Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮುಂಜಾನೆ ಮಂಜಿನಲಿ
ಪುಂಡರ ಸಂಗದಲಿ
ದಿನವಿಡೀ ಅಲೆಯುತಲಿ
ಮೂರೊತ್ತು ಉಂಡು ಮಲಗುವ ಮಗ
ಇದ್ದದಿರಲಿ- ಹೊದದ್ದು ಹೋಗಲೆಂಬ
ಮನಸಿಂದ ದಿನವಿಡೀ ಸೋನೆ
ಮಳೆಯಂತೆ ಜಿನುಗುತ ನುಲಿಯುತ
ಇದ್ದದ್ದನ್ನ ಬೇಯಿಸಿಡುವ ಸೊಸೆ
ಹರಟುತ್ತ ಮನೆ- ಮನೆ ತಿರುಗುತ್ತ
ಹಿತ್ತಾಳೆ ಕಿವಿಯ,ಒಡಕು ಬಾಯಿಂದ
ಆದಿರಂಪಾ- ಬೀದಿರಂಪಾ
ಮಾಡುತ್ತ ಸೊಸೆಯ ಮೇಲೆ
ಕತ್ತಿ ಮಸೆಯುವ ಮಡದಿ...
ಎತ್ತು ಏರಿಗೆಳೆದರೆ
ಕೋಣ ನೀರಿಗೆಳೆವಂತ
ಸಂಸಾರದ ಸೂತ್ರದಾರ
ಒಬ್ಬ ಎಡಬಿಡಂಗಿ...........
ಅಪ್ಪ ಹಾಕಿದ ಆಲದ ಮರ!
ಅದೆ ಎಲ್ಲರಿಗು ಆಧಾರ!
ಇದೆ ಅವರ ನಿರ್ಧಾರ!
ಆರಕೇರದೆ ಮೂರಕ್ಕಿಳಿಯದೆ
ಸಾಗುತಹದು ಈ ಸಂಸಾರ!
ಶಾರಧ
- ಶಕುಂತಲಾ
24 Jun 2017, 01:13 pm
ಅದೋ.. ಅಲ್ಲಿ ನೋಡು
ಶವ್ವಾಲಿನ ಮೊದಲ
ಚಂದ್ರ ಕಾಣಿಸುತ್ತಿದೆ
ನಾಳೆ ನಮಗೆ ಈದ್..
ಅಮ್ಮ ಮಗನನ್ನೆತ್ತಿ
ಮುರುಕಲು
ಕಿಟಕಿಯೆಡೆಯಿಂದ
ಆಗಸದೆಡೆಗೆ ಕೈ
ತೋತಿಸುತ್ತಿದ್ದರೇ
ಮಗ ಅಮ್ಮನ ಮುಖ
ನೋಡಿ ಕೇಳುತ್ತಿದ್ದಾನೆ
'ನಾಳೆ ನಾವೂ
ಹಬ್ಬ ಮಾಡುತ್ತೀವಾ' ???
ಮಗನ ಮುಗ್ಧ ಪ್ರೆಶ್ನೆ
ಅಮ್ಮನ ಮನ ಕಲಕಿತು..
ಹೊಟ್ಟೆಯಲ್ಲೊಂದು
ಮಗುವನ್ನು ಕರುಣಿಸಿ
ಗಂಡನೆಂಬ ಕಾಮಪಿಪಾಸು
ಓಡಿ ಹೋದ ಮೇಲೆ
ಬಡತನದ ಬೇಗುದಿಯಲ್ಲಿ
ಮಗುವನ್ನು ಸಾಕಲು
ಪಟ್ಟ ಕಷ್ಟಪಾಡು
ದೇವನಿಗೆ ಪ್ರೀತಿ ....
ಮಗನ ಪುಟ್ಟ ಬೆರಳುಗಳು
ಕಣ್ಣೀರನ್ನು ಒರೆಸಿದಾಗ
ವಾಸ್ತವಕ್ಕೆ ಬಂದಳಮ್ಮ..
ಊರಲೆಲ್ಲಾ
ಈದ್ ಸಂಭ್ರಮ
ಹೊಸಬಟ್ಟೆ ತೊಟ್ಟ
ಮಕ್ಕಳೆಡೆಯಲ್ಲಿ
ತನ್ನ ಮಗನೂ
ಸಂಭ್ರಮದಿಂದ
ಹೋಗುವ ದೃಶ್ಯವನ್ನು
ಬಾಗಿಲ ಮರೆಯಲ್ಲಿ
ಕಂಡ ಅಮ್ಮನ
ಕರುಳು ಹಿಂಡಿದಂತಾಯ್ತು...
ಮಗನಿಗೇನು ಗೊತ್ತು ??
ಅದು ಸಿರಿವಂತನೊಬ್ಬ
ಕೊಟ್ಟ ಹಳೇ ಉಡುಪೆಂದು...
ದಾನಿಗಳು ಕೊಟ್ಟ
ಅಕ್ಕಿಯನ್ನು ಅನ್ನಕ್ಕಿಟ್ಟದ್ದು
ನೆನಪಾಗಿ ಒಳ ನಡೆದಳು
ತನ್ನ ಕಣ್ಣೀರ ಕಡಲನ್ನು
ಒರೆಸುತ್ತ ತನದದೇ
ಹಳೇ ಸೀರೆಯಲ್ಲಿ ..
-- ಅಲ್ತಾಫ್ ಬಿಳಗುಳ.
- ಅಲ್ತಾಫ್ ಬಿಳಗುಳ
24 Jun 2017, 09:02 am
ಸೋತು ಹೋಗಲೇನು
ಮತ್ತೊಮ್ಮೆ ಶರಣಾಗಿ ನೋಡಲೇನು
ಆಗುವುದೆ ಬದುಕು ಹಾಲುಜೇನು?
ಬಾಳಲಿ ಕಂಡ ಸರಸ ವಿರಸ
ಕಲಿಸುವುದೆ ಜೀವನದಲಿ ಸಮರಸ
ಹೇಳು ಓ ನನ್ನ ಪ್ರಿಯ ಅರಸ
ಬಂದಿಲ್ಲ ಹೊತ್ತು ಒಡವೆ ವಸ್ತ್ರದ ಲಾಲಸೆ
ಹೊರಟು ಬಂದಿರುವೆ ನಿನ್ನನೆ ನಂಬಿ ಬಹುದೂರ ವಲಸೆ
ನೀ ಪ್ರೀತಿಯಲಿರಲು ಅರಮನೆ ನನಗೆ ನಿನ್ನ ಮನಸೆ
ಯಾತಕೆ ತೋರುವೆ ನನ್ನಲಿ ಬೇಡದ ವರಸೆ
ನಾನೆ ಬಾಡಿ ಹೋದರು ಕಾಣದೆ ನಿನಗೆ ನನ್ನ ಕನಸೆ
ಅರ್ಥವಿಲ್ಲದ ಬದುಕ ನೀ ಕೊಟ್ಟರೆ ನಾನೆಂದು ನಿನ್ನ ಮನ್ನಿಸೆ
ನಿನಗೆ ನಾನೆನಿಸಿದನೆ ಕೇವಲ ಹೆಂಡತಿ
ನನಗಿಲ್ಲವೆ ಜಾಗ ಆಗಿ ಮನಸಿಗೆ ಒಡತಿ
ಯಾತಕೆ ಹೀಗೆ ಹೆಂಡತಿಯ ನೀ ಕಾಡುತಿ
ನಿನಗೇನೆ ಅನಿಸುವುದೆ ಇದು ನ್ಯಾಯದ ರೀತಿ
ನನಗೂ ಇರುವುದು ಕಾಡಲು ಒಂದು ಸರತಿ
ನಾನೂ ಹಾಗೆ ಕಾಡಿದರೆ ನೀನೇಗೆ ಉಳಿತಿ
ನೋಡಲಾರೆ ನಿನಗೆ ಬಂದರೆ ಅಂಥ ಸ್ಥಿತಿ
ಕಾಯುತಿರುವೆನು ಉಸಿರಿಡಿದು ಕಾಣಲು ನಿನ್ನ ಪ್ರೀತಿ
ಬಂದು ಸೇರು ಕಳೆದು ನನ್ನ ಮನಸೊಳಗಿನ ಭೀತಿ
ಇಂತಿ ನಾ ನಿನ್ನ ಪ್ರೀತಿ ಬಯಸಿ ಕಾಯುತಿರುವ ಸತಿ....
ತಿರಸ್ಕರಿಸದೆ ಸೇರೊ ಮನಸ ನನ್ನ ಪ್ರೀತಿಯ ಪತಿ....
- ಶ್ರೀಕಾವ್ಯ
23 Jun 2017, 11:15 pm
ಬದುಕಿಗೆ ಅರ್ಥ ಬೇಕು
----------------------------------------------
ಕೋಪವೆಂಬ ಮಂಜಿಗೆ ,ನಗುವೆಂಬ ಬೆಂಕಿಬೇಕು
-ಕರಗಲು
ದ್ವೇಷವೆಂಬ ಉಪ್ಪಿಗೆ ,ಸ್ನೇಹವೆಂಬ ನೀರು ಬೇಕು
- ಅರಗಲು
ಬದುಕೆಂಬ ಹೂವಿಗೆ ,ಹಣ ವೆಂಬ ಸೂರ್ಯ ಬೇಕು ,
-ಅರಳಲು
ಆಸೆಯೆಂಬ ನದಿಗೆ, ಮಿತಿಯೆಂಬ ದಡಬೇಕು ,
-ತಡೆಯಲು
ಸ್ನೇಹ ವೆಂಬ ಹಾಡಿಗೆ , ಪ್ರೀತಿ ಯೆಂಬ ತಾಳ ಬೇಕು ,
-ಬೆರೆಯಲು
ಧೇಹ ವೆಂಬ ಧೇಶಕೆ , ಉಸಿರೆಂಬ ಏಕತೆ ಬೇಕು ,
-ಬದುಕಲು
ಚಿಪ್ಪೆಂಬ ಮುಖಕೆ ,ಹವಳವೆಂಬ ನಗು ಬೇಕು ,
-ಹೊಳೆಯಲು
*ಹೆಮ್ಮೆಯ ಕನ್ನಡಿಗ
- ರಕ್ಷಿತ್ರಕ್ಷು
23 Jun 2017, 09:57 pm
ಅಂಬರ ಕೆಂಪು
ಸಂಯಮ ದಾಟಿ
ನಿನ್ನ..ಮುದ್ದು ಗಲ್ಲವ
ಸೋಕಿದ ಸಂಜೆ...
- Indushekar Chinivar
23 Jun 2017, 06:14 pm
ನಾವಡುವ ಪ್ರೀತಿಯ ಆಟ ಸೋಲು ಗೆಲುವು ಇಲ್ಲಿಲ್ಲ.................
ಪ್ರೀತಿಗಾಗಿ ನಮ್ಮ ಭಾವನೆಗಳಿಗಾಗಿ ಪರದಾಟ
ಕನಸಲ್ಲೂ ನಿಲ್ಲಲ್ಲಾ.........
ಕೊಟ್ಟ ಪ್ರೀತಿಯ ಕೊಡುಗೆಗಳಿಗೆ ಲೆಕ್ಕವನ್ನು ಇಟ್ಟಿಲ್ಲ..............
ನೀ ಕೊಡುವ ಪ್ರೀತಿಯ ಮುಂದೆ ಇನ್ಯಾರ ಅಕ್ಕರೆಯು ಬೇಕಾಗಿಲ್ಲ.............
ನಿನ್ನೊಡನೆ ನಗು ನಗುತ್ತಾ ಮಾತಾಡಿದರೆ
ಕಷ್ಟಗಳಿಗೆ ಬೆಲೆಯಿಲ್ಲ ಕಣ್ಣೀರಿನ ಚಿಂತೆ ಮಾಡಲ್ಲ...........
ನನಗೆ ಸಿಗುವ ಮಾತಿನ ಮಾಧುರ್ಯ ನಿಲ್ಲಿಸಲು ನಾನು ಸಿದ್ದವಿಲ್ಲ ನಿನ್ನ ನಗುವಿನ ಕೈಬಿಡಲು ನಾನು ಮುಂದೆಂದು ಇಚ್ಛಿಸಲ್ಲ...............
ಕಣ್ಣಲ್ಲಿನ ನೂರು ಕನಸು ನಿನ್ನಿಂದಲೇ ಶುರುವಾದವು ನಿನ್ನ ಜೊತೆಗೆ ಕೂಡಿ ನನಸಾಗಳು ನಾನಾದವು ನಿನಗಾಗಿ ಎಂದು ನಾನೆಂದೂ
ಮರೆಯಲ್ಲ...............
- ಚುಕ್ಕಿ
23 Jun 2017, 05:45 pm
ಚಂಚಲ ಚಿತ್ತ
ಹರಿದಾಡುವುದು ಸುತ್ತ ಮುತ್ತ
ಸಿಕ್ಕ ಸಿಕ್ಕದ್ದೆಲ್ಲ ಮನಸಿನಿಂದ ಹೆಕ್ಕುತ್ತ
ಕಂಡದ್ದೆಲ್ಲ ಮನಸೊಳಗೆ ತುಂಬುತ್ತ....
ಕೊನೆಯಿರದ ಪ್ರಶ್ನೆಗಳ ಬಂಡಿಯ ಹತ್ತಿ
ಉತ್ತರ ಹುಡುಕುತ ಮನಸಲೆ ಊರೂರ ಸುತ್ತಿ
ತಾಳ್ಮೆಯ ಕಡಲು, ಮನಸಿನ ಒಡಲೆ ಬತ್ತಿ
ಯಾಕಿಂತ ಅಲೆದಾಟ ಕಾಣದಕ್ಕೆಂದು ಮರುಗಿ ಅತ್ತು
ಮತ್ತೆ ಹೊರಟಲ್ಲೆ ಸೇರುವುದು ಏನು ತಿಳಿಯದೆ ಅರ್ಧ ಸತ್ತು....
ಇದರದು ಹಿಡಿತಕೆ ಸಿಗದ ನಾಗಲೋಟ
ಹಿಡಿಯದಿದ್ದರೆ ಹೆಕ್ಕಿ ತುಂಬುತ್ತ ಎದೆಯೊಳಗೆ ತರುವುದು ತೊಳಲಾಟ
ಎಂದಿಗೆ ನಿಲ್ಲುವುದು ಇದು ತರುವ ಬಡಿದಾಟ
ಸಾಕಾಗದೆ ಇದಕೆ ತನ್ನೊಳಕೆ ತಾನು ಸೃಷ್ಟಿಸುವ ಗೊಣಗಾಟ
ಗೆಲುವು ಸೋಲುಗಳಿಲ್ಲದ ಸೆಣಸಾಣ ಇದರ ಜೊತೆಗಿನ ಕಾದಾಟ
ಜೀವ ಇರುವವರೆಗೂ ಕೊನೆಯಾಗದು ಇದರೊಡೆಗಿನ ಒಡನಾಟ....
- ಶ್ರೀಕಾವ್ಯ
23 Jun 2017, 05:16 pm
ಮರೆಯಲೇತ್ನಿಸಿದಷ್ಟು ಕಣ್ಣಿರಿನ ಹನಿ
ನೆನಪಿಸುತ್ತಿದೆ ನಿನ್ನ..
ಅಳಿಸಲೇತ್ನಿಸಿದಷ್ಟು ನಿನ್ನ ನೆನಪುಗಳು
ಕಾಡುತಿದೆ ಇನ್ನ..
ಎಲ್ಲಿಯವರಗೊ ಅನುಭವಿಸಬೇಕೊ
ನಿ ಕೋಟ್ಟ ಈ ಉಡುಗೊರೆಯ ಬಾರವನ್ನ..
- ಅಂಜಲಿ
23 Jun 2017, 10:50 am
ಆ ದೇವರಿಗೆ ತಿಳಿಯಲ್ಲವೇ ಈ ಭೂಮಿಯಲ್ಲಿ ಒಂದೊಂದು ಸಂಬಂಧ ಎಷ್ಟು ಪ್ರೀತಿಯಿಂದ
ಕಟ್ಟಿಕೊಂಡಿರುವವರೆಂದು............
ಅವನಾಡುವ ಆಟದಲ್ಲಿ ಹುಟ್ಟು-ಸಾವು
ಕೇಳದೇನೆ ಕೊಡುವನು ಹುಟ್ಟು ಕೇಳಿಕೊಂಡರು ಬಿಡದೆ ತಗೆಯುವುದು ಪ್ರಾಣ..........
ಅವರನ್ನು ಬಿಟ್ಟು ಉಳಿದವರು ಹೇಗೆ ಬದುಕುತ್ತಾರೆ ಎಂದು ತಿಳಿಯುವುದಿಲ್ಲವೇ ಅವನಿಗೆ.........
ನಮಗೆ ನಮ್ಮ ನೋವುಗಳಿಗಿಂತ ಜಾಸ್ತಿ ನಮ್ಮವರು ಅಂದ್ಕೊಲೋವರ ನೋವು ನೂರು ಪಟ್ಟು ಹೆಚ್ಚು ನೋವಿಗೆ ಗುರಿಮಾಡುತ್ತೆ ನಮ್ಮನ್ನು............
ಆ ದೇವ್ರತರ ಒಂದೇ ಕೇಳ್ಕೊತಿನಿ ಎಂದಿಗು ನನ್ನವರ ಸಾವು ನನ್ನ ಕಣ್ಮುಂದೆ ಬಾರೋ ಮುನ್ನ ನಾನು ಇಲ್ದೆ ಇರೋವಾಗೆ ಮಾಡು ತಂದೆ ಅಂತ......
ಬದುಕಿದ್ದಾಗ ಹಸಿದ ಹೊಟ್ಟೆಗೆ ಇಡದೆ ಇರೋ ಊಟ ಸತ್ತಮೇಲೆ ಇಟ್ಟರೇನು ಬಿಟ್ಟರೇನು
ಆ ದೇವರಿಗೆ ಕಾಣುವುದಿಲ್ಲವೇ ನಮ್ಮ ವ್ಯಥೆ ಎಂದಿಗೂ..............
ದೇವರಿಗೆ ತಿಳಿಯದ ಉತ್ತರಗಳು
ನಮ್ಮನ್ನು ಕಾಡುವ ಪ್ರಶ್ನೆಗಳು..............
- ಚುಕ್ಕಿ
23 Jun 2017, 10:31 am
ಬೆಳದಿಂಗಳ ಇರುಳಲ್ಲಿ
ಅಜ್ಜಿಯ ಮಡಿಲಲ್ಲಿ
ಮಲಗಿರಲು ನಾನಂದು....
ಮಿನುಗುವ ತಾರೆಗಳ ಜೊತೆಯಲ್ಲಿ
ನಲಿಯುತಿದ್ದನು ಚಂದಿರನು ಅಲ್ಲಿ
ನಡುವೆ ಕಂಡೆನು ವಿಮಾನವೊಂದು....
ಚಲಿಸುತಿತ್ತು ನಿಶ್ಯಬ್ದವಾಗಿ
ಸ್ವಚ್ಛಂದ ಆಗಸವ ಮಲಿನವಾಗಿಸದೆ
ತಾರೆಯೊಂದು ಇಲ್ಲಿಂದ- ಅಲ್ಲಿಗೆ
ಅತ್ಯಲ್ಪ ಚಲನದಂತಾಗಿ
ಅಕ್ಷಿಪಟಲವ ಅರಡಿಸಿದೆ
ಕುತೂಹಲ ತಾಳಲಾರದೆ.....
ಚಿತ್ತಾರವ ಬಿಡಿಸುತಿತ್ತು ಮನವು
ಸದ್ದಿಲ್ಲದೆ ಚುಕ್ಕಿಗಳ ಬಯಲಲ್ಲಿ
ಲೆಕ್ಕವಿಡುತಿತ್ತು ಕಂಗಳು
ದಿಟ್ಟಿಸಿ ನೋಡುತ್ತ ಬಾನಲ್ಲಿ
ಅಚ್ಚರಿಯು ಮೂಡಿತ್ತು
ಮನದ ಗೂಡಲ್ಲಿ....
ತಾರೆಯೊಂದು ಚಲಿಸಿತ್ತು
ಅಜ್ಜಿಯ ಕೇಳಿತು ಮನವು
ಚುಕ್ಕಿ ಹೊರಟಿಹುದು ನೋಡಲ್ಲಿ....
ಒಡನೆಯೆ ನುಡಿಯಿತು ಅಮ್ಮಮ್ಮ!
ಅದು ಅಲ್ಲ ಚುಕ್ಕಿ.......
ಅಲ್ಯುಮಿನಿಯಮ್ ಹಕ್ಕಿ.....
ಇದ ನೀ ತಿಳಿಯಮ್ಮ!
ಶಾರಧ
- ಶಕುಂತಲಾ
22 Jun 2017, 10:23 pm