ಬೆಳಗಿನ ಜಾವ ನಾಲ್ಕು
ನಿದ್ದೆ ಇನ್ನು ನನ್ನ ಕಣ್ಣು ಬಿಟ್ಟು ಹೋಗಿಲ್ಲ
ಕನಸಲ್ಲಿ ಸ್ನೇಹಿತರ ಜೊತೆಗೂಡಿ ಅಡುತಿಯುವೆ....
ಮನೆಯೊಡತಿ ನಮ್ಮ ಅಮ್ಮನಲ್ಲದ ಅಮ್ಮ
ಬಂದಳು ಮಂಚವಿಳಿದು ನನ್ನ ಪ್ರೀತಿಯಿಂದ ಎಬ್ಬಿಸಲೂ........
ಛಡಿಏಟು ಬಿತ್ತಲ್ಲ ಮೈಮೇಲೆ
ನೋವೆಂದು ಅಳುತಿರುವೆ ಕನಸಲ್ಲ ಇದು
ನನ್ನ ಮಾಲೀಕನ ಮನೆ..............
ಒಂದು ರಾಶಿ ಪಾತ್ರೆ ಇದೆ ಇನ್ನೊಂದು ಮೂಟೆ ಬಟ್ಟೆ ಇದೆ ನನ್ನ ನೋವು ಹಂಚಿಕೊಳ್ಳಲು ಅವು ಶುಭ್ರವಾಗುವವರೆಗೂ............
ಮುಗಿತು ಕೆಲಸ ನೋವಿನೊಂದಿಗೆ
ಹೊಟ್ಟೆ ಹಸಿವು ತಾಳಲಾರದೆ ಅಳುತಿರುವೆ ಬೆಳಕರಿದು ಹತ್ತಾದರು........
ಹಾಕಿದಳು ಮನೆ ಅರಸಿ ನೆಣ್ಣೆಯ
ಹಲಸಿದಾನ್ನವ ಕೆಟ್ಟೋದ ಸಾರಿನ ಜೊತೆಗೆ
ದುರ್ವಾಸನೆ ಬಿರುತ್ತಿದೆ ತಿನ್ನಲಾಗುತ್ತಿಲ್ಲ ಆದರೂ ತಪ್ಪುವುದಿಲ್ಲ ಹೊಟ್ಟೆಯಸಿವು ಕಾಡುತ್ತಿದೆಯಲ್ಲ....
ಯಾಕೆ ನನಗೀ ದುಸ್ಥಿತಿ ಯಾರಿಲ್ಲದೆ
ಅನಾಥೇಯ ಪರಿಸ್ಥಿತಿ ಎದುರಾಗಿದೆ
ಹೆತ್ತವರು ಕಡುಪಾಪಿ ಕಟುಕರು ಬಿಟ್ಟೋದರಲ್ಲ ನನ್ನ ಹೆಣ್ಣೆಂಬ ಕಾರಣಕೆ ಕಸದ ರಾಶಿಯಲ್ಲಿ .......
ಒಂದು ತುತ್ತು ಅನ್ನಕ್ಕಾಗಿ ಆಶ್ರಯ ನೀಡಿದ ಮನೆಯ ಹಾಳಾಗಿ
ಸುಗಮವಾಗಿ ಸಾಯೆಂದು ಜೀವನ ಪೂರ್ತಿ
ಅನಾಥೆಯಾಗಿ.........
ಕಣ್ಣ ರೆಪ್ಪೆಯು ಕೂಡ ಮುಚ್ಚದು ಒಲವೇ...ನೀ ಕಾಣದೆ ಹೋದರೆ...
ಕಲ್ಲಗಿ ಹೋಗುವುದು ಚಲುವೆ ನನ್ನ ಹೃದಯ ನೀ ಒಪ್ಪದಿದ್ದರೆ..
ಅಳೆದು ಹೇಳಲು ವಸ್ತುವಲ್ಲ ನನ್ನ ಪ್ರೀತಿ...
ವರ್ಣಿಸಲು ಸಾಧ್ಯವಿಲ್ಲ ಅದರ ರೀತಿ...ಸುರೇಶ್ ಸೂರಿ ದಾವಣಗೆರೆ
ಕಂಡ ಕನಸುಗಳ ಜೀವಿಸುವ ಮೊದಲೇ
ಮುನಿದೆ ನೀ , ದೂರಾದೆವು ನಾವು
ನಿನ್ನ ನೆನಪುಗಳೆ ತುಂಬಿವೆ ಎದೆಯಲ್ಲಿ
ನಿನ್ನೊಡನೆ ಕಳೆದ ಸುಂದರ ಕ್ಷಣಗಳ ಜೊತೆ
ಅಲೆಯುತ್ತಿರುವೆ ನಿಶ್ಶಬ್ದವಾಗಿ
ಮನದ ಓಣಿಯಲಿ
ದುಃಖದ ಮಡುವಿನಲಿ
ಈ ಏಕಾಂತವು ನನ್ನ ಜೀವ ಹಿಂಡುವುದು
ದಾರಿ ತಪ್ಪಿರುವೆ ,
ಮರೆತಿರುವೆ ಬಾಳ ಗಮನವ
ಹೇಳು ನೀ..
ಹೇಗೆ ಸಾಗಿಸಲಿ ಈ ಜೀವನ ನಾವೆಯ
ತಂಗಾಳಿಯಾಗಿ ನೀನಿಲ್ಲದೆ ?
ಯೌವನದ ಋತುಗಳು ಮರಳಿವೆ ಸುಮ್ಮನೆ
ಏಕಾಂತದ ಮೌನ ಹಾದಿ ಸವೆದಿದೆ ಮೆಲ್ಲನೆ
ನಿನ್ನ ಮರೆಯಲು ಯತ್ನಿಸುವೆ
ಆದರೂ ಒಲವೇ..
ಮರೆವಿನ ಸುಳಿಗೆ ಸಿಲುಕಿದರೂ
ನಿನ್ನ ನೆನಪಿನ ಉಸಿರು ಜೀವತುಂಬುವುದು
ಮರೆತಾದರೂ ನಿನ್ನ ಮರೆಯಲಾಗದು
ಕಾರಣ..
ನೀ ನನ್ನ ದೇವತೆ
ನೀನೇ ನನ್ನ ಜೀವನ.