Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಕೈತುತ್ತು ತಿನ್ನಿಸಿ
ಜೋಗುಳ ಪದ ಹಾಡಿ
ಮಲಗೆಂದು ಹೇಳುತ
ತಾನು ನಿದ್ರಿಸಳು ನನ್ನಮ್ಮ!
ಜಗತ್ತಿನ ಎಲ್ಲಾ ಸಂತಸವು
ತನ್ನ ಮಗುವಿಗೆ ಮೀಸಲಿರಿಸೆಂದು
ಅರೆಬಿರಿದ ಗೋಡೆಯ ಬದಿಯಲ್ಲಿ
ದುಃಖವ ಅಡಗಿರಿಸುವಳು ಕಂಬನಿಯಲ್ಲಿ!
ಸಾಗದ ನೀರಿಗಿಂತಲೂ ಆಳ
ನಿನ್ನ ಮಮತೆಯ ಮಡಿಲು
ಅಪ್ಪುಗೆಯ ಸವಿಯಲ್ಲಿದೆ
ನಿನ್ನ ಅಕ್ಕರೆಯ ಸವಿಮುತ್ತುಗಳು!
ನಿನ್ನ ಕಣ್ಗಳಲ್ಲಿ ಕಾಣುವ
ಹೊಂಗನಸುಗಳು ಹೇಳುತ್ತಿವೆ ಇಂದು
ನೀ ಸಾಗುವ ಹಾದಿಯಲ್ಲಿ
ನಗುವಿನ ಹೆಜ್ಜೆಗಳಿವೆ ಎಂದು!
ಸಾವಿರ ಜನುಮವಿದ್ದರೂ
ನಾ ಬಯಸುವೆ ಎಂದೆಂದು
ನಿನ್ನ ಮಡಿಲಲ್ಲಿ ಮಗುವಾಗಿ
ನಿನ್ನ ನಗುವನ್ನು ನೋಡುವಾಸೆ!
- ಪ್ರಿಯಾಂಕ
31 Aug 2017, 08:17 pm
ಸಿಗರೇಟಿನಂತೆ
ನಾನು ಮೌನವಾಗಿ ನೋವನ್ನು ಸೇದುತ್ತಿದ್ದೆ
ಕೊಡವಿದ ಬೂದಿಯಿಂದ
ಕೆಲವು ಕವಿತೆಗಳು ಉದುರಿದವು...
- ಅನಾಮಿಕ..........
31 Aug 2017, 09:44 am
ಮೌನದ ಕಡಲುಗಳು
ಕಾಣಸಿಗದ ಹೆಜ್ಜೆಗಳು
ನನಸಾಗದ ಕನಸುಗಳು
ಸರಿದುಹೋದ ಹಾದಿಗಳು!
ಕ್ಷಣಿಕ ಮಾತುಗಳು
ಮಾತಾಡದ ಮೌನಗಳು
ನೋವಿನ ಸಾಲುಗಳು
ಅರ್ಥವಿರದ ಪದಗಳು!
ಜಾರುವ ಕಂಬನಿಗಳು
ಸೋಲದ ಮನಸುಗಳು
ಜೊತೆಗಿರದ ಸಂಬಂಧಗಳು
ಮುಖವಾಡದ ಸಂಬಂಧಗಳು!
ಜಗದ ನಿಯಮಗಳು
ಬದಲಾಗದ ಸಮಸ್ಯೆಗಳು
ಮನುಷ್ಯನ ಅತಿಆಸೆಗಳು
ಮುಗಿಯಲಾರದ ಸಮಸ್ಯೆಗಳು!
ಪ್ರಿಯಾಂಕ✍
- ಪ್ರಿಯಾಂಕ
30 Aug 2017, 09:51 pm
ಹನಿ ಹನಿಯಂತೆ ಕನಸುಗಳು ಕೂಡಿ ನಿನ್ನ
ನೋಡುವ ಹಂಬಲದ ಸಾಗರವಾಗಿದೆ ನನ್ನಲ್ಲಿ ಈ ಕ್ಷಣದಂದು ಇನಿಯಾ.................
ಮುಗಿಬಿದ್ದು ನಿಂತ ಮನದೊಡೆಯನ ಚೆಲುವು ಕೆಲವು ಬಾರಿ ಬಿಗಿಯಾಗಿ ತಬ್ಬಿ ಹಿಡಿದು ನನ್ನ ನಿನ್ನೆಡೆಗೆ ಎಳೆದೋಗುತ್ತವೆ ಬಾ ಬೇಗನೆ ನನ್ನಲ್ಲಿ ಸೇರೆಂದು ಈ ಕ್ಷಣ ಅದು ನನ್ನಲ್ಲಿ ಗಣನೀಯ........
- ಚುಕ್ಕಿ
30 Aug 2017, 07:53 pm
ಮನ ಕರಗಿತು ನಿನ್ನ ಪರಿಚಯವಾದಾಗ
ಹೃದಯ ಮಿಡಿಯಿತು ನಿನ್ನ ಸ್ನೇಹ ಸಿಕ್ಕಾಗ
ದುಃಖವಾಯಿತು ನೀನು ನನನ್ನು ..........
ಪ್ರೀತಿಸುವುದಿಲ್ಲ ಎಂದಾಗ..........
- Acchu love
30 Aug 2017, 07:04 pm
ನಮ್ಮೀ ಗೆಳತನ ಚಿರಕಾಲ ಉಳಿಯಲಿ
ಸುಂದರ ಲೋಕಕೆ ಮುನ್ನುಡಿ ಬರೆಯಲಿ!
ಸು:ಖ-ದುಃಖಗಳಿಗಿಲ್ಲ ಬೇದ-ಭಾವ
ನಮ್ಮ ಸ್ನೇಹಗಳಿಗಿಲ್ಲ ಹಣದ ದಾಹ..
ಪ್ರೀತಿ ಕರುಣೆ ತುಂಬಿದ ಈ ಗೆಳತನ
ನಮ್ಮೊಳಗಿಲ್ಲ ಯಾವುದೇ ಹಗೆತನ!
ಹೂವಿನಂತಿರುವ ಈ ಸ್ನೇಹದಲಿ
ಹೃದಯದ ಬಡಿತವು ನೀನಾಗಿರಲಿ......
ನನ್ನ ಕನಸುಗಳೊಂದಿಗೆ ನೀ ಜೊತೆಯಲ್ಲಿರಲು
ಬೇರೆ ಯಾರು ಬೇಕಿಲ್ಲ ನನ್ನೊಂದಿಗಿರಲು!
ನಿನ್ನ ಜೊತೆಗಿರುವ ನೆನಪುಗಳು
ಅಚ್ಚಳಿಯದೇ ಉಳಿದಿದೆ ಇಂದಿಗೂ...
ನಮ್ಮಿಬ್ಬರ ಸ್ನೇಹ ಸಂಬಂಧಗಳು
ಕೊನೆತನಕ ಇರಲಿ ಎಂದೆಂದಿಗೂ!
- ಪ್ರಿಯಾಂಕ
30 Aug 2017, 06:55 pm
ಎಲ್ಲಿದ್ದರೂ ನನ್ನಲ್ಲಿ ನಾನಿಲ್ಲ ನೀನಿಲ್ಲದೆ
ನನ್ನ ನಗುವಲ್ಲಿ ಗೆಳೆಯ!!
ಏನಾಗಿದಿಯೋ ಈ ಹೃದಯಕೆ ನೀ ಕಾಣದ ಒಂದು ಕ್ಷಣ ಬೇಡವೆನ್ನುತ್ತಿದೆ ನನ್ನನ್ನ!!
ನೀ ಬರುವ ಹಾದಿಗೆ ಕನಸಿನ ಕರೆಯೋಲೆಗಳಿಂದ ನನ್ನಾಸೆಗಳ ತುಂಬಿ ನಿಂತಿದೆ ನನ್ನ ಮನ!!
ಒಮ್ಮೊಮ್ಮೆ ಹುಚ್ಚಿಯಂತೆ ಮತ್ತೊಮ್ಮೆ ಸ್ನೇಹಿತೆಯಂತೆ ಕಾಣಲಾರದ ನಿನ್ನ ರೂಪವ ಕಣ್ಮುಂದೆ ನೆನೆದು ನಿಲ್ಲುವೆ ಕನ್ನಡಿಯ ಪ್ರತಿಬಿಂಬದಂತೆ!!
ಕಣ್ತುಂಬಿ ಬಂದಾಗ ಅಕ್ಕರೆಯ ಕೈಯೊಂದು ನಿಲ್ಲಿಸಲು ಬಂದರೆಷ್ಟು ಚನ್ನ ನಿನ್ನ ನಗುವಿನಂತೆ ನನ್ನ ನೋವು ಮರಿಸಲೆಂದು!!
- ಚುಕ್ಕಿ
30 Aug 2017, 05:06 pm
ತಿಳಿ ನೀರಿನಲ್ಲಿ ನಾ ಬೆರಳಾಡಿಸಿ ಬರೆದ
ನಿನ್ನ ಹೆಸರು ಮರೆಯಾಯಿತು ಹೇಗೋ!!
ಪುನಃ ಪುನಃ ಬರೆದರೂ ಮಾಯವಾದ
ಹೆಸರು ಮನಕೆ ನೋವ ತಂದಿತು ಏಕೋ!!
ಅಂದು ತಿಳಿಯಾದ ನನ್ನಯ ಎದೆಯಲ್ಲಿ
ನೀ ಬಂದು ಚಿತ್ರ ಬರೆದು ಬಣ್ಣ ಹಚ್ಚಿದೆ!!
ಇಂದು ಸರಾಗವಾಗಿ ಹರಿಯುತ್ತಿರುವ ನನ್ನ ಕಣ್ಣೀರಿನಿಂದ ಆ ಚಿತ್ರದ ಬಣ್ಣ ಮಾಸುತ್ತಿದೆ!!
ಹುಣ್ಣಿಮೆಯ ಚಂದ್ರನನ್ನು ಕಂಡ ಒಡನೆ
ನಿನ್ನಯ ನೆನಪಾಗಿ ನಾ ಅಳುವುದು ನಿಜ!!
ಆದರೆ ಆ ಚಂದ್ರನೂ ಅಮಾವಾಸ್ಯೆ ಕಳೆದು ಮರಳುವನೆಂಬ ಸಮಾಧಾನದ ನಂಬಿಕೆ!!
- ಪಿ.ಜಿ.ಜ್ಯೋತಿ
30 Aug 2017, 03:57 pm
ರೇಷಿಮೆಯ ಲಂಗ ತೊಟ್ಟ ಮಲ್ಲಿಗೆ
ನಿನ್ನ ಆಸೆ ಏಕೇ ಸೀರೆಯ ಎಡೆಗೆ ವಾಲಿದೆ
ಸೆರಗ ಅಂಚಿನಲ್ಲಿ ಪ್ರೀತಿಯ ಗಂಟು ಕಟ್ಟಿ
ನೀ ಯಾರಿಗಾಗಿ ಕಾದು ಕುಳಿತಿರುವೇ!!
ನಿನ್ನ ಘಮ್ಮ್ ಎನ್ನುವ ಪರಿಮಳಕೆ
ಮೈ ಜುಮ್ ಎನಿಸುವ ಸತ್ವ ಇದೆ!!
ನಿನ್ನ ಕಣ್ಣ ಅಂಚಿನ ನೋಟವದು
ಯಾರನು ನೋಡಲು ಕಾದಿಹುದು!!
ನಿನ್ನ ಹರೆಯದ ಮನಸು ಕಾತರಿಸಿ
ಇಂದು ಯಾರ ಬರವನು ಕಾದಿಹುದು!!
ಹುಡುಗಾಟವೇ ತುಂಬಿದ ಮೊಗದಲ್ಲಿ
ನಾಚಿಕೆಯು ಎದ್ದು ಕುಳಿತಿಹುದು!!
ನಿನ್ನ ಮಂಜಿನ ಕಣ್ಣಿನಲ್ಲಿ ಮೋಹ ಇದೆ
ಯಾರದ್ದೋ ಒಲವಿನ ಸೆಳೆತ ಇದೆ!!
ಈ ವಯ್ಯಾರ ಯಾರಿಗಾಗಿ ಸುಂದರಿ
ನೀ ಕಾದಿರುವುದು ಯಾರಿಗಾಗಿ ಸುಂದರಿ!!
- ಪಿ.ಜಿ.ಜ್ಯೋತಿ
30 Aug 2017, 03:36 pm
ಮುಸ್ಸಂಜೆಯ ಹೊತ್ತಲ್ಲಿ ನೀ ಬಂದರೇ ಸನಿಹ
ಆ ಸೂರ್ಯ ಗಗನಕ್ಕೆ ಏರಿ ಬಂದಂತೆ ಪುನಹ!!
ನೀ ನೀಡಿದ ಮುತ್ತು ಮಳೆ ಹನಿಯನು ತಂತು
ಈ ಸಂಜೆ ತಂಪಿನಲ್ಲಿ ತುಂತುರುವಿನ ಗುರುತು!!
ಕಾಗದದ ದೂಣಿ ಮಾಡಿ ನಾ ಬಿಡಲು ನೀರಿನಲ್ಲಿ
ಮುಳುಗದಂತೆ ಸಾಗಬೇಕು ಈ ಬಾಳ ಕನಸು!!
ಸಂಜೆಗೆಂಪನಿಂದ ಕೊಂಚ ಬಣ್ಣವನು ನಾ ತಂದು
ಹಚ್ಚಲು ನಿನ್ನ ಮುಖಕ್ಕೆ ಮಂದಹಾಸ ನೀ ಚೆಲ್ಲು!!
ತಿಳಿಯಾದ ಆ ಬಾನಿನಲ್ಲಿ ಚಂದಿರನು ಬಂದಂತೆ
ಚೆಲುವಾದ ಈ ಬಾಳಿನಲ್ಲಿ ನೀ ಬಂದು ನಿಂತೆ!!
ನೀ ಜೊತೆಯಲ್ಲಿ ಇರುವಾಗ ನನ್ನನ್ನೇ ನಾ ಮರೆತೆ
ಸಂತಸ ಸಂಭ್ರಮಕ್ಕೆ ಇನ್ನಿಲ್ಲ ಯಾವ ಕೊರತೆ!!
- ಪಿ.ಜಿ.ಜ್ಯೋತಿ
30 Aug 2017, 03:23 pm