ನಿನ್ನ ಕನಸು
ನನ್ನ ಕನಸು
ಒಂದೇ ಬಳ್ಳಿಯ ಹೂವ
ನನ್ನ ಪ್ರಾಣ
ನಿನ್ನ ಪ್ರಾಣ
ಎರಡು ಒಡಲ
ಒಂದು ಜೀವ
ತಾಳಲಾರೆ ಇನ್ನು ತಾಳಲಾರೆ
ಬೇಗ ಬಂದು ಈ ವಿರಹ ಬೇಗೆಯ ದೂಡು ಬಾರೆ
ಕೂಡು ಬಾರೆ ನನ್ನ ಕೂಡು ಬಾರೆ
ಈ ನಾಡ ಬಿಟ್ಟು ಆಗೋಣ
ಇಬ್ಬರು ಮಿನುಗೋ ಆಕಾಶ ತಾರೆ.........
ಚೆಲುವೆ ಈ ಹೂವು ನಗುವಾಗ
ದುಂಬಿಗಳ ದಾಳಿಯಂತೆ
ಒಲವೇ ಈ ಮಾವು ಹಿಗ್ಗಿ ಬಿರಿವಾಗ ಕೋಗಿಲೆಗಳ ಗಾನಸುಧೆಯಂತೆ
ಕಣ್ಣಿನ ತುಂಬಾ
ನಿನ್ನಯ ಬಿಂಬ
ಕ್ಷಣ ಕ್ಷಣ ಕಾಡಿದೆ ನನ್ನ....
ಒಂದು ಕ್ಷಣ ನನ್ನ ಬಿಟ್ಟು ಹೋಗುವುದಾದರೆ
ಹೇಳಿಹೋಗೋ ನಿನ್ನ ನೆರಳಿಗೆ ನನ್ನವಳ ಜೊತೆಗಿರು ನೇರಳೆ ಅವಳು ಒಂಟಿಯಾಗುವಳೆಂದು...................
ನೆನೆದು ನೆನೆದು ಆ ಒಂದು ಕ್ಷಣ ನಿನ್ನ ಮಾತನು ನನ್ನ ನಾನು ಮರೆತೊಗುವೆ ನಿನ್ನಲ್ಲಿ................
ಕಪ್ಪಾದರು ನಿನ್ನ ನೆರಳು ಕಾಣುವೆ ನಾನು ಅದರಲ್ಲಿ ನಿನ್ನ ಮುದ್ದಾದ ನಗುವನ್ನು.................
ನನ್ನಲ್ಲಿನ ನಿನ್ನನ್ನು ಆ ನೆರಳಿಗೆ ತೋರಿಸುವೆ
ನಿನ್ನಲ್ಲಿ ನಾ ನೋಡಿದ ನನ್ನ ಮೇಲಿನ ಪ್ರೀತಿಯ ಭಾವನೆಗಳನ್ನು ಒಂದೊಂದು ಬಣ್ಣವಾಗಿ ಬದಲಿಸಿ
ನಿನ್ನ ನೆರಳಿಗೆ ರೂಪ ಕೊಡುವೆ ನಿನ್ನನ್ನಾಗಿ ಮಾಡಿ ನನ್ನ ಎದೆಯಲ್ಲಿ ಬಚ್ಚಿಡುವೆ ಎಲ್ಲಿಗೂ ಹೋಗದಂತೆ ನಿನ್ನ ಕಟ್ಟಿ ಹಾಕುವೆ....................
ಗಡುಸಾದ ನಿನ್ನ ಮಾತು ಮನದಾಟಿತು
ಮೌನದಲ್ಲಿ ಪ್ರೀತಿಯಾಗಿ ಅಪ್ಪ............
ಗದರುವೆ ,ಬುದ್ದಿಹೇಳುವೆ ಧೈರ್ಯತುಂಬುವೆ
ಪ್ರಾತಿನಿತ್ಯ ನನ್ನ ನಗಿಸುವೆ.............
ಅಮ್ಮ ನಾನು ಮಾಡಿದ ಸಣ್ಣ ತಪ್ಪಿಗೆ
ಬೈಯುತ್ತಿದ್ದರೆ ಅಡ್ಡಿ ನೀನು ಬರುವೆ
ನನ್ನ ಮಗಳ ಬೈಯಲು ನಿಯಾರೆಂದು ಕೆಲವೇ.................
ಅಮ್ಮ ಎಂದು ನನ್ನ ಕರೆಯುವೆ ಮಗಳೆಯೆಂದು
ಪ್ರೀತಿತೋರುವೆ.................
ನನ್ನ ಪುಟ್ಟ ಮಡಿಲಲ್ಲಿ ಮಗುವಂತೆ ಮಲಗುವೆ
ಹಣೆಯ ಮೇಲೆ ಮುತ್ತನಿಟ್ಟು ಬದಿಗೆಳೆದು ಉಣಿಸುವೆ...............
ನನ್ನ ಮಗಳೆಂದು ಎಲ್ಲರಲ್ಲೂ ಹೇಳುವೆ ನಾನು ಮಾಡಿದ ಚಿತ್ರವ ತೋರಿ ನನ್ನ ಮಗಳ ಕಲೆನೋಡಿ ಎಂದು ನೀನು ನಲಿಯುವೆ...................
ಕೆಲಸದಿಂದ ಬರಲು ನೀನು ಓಡಿಬರುವೆ ದಿನಾಲು ನಾನು ನಿನ್ನ ಬಿಗಿದಪ್ಪಿ ಅಪ್ಪ ಎಂದು ಕರೆಯಲು.......
ಲಡ್ಡು ಮಿಠಾಯಿ ಕೊಂಡುತರುವೆ ನನ್ನ ಮುದ್ದು ಗೊಂಬೆಗೆ ಪುಟ್ಟದೊಂದು ಬೊಂಬೆಯೆಂದು ಕೊಡುಗೆ ನನಗೆ ನೀಡುವೆ...............
ಅಪ್ಪ ಅಪ್ಪ ಎಷ್ಟು ಕರೆದರು ನಿನ್ನ ಹೆಸರು ಮುದ್ದು ನನಗೆ ನೀನು ಅಪ್ಪ ನಿನ್ನ ತೊಡೆಯ ಮೇಲೆ ಮಲುಗಿದರೆ ಯಾವ ನೋವು ತಿಳಿಯಲ್ಲ ನಾಳಿನ ಚಿಂತೆ ನನಗಿಲ್ಲ............
ಅಮ್ಮ ನನಗೆ ಜೀವಕೊಟ್ಟು ಅವಳು ಉಸಿರು ನಾನೆಂದರೇ..............
ನಿನ್ನ ಕೈಗೆ ನನ್ನ ಕೊಟ್ಟ ಕ್ಷಣದಿಂದ ನೀನೇ ನನ್ನ ಉಸಿರು ಅಪ್ಪ................
ನಿನ್ನಾ ಧ್ವನಿಯೇ ಸುಂದರವಾದ ಭಾವನಾ,
ನಿನ್ನಾ ಮಾತೇ ನನ್ನ ಮನಸ್ಸಿನ ಸಿಂಚನಾ,
ನಿನ್ನಾ ತುಟಿಯಂಚಿನ ನಗುವೇ ಒಂದು ಅಲಾಪ,
ಅದುವೇ ನನ್ನ ಮನಸ್ಸಿನ ಪ್ರತಿರೂಪ,
ನಿನ್ನಾ ಮೆಲು ಧ್ವನಿಯೇ ಸುಂದರ,
ನೀ ನನ್ನ ಕನಸಿನ ವಸುಂಧರ.....