ನಗುತಿದೆ ಬಿಂದಿ..
ಕುಳಿತು ಹಣೆಯ ತುದಿ..
ನಲಿಯುತಿದೆ ನವಿಲ್ಗರಿ..
ಕಣ್ಣ ಒಳ ಸೇರಿ..
ಕೆಣಕುತಿದೆ ಮುಂಗುರುಳು..
ಮಾಡಿ ಎಲ್ಲರಿಗೂ ಮರುಳು..
ಮುಗುಳ್ನಗುತಿದೆ ಗುಲಾಬಿ..
ಕೆಂದುಟಿಗೆ ಮುತ್ತಿಕ್ಕಿ..
ಕಿರುನಗುತಿಹಳು ಕಿನ್ನರಿ
ಇವಲ್ಲಾ ತನ್ನದೇ
ಎಂದೆಣಿಸಿ....
ಅಂದಿನ ರಾಜ ಮಹಾರಾಜರು
ಜಾತಿ ಧರ್ಮಕ್ಕೆ ನೀರೆದರು
ಬುಡ ಬುಡಿಕೆ ಮಾತು ಕೇಳಿ ಕುಣಿದರು
ಕಡಲೆಕಾಳು ವರ್ಗದವರಿಗೆ ಕಾಲಿಗೆ ಬೀಳಿಸಿದರು
ಸಾಸಿವೆಕಾಳು ವರ್ಗಕ್ಕೆ ಪೋಷಿಸಿದರು
ಇಂದಿನ ರಾಜಕೀಯ ಸೂತ್ರಧಾರರು
ಜೀವನ ನಡೆಸಲು ಜಾತಿಗೆ ಶರಣಾದರು
ಜಾತಿ ಸಂಘರ್ಷಕ್ಕೆ ನಮ್ಮನ್ನು ಆಹುತಿಮಾಡಿದರು
ಮಾನವೀಯತೆಯ ಮೌಲ್ಯಗಳನ್ನು ಮರೆತರು
ತಂಪಾದ ಗಾಳಿಗೆ ಸೆಳೆಯಾದರು
ಅವರ ವಂಶವಾಹಿಗಳಿಗೆ ನೆಲೆ ನಿಂತರು
ನಾವೆಲ್ಲರೂ....
ಕುರಿಯಂತೆ ಪಾಠ
ಗಿಳಿಯಂತೆ ರಾಮನ ಭಜನೆ
ಮಂಗನಂತೆ ಆಟ
ನಾಯಿಯಂತೆ ವಾಸದ ಮನೆ
ನಮ್ಮ ದುರ್ಬಲರ ನೋಟ
ಮುಗಿಯಿತ್ತಿದೆ ನಮ್ಮ ಆಟ
ಕೊನೆಗೆ ಅವರ ಹಟ್ಟಹಾಸ
ಮುಗಿಯದು ನಮ್ಮ ಉಪವಾಸ
ಜಂಟಿ ಪಾದ ಒಂದಾಗುವ ಉಮೇದಿಗೆ
ಹಿತ್ತಲ ಮೊಗ್ಗು ಬಿರಿಯುತ್ತದೆ
ಕಾಡ ದಾರಿಯಲ್ಲಿ ಏಕಾಂತ
ಸರಿಯುವುದು ಆ ಕ್ಷಣದಲ್ಲಿಯೇ
**
ಬೀಜಯೊಡೆಯುವ ಪ್ರಕ್ರಿಯೆಗೆ
ಅವಳೊಂದು ನೆಪ ಆಗುತ್ತಾಳೆ
ಬಿಂಕ ಸರಿದ ರಾತ್ರಿ
ಶುರುವಾಗವುದು ಅವಳಿಂದಲೇ
**
ಒಮ್ಮೊಮ್ಮೆ ಪುಳಕವೊಂದು
ಸರಿಯುತ್ತಿರುತ್ತದೆ
ಎದೆ ಗೀರಿನ ಅಚಾನಕ್
ತೋರ್ಪಡಿಕೆ ಬೆಚ್ಚಗಿಸಿರುವ
ಪ್ರಯತ್ನವಷ್ಟೇ
**
ಮೊದಲ ಮಳೆಗೂ ಮೊದಲಿನ
ಹನಿಯವಳು
ಮೂಡಿದ ವಿಷಯ ತಿಳಿಯದ
ವಿಚಾರ ನನ್ನೊಳಗೆ..
**
ಮುಂದಿನ ಎಲ್ಲಾ ಪ್ರಮಾದಗಳಿಗೆ
ಅಧಿಕೃತ ಹೊಣೆಗಾರ್ತಿ
ಜಾಮೀನು ರಹಿತ ಸಜೆಗೂ
ಒಡಂಬಡಿಕೆ ಮಾಡುವುದೇ
ಒಪ್ಪಂದಗಳಿರದ ವಿಶೇಷಣಗಳು