ಸಾಟಿ ಉಂಟೆ ಜಗದಲಿ
ನಿನ್ನ ಸುಂದರ ಚೆಲುವಲಿ
ಮುಗ್ದ ನಗುವಲಿ
ಮನವ ಅರಳಿಸುವೆ
ನಿನ್ನ ನೋಡಿ ನಾನು ನಲಿವೆ
ನಿನ್ನ ಸೌಂದರ್ಯಕೆ
ನಾ ಮರುಳಾದೆ
ದೈವನಿಟ್ಟ ಸೊಬಗು
ಮೋಹಕ ನಿನ್ನ ನಗು
ನಿನ್ನ ಮಡಿಲಲಿ ನಾನಾದೆ ಮಗು...!!!
ಪ್ರಾಣಿ ಲೋಕದ ಬಾಲೆ
ಸೌಂದರ್ಯ ಸೃಷ್ಟಿ ಲೀಲೆ
ತಂಗಾಳಿ ಬಿಸುವ ನಗು
ಮುಗ್ಧವಾಗಿಸುವ ಸೋಬಗು
ನೆನಪುಗಳ ಮಹಾಪುರಹ
ವಿರಹ ತರತರಹ
ನೋಡಲೇಬೇಕೆನ್ನುವ ಬಯಕೆ
ಮನದ ಹನಿ ಹೇಳಲೇಬೇಕೆನ್ನುವ ಬಾಯಾರಿಕೆ
ಕಲ್ಪನೆಯಲ್ಲಿ ಸಂಗಾತಿ ಪ್ರೇರತಿ
ಜೀವನ ಜ್ಯೋತಿ ಹಚ್ಚುವ ಆರತಿ
ಹೊಂಗನಸು ಕಾಣಿಸುವ ಭಾರತಿ
ನಿಜವಾಗಲೂ ಗಮಗಮನಾರತಿ
ಅರಳಿನಿಂತ ಹೂ ಕೆಂಪು
ಪರಿಮಳ ಸೂಸುವ ಕಂಪು
ಬೇಡದೆ ವರವನಿಕ್ಕು
ಈ ಪ್ರೀತಿಯ ನಿಯಮವನ್ನು ಮುಕ್ಕು
ನಮ್ನ ಉಳಿಸುವಲ್ಲಿ ಹಿರೇಉಳ್ಳಿಗೇರಿ ಕರೆಮ್ಮಳೆದಿಕ್ಕು
ನಿನ್ನ ಘನತೆ ನೀಡುವುದೆ ನಿನಗೆ
ಅನ್ನ,ನೀರು, ನಿನ್ನ ದೇಹಕ್ಕೆ ಉಸಿರು
ಇರುವವಲ್ಲ ಬೀದಿಗೊಂದು ಸಂಘ
ಬಾಚುವವರವರು ಮಾಡಲಿ,ನಮಗ್ಯಾಕೆ?
ನೆಪವ ಬಿಡು ನೀಡು ನನಗೆ ಮರುಜೀವ
ನೀಗಿಸಿಕೊ ನಿಮ್ಮೆಲ್ಲರ ಅಭಾವ
ಒಬ್ಬಂಟಿಗ ನಾನು ,ಸಾಧ್ಯವಾದೀತೇನು
ಎಲ್ಲರು ನಮಗ್ಯಾಕೆ ಎನ್ನುತ
ದೂರ ನಿಲ್ಲುವರಲ್ಲವೇನು?
ನಮಗ್ಯಾಕೆ ಎನ್ನುವರೆ ನೀವೆಲ್ಲ
ನಾ ಬೆಳೆದು ನಿಂತಾಗ ಅನುಭವಿಸುವಿರಲ್ಲ
ನೀವು ಬೆಳೆಸುವ ಘನತೆಯ ಕುಂಡ
ನಿಮಗೆ ನೀಡೀತೆ ಮಳೆ, ಇಳೆಗೆ ತಂಪು
ಉಳಿಯಲಾರೆನು ನಾನು ನಿಮ್ಮಂತೆಯೆ
ಸ್ವಾರ್ಥದಿ ನನಗ್ಯಾಕೆ ಎಂದು?
ಹೇಳಿದಿಹ ನೂರು ಮಾತಿವೆ,
ಮನದ ಮೂಲೆಯ ಗೋರಿಯೊಳಗೆ|
ಹೇಳಲಾಗದೆ ಉಳಿದು ಹೋಗಿವೆ, ಶವದ ರೀತಿಯ ಶೋಕದೊಳಗೆ||ಪ||
ಈ ಮೊದಲೆ ಹೇಳಬಹುದಿತ್ತು,ಕೇಳದೆ ಹೋದವರು ನನ್ನ ಸುತ್ತ|
ಬೆಳೆದು ಹೋಯಿತು ಹಾಗೆ,
ಗೊತ್ತಿಲ್ಲದೆಯೆ ಹುತ್ತ ನನ್ನ ಸುತ್ತ|
ಯಾರೋ ಬರಲೆಂದೆ ಕಾಯ್ದೆ ಅವತಾರಪುರುಷ|
ಕಾಯುವಿಕೆಯಲೆ ಕಳೆದು ಹೋಯಿತು ನನ್ನ ಎಲ್ಲಾ ಹರುಷ||ಪ||
ಎದೆಯೊಳಗೆ ಸತ್ತ ಹೆಣ,ಕೊಳೆತು ನಾರಿತು ಹಾಗೆ|
ಉಸಿರುಗಟ್ಟುತ ಕಳೆದೆ ನನ್ನೆಲ್ಲ ಬೇಗೆ|
ಅವ ಬರಲಿಲ್ಲ ಅವತಾರಪುರಷ|
ಸತ್ತ ಮನಸ್ಸಿಗೆ ಈಗ ಬರಿ ಆರೆ ವರುಷ||ಪ||