ದಿನವೆಲ್ಲಾ ರವಿಯ ಬೆಳಕಲ್ಲಿ ಕಳೆದ ನೆನಪುಗಳನ್ನು ಶಶಿಯ ಬೆಳಕಿನೆಡೆಗೆ ಕರೆದೊಯ್ಯಲು ಮೂಡಿರುವ ಮುದ್ದಾದ ಮುಸ್ಸಂಜೆ ನೀನು ಅಕ್ಕಾ..............
ಬೆಳದಿಂಗಳ ಮುಗುಳ್ನಗೆಯ ರಾಶಿಯಲ್ಲಿ ಹುಟ್ಟಿ ದಟ್ಟವಾದ ಮನಸ ಮೊಡಗಳನ್ನು ಸರಿಸಿ ಮುನ್ನುಗ್ಗಿ ನನ್ನ ಹೃದಯದಲ್ಲಿ ಅನುರಾಗದ ಅಚ್ಚೆಯಾಗಿದ ಅನುರಾಗದ ಅಪ್ರತಿಮ ದೇವತೆ ನೀನು ಅಕ್ಕಾ..................
ಅದೆಂಥ ಅಕ್ಕರೆಯ ಸಕ್ಕರೆ ತುಂಬಿರುವೆ ನಿನ್ನಲ್ಲಿ ಅಕ್ಕ ಕರೆದೊಡನೆ ಓಗೊಟ್ಟು ಮನದ ಕರೆಗೆ ಮಾತಿಲ್ಲದೆ ಸ್ಪಂದಿಸುವೆ ನೂರಾರು ವರ್ಷಗಳು ನಗು ನಗುತ್ತಾ ಬಾಳು ನೀನು ಈ ತಮ್ಮನ ಆರೈಕೆಯಲ್ಲಿ..................
ಕೈಬರಹದಿ ತಿಳಿಸುವುದಾದರೆ ನನ್ನ ಪ್ರೀತಿಯ ನಿನಗಿಂದು ಭುವಿಯಲ್ಲಿನ ಕೋಟಿ ಬಣ್ಣಗಳ
ಶಾಯಿಯಲ್ಲಿ ನಿನ್ನ ನಗುವನ್ನೇ ತುಂಬಿ ಬರಿಯಲೇ ನಿನಗೊಂದು ಲೇಖನ..............
ನಿನ್ನ ನಗುವಿಗಿಂತ ಸುಂದರ ಬಣ್ಣ
ಇನ್ನೊಂದು ಸಿಗಲಿಲ್ಲವೆಂದು ನನ್ನಲ್ಲಿ ಅಕ್ಕ
ಲೋಕದಲ್ಲಿನ ಸಂತೋಷವೆಲ್ಲ ನಿನ್ನದಾಗಲಿ ನಿನಗಿರುವ ಒಂದು ಸಣ್ಣ ನೋವು ನನ್ನ ಕಣ್ಣಲಿ ಸಂತಸದ ಅಶ್ರುವಾಗಲಿ ಅಕ್ಕ ನಿನ್ನ ಖಂಡಾಗ....................
ಭಾವನೆಗಳ ಗೂಡಲ್ಲಿ ನೆಮ್ಮದಿಯ ತಾಣವಿರುವುದು ಸಂಬಂಧ
ಮನಸ್ಸುಗಳ ಬೆಸುಗೆಯಲ್ಲಿ ಒಂದಾಗಿರುವುದೆ ಸಂಬಂಧ
ಕಶ್ಟ ಸುಕದಲ್ಲಿ ಹೆಜ್ಜೆಹಾಕುತ
ಒಟ್ಟಾಗಿ ಬದುಕುವುದೆ ಸಂಬಂಧ
ಸಂಬದಗಳ ನೋವುಕಶ್ಟ ಗಳಿಗೆ
ಸ್ಪಂದಿಸುವುದೇ ಸಂಬಂಧ
ಬದುಕಿಗೆ ಮೂಲಾಧಾರ ಸಂಬಂಧಳು
ಕನಸಿನ ಮೂಲ ಕಲ್ಪನೆ
ಕಲ್ಪನೆಯ ಮೂಲ ಬಯಕೆ
ನನ್ನ ಬಯಕೆ- ಕಲ್ಪನೆಗಳೆಲ್ಲ
ನನಸಾಗದೆ ಕನಸಾಗಿಯೆ ಕರಗುತಿಹವಲ್ಲ!
ಮನದ ತಳಮಳಕೆ ನೀನೆ ಒಡತಿಯಲ್ಲ!
ಕನಸು-ನನಸಾಗಲು ಮಾರ್ಗವ ತೋರು!
ಈ ಬರಡಾದ ಬಾಳಲ್ಲಿ ಕಿರು ನಗೆ ಬೀರು!