Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನೋಡಲು ಹೋದೆನು ನವ ವಧುವನ್ನು
ಘಂ ಎಂದು ಮಲ್ಲಿಗೆ ಹೂವಿನ ಪರಿಮಳ
ಇಣುಕಿ ನೋಡಿದೆನು ಸುಂದರ ಹುಡುಗಿಯ
ಬಾಗಿಲ ಮರೆಯಲ್ಲಿ ಪರದೆ ಸರಿಯುವಾಗ
ಅಂದದ ಬೆಡಗಿ ನಾಚಿಕೆ ತುಂಬಿದ ವದನ
ಆದರೂ ಕಿರು ನೋಟದಿಂದ ನೋಡಿದಳು
ಇಹ ಲೋಕದ ಚೆಲುವಿನ ಚಿತ್ತಾರ ಕಣ್ಣೆದುರು
ಇವಳೊಂದಿಗಿದ್ದರೆ ಜೀವನ ಆಹಾ ಎಂತಹ ಸುಖ
ಕಲ್ಪನಾ ಲಹರಿ ಮನದಾಳದಲ್ಲಿ ಹರಿಯುತಿತ್ತು
ಕೊಡುತೆಗೆಯ ವಿಚಾರ ವಿನಿಮಯ ನಡೆಯುತಿತ್ತು
ಮಾತುಕತೆ ನೆಗೆದು ಬಿತ್ತು ಸಂಬಂಧ ಕುಸಿಯಿತು
ಮನದಲ್ಲೇ ಶಾಪವ ಹಾಕುತ್ತಾ ಹೆಜ್ಜೆ ಸಾಗುತ್ತಿತ್ತು ಮುಂದಿನ ಆನ್ವೇಷಣೆಯ ನೆನೆಯುತ್ತಾ
- sathyabapuji
25 Jun 2017, 03:54 pm
ನಾವು ನಡೆವ ಹಾದಿಯಲ್ಲಿ
ಹಲವು ಅನುಭವಗಳ ಜೊತೆಯಲ್ಲಿ
ಒಳಿತು- ಕೆಡುಕುಗಳ ಸಂಗಮದಲ್ಲಿ
ಬೆಳೆವೆವು ತಿರುವುಗಳ ಬಂಧನದಲ್ಲಿ!
ಕನಸುಗಳ ಬತ್ತಿ ಹೊಸೆದು
ಕಷ್ಟಗಳ ತೈಲ ಸುರಿದು
ವಿಜಯದ ಜ್ಯೋತಿ ಬೆಳಗಿಸೆಂದು
ಹರಸುವರು ನಮ್ಮ ಪಡೆದವರು!
ಸಮಾಜದ ಎಡರು- ತೊಡರು
ಹಾದಿಯಲ್ಲಿ,ಕೆಡುಕು- ಒಳಿತುಗಳ
ಮೋಡಿನಲ್ಲಿ ,ತಿದ್ದಿ- ತೀಡುತ
ಬೆಳೆಸುವ ಜಾದೂಗಾರರು
ಅವರೆ ಶಿಕ್ಷಕರು.........
ಉತ್ತಮೋತ್ತಮ ಸ್ಥಾನವನ್ನ
ಅಲಂಕರಿಸಿದರು......
ಸಾಧಾರಣ- ಅಸಾಧಾರಣ
ಸಾಧನೆಯ ಬೆನ್ನೆಲುಬು
ನಮ್ಮ ಶಿಕ್ಷಕರು......
ವೃತ್ತಿ ಜೀವನದ ಪಯಣದಲ್ಲಿ
ಬಂದು- ಹೋಗುವ ಮಾರ್ಗದಲ್ಲಿ
ಬೆರೆವರು ಶಿಕ್ಷಕ ನೌಕೆಯಲ್ಲಿ
ಉಳಿವರು ಎಲ್ಲರ ಮನದಲ್ಲಿ....
ಗುರುವಿನ ಗುಲಾಮನಾಗುವ
ತನಕ ದೊರೆಯದಣ್ಣ ಮುಕುತಿ!
ಪ್ರತ್ಯಕ್ಷ-ಪರೊಕ್ಷ ಗುರುಗಳಿಗೆಲ್ಲ
ಇದೋ... ನನ್ನ ನಮನ...
ಶಾರಧ
- ಶಕುಂತಲಾ
25 Jun 2017, 03:50 pm
ಮತ್ತೊಮ್ಮೆ ಕರಿಯಲೇ ನಿನ್ನ ಸಾವು ನನ್ನ ಕರೆದೊಯ್ಯುವ ಮುನ್ನ..............
ಮತ್ತೊಮ್ಮೆ ನೆನೆಯುತ್ತಾ ಕೂರಲೇ ನಿನ್ನ ಜೊತೆಗೆ ಕಳೆದ ಒಂದೊಂದು ಕ್ಷಣದ ರೋಮಾಂಚಕಾರಿ ಸಂಗತಿಗಳನ್ನು..................
ಮತ್ತೊಮ್ಮೆ ನಿನ್ನ ಕೈಯಡಿಗೆ ರುಚಿಯು ಸವಿಯಲೇ ಮಗದೊಮ್ಮೆ ಮಾಡಿಕೊಡುವಂತೆ ನಿನ್ನ ಕೇಳಲೇ..................
ಮತ್ತೊಮ್ಮೆ ನಿನ್ನ ನೋಡುವಾಸೆ ನನಗೆ
ನಿನ್ನ ಜೊತೆ ಮಾತನಾಡುತ್ತಾ ಕೂರುವ ಆಸೆ
ನಿನ್ನ ನಗುವಲ್ಲಿ ನನ್ನನ್ನು ನಾನು ಮರೆಯುವಾಸೆ.........
ಮತ್ತೊಮ್ಮೆ ನಿನ್ನನು ನಾನು ನನ್ನಲ್ಲಿ ಬಂಧಿಸುವ ಆಸೆ ಮತ್ತೊಮ್ಮೆ ಮತ್ತೊಮ್ಮೆ..............
- ಚುಕ್ಕಿ
25 Jun 2017, 03:18 pm
ಬದಲಾಗುತ್ತಿರುವ ಜಗತ್ತಿನಲ್ಲಿ ಬದುಕಿನ ಆಸೆ ಬಳಲುತ್ತಿರುವ ಅವಿದ್ಯಾವಂತ ನಾನಿಲ್ಲಿ
- Devu.sur
25 Jun 2017, 03:08 pm
ಮೋರಿ ಎನ್ನುವರೆಲ್ಲ
ಊರ ಕೊಳೆಯನ್ನು ಹೊತ್ತು
ದೂರ ಹೋಗುವ ನನ್ನ ಕಂಡು
ಮುಖವ ತಿರುವುವವರೆ ಎಲ್ಲ!!
ಮೋರಿ ಎನ್ನುವರೆಲ್ಲ
ಕೊಳೆತು ನಾರುವ ಕಸವ
ತಂದು ನನ್ನ ಒಡಲಲ್ಲಿ
ಸುರಿದು ಮೂಗು ಮಚ್ಚುವರೆಲ್ಲ!!
ಮೋರಿ ಎನ್ನುವರೆಲ್ಲ
ಎಲ್ಲರ ಮನೆಯ ಕೊಳೆಯನ್ನು
ತೊಳೆದು ಶುಧ್ದಗೊಳಿಸಿ
ಕೊಳೆ ನೀರಾಗಿ ಹರಿದು ಬಂದೆ ನಾನು!!
ಮೋರಿ ಎನ್ನುವರೆಲ್ಲ
ಕನಿಕರವೇ ಇಲ್ಲದ ಜನ
ನನ್ನ ಕಂಡು ಅಸಹ್ಯವೆಂದು
ಕರೆದು ನನ್ನ ನೋಯಿಸುವರಲ್ಲ!!
- ಪಿ.ಜಿ.ಜ್ಯೋತಿ
25 Jun 2017, 12:25 pm
ಬಚ್ಚಲು ಮನೆಯೊಳಗೆ
ಬಿಸಿ ನೀರ ಕೊಪ್ಪರಿಗೆ!!
ಕಾದು ಕುಳಿತಿಹುದು
ನಿನ್ನ ಸ್ನಾನಕೆ ಈ ದಿನ!!
ಅರಿಶಿಣ ತೈಲದ
ಅಭ್ಯಂಜನ ನಿನಗೀದಿನ!!
ಘಮ ಘಮಿಸುವ ಚಂದನ
ನಿನ್ನ ಮೈಗೆ ಲೇಪನ!!
ನೆತ್ತಿಗೆ ಹರಳೆಣ್ಣೆಯು
ಹಂಚಿದೆ ತಂಪನು!!
ಕೇಶ ರಾಶಿಗೆ ತಂತು
ಸೀಗೆಕಾಯಿ ಸೊಂಪನು!!
ಬಚ್ಚಲ ಮನೆಯೊಳಗೆ
ಬಿಸಿ ನೀರ ತಂಬಿಗೆ!!
ನಗುತಲೇ ತೊಳೆದಿಹುದು
ನಿನ್ನ ಮೈಯ ಕೊಳೆಯನು!!
- ಪಿ.ಜಿ.ಜ್ಯೋತಿ
25 Jun 2017, 12:01 pm
ಕಣ್ಣು ಕಾಣದ ಮುದುಕಿ
ಕಾಡೆಲ್ಲ ಅಲೆದಾಡಿ
ಮತ್ತೆ ಮರಳಿಹಳು ಮನೆಗೆ
ಕತ್ತಲಲ್ಲಿ ಕಡುಗತ್ತಲಲ್ಲಿ!!
ಕಾಡ ಸುಮಗಳ ಕುರಿತು
ಕಾಣದೇ ತಾ ಅರಿತು
ಘಮಿಸಿ ತಂದಹಳು
ಹೊತ್ತು ಬುಟ್ಟಿಯಲ್ಲಿ!!
ಬೊಗಸೆ ಹೂಗಳ ರಾಶಿ
ಚೆಂದದಿ ಪರಿಮಳ ಸೂಸಿ
ಕರೆತಂದಿತು ಊರ ನಾರಿಯರ
ಮನ ಸೆಳೆದು ಎಲ್ಲ ಲಲನೆಯರ!!
ಎಲ್ಲ ಸ್ತೀಯರೂ ಒಂದಾಗಿ
ಕಾಡ ಹೂವಿಗೆ ಮರುಳಾಗಿ
ಕಾಡಿ ಬೇಡಿದರು ಹೂವ
ನೀಡೆಂದು ಆ ಮುದುಕಿಯನ್ನು!!
ಕಣ್ಣು ಕಾಣದ ಮುದುಕಿ
ಎಲ್ಲರಿಗೂ ಸಮನಾಗಿ
ಹೂ ನೀಡಿ ಹೇಳದಳು
ಇದು ವನ ಸುಮವೆಂದು!!
ಯಾರು ಮುಡಿದು
ಇದು ಬಾಡುವುದಿಲ್ಲವೋ
ಅವರೇ ನನ್ನ ಕತ್ತಲೆಯ
ಬದುಕಿನ ಕಣ್ಣುಗಳು ಎಂದು!!.
- ಪಿ.ಜಿ.ಜ್ಯೋತಿ
25 Jun 2017, 10:54 am
ಆ ತಾರೆಯ ತೋಟದಿ
ಹೋವೊಂದ ಹುಡುಕಿರಲು
ಆ ಮೋಡದ ರಥವೇರಿ
ಯಾರೋ ಬಂದಿಹರು!!
ಹೊಂಬಾಳೆ ಮೈದುಂಬಿ
ಹೆಣ್ಣಾಗಿ ಬಂದಿರಲು
ಆ ಚಂದ್ರನು ಹೊಂಬೆಳಕಿನ
ಬಣ್ಣವ ಸುರಿದಿಹನು!!
ರತಿದೇವಿಯು ನಾಚುವ
ಅಂದದ ರೂಪದವಳು!!
ತಾರೆಗಳ ತೋಟದಲ್ಲಿ
ಕಿಲ ಕಿಲ ನಗುತಿಹಳು!!
ಆ ಬಾನಿಗೆ ಕೈ ಚಾಚಿ ನಾ
ಬಾ ಎಂದು ಕರೆದಿರಲು
ಮಳೆ ಹನಿಯ ಮೇಲೆ ನಿಂತು
ಧರೆಗಿಳಿದು ನನ್ನ ಸೇರಿದಳು!!
- ಪಿ.ಜಿ.ಜ್ಯೋತಿ
25 Jun 2017, 10:33 am
ಹಕ್ಕಿಗಳು ಚಿಲಿಪಿಲಿಯ ರಾಗ ಇಂಪಾಗಿ ಕೇಳುತ್ತಿದೆ
ತಂಪಾದ ತಂಗಾಳಿಯು ಪರಿ ಪರಿಯ ಸುವಾಸನೆಗಳನ್ನು ಹೊತ್ತು ತರುತ್ತಿದೆ....................
ಕುಸುಮವ ಚುಂಬಿಸಿದ ಮಂಜನ್ನು ಬೆಚ್ಚಗಾಗಿಸಲು ರವಿ ತನ್ನ ರಶ್ಮಿಯನರಿಸುತಿಹನು
ಮುಂಜಾನೆ ಸೊಬಗನ್ನು ನಮಗೆ ಸೊಗಸಾಗಿ ತೋರಲು..................
ನೂರಾರು ಕೆಲಸಗಳು ನಿಲ್ಲದ ಸಮಯದ ಜೊತೆ ಕಾಲಿಗೆ ಚಕ್ರಗಳಕಟ್ಟಿ ಓಡುವ ಜೀವನ ಶೈಲಿಯಲ್ಲಿ
ಒಂದು ಕ್ಷಣ ಮನದಲ್ಲಿನ ನಗುವು ಕೇಳುತ್ತದೆ ನಗು ನನ್ನ ಗೆಳೆಯ ಈ ಒಂದು ಕ್ಷಣ ನಿನಗಾಗಿ ಮಿಸಲಿಡೋ ಎಂದು..............
- ಚುಕ್ಕಿ
25 Jun 2017, 08:33 am
ಅಳಿದುಳಿದ ಭರವಸೆಯ ಬೆಳಕಲಿ
ಚದುರಿದ ಮೋಡಗಳ ದಿಟ್ಟಿಸುತಾ
ಮೌನದಿ ಇಳೆ ನಿಟ್ಟುಸಿರಾದ ಸಂಜೆ...
- Indushekar Chinivar
24 Jun 2017, 06:55 pm