Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

***ನಕ್ಷತ್ರ***

ಆಕಾಶದಲ್ಲಿ ನೀನು ಮಿನುಗುತ್ತಿರುವ ನಕ್ಷತ್ರ
ನಾ ಎಂದೆಂದಿಗೂ ಇರುವೆ  ನಿನ್ನ ಹತ್ರ
ನಿನ್ನ ಪ್ರೀತಿ ಸಿಗಲೀ ನನಗೆ ಮಾತ್ರ
ನೀನೂಂದು ಬಿಡಿಸಲಾಗದ ಚಿತ್ರ

- Harshac

18 Feb 2019, 07:15 am

ಓ ವೀರ ಯೋಧನೇ ಓ ಶೂರ ಯೋಧನೇ

ಓ ವೀರ ಯೋಧನೇ
ಓ ಶೂರ ಯೋಧನೇ
ನಿನಗೆ ಕೋಟಿ ವಂದನೆ..
ಓ ವೀರ ಯೋಧನೇ
ಓ ಶೂರ ಯೋಧನೇ
ನಿನಗೆ ಕೋಟಿ ವಂದನೆ..
ನಿನ್ನ ತ್ಯಾಗ ಬಲಿದಾನ
ಮರೆಯದು ಎಂದು ಹಿಂದೂಸ್ಥಾನ..
ನಿನ್ನ ಕೆಚ್ಚೆದೆಯ ದೇಶಾಭಿಮಾನ
ಭಾರತೀಯರಿಗೆ ಎಂದೆಂದು ಸುಖಜೀವನ..||ಪ||

ನಿನ್ನವರನ್ನು ಬಿಟ್ಟು ಹೊರಟೆ ಗಡಿಯತ್ತ
ಜೈಹಿಂದ್ ಎಂಬುದೊಂದೇ ನಿನ್ನ ಎದೆಬಡಿತ..
ಕಟ್ಟಿ ಎಸೆದೆ ನಿನ್ನ ಭವ್ಯ ಭವಿಷ್ಯವನ್ನಾ
ಮೇರಾ ಭಾರತ್ ಮಹಾನ್ ಅಂದೆ ಕ್ಷಣ ಕ್ಷಣ..
ಘೋರ ಕದನಕೆ ನೀನು ಸದಾ ಸನ್ನದ್ಧ
ಹೆಮ್ಮೆಯಿಂದ ಬೀಗುವೆ ವೀರಮರಣದಿಂದ..
ನಿನ್ನ ಉಸಿರು ಭಾರತ
ನಿನ್ನ ಹೆಸರು ಶಾಶ್ವತ..


ದ್ರೋಹಿಗಳ ದಂಡು ಧ್ವಂಸ ಮಾಡುವ ಗಂಡು..
ಬಾಂಬ್ ಸಿಡಿಯಲಿ ಗುಂಡಿಗೆ ಹಾರಲಿ
ರಣರಂಗದಲಿ ನೀನು ಉಕ್ಕಿನ ಮನುಷ..
ನೆತ್ತರು ಸುರಿಯಲಿ ಉಸಿರು ಹೋಗಲಿ
ಮಾಡೆ ತೀರುವೆ ಉಗ್ರರನ್ನು ಸರ್ವನಾಶ..
ತ್ರಿವರ್ಣಧ್ವಜ ಹಾರಿದಾಗಲೇ ನಿನಗೆ ಹರುಷ..
ನಿನ್ನ ಉಸಿರು ಭಾರತ
ನಿನ್ನ ಹೆಸರು ಶಾಶ್ವತ...

- ಸುರೇಶ್ ಟಿ ವಿ

17 Feb 2019, 10:30 pm

ವೀರ ಯೋಧ ನೀನೆ ಈ ದೇಶದ ನಿಜವಾದ ಹೀರೋ

ಓ ನನ್ನ ವೀರ ಯೋಧ ಮತ್ತೆ ಹುಟ್ಟಿ ಬಾರೋ
ನೀನೆ ಈ ದೇಶದ ನಿಜವಾದ ಹೀರೋ...
ನೀನೀದ್ದರೇನೆ ದೇಶದ ಜನತೆ ಕ್ಷೇಮಕುಶಲಂ
ನಿನ್ನ ತ್ಯಾಗ ಬಲಿದಾನಕೆ ಕೋಟಿ ಕೋಟಿ ಸಲಾಂ|ಪ|

ಬಿಟ್ಟು ಬಂದೆ ನಿನ್ನ ಕುಟುಂಬ
ಬೆಳೆಸಿಕೊಂಡೆ ದೇಶಭಕ್ತಿ ನರನಾಡಿಯ ತುಂಬ..
ಉಗ್ರರ ಸಂಹಾರ ನಿನಗೊಂದು ಸಮಾರಂಭ
ವೀರಮರಣ ಹೊಂದುವುದು ನಿನಗೆ ಮಹಾನ್ ಹಬ್ಬ..

ತಾಯ್ನಾಡಿಗಾಗಿ ಒತ್ತೆ ಇಟ್ಟೆ ಹಣೆಬರಹ
ಸಹಿಸೋದಿಲ್ಲ ನೀನು ದೇಶದ್ರೋಹ..
ಉಕ್ಕಿನ ಕವಚ ನಿನ್ನ ದೇಹ
ಮಳೆ ಬಿಸಿಲು ಚಳಿಯಲ್ಲೂ ಸೋಲದ ಉತ್ಸಾಹ..
ಘರ್ಜಿಸುವೆ ಮುನ್ನುಗ್ಗುವೆ ಸಿಂಹದ ತರಹ..

ನಿನ್ನ ಆರ್ಭಟಕೆ ನುಚ್ಚುನೂರು ಉಗ್ರರು
ಹೋರಾಡುವೆ ನೆತ್ತರು ಸುರಿದರೂ ದೇಹ ಛಿದ್ರ ಛಿದ್ರವಾದರೂ
ವಿಜಯ ಪತಾಕೆ ಹಾರಿಸಿ ಹೆಮ್ಮೆಯಿಂದ ನಿಲ್ಲಿಸುವೆ ನಿನ್ನ ಉಸಿರು..
ನಮ್ಮೆದೆಯಲ್ಲಿ ಎಂದೆಂದು ಅಮರ ನಿನ್ನ ಹೆಸರು..

- ಸುರೇಶ್ ಟಿ ವಿ

17 Feb 2019, 08:49 am

ನಮನ ನಿಮಗೆ

ರಾಷ್ಟ್ರಗೀತೆ ಲಾಲಿ,
ಹಾಡಾಯಿತೆ ನಿನಗೆ,
ಬೆಚ್ಚಗೆ ಮಲಗಿರುವೆ,
ತ್ರಿವರ್ಣದಲ್ಲಿನ ತಾಪಕೆ.

ಕಿಡಿಗೇಡಿಗಳ ಗುಂಡೇಟಿಗೆ,
ಎದೆಬಿರಿದು ಎದುರು ನಿಂತ
ಧೈರ್ಯಕೆ,
ಶಾಪವಾಕಿತೆ ನಿನ್ನವರ
ಕಣ್ಣ ಹನಿ,ನೋವುಂಡ ಪಾಪಕೆ.

ನೆನೆದು ನೆನ್ನೆಯ ನಿನ್ನ ನಗುವು,
ತಾಯಿ ಮರುಗಿದಳು,
ಭಾರತಿಯ ಮಡಿಲಲ್ಲಿ,
ನಿನ್ನ ಮಗನ ಬಿಳ್ಕೊಡು
ಎಂದು ಸ್ವರ್ಗಕೆ.

ತಲೆ ಬಾಗಿ ನಮಿಸುವೆವು,
ನಿನ್ನ ತ್ಯಾಗಕೆ, ಮುಕ್ಕೋಟಿ
ದೇವರುಗಳ ಸಾಲಿಗೆ,
ನಿನ್ನದೂ ಒಂದು ನಾಮ,
ಸೇರಲಿ ನಮ್ಮ ಉಸಿರಿಗೆ.

- ಚುಕ್ಕಿ

16 Feb 2019, 10:56 pm

ನೀ ದೂರಾಗಬೇಡ.

ನಿನ್ನೊಂದಿಗಿನ ಪಯಣಕ್ಕಾಗಿ
ನಾ ಆಸೆಯ ಬುಟ್ಟಿಯನ್ನು
ಸೂಕ್ಷ್ಮದಿಂದ ಹೆಣೆಯುತ್ತಿರುವೆ.
ಆಸೆಯನ್ನ ಕಮರಿಸಿ ನೀ ದೂರಾಗಬೇಡ.(ಪ)
ವಿಸ್ಮಯದ ಈ ಲೋಕದಲ್ಲಿ
ಸುವಿಶಾಲವಾದ ಪ್ರೀತಿಯಿಂದ
ನಿನ್ನೊಡನೆ ಬಾಳಲು ತವಕಿಸುತ್ತಿರುವೆ.
ನನ್ನನ್ನು ನಿರ್ಲಕ್ಷಿಸಿ ನೀ ದೂರಾಗಬೇಡ.
ಗಳಿಗೆಗೊಂದು ಗಂಟೆ ಕಟ್ಟಿ
ನಿತ್ಯ ದೇವರ ಪೂಜೆ ಮಾಡಿ
ನನ್ನೇ ನಾ ಬಲಪಡಿಸಿಕೊಂಡಿರುವೆ.
ಬಡವನ ಗುಡಿಗೆ ಬಾರದೇ ಹೋಗಬೇಡ.
ಅತ್ತು ಬದುಕುವ ಜನರ ನಡುವೆ
ನಿನ್ನ ನಕ್ಕು ನಗಿಸಲು ಸಿದ್ದನಾಗಿ
ಹುಚ್ಚನಂತೆ ಒಬ್ಬನೆ ಕಾಯುತ್ತಿರುವೆ.
ಮೆಚ್ಚಿಕೊಳ್ಳದೇ ನೀ ಸತಾಯಿಸಬೇಡ.
ಪಣತಿಗಾಗಿ ಬತ್ತಿ ಹೊಸೆದು
ನನ್ನೇ ನಿನಗೆ ಧಾರೆ ಎರೆದ
ಪ್ರೀತಿಯ ತೈಲವ ಉಣಬಡಿಸುತ್ತಿರುವೆ.
ದೀಪವನ್ನು ಹಚ್ಚದೇ ನೀ ದೂರಾಗಬೇಡ.
➡ ಇಂತಿ ಸ್ನೇಹ ಸಿಂಚನ

- ನಾಗರಾಜ ಬಾಕೆ೯ರ್

16 Feb 2019, 06:09 pm

ಮತ್ತೆ ಹುಟ್ಟಿ ಬನ್ನಿ ಓ ನನ್ನ ವೀರ ಯೋಧರೇ

ಮತ್ತೆ ಹುಟ್ಟಿ ಬನ್ನಿ ಓ ನನ್ನ ವೀರ ಯೋಧರೇ
ನಿಮ್ಮ ತ್ಯಾಗ ಬಲಿದಾನಕೆ ಕೋಟಿ ವಂದನೆ..
ಭರತಮಾತೆಯ ರಕ್ಷಣೆಗೆ ನೀವು ಇದ್ದರೆ
ಮಾತೆಯ ಮಕ್ಕಳಿಗೆ ಆಗ ನೆಮ್ಮದಿಯ ನಿದಿರೆ.|ಪ|

ನಾನು ನನ್ನದು ಎಂಬ ಆಸೆ ಸುಟ್ಟು ಹಾಕಿದೆ
ನನ್ನ ದೇಶ ನನ್ನ ಜನ ಎಂದು ಇಷ್ಟಪಟ್ಟು ಹೋರಾಡಿದೆ..
ದೇಶದ್ರೋಹಿಗಳ ಹುಟ್ಟಡಗಿಸಲು ದೇಹ ಚೂರಾದರೂ ಮುನ್ನುಗ್ಗಿದೆ
ರಾಷ್ಟ್ರಧ್ವಜವ ನೆಟ್ಟು ಜೈಹಿಂದ್ ಎನ್ನುತ ಮೆರೆದಾಡಿದೆ..

ಅನುಕ್ಷಣ ಹರುಷದಿಂದ ದೇಶ ಕಾಯುವೆ
ನರನಾಡಿಯಲ್ಲಿ ದೇಶಪ್ರೇಮ ಉಕ್ಕಿ ಹರಿಸುವೆ..
ಉಗ್ರಗಾಮಿ ಗಡಿ ದಾಟಿದರೆ ಸಮರ ಸಾರುವೆ..
ಮಾತೃಭೂಮಿಗಾಗಿ ಹೋರಾಡಿ ವೀರ ಮರಣ ಹೊಂದುವೆ..
ಭಾರತೀಯರ ಎದೆಯಲ್ಲಿ ಎಂದೆಂದು ಅಮರನಾಗುವೆ ಅಮರನಾಗುವೆ...

- ಸುರೇಶ್ ಟಿ ವಿ

15 Feb 2019, 05:38 pm

ಭಾರತಾಂಬೆಯ ಪುತ್ರರಿವರು

ಎದೆಗೆ ಎದೆಯೊಡ್ಡಿ
ವೈರಿಯ ರಕ್ತವ ಕುಡಿದ,
ಭಾರತಾಂಬೆಯ ಹೆಮ್ಮೆಯ
ಪುತ್ರರು ನಮ್ಮ ಸೈನಿಕರು.
ಕಾಶ್ಮೀರದ ಕಾದಾಟದಲ್ಲಿ
ಪ್ರಾಣ ಬಿಟ್ಟರು ನೆಲ ಬಿಡೇವು.
ಗುಂಡಿಗೆಯ ಗೂಡಿನಲ್ಲಿ
ಭಾರತಮಾತೆಯ ಸ್ಮರಿಸುವರು.
ಲೆಕ್ಕಕ್ಕೆ ಲೆಕ್ಕ ಚುಕ್ತಾ ಮಾಡಿ
ವೈರಿಯ ರುಂಡ ಚಂಡಾಡಿ,
ಉತ್ತರಕ್ಕೆ ಉತ್ತರವನಿಟ್ಟು
ಆರ್ಭಟಿಸುವ ನಮ್ಮ ಯೋಧರು.
ಪ್ರೀತಿಯಿಂದ ಬಂದರೆ
ಪ್ರಾಣ ಕೊಡುವರು.
ಬಂದು ನಕರಾ ಮಾಡಿದರೆ
ನಿಂಪ್ರಾಣನ ತುತ್ತಾಗಿ ಉಣ್ಣುವರು.
ಎರೆಡು ಕೆನ್ನಗೆ ಹೊಡಿಸಿಕೊಳ್ಳಲು
ಇದು ಗಾಂಧಿ ಕಾಲವೇನಲ್ಲ.
ಪ್ರಾಣಕ್ಕೆ ಲೆಕ್ಕ ಪ್ರಾಣವೇ ಬೇಕೆನ್ನುವ
ಕ್ರಾಂತಿಕಾರಿ ಪಡೆಯಂತೆ ನಮ್ಮ ಸೈನಿಕರು.

- ನಾಗರಾಜ ಬಾಕೆ೯ರ್

15 Feb 2019, 08:51 am

ಪ್ರೇಮಿಗಳ ದಿನ ( ಪ್ರಸ್ತಾಪನೆ )

ನನ್ನ ಅಂತರಾಳದಲ್ಲಿದ್ದ ಬಹುದಿನದ ಪ್ರೀತಿಯನ್ನು,,
ಪ್ರೇಮಿಗಳ ದಿನದಂದು ಪ್ರಸ್ತಾಪಿಸುವ ಪಣತೊಟ್ಟು
ಕವಿತೆಯೊಂದನ್ನು ಬರೆಯಲು ಶುರುವಿಟ್ಟು

ನನ್ನ ಎದೆಯಲ್ಲಿದ್ದ ನಾಲ್ಕೇ ನಾಲ್ಕು
ಅಕ್ಷರಗಳನ್ನು ಹೊಸೆದು
ಕೆಲವೇ ಪದಗಳನ್ನು ನೇಯ್ದು
ಪ್ರೀತಿಪ್ರೇಮದ ಬಣ್ಣವ ಬಳಿದು

ನನ್ನ ಒಲವಿನ ಕವಿತೆಗೆ
ಕಾವ್ಯದ ಕಾವನ್ನು ಕೊಟ್ಟು
ಅರಳುತ್ತಿರುವ ಕೆಂಗುಲಾಬಿಯ
ಮೊಗ್ಗೂವೊಂದನ್ನು ನಿನ್ನ ಕೈಗಿಟ್ಟು

ನಾ ಹೇಳುವೆ,,,,,,

" ಈ ಒಲವಿನ ಮೊಗ್ಗೂವು
ಅರಳುವ ಮುನ್ನವೇ
ಅದು ನಿನ್ನ ಚೆಲುವಿನ ಮುಡಿಯಲ್ಲಿರಬೇಕು
ಅದನ್ನು ನೋಡುವ ಈ ನನ್ನ ಮನವು
ಅನುಅನುದಿನವೂ ಮಿಡಿಯುತಲಿರಬೇಕು".

- ರಘುವಿಜಯ ಕಸ್ತೂರಿ

14 Feb 2019, 05:02 pm

ನನ್ನ ಬುಲ್ ಬುಲ್

ಎಷ್ಟೋಂದು ಬ್ಯೂಟಿಫುಲ್ ನನ್ನ ಬುಲ್ ಬುಲ್
ನಿನ್ನ ಮುಂದೆ ಎಲ್ಲಾ ಹುಡುಗಿರೂ ನಿಲ್..
ನೀನು ನಕ್ಕರೆ ಮೂಡುತ್ತೆ ಕೆನ್ನೆಲಿ ಬೆಳದಿಂಗಳಂಥ ಡಿಂಪಲ್
ನಿನ್ನ ಅಕ್ಕರೆ ತರುತ್ತೆ ನನ್ನ ಬದುಕಲ್ಲಿ ಪವರ್ ಫುಲ್..
ನೀನು ನನಗಾಗಿ ಧರೆಗಿಳಿದ ಲವ್ಲೀ ಲವ್ಲೀ ಏಂಜಲ್
ನೀನಿದ್ರೆ ಯಾವಾಗ್ಲೂ ಈ ಲೈಫು ವಂಡರ್ಫುಲ್.|ಪ|

ನೀನೊಂದು ಸ್ನೇಹದ ಕಡಲು
ತುಂಬಿದೆ ಈ ಹೃದಯದಲ್ಲಿ ಒಲುಮೆಯ ಅಮಲು..
ನೀನೇ ನನ್ನ ಬಾಳಿಗೆ ಎಲ್ಲದಕ್ಕೂ ಮೊದಲು
ನಿನ್ನ ಬಿಟ್ಟು ಬೇರೆ ಇಲ್ಲ ನನಗೆ ಬಾಳಲು..
ಎಂದೆಂದೂ ನೀನು ಜೊತೆಯಾಗಿ ಇರಲು
ಎದುರಾರೇನು ಎಂಥ ಸವಾಲು..

ಈ ಬಾಳಿಗೆ ನೀನಾದೆ ಸುಂದರ ಪ್ರೇಮ ಕವನ
ನಿನಗಾಗಿ ಬರೆಯುವೆನು ಪುಟಪುಟದಲಿ ನಗುವನ್ನ..
ಜೋಡಿಹಕ್ಕಿಯಾಗಿ ನಾವು ಒಲವಿನ ಲೋಕಕೆ ಹಾರೋಣ
ಅಲ್ಲಿ ನಾನೇ ರಾಜ ನೀನೇ ರಾಣಿ ಆಗೋಣ..
ನೀನಿದ್ದರೆ ಅನುದಿನ ಅನುಕ್ಷಣ ಈ ಜೀವನ
ಮಧುರ ಮಧುರ ಮಂಜುಳಾ ಗಾನ..

- ಸುರೇಶ್ ಟಿ ವಿ

14 Feb 2019, 06:26 am

**ಒಲವಿನಾ ಮುನ್ಸೂಚನೆ**

ನೀ ನನ್ನ ಬದುಕಾಗಿ ಬರುವಾ ಮುನ್ಸೂಚನೆ
ಈ ನನ್ನ ಎದೆಯಲ್ಲಿ ಹೊಸದಾದ ಆಲಾಪನೆ!

ಜೊತೆಯಾಗಿ ಇರಬೇಕು ಎಂದೂ
ಬಯಸಿದೆ ಮನಸ್ಸು ಎಂದೆಂದೂ...
ತಿರುಗುವಾ ಭೂಮಿ ನಿಂತರು ಇಂದು
ನಿಲ್ಲದು ಪ್ರೀತಿ ನಮದೆಂದು...

ನೀ ನನ್ನ ಬದುಕಾಗಿ ಬರುವಾ ಮುನ್ಸೂಚನೆ
ಈ ನನ್ನ ಎದೆಯಲ್ಲಿ ಹೊಸದಾದ ಆಲಾಪನೆ!

ಮನಸ್ಸಿನ ನನ್ನ ಬಿಂಬ ನಿನ್ನ ಕಣ್ಣಲಿ ಕಂಡೆ
ಎಂತ ಅದ್ಬುತ ಮಾಯೆ ನಿನ್ನ ಮನಸ್ಸಿನ ಒಳಗೆ ಇಳಿದೆ...
ನನ್ನ ಕಲ್ಪನೆ ನಿನ್ನ ಮನಸ್ಸಲಿ,
ಹೀಗೆ ಉಳಿಯಲಿ ಎಂದು ಬೇಡುವೆ...

ನೀ ನನ್ನ ಬದುಕಾಗಿ ಬರುವಾ ಮುನ್ಸೂಚನೆ
ಈ ನನ್ನ ಎದೆಯಲ್ಲಿ ಹೊಸದಾದ ಆಲಾಪನೆ!

- Harini (Hani)

13 Feb 2019, 12:20 am