Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸ್ವಾರ್ಥಿಗಳ ಲೋಕದಲ್ಲಿ.....

ಸ್ವಾರ್ಥಿ ಗಳ ಲೋಕ
ಅಂದು ಬಡತನ ಇದ್ದರು ಯರಲ್ಲು ಸ್ವಾರ್ಥ ಇರಲಿಲ್ಲ ಯಾರಿಗು ಕೆಡುಕು ಮಾಡುವ
ಕೆಟ್ಟ ಮನಸುಗಳು ಯಲ್ಲಿಯು ಇರಲಿಲ್ಲ

ಇಂದು ಬರಿ ಸ್ವಾರ್ಥ ತುಂಬಿದ ಜನರೆ
ಹೆಚ್ಚು ಬದುಕಲ್ಲಿ ಯಾರು ಯಾರಿಗು
ಅಗದ ಲೋಕ....
ಎಲ್ಲವು ಅವರವರ ಬದುಕು
ಅವರವರ ಸ್ವಾರ್ಥ ..
ಕಣ್ಣೇದುರೆ ಅನ್ಯಾಯ ನಡೆಯುತ್ತಿದ್ದರು
ನೂಡಿಯು ನಮಗೆಕೆ ಬೇಕು ಎನ್ನುವ
ಮನುಜರು......

ಅದೆ ಸ್ವಾರ್ಥ ಅವರನ್ನು
ಕೆಟ್ಟವರನ್ನಾಗಿ ಮಾಡಿದೆ ಅವರ ಹಳ್ಳ ಅವರೆ
ತೂಡಿಕೂಂಡಂತಿದೆ ಮುಂದೆ ಅದರೂಳಗೆ
ಅವರೆ ಬಿಳುತ್ತೆವೆ ಎಂದು ಅವರಿಗೆ ತಿಳಿದಿಲ್ಲ
ಅದಕ್ಕೆ ಅವರು ಬೇಲೆ ತರಲೆ ಬೇಕು
ಎಂದು ಅವರ ಅರಿವಿಗೆ ಇಲ್ಲದಾಗಿದೆ.......

ಈ ಸ್ವಾರ್ಥಿಗಳ ಲೋಕದಲ್ಲಿ
ನಾನೆಲ್ಲಿ ನನ್ನ ಹುಡುಕಲಿ...............

- ರಾಗಸಿರಿ....

10 Nov 2017, 12:55 pm

ನನ್ನ ಪ್ರೀತಿ.......

ಅಂದು ಬಂದೆ ಕಣ್ಣೇದುರು ನಿನ್ನ
ಕಂಡಾಷ್ಕಣ ನನಗೆ ಅಂದೆ ತಿಳಿದ್ದಿತ್ತು
ನೀ ನನ್ನವನೆಂದು......

ಮನಸ್ಸು ಹಕ್ಕಿ ಯಂತೆ ಹಾರಿತ್ತು
ಕಣ್ಣಲ್ಲಿ ಹೂಸ ಆಸೆ ಕಂಡತ್ತು
ಬಾಲ್ಯ ದಿಂದ ಪರಿಚಿತ ರಾದರು
ಅಂದೆ ನನ್ನ ಮನಸಿಗೆ ನೀ ಕಂಡದ್ದು
ಪ್ರೀತಿಯ ಉದಯ ಆಗಿದ್ದು.....

ನನ್ನ ಪ್ರೀತಿ ನಿನಗೆ ತಿಳಿಸುವ ಮೋದಲೆ
ನೀನೆ ತಿಳಿಸಿಬಿಟ್ಟೆಯಲ್ಲ ....ಹಾ ಹಾ
ಆ ಷ್ಕಣ ನನ್ನ ನಾ ಮರೆತೆ...

ಶುರುವಾಯಿತು ನಮ್ಮ ಪ್ರೀತಿಯ
ಬಂಡಿ ನಡೆಸುವವರು ನಾವಿಬ್ಬರೆ
ನಿನ್ನ ಪುಟ್ಟ ಮನಸ್ಸೊಳಗೆ
ನಾನೂಂದು ಗುಬ್ಬಿಮರಿಯಾದೆ
ಜೂಪಾನ ಮಿಡುತಲಿರುವೆ
ನಿನ್ನ ಮಮತೆಯ ಮಡಿಲಿನಲ್ಲಿ
ನಿನಗೆ ನಾನೆ ನನಗೆ ನೀನೆ ಕೂನೆಯ ವರೆಗು ಸಾಗುತಲಿರಲಿ ನಮ್ಮ ಈ ಬದುಕಿನಾ ಬಂಡಿ
ಯಾರ ಕಣ್ಣು ಬಿಳದಾ ಹಾಗೆ ಇರಲಿ
ನಮ್ಮ ಜೂಡಿಯ ಮೇಲೆ......
ನನ್ನ ಪ್ರೀತಿ......... ಹೇಳಿದರೆ ಮುಗಿಯುವುದಲ್ಲ....................

- ರಾಗಸಿರಿ....

10 Nov 2017, 11:59 am

ಪ್ರೀತಿ

ಹೃದಯದ ತುಂಬೆಲ್ಲಾ
ಚಿತ್ತಾರ ಬಿಡಿಸಿ
ನಾ ಕಂಡ ಕನಸುಗಳಿಗೆ
ಭರವಸೆಯ ಮೂಡಿಸಿ
ಚುಕ್ಕಿ ಚಂದ್ರಮನ ಸಾಕ್ಷಿಯಾಗಿ
ಬೆಳದಿಂಗಳೂಟವ ಮಾಡಿಸಿ
ಕೊನೆಗೊಂದು ಮಾತು ತಿಳಿಸದೇ
ಆಗಸದಲ್ಲಿನ ತಾರೆಯಾಗಿ
ನನ್ನನೇ ನೋಡಲು ದಿನವೂ ಬರುತಾನೆ
ಏಕಾಂಗಿಯಾಗಿರಲು ನನ್ನ ಬಿಡದೇ!

- ಪ್ರಿಯಾಂಕ

10 Nov 2017, 10:04 am

ಯಾರು..?

ಮಾತನಾಡದ ಮೌನಕೆ
ಮಾತನಾಡಿಸುವವರಾರು..?
ಹಾಡುವ ಹಾಡನ್ನು
ನಿಲ್ಲಿಸುವವರಾರು..?
ಸ್ವರಕೆ ಅಪಸ್ವರ
ನುಡಿಸುವವರಾರು..?
ಹಾರಾಡುವ ಹಕ್ಕಿಯನು
ಬಂಧಿಸುವವರಾರು..?

ಹರಿಯುವ ನದಿಗಳನ್ನು
ಹಿಂಬಾಲಿಸುವವರಾರು..?
ಬೀಸುವ ತಂಗಾಳಿಯನ್ನು
ಹಿಡಿದಿಡುವವರಾರು..?
ರಾತ್ರಿಯ ನಕ್ಷತ್ರಗಳನ್ನು
ಎಣಿಸುವವರಾರು..?
ಚಲಿಸುವ ಮೋಡಗಳನು
ತಡೆಯುವವರಾರು..?

ಬೆಳಕು - ನೆರಳಿನಾಟ
ಬಲ್ಲವರಾರು..?
ಎಲ್ಲಾ ಕಾಲದ ನಿವ೯ಹಣೆ
ಸೃಷ್ಠಿಸುವವರಾರು..?

ಏಕಾಂತಪ್ರಿಯ ಎಂ‌. ಬಿ

- ಏಕಾಂತಪ್ರಿಯ.

10 Nov 2017, 10:03 am

ಕಲ್ಪನೆ

ಕವಿ ಕಲ್ಪನೆಯಿದು ನೋಡು ಮನಸೆ
ಹೃದಯದ ಬಾಗಿಲು ತೆಗದು ನೋಡು ಕನಸೆ

ಕಲ್ಲಲಿ ಶಿಲೆಯನು ಅರಳಿಸಬಲ್ಲ
ಶಿಲೆಯಲಿ ಜೀವವ ತುಂಬಬಲ್ಲ...
ಹೂವಿನಲಿ ಅಂದವ ಅರಳಿಸಬಲ್ಲ
ಅಂದದ ಹೆಣ್ಣಿಗೆ ಹೋಲಿಸಬಲ್ಲ...

ರವಿ ಕೇವಲ ಸುಡುವವನಲ್ಲ.
ಭೂಮಿಗೆ ಬೆಳಕಿನ ಕಿರಣವ ತೂರುವನಲ್ಲ
ಒಲವಿಂದ ಬುವಿಗೆ ಬೆಳಕನು ನೀಡುವನಲ್ಲ...
ಸೂರ್ಯ ರಶ್ಮಿಯು ಇಳೆಯ ತಬ್ಬಲು ಯಾವ ಹೋಲಿಕೆ ಸರಿಸಾಟಿಯಿಲ್ಲ...

ಚಂದಿರ ಕೇವಲ ಗ್ರಹವಲ್ಲ
ಹುಣ್ಣಿಮೆ ಚಂದ್ರನ ಅಂದಕೆ ಹೆಣ್ಣಿನ ನಾಚಿಕೆ ಬೆರಸಿಹನಲ್ಲ
ಚಂದಿರನಂದಕೆ ಕವಿ ಕಾವ್ಯದ ಹೋಲಿಕೆ ಯಾವ ಉಪಮೆಗೂ ಕಡಿಮೆ ಇಲ್ಲ...

ಮರ ಗಿಡಗಳು ಕೇವಲ ಕಾನನವಲ್ಲ
ಹಕ್ಕಿಗಳಿಗದು ಕೇವಲ ರಕ್ಷೆಯ ಗೂಡಲ್ಲ
ವನರಾಶಿಯ ಸೊಬಗಿನ ದೃಶ್ಯಕೆ ಯಾವ ಕಲಾಕಾರನ ಕುಂಚಕೂ ನಿಲುಕದ ಜೀವಂತಿಕೆ ತುಂಬಿಹುದಲ್ಲ‌...

ಹೂವಿನಂದ ದುಂಬಿಗಂದ
ಪ್ರಕೃತಿಯ ನೋಟ ಮನಕಾನಂದ
ಹಕ್ಕಿಯ ಹಾಡು ಕರ್ಣಾನಂದ
ಕವಿ ಮನಸಿನ ಕಲ್ಪನೆಯು
ಭಾವುಕ ಮನಕೆ ಪರಮಾನಂದ...

- ನಾಗರಾಜ್

10 Nov 2017, 08:16 am

ತೃಪ್ತಿ

ತಿಳಿದಿಕೊ ನೀ ಹುಟ್ಟಿದ ಕಾರಣ,
ಬಾಗಿಲ ಬಳಿ ಬರುವ ಮುನ್ನವೇ ಮರಣ,
ಪರರ ಸುದ್ದಿಯಲಿ ಮಾಡಬೇಡ ಕಾಲಹರಣ,
ಎಲ್ಲರ ದಾರಿಯೇ ಬೇರೆ ಅದೊಂದು ತಿಳಿಯದ ಆವರಣ,


ನಿನ್ನ ದಾರಿಯಲಿ ಕಟ್ಟಬೇಡ ಆಸೆಯೆಂಬ ತೋರಣ,
ನೆನಪಿರಲಿ ಬಾಳಿನ ದಾರಿಯಲಿ ತೃಪ್ತಿಯೇ ತಂಗುದಾಣ,
ಮಂಕು ಮಾಡಿದೆ ನಿನ್ನ ಕನಸಲು ಬರುವ ಹಣ,
ದುಷ್ಟತನವ ನಾಟುವಳು ಮಾಯೇ ಕಾಂಚಾಣ,


ಮಾಡಿರುವ ಪಾಪವ ತೊಳೆಯಲು ಹೆದರುವಳು ಗೀರ್ವಾಣ,
ಎಷ್ಟೇ ಹೆಸರಿದ್ದರೂ ಅಹಂ ನೀಗಿಸಿ ಬಾಳು ನೀನಿಲ್ಲೀ ಸಾಧಾರಣ

- Vadiraj Sarvothama

10 Nov 2017, 12:36 am

ವಾದ್ಯ

ನಾನು ನುಡಿಸುವ ವಾದ್ಯಗಳೆಲ್ಲ
ಸುಖಾಸುಮ್ಮನೆ ಕೂರುತ್ತಿದ್ದವು
ಪ್ರಶ್ನಿಸದೆ. ಕಾರಣ - ನನಗೆ
ಅವುಗಳರಿವು ಇಲ್ಲವೆಂದಲ್ಲ,
ಸ್ಪೂತಿ೯ಯಾಗಿ ಬೆನ್ನ ಹಿಂದೆ ಯಾರಿಲ್ಲವೆಂದು:

ನನ್ನ ಹುಡುಗಿಯ ಮುಖವನ್ನು
ನೋಡಿದಾಗಲೆಲ್ಲ ವಾದ್ಯಗಳು
ಸುಂದರವಾಗಿ, ಸೊಗಸು
ತೋರುತ್ತಿದ್ದವು; ಆದರೆ, ಅವುಗಳ
ಭಾವಾಥ೯ ತಿಳಿಸಿಕೊಡಲಿಲ್ಲ ಅವಳು;

ಕಾಲ ನನ್ನ ಬಗ್ಗೆ ಚೂರು ಕೂಡಾ
ಯೋಚಿಸದೆ ಮುನ್ನಡೆಯುತ್ತಿದೆ.
ಬಿಟ್ಟು ಹೋದರೂ ಹಿಂದೆಯೇ
ಹಿಂಬಾಲಿಸುವೆ;

ಅವಳ ಹಿಂದೆ ಒಂದು ಮುಂಜಾವು,
ಸಂಜೆ ಸುಮಧುರವಾಗಿ ಕಳೆದರೆ,
ವಾದ್ಯಗಳ ಅಂತರಾಳಗಳೆಲ್ಲ ಪದೆ
ಪದೆ ಹೀಯಾಳಿಸಿ ಬಿಡುವವು;
ನಾನವುಗಳ ನುಡಿಸದಿದ್ದರೆ.....

- ಏಕಾಂತಪ್ರಿಯ.

10 Nov 2017, 12:16 am

ಸಾವಿತ್ರಿ

ನೀನು ನನ್ನೂರಿನತ್ತ
ಬರುವುದನ್ನು ಕಾಯುತ್ತಿದ್ದೆ.
ಬರುವಾಗ ಒಂಟಿಯಾಗಿ ಬಾರದೆ
ಚೈತನ್ಯ, ಶಾಂತಿ, ತಂಗಾಳಿಯೊಂದಿಗೆ
ನೀ ಬರಲು ನನ್ನೂರಿಗೂ ಅಲಂಕಾರ
ಇರಿಸಿದ್ದೆ;

ಸಂಪೂಣ೯ವಾದ ನಿನ್ನ ನಿಲುವು
ನನ್ನಲ್ಲಿಯೇ ಇರಲೆಂಬ ಆಶಯ.
ನಿನ್ನ ಸ್ನೇಹ ಬೆಳೆಸಲು ಬಳಿಗಿರಿಸಿದ್ದೇನೆ
ನನ್ನ ನಿವೇಧನೆಯನ್ನ;

ಅನಾಥವಾದ ನನ್ನೀ ಹೃದಯಕ್ಕೆ
ನಿನ್ನ ಹೃದಯದಾಗಮನ
ಬಹುಬೇಗ ಅವಶ್ಯವಿದೆ.
ನಮ್ಮಿಬ್ಬರ ಸ್ನೇಹಕ್ಕೆ ಜಗದ
ಅನಂತ ಜೀವಕೋಟಿಗಳು
ವಿಷಾದಪಡಲಿ:

ಒಡಲು ಮತ್ತು ಬೆನ್ನ ಹಿಂದೆ
ಜನಿಸಿದ ಸಹೋದರಿಯರ
ಕಲ್ಪನೆಯಾಗಲಿ, ವಾಸ್ತವವಾಗಲಿ ಇಲ್ಲ;
ನನಗೆ ನೀನೇ ಅನಂತ ಸಹೋದರಿ.

ಏಕಾಂತಪ್ರಿಯ ಎಂ. ಬಿ

- ಏಕಾಂತಪ್ರಿಯ.

09 Nov 2017, 11:54 pm

ಎಷ್ಟೊಂದ ಚೆಂದಿತ್ತು ನಂಬಾಲ್ಯ

ಮಣ್ಣಾಗ ಆಡ್ತಿದ್ವಿ
ಮುಳ್ಳಾಗ ತಿರಗತಿದ್ವಿ
ಬಿಸಲಾಗ ಸುತ್ತಾಡ್ತಿದ್ವಿ
ಉಣ್ಣೂದು ಮರಿತಿದ್ವಿ
ಆದ್ರೂ ಏನೂ ಆಗ್ತಿರ್ಲಿಲ್ಲ
ಎಲ್ರೂ ಚನ್ನಾಗಿರ್ತಿದ್ವಿ
ಎಷ್ಟೊಂದು ಚೆಂದಿತ್ತು...

ಬಾವ್ಯಾಗ ಈಜಾಡ್ತಿದ್ವಿ
ಕೆಸರಾಗ ಉಳ್ಳಾಡ್ತಿದ್ವಿ
ಅಡವ್ಯಾಗ ಅಡ್ಡಾಡ್ತಿದ್ವಿ
ಸಿಕ್ಕಿದ್ದು ಬಾಯಾಡಸ್ತಿದ್ವಿ
ಆದ್ರೂ ಏನೂ ಆಗ್ತಿರ್ಲಿಲ್ಲ
ಎಲ್ರೂ ಚನ್ನಾಗಿರ್ತಿದ್ವಿ
ಎಷ್ಟೊಂದು ಚೆಂದಿತ್ತು...

ಸಾಲೀಗಿ ಹೋಗ್ತಿದ್ವಿ
ಪಾಟಿ ಬಳಪ ಒಯ್ತಿದ್ವಿ
ಪಾಟಿಮ್ಯಾಲ ಬರೀತಿದ್ವಿ
ಬರ್ದಿದ್ದು ಉಗಳ್ಹಚ್ಚಿ ಒರಿಸ್ತಿದ್ವಿ
ಬಳಪಾ ಆಡ್ತದ್ವಿ
ಅದನ್ನ ತಿಂತದ್ವಿ
ಆದ್ರೂ ಏನೂ ಆಗ್ತಿರ್ಲಿಲ್ಲ
ಎಲ್ರೂ ಚನ್ನಾಗಿರ್ತಿದ್ವಿ
ಎಷ್ಟೊಂದು ಚೆಂದಿತ್ತು...

ಒಳಗ ಕಾಲ್ಹಾಕಿ
ಸೈಕಲ್ ಪೆಡಲ್ ತುಳಿತಿದ್ವಿ
ಎತ್ತಿನ ಗಾಡಿ ಜಿಗದ ಹತ್ತಿದ್ವಿ
ಎಮ್ಮಿ ಮ್ಯಾಲ ಕುಂದರ್ತಿದ್ವಿ
ಗಿಡದಾಗ ಜೋತಾಡ್ತಿದ್ವಿ
ಜೇನ ಬಿಡಸ್ತಿದ್ವಿ
ಹುಳಾ ಕಡಸ್ಕೊಳ್ತಿದ್ವಿ
ಆದ್ರೂ ಏನೂ ಆಗ್ತಿರ್ಲಿಲ್ಲ
ಎಲ್ರೂ ಚನ್ನಾಗಿರ್ತಿದ್ವಿ
ಎಷ್ಟೊಂದು ಚೆಂದಿತ್ತು...

ಜಾತಿ ಗೀತಿ ಮಾಡ್ತರ್ಲಿಲ್ಲ
ಹೆಣ್ಣು ಗಂಡು ಅಂತಿರ್ಲಿಲ್ಲ
ಗಂಡಾ ಹೆಂಡ್ತಿ ಆಗ್ತಿದ್ವಿ
ಸಂಸಾರ ಆಟ ಆಡ್ತಿದ್ವಿ
ಹಗಲಾ ರಾತ್ರಿ ಓಡಾಡ್ತಿದ್ವಿ
ಮನಿ ಮಠ ಮರೀತಿದ್ವಿ
ಆದ್ರೂ ಏನೂ ಆಗ್ತಿರ್ಲಿಲ್ಲ
ಎಲ್ರೂ ಚನ್ನಾಗಿರ್ತಿದ್ವಿ
ಎಷ್ಟೊಂದು ಚೆಂದಿತ್ತು...

ಮೊಬೈಲ್ ಕಂಪ್ಯೂಟರ್ ಬಂದಿರ್ಲಿಲ್ಲ
ರೇಡಿಯೋ ಮಾತ್ರ ಕೇಳ್ತಿದ್ವಿ
ಬೇಕ್ರಿ ತಿಂಡಿ ಗೊತ್ತಿರ್ಲಿಲ್ಲ
ಮುಟಗಿ ಥಾಲಿಪಟ್ಟಿ ಸವಿತಿದ್ವಿ
ಹಾಲು ಮಜ್ಗಿ ಕುಡಿತಿದ್ವಿ
ಉಂಡಾಡಿಯಾಗಿ ಅಲಿತಿದ್ವಿ
ಆದ್ರೂ ಏನೂ ಆಗ್ತಿರ್ಲಿಲ್ಲ ಎಲ್ರೂ ಚನ್ನಾಗಿರ್ತಿದ್ವಿ
ಎಷ್ಟೊಂದು ಚೆಂದಿತ್ತು...
ಹಿಂಗ ಹೇಳ್ತಾ ಹೋದ್ರ
ಮುಗಿಯಾಂಗಿಲ್ಲ ನಮ್ ಕತಿ
ಇರ್ಲಿಲ್ಲ ನಮಗ ಯಾವ ಬಂಧ
ಹಕ್ಕಿಯಂಗ ಹಾರಾಡ್ತಿದ್ವಿ
ನಮ್ಮನ್ನ ಕಾಳಜಿ ಮಾಡಾಕ
ಇರ್ಲಿಲ್ಲ ಪುರಸೊತ್ತ ಹಡದವ್ರೀಗಿ
ಆದ್ರೂ ಏನೂ ಆಗ್ತಿರ್ಲಿಲ್ಲ
ಎಲ್ರೂ ಚನ್ನಾಗಿರ್ತಿದ್ವಿ
ಎಷ್ಟೊಂದು ಚೆಂದಿತ್ತು ನಂಬಾಲ್ಯ.

- ravikumar...ravikumar

09 Nov 2017, 11:21 pm

ಮರದ ಕೊರಗು

ಒಂಟಿಯೆಂದೇಕೆ ಕೊರಗುವೆ ಮರವೇ
ನೆಂಟರಿಲ್ಲದಾ ಈ ಜಗದೊಳಗೆ.
ಕುಂಟು ನೆಪಗಳು ಸಾಕಾಗಲಿಲ್ಲವೇ
ನಂಟು ತೊರೆದು ಒಬ್ಬಂಟಿಯಾಗಿರಲು!

ಬಯಲು ಬಿದ್ದ ಭೂಮಿಯನ್ನು
ಬಗೆದು ಬೇರನಿಳಿಸಿ ಕೆಳಗೆ
ಭುವಿಯ ಒಡಲ ನೀರ ಹೀರಿ
ಮೊಳಕೆಯೊಡೆದೆ, ಬರಿದೇ ಬೆಳೆದೆ.

ದಷ್ಟ ಪುಷ್ಟ ಕಾಂಡ ಬೆಳೆದು
ರೆಂಬೆ ಕೊಂಬೆ ಅಗಲವಿಡಿದು
ಹಸಿರು ಎಲೆಗಳ ಕೊಡೆಯನಿಡಿದು
ಹಕ್ಕಿ ಪಕ್ಷಿಗಳಿಗೆ ಹಣ್ಣು ಬೆಳೆದು.

ಮರವೆಂದರೆ ಬಾರದಿರುವವೇ
ಹಕ್ಕಿ ಪಕ್ಷಿ ಬಾನಾಡಿ
ಕಟ್ಟದಿರುವವೇ ಗೂಡು
ಸಂಗಾತಿಯ ಒಡಗೂಡಿ.
ಹಾರದಿರುವವೇ ಮರವ ಮರೆತು,
ತೊರೆಯದಿರುವವೇ ರೆಕ್ಕೆ ಬಲಿತು.

ಬೆಳೆಸಿಕೊಳ್ಳದಿರು ಮರವೇ
ಹಕ್ಕಿಯೊಡನೆ ಬಾಂಧವ್ಯ ಸಲುಗೆ,
ಹಾರಲಾರೆ ನೀನೆಂದಿಗೂ
ಅವುಗಳೊಡನೆ ಬಾನಂಗಳಕೆ.
ನಿಲ್ಲು ಎದೆ ಗಟ್ಟಿ ಮಾಡಿಕೊಂಡು ಮತ್ತೊಮ್ಮೆ
ಬರಬಹುದು ಹಕ್ಕಿ ಹಿಂಡು
ಹುಡುಕಿಕೊಂಡು ನಿನ್ನನ್ನೇ...

- ಶ್ರೀಗೋ.

09 Nov 2017, 10:28 pm