲೆ ಇಲ್ಲೆ ಆದರು ನಾ ನುಡಿಯುವುದ ಮರೆಯಲ್ಲಿಲ್ಲ ಎಕೆಂದರೆ ಆ ನುಡಿಯದ ಮಾತಲ್ಲು
ನಾ ನಿರುವೆ ನನ್ನ ನಲ್ಲ......
ತೂರದ ಕೋಪ ನೀ ತೊರಿದರು ನಾ ನಿನ್ನ ನಗಿಸುವುದ ಮರೆಯುವುದಿಲ್ಲ ಎಕೆಂದರೆ
ಆ ಕೋಪದಲ್ಲು ನಿನ್ನ ಪ್ರೀತಿ ನಾ ಬಲ್ಲೆ ನನ್ನ ನಲ್ಲ.....
ಎನನ್ನು ಹೇಳದೆ ಇರುವುದರಲ್ಲು
ನಾ ಕಂಡುಕೂಳ್ಳಬಲ್ಲೆ ನಿನ್ನ ಹುಚ್ಚು ಪ್ರೀತಿಯ
ನನ್ನ ನಲ್ಲ.....