Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮದುವೆ..

ಕೊರಿಸಿರುವೆನು ನಾ ನಿನ್ನ ಗೆಳತಿ...
ನನ್ನ ಹೃದಯದ ಮಂಠಪದಲ್ಲಿ...
ಹಚ್ಚಿರುವೆನು ಸಿಂಧೊರವ ಹುಡುಗಿ...
ನನ್ನ ಕೆಂಪು ರಕ್ತದಲ್ಲಿ...
ನಡವೆನು ನಿನ್ನ ಜೊತೆ ಸದಾಕಾಲ...
ಪ್ರಪಂಚವೆಂಬ ಅಗ್ನಿ ಕುಂಡದ ಸುತ್ತ...

- Harsha GR

23 Apr 2017, 06:25 pm

"_ಕೃಷಿ ತಾಂತ್ರಿಕತೆಯ ಲೋಕ_"

ಒಂದು ಮರದಲ್ಲಿ ಹಲವು ಹಕ್ಕಿ ಸೇರಿ
ಒಂದೇ ಕಲರವ ಬೀರುವ ಹಾಗೆ,

ಒಂದು ಬಾವಿಯಲ್ಲಿ ಹಲವು ಝರಿಗಳು ಸೇರಿ
ಒಂದೇ ರುಚಿಯ ಪಾನೀಯವಾಗುವ ಹಾಗೆ,

ಒಂದು ಸಮುದ್ರದಲ್ಲಿ ಹಲವು ನದಿಗಳು ಸೇರಿ
ಒಂದೇ ರಭಸದ ಅಲೆಯಾಗುವ ಹಾಗೆ,

ಒಂದು ದಾರದಲ್ಲಿ ಹಲವು ಹೂಗಳು ಸೇರಿ
ಒಂದೇ ಸುವಾಸನೆಯ ಮಾಲೆಯಾಗುವ ಹಾಗೆ,

ಒಂದು ಕೃಷಿ ತಾಂತ್ರಿಕ ಮಹಾವಿದ್ಯಾಲಯ ದಲ್ಲಿ ಹಲವು ವಿದ್ಯಾರ್ಥಿಗಳು ಸೇರಿ
ಒಂದೇ ಕೃಷಿ ತಾಂತ್ರಿಕತೆ ಎಂಬ ಕುಟುಂಬದ ಸದೃಢ ಸದಸ್ಯರಾಗಿ,
ಕೃಷಿ ತಾಂತ್ರಿಕತೆಯ ಲೋಕ ಕಟ್ಟೋಣ ಬನ್ನಿ......

‌ ~ಶರಣು~

- sharanu

23 Apr 2017, 05:34 pm

ಮನವೇ.......

ಕಾಡದಿರು ನನ್ನ ಮನವೇ
ನೆನೆಯದಿರು ಅವನ ನಗುವೇ....

ಒಂದು ಕ್ಷಣವು ಉಳಿದಿಲ್ವಲ್ಲಾ
ನನ್ನ ನೆನಪೇ ನಿನಗಿಲ್ವಲ್ಲಾ.........

ನನ್ನನ್ನೇ ಮರೆಸುವಂತೆ ಅವನ
ನೆನಪು ನನ್ನ ಮನದಲ್ಲಿ ತುಂಬಿದೆಯಲ್ಲಾ....

ಮಾತಾಡೇ ನನ್ನ ಮನವೇ ನೀನಾದರು
ನನ್ನಲ್ಲಿರುವೆಯಾ ಇಲ್ಲ ಅವನ ಉಸಿರಲ್ಲಿ
ಮರೆಯಾಗಿರುವೆಯಾ.........

- ಚುಕ್ಕಿ

23 Apr 2017, 05:26 pm

ನಾ‌ ಬಯಸದ ಖುಷಿಯ ಹರಸಿ ತಂದೆ

ನಾ‌ ಬಯಸದ ಖುಷಿಯ ಹರಸಿ ತಂದೆ
ಇಂದು ನನ್ನೇ ಬದಿಗೆ‌ ಸರಿಸಿ ಹೊರಟು ನಿಂದಿರುವೆ
ನಿನ್ನಿಂದಲೆ ಅರಳಿತು ಕನಸು
ನಿನ್ನಿಂದಲೇ ಮುದುಡುತಿದೆ ಮನಸು

ನೋವಲೇ ಬೆಂದ ಬದುಕಿಗೆ ನಗುವ ತಂದು
ಕಾಯುವಂತೆ ಮಾಡಿರುವೆ ನಿನ್ನ ಕಣ್ಣೀರಲೆ ಮಿಂದು
ಒಂದೊಮ್ಮೆ ತಿರುಗಿ ನೋಡಬೇಕೆನಿಸದೆ ನಿನಗೆ
ಕಣ್ಣೀರಲೆ ಕೊರಗುತಿರುವೆ ದಾರಿಯು‌ ಕಾಣದೆ ನನಗೆ

ಬೇರೆನು ತಿಳಿಯೆ ನಿನ್ನ‌ ಮಾತುಗಳ‌ ಹೊರತು
ನಂಬಿ ಬಂದಿರುವೆ ಕಂಡ ಎಲ್ಲಾ ನೋವುಗಳ‌ ಮರೆತು
ಮಾತೆ ಸುಳ್ಳಾದರೆ ನಂಬಿ ಬದುಕುವುದೆಂತು
ನೆನಪಾಗದೆ ಕಂಡ‌ ‌ಕನಸುಗಳೆಲ್ಲ‌ ಒಂದು ಇನಿತು

- ಶ್ರೀಕಾವ್ಯ

23 Apr 2017, 04:55 pm

ಹೆಸರು........

ನಿ ಕೂಗಿದ ತಕ್ಷಣ
ಮರೆಯಾಯಿತು ನನ್ನ
ಹೆಸರು ..........

ನಿನ್ನ ಉಸಿರಲ್ಲಿ ಬೆರತೋಯಿತು
ನನ್ನ ಉಸಿರು.........
ಮರೆಯದೆ ನೆನಪಿಡು ನನ್ನ
ಹೆಸರು ............

ಏಕೆಂದರೆ ನಿನ್ನ ಹೊರೆತು
ನೆನಪಿಲ್ಲ ನನಗೆ ಯಾರ ಹೆಸರು......

- ಚುಕ್ಕಿ

23 Apr 2017, 03:58 pm

ನಾ ನಿನ್ನ ಮರೆಯಲಾರೆ

ಮರೆಯಲಾರೆ ಚಿನ್ನ, ನಾ ನಿನ್ನ,
ನೀ ಮರೆತಿರಬಹುದು ನನ್ನ,
ಆದರೆ ಮರೆಯಲಾರದು ನಿನ್ನ, ನನ್ನ ಮನ.

ಕಾಲಗಳು ಕ್ರಮೇಣ ಉರುಳಬಹುದು,
ಋತು ಚಕ್ರಗಳು ಕಳೆಯಬಹುದು,
ಸಮಯ ಸಂದರ್ಭಗಳು ಬದಲಾಗಬಹುದು,
ಬಹುಶಃ ನಿನ್ನ ನೆನಪಿನಲ್ಲಿಲ್ಲ ನಾನು,
ನನ್ನ ನೆನಪಿನಲ್ಲಿರುವೆ ಎಂದೆಂದಿಗು ನೀನು.

ಸೂರ್ಯ ಪ್ರತಿದಿನ ಹುಟ್ಟುವುದನ್ನು ಮರೆತರು,
ಚಂದ್ರ ಬೆಳದಿಂಗಳು ಚೆಲ್ಲುವದನ್ನು ಮರೆತರು,
ನಕ್ಷತ್ರಗಳು ಬಾನಿನಲಿ ಹೊಳೆಯುವುದನ್ನು ಮರೆತರು,
ನಾನೆಂದಿಗೂ ಮರೆಯಲಾರೆ ನಿನ್ನ ನೆನಪನ್ನ,
ನನ್ನೆ ನಾ ಮರೆತರು , ಮರೆಯಲಾರೆ ನಿನ್ನ.

ಕಾಲಗರ್ಭದಲಿ ಮರೆಯಾಗಿ ಸಮಯದ ಕೈಗೊಂಬೆಯಾದೆವು.
ಹೊಸ ದಾರಿ ಹೊಸ ಜೀವನ ಕಂಡುಕೊಂಡೆವು.
ಜವಾಬ್ದಾರಿಯಾರು ಹೊತ್ತು ದೂರ ಸರಿದೆವು,
ಹೊಸತನಕ್ಕೆ ಹಳೆಯದನ್ನು ಮರೆತಿರಬಹುದು ನೀನು,
ಕೊನೆಯುಸಿರೆಳೆದರು ಮರೆಯುವುದಿಲ್ಲ ನಿನ್ನ ನಾನು.

- ರವೀಂದ್ರಬಾಪೂರ(GNL)

23 Apr 2017, 03:33 pm

ಸೆಳೆದಾಯಿತು.......✍

ಸೆಳೆದಾಯಿತು ನಿನ್ನನು
ನನ್ನ ಎದೆಯೊಳಗೆ......
ನೀ ಬಂದ ಘಳಿಗೆ ನನ್ನೊಳಗೇನೋ
ರೋಮಾಂಚನ.........

ನೀನೊದ ನಂತರ ನಿನ್ನ ನೆರಳು
ನನ್ನ ಬಿಡಲೇ ಇಲ್ಲವೇ ಇನಿಯಾ
ನನ್ನ ಹೃದಯಕ್ಕೆ ನೆರಳಾಗಿ ನಿಂತೋಯಿತೆ......

ಅದೇ ಮೊದಲು ನನ್ನೆದೆಯೂ
ಯಾರಿಗೂ ಅಂಜಿಲ್ಲ ನೀನಿರುವ
ಧೈರ್ಯದಳಿ...........

ಬಿಸಿಯುಸಿರ ತಾಪದಲಿ
ಕರಗೋದ ಕಂಬನಿಯೂ
ನಿನರೂಪ ಕಂಡಾಗ
ತಾನಾಗಿ ನಗುವಾಯಿತೇ......

- ಚುಕ್ಕಿ

23 Apr 2017, 03:15 pm

ಆಗ ನಿನ್ನ ನೆನಪು ಬರುವುದು....

ಮುಂಜಾನೆ ವೇಳೆ, ಹಕ್ಕಿಗಳ ಸಂಗೀತದ ಕಲರವ ಕೇಳಿದಾಗ...
ಮೂಗ್ಗುಗಳು ಬಾಗಿಲು ತೆರೆದು ನಸು ನಕ್ಕಾಗ..........
ಪರಿಮಳದ ಅಲೆಗಳು ಉಕ್ಕಿ ಬಂದು ಮನ ಸೇರಿದಾಗ....
ಆಗ ನಿನ್ನ ನೆನಪು ಬರುವುದು

ಮಳೆ ಹನಿಗಳು ಮೈ ಸ್ಪರ್ಶಿಸಿದಾಗ, ಸಿಡಿಲಿನ ಸದ್ದು ಕೇಳಿದಾಗ....
ಮೈದಾನದಲ್ಲಿ ವನ-ತೋಟದಲ್ಲಿ ಹಸಿರು ಎಲೆಗಳು ಅಲುಗಾಡಿದಾಗ...
ತಂಪಾದ ಗಾಳಿಯು ಎಲ್ಲಿಂದಾನೂ ಮೋಜನ್ನ ಹೂತ್ತು ತಂದಾಗ..
ಆಗ ನಿನ್ನ ನೆನಪು ಬರುವುದು

ಮಿನು ಮಿನುಗು ತಾರೆಗಳು, ಆಕಾಶವನ್ನು ಸಿಂಗರಿದಾಗ....
ನಿರ್ಮಲವಾದ ನೀರಿನಲ್ಲಿ ಚಂದ್ರನ ಬಿಂಬ ಕಂಡಾಗ.......
ಹುಚ್ಚೇದ್ದು ನವಿಲುಗಳು ರೆಕ್ಕೆಗಳನ್ನು ಬಿಚ್ಚೀ ಕುಣಿದಾಗ.....
ಆಗ ನಿನ್ನ ನೆನಪು ಬರುವುದು

ಶಾಬುದ್ದೀನ ಎಸ್ ಆರ್.........

- shabudin

23 Apr 2017, 11:51 am

ಮನಸಿನ ಕನ್ನಡಿ

ನೀ
ನನ್ನ
ಮನಸಿನ
ಕನ್ನಡಿ!
ಬರೆದುಬಿಡು
ಬಂಗಾರದ
ಬಾಳ
ಮುನ್ನುಡಿ!

- Shreekanth

23 Apr 2017, 10:38 am

ಸ್ವಾತಂತ್ರ್ಯವೆಲ್ಲಿ ಬಂತು .......

ಅಡಿಗೆ ಮನೇಲಿ ಕೂತು
ಅಳುತ್ತಿರುವ ಹಣ್ಣುಮಗಳ
ಕಣ್ಣೀರಲ್ಲಿ................

ದಿನ ದಿನಕೂ ಹೊಟ್ಟೆಪಾಡಿಗಾಗಿ
ಶ್ರಮವಹಿಸಿ ದುಡಿಯುತ್ತಿರುವ
ಬಡವನ ಬೆವರಲ್ಲಿ..............

ಮಕ್ಕಳನ್ನು ಶಿಕ್ಷಣಕ್ಕೆ ಕಳುಹಿಸಲು
ದುಡ್ಡಿಲ್ಲದೆ ದಿನಗೂಲಿಗೆ ಕಳುಹಿಸುತ್ತಿತ್ತುವ
ತಂದೆ-ತಾಯಿಯರ ನೋವಿನಲ್ಲಿ................

ಅನಾರೋಗ್ಯದಿಂದ ಬಳಲುತ್ತಿರುವ
ವಯಸ್ಸಾದ ಮುದುಕರ ವ್ಯಥೆಯಲ್ಲಿ
...............

ಸ್ವಾತಂತ್ರ್ಯವೆಲ್ಲಿ ಬಂತು ಸಿರಿವಂತರ
ಮನೆಗಳಲ್ಲಿ ಹಿಡಲು ಜಾಗವಿರದೆ
ರಾಶಿ ರಾಶಿ ಬಿದ್ದಿರುವ ಹಣದಲ್ಲಿ......

- ಚುಕ್ಕಿ

23 Apr 2017, 10:26 am