ಜೂತೆಯಾಗಿ ಕಳೆದ ಸಿಹಿ
ನೆನಪು ಎಂದು ನಿಮಗಿರಲಿ
ಬೆಡದ ಕಹಿ ನೆನಪು ದೂರವಾಗಲಿ
ಎಂದೆಂದು ಈ ನಿಮ್ಮ ಗೆಳೆಯರ
ನೆನಪು ಮನವ ತುಂಬಿರಲಿ
ನಿಮ್ಮ ಅಗಲಿಕೆಯ ಈ ದಿನ
ಎಂದೂ ಮರೆಯದ ನೆನಪು ನಮಗೆ
ಸದಾ ಹಸಿರಾಗಿ ತುಂಬಿರಲಿ ನಿಮ್ಮ ಮನದಲ್ಲಿ ಸಂತೋಷ ಎಂದೆದು ಮರೆಯದ ನೆನಪುಗಳ
ಜೂತೆ ಜೂತೆಗೆ ............
ನಿಮ್ಮ ಈ ಬದುಕಿನ ಪಯಣ ಸಾಗಲಿ.........
ನನ್ನೆದೆಯಲಿ ದೀಪವ ಬೆಳಗಿದ ಸಮಯ
ಕಗ್ಗತ್ತಲು ಮಾಯವಾಯಿತು
ಆರದ ದೀಪವಾಗಿರಲಿ ನೀ ಹಚ್ಚಿದ ದೀಪ
ದಿನ ನಿತ್ಯ ಪ್ರೀತಿಯ ಎಣ್ಣೆ ಸುರಿಯುತಿರು
ಹೃದಯದ ಗೂಡಿನಲ್ಲಿ ಗಾಳಿಗೂ ಪ್ರವೇಶವಿಲ್ಲ.
ನಿನ್ನುಸಿರಿಗೂ ಆರದಂತೆ ಮೆದುವಾಗಿ ಉಸಿರಾಡು
ಆ ಸೂರ್ಯ ಚಂದ್ರನು,ಮಿನುಗೊ ತಾರೆಯು ನಾಚಬೇಕು
ನೀ ಬೆಳಗಿದ ದೀಪದ ಬೆಳಕಿಗೆ ,
ಜಗವೆಲ್ಲ ಕತ್ತಲಾದರೂ
ನೀ ನನ್ನ ಜೊತೆಗಿರಬೇಕು ಬೆಳಕಿನಂತೆ
ಈ ಜನುಮದಲ್ಲದಿದ್ದರು ಮರು ಜನ್ಮದಲ್ಲಿ
ನೀ ನನ್ನ ಮನೆಯ ದೀಪ ಬೆಳಗಬೇಕು
ಪ್ರತಿವರ್ಷದ ದೀಪಾವಳಿಯ ದೀಪ ನೀನಾಗಬೇಕು
ಈ ಜಗದಲ್ಲಿ ನನ್ನದೆನ್ನುವುದು ಏನು ಇಲ್ಲ
ಇಂದು ನನ್ನದು ನಾಳೆ ಇನ್ಯಾರದ್ದೋ
ಈ ಜನ್ಮದಲ್ಲಿ ನೀ ದೂರವಾದೆ
ಮರುಜನ್ಮದಲ್ಲಿ ಜೊತೆಯಾಗು
ಎಂದೆಂದೂ ನನ್ನ ಬಾಳಿನ ಬೆಳಕಾಗು
ಕವಿದ ಕತ್ತಲು ಸರಿಯುತಿರಲು
ಮುತ್ತಂತೆ ಇಬ್ಬನಿ ಧರೆಗೆ ಸುರಿಯಲು
ಭೂ ತಾಯ ಮೈಯು ಹೊಳೆಯತಿರಲು
ಸ್ವರ್ಗವೆ ಇಳಿದಂತಿದೆ ಇಳೆಯ ನೋಡಲು
ಮಾಡಿ ಬೆಟ್ಟಗುಡ್ಡಗಳ ನಡುವೆ ಚಾರಣ
ರವಿ ಉಡುಗೊರೆಯಂತೆ ತಂದ ಹೊನ್ನ ಕಿರಣ
ಸವಿಯಲು ಭೂರಮೆಯ ಸೊಬಗಿನ ಹೂರಣ
ಕಳುಹಿಸಿದ ಚಂದ್ರನ ಕೊಟ್ಟು ನಿತ್ಯ ಕೆಲಸದ ಕಾರಣ
ರವಿಯಾಗಮನವ ಹೇಳಿದೆ ಹಕ್ಕಿ ಹಾಡಿ
ಹೂಗಳರಳಿ ನಕ್ಕಿವೆ ಅವನ ಪ್ರೇಮವ ನೋಡಿ
ತೂಗಿ, ಬಾಗಿ, ಗಿಡ, ಮರ ಚಾಮರವ ಬೀಸಿವೆ
ಉದಯ ರವಿಗೆ ಸಂತಸದಿ ಸ್ವಾಗತವ ಕೋರಿವೆ
ಕಂಡು ಹಸಿರೆಲೆಗಳ ತುದಿಯಲಿ ಇಬ್ಬನಿಯ ಮಾಲೆ
ರವಿಗೆ ನೋಡಬೇಕು ಅನಿಸಿತೇನೊ ಪ್ರೀತಿಯ ಲೀಲೆ
ನೇಸರ ಪ್ರೀತಿಯಲಿ ಮುತ್ತಿಕ್ಕುವನು ಭೂರಮೆಯ
ಹೊತ್ತು ಹೋಗುವ ಅವಳ ನೆನಪಿಗೆ ಮುತ್ತಿನ ಮಂಜಿನ ಹನಿಯ