ಮನಸಿನಲಿ ಕಟ್ಟುತ್ತಿರುವೆ ಪದಗಳ ಹೂದೋಟ
ಒಂದೊಂದು ಹೂವ ಹೆಕ್ಕಿ ಭಾವಗಳ ಸೇರಿಸಿ ಸಾಲುಗಳ ಕಟ್ಟುವುದೆ ಆಟ
ನಿಲ್ಲದು ಸುಂದರ ಸಾಲುಗಳ ಮಾಲೆಯ ಕಟ್ಟಬೇಕೆಂಬ ಚಟ
ಎಂದಿಗೂ ನಿಲ್ಲದಿರಲೆಂದು ಬಯಸುವೆ ಈ ಚಟದ ಆರ್ಭಟ
ಸಹಸ್ರ ಸುಂದರ ಪದಗಳ ಹೆಕ್ಕುವುದ ಅರಿಯೆನು
ಆದರೂ ತಿಳಿದಷ್ಟು ಪದಗಳ ಪೋಣಿಸಿ ಭಾವ ಸೇರಿಸುವೆನು
ನಾ ಬರೆಯುವ ಸಾಲುಗಳ ಸೊಗಸನ್ನು ನಾನು ತಿಳಿಯೆನು
ಬರೆಯುವಾಗಲೆಲ್ಲ ಮನಕೆ ಕಂಪು ಸೂಸಿ ಖುಷಿ ಮೂಡಲೆಂದೆ ಬರೆಯುವೆನು
ತಪ್ಪಿದ್ದರೆ ಮನ್ನಿಸಿ ತಿದ್ದಿ ಎನ್ನನು
ಎಲ್ಲಾ ಕವನಗಳು
ಒಂದಲ್ಲೊಂದು ರೀತಿಯಲ್ಲಿ
ಮನಸು ಮುಟ್ಟುತ್ತವೆ
ಎಲ್ಲಾ ಕವನಗಳು
ಒಂದಲ್ಲೊಂದು ರೀತಿಯಲ್ಲಿ
ಕನಸು ಹುಟ್ಟಾಕುತ್ತವೆ
ಎಲ್ಲಾ ಕವನಗಳು
ಒಂದಲ್ಲೊಂದು ರೀತಿಯಲ್ಲಿ
ಎದೆಗೆ ಗಾಸಿ ಮಾಡುತ್ತವೆ
ನಾನು ಆಗಾಗ ಕವನ ಗೀಚುತ್ತೇನೆ
ನನಗೆ ಬಿಳಿಯ ಹಾಳೆಯೇ ಬೇಕೆಂದೇನಿಲ್ಲ
ಗೋಡೆಯ ಮೇಲೋ
ಮರದ ಕಾಂಡದ ಮೇಲೋ
ಚಿಂದಿ ಹಾಳೆಗಳ ಮೇಲೋ
ಹೀಗೆ ಸಿಕ್ಕ ಸಿಕ್ಕಲ್ಲಿ ಕಂಡ ಕಂಡಲ್ಲಿ ಗೀಚುತ್ತೇನೆ
ಕನವರಿಕೆಗಯಲ್ಲೂ ಕವನ ಹೇಳುತ್ತಿರುತ್ತೇನೆ
ಹಾಗೆಂದು ನಾನು ನನ್ನನ್ನು ಕವಿಯೆಂದು
ನಾನೆಂದು ಕರೆದುಕೊಂಡವನಲ್ಲ
ಚಿಂದಿ ಆಯಿಯುವ ಹುಡುಗರಿಗೆ ಸಿಕ್ಕರೆ
ಅವು ಓದಿ ಖುಷಿ ಪಡಲೆಂದು ಬರೆಯುತ್ತೇನೆ
ಹೀಗೆ ನಾ ಬರೆದ ಅದೆಷ್ಟೋ ಕವನಗಳು
ಗಾಳಿಯಲ್ಲಿ ಹಾರಾಡುತ್ತ
ಆಡುವ ಹುಡುಗರ ಬಾಯಲ್ಲಿ ಹಾಡಾಗುತ್ತವೆ
ನಿಮಗೆ ನಾನು ಬರೆದ ಎಲ್ಲಾ ಕವನಗಳು
ಓದಲು ಸಿಗುವುದಿಲ್ಲ
ಅವು ಗಾಳಿಯಲ್ಲಿ ತೇಲಾಡುತ್ತಿರುತ್ತವೆ
ನಿಮ್ಮ ಕಿವಿಗವು ಬಿದ್ದರು
ಕೆಲದವರಂತೆ ಸುಮ್ಮನೆ ಹೋಗುತ್ತಿರುತ್ತೀರಿ
ಒಂದೊಮ್ಮೆ ನನ್ನ ಕವನಗಳು
ಕಿರುಚಾಡಳು ಶುರುಮಾಡುತ್ತವೆ
ಆಗ ಕೇಳಲಾರದೆ ಕಿವಿ ಮುಚ್ಚಿಕೊಳ್ಳುತ್ತೀರಿ
ಹೀಗೆ ನಮ್ಮ ಕವನಗಳು ಮರೆತು ಹೋಗುತ್ತವೆ
ಆಗಾಗ ನಮ್ಮ ಕಥೆಗಳು
ಚಿನ್ನ ಗೆದ್ದ ನಿಮ್ಮ ಸಿನೆಮಾಗಳಲ್ಲಿ ಹುಡುಗಿರುತ್ತವೆ
ನಮಗೇನು ಚಿನ್ನದ ಆಸೆ ಇಲ್ಲ
ಚಿಂದಿ ಆಯುವ ಹೊತ್ತು
ಚಿಂದಿ ಹಾಳೆಗಳ ಮೇಲೆ ಗೀಚಿದ
ಸುಂದರ ಕವನಗಳ ಹುಡುಕಿ
ಜೇಬಲ್ಲಿ ಮುಚ್ಚಿಟ್ಟುಕೊಳ್ಳುವುದೆ ಗಮ್ಮತ್ತು