Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೆನಪಾಗುವೆ ಮತ್ತೆ ಮತ್ತೆ

ಕಳೆದಂತಹ ಆ ದಿನಗಳು
ಜೊತೆಯಾಗಿ ಸಾಗಿದ ಆ ದಾರಿಗಳು
ಮತ್ತೆ ಮತ್ತೆ ನೆನಪಾಗಿವೆ
ಇಂದು ನೀ ಜೊತೆಯಿರದ ಈ ಪಯಣದಲಿ!

ಮುನಿಸಲ್ಲೂ ಕಂಡುಕೊಂಡ ಖುಷಿ
ನಗುವಲ್ಲಿ ನೋವ ಮರೆತ ಕ್ಷಣ
ಮೌನದಲ್ಲಿ ಬಚ್ಚಿಟ್ಟ ಭಾವನೆಗಳು
ಕಾಡುತ್ತಿವೆ ಯಾಕೋ ನೀನಿಲ್ಲದ ಈ ಹೊತ್ತಿನಲ್ಲಿ!

ತೀರದಲ್ಲಿ ಹಂಚಿಕೊಂಡ ಕನಸುಗಳು
ಕಣ್ಣಲ್ಲೇ ಮಾತಾಡಿದ ಅದೆಷ್ಟೋ ಗಳಿಗೆ
ಸುತ್ತಾಡಿ ಸುಸ್ತಾದ ಆ ದಿನಗಳು
ನೆನಪಾಗಿವೆ ಎಲ್ಲವೂ ನೀನಿರದ ಜೊತೆಯಲಿ!

ಕನಸುಗಳಿಲ್ಲದೆ ಸರಿದುಹೋದ ಕಾಲ
ಭಯಪಡಿಸುವ ಈ ನೀರವ ರಾತ್ರಿ
ಒಬ್ಬಂಟಿಯಾಗಿ ಅಳುತ್ತಿರುವ ಈ ಜೀವ
ಪರಿತಪಿಸುತ್ತಿದೆ ಪ್ರತಿನಿಮಿಷವು ನೀನಿರದ ಬದುಕಲ್ಲಿ!

ಪ್ರಿಯಾಂಕ...

- ಪ್ರಿಯಾಂಕ

12 Feb 2019, 08:37 pm

ಅಮ್ಮ ನಿನಗಾಗಿ

ಕುರುಡು ಪ್ರೀತಿ ಇದು ನಿನ್ನ ನೋಡದೇನೆ ಮೊದಲಾದದ್ದು,
ಮೌನದ ಭಾಷೆ ಇದು ಮಾತಿನ ಅವಸರ ಇರಲಾರದು.

ಕಥೆಯೊಂದು ಹೇಳಿದೆ ನಿನ್ನ ಕರುಳಬಳ್ಳಿ ನನ್ನ ಒಡಲಲ್ಲಿ ,
ವ್ಯಥೆಯೊಂದ ತಿಳಿಸಿದೆ ನಿನ್ನ ಹೃದಯದ ಸದ್ದು ನನ್ನ ಪ್ರತಿಯೊಂದು ನೋವಿನಲ್ಲಿ.

ಕಿವಿ ಕೇಳದ ಮಾತುಗಳೆಷ್ಟೋ ನಿನ್ನ ನನ್ನ ಮಧ್ಯೆದಲ್ಲಿ, ಉಸಿರುಂಟು ನಿನಗಾಗಿ ಪ್ರತಿದಿನದ ನಗುವಿನ ಪ್ರತೀಕ್ಷೆಯಲ್ಲಿ.

ಅಮ್ಮ ನನ್ನದೊಂದೆ ಕೋರಿಕೆ ಆ ಕಾಣದ ದೇವರಲ್ಲಿ, ಕೈ ಮುಗಿದು ಬೇಡುವೆ ನಿನ್ನ ನಗುವಿಗೆ ಯಾರು ದೃಷ್ಟಿ ಸೋಕದಿರಲಿ ಮನದಾಳದ ಹರುಷದಲ್ಲಿ❤

- ಚುಕ್ಕಿ

10 Feb 2019, 07:53 am

ಹನಿಯ ಬೇಟೆ ಕಣ್ಣಿನಂಚಿಗೆ!



ಉದ್ಯಾನ ನಗರಿಯ ಒಳಗುಟ್ಟು
ಯಾರು ಅರಿತಿಹರು?
ಉಜ್ಜುಗದ ಒಲವಲ್ಲಿ ಕಾಲ್ಕಿತ್ತು
ಓಡುವ ಜಗದಲ್ಲಿ!!

ರಾತ್ರಿ ಮಲಗಿದ ವೇಳೆಯಲ್ಲಿ
ಕಿರುಚುವ ಕತ್ತಲ ಸದ್ದು ಎಲ್ಲಿ ಬಿದ್ದೀತು! ಕನಸಲ್ಲಿ ಸಿರಿತನದ ನಾಳೆಗಳ ಹೊತ್ತು ಮಲಗಿದ ಕಿವಿಗಳಿಗೆ!!

ಕಪ್ಪು ನೆರಳು ದೇಹವ ಮರೆಮಾಡಿ ತಾನು ಮೆರೆದಾಗ, ಅಳುತ ಜಾರಿತು ಕಣ್ಣ ಹನಿಯೂ ಜೀವಂತ ಶವದ ಮೇಲಿಂದ ಪಾದದಡಿಗೆ!!

ಬೇಟೆಗಾರನ ಬಲೆಗೆ ಬಿದ್ದಿತು
ಶಿಖಾರಿಯೊಂದು ಶಿರಬಾಗಿ, ಶರಣಾಗಿ ಬಡತನದ ಹಸಿವಿಗೆ ಬಲಿಯಾಗಿ, ತನ್ನ ತನವ ಮರೆತು ಹೋಗಿ ನಿರ್ಜಿವ ಕಾಗದದ ತುಣುಕುಗಳಿಗೆ ಮಾರುಹೋಗಿ.

- ಚುಕ್ಕಿ

10 Feb 2019, 07:51 am

ನೋವಲ್ಲೂ ನಿನದೆ ನೆನಪು

ನೋವಲ್ಲೂ ನಲಿವಲ್ಲೂ ಇಡೀ ದಿನ
ಹಂಬಲಿಸಿದೆ ಮನ
ಕಾಡುತಿಹ ನೋವಿಗೆ ನೆನಪೆಂಬ
ಪ್ರಶ್ನೆಗಳ ಸಮಾಗಮ!

ನಿನ್ನೊಲವ ಬಯಸುವ ಮನಸ್ಸಿಂದು
ನಿನ್ನನ್ನೆ ನೆನೆದು ಕುಳಿತಿದೆಯಿಂದು
ಮನಸ್ಸಿನಾ ಕನಸೆಲ್ಲವು
ಕಣ್ಣಲ್ಲೆ ನೀರಾಯಿತು ಇಂದು
ಒರೆಸುವಾ ಸಂತೈಸುವಾ ಮನಸ್ಸು
ದೂರವಾಯಿತು...

ಜೊತೆಯಿದ್ದರು, ಇರದಂತೆ ನಟಿಸಿದರು
ಕಾಣುವಾ ಕಲ್ಪನೆ ನಿನದೊಂದೆನೆ
ಒಪ್ಪುಗೆಯಾ ಅಪ್ಪುಗೆಯಾ ಕನಸ್ಸೆಲ್ಲಾ
ಹೇಳಲು ಆಗದ ವೇದನೆ
ಜೊತೆಯಾಗುವುದು,ಒಂದಾಗುವುದು
ಮನಸ್ಸಿನ ಎಲ್ಲಾ ಕಲ್ಪನೆ...

- Harini (Hani)

05 Feb 2019, 12:04 am

ಉಳಿಸಿ ಬಿಡು ಒಮ್ಮೆ...

ಉಳಿಸಿ ಬಿಡು ನನ್ನನ್ನೊಮ್ಮೆ ನಿನ್ನ ರಾತ್ರಿಯ ಕನಸುಗಳಲ್ಲಿ ನನಸಾಗಿ.

ಉಳಿಸಿ ಬಿಡು ನನ್ನನ್ನೊಮ್ಮೆ
ಹಗಲಿನಲ್ಲಿನ ತೀರದ ವಿರಹಕೆ ರಾತ್ರಿಯಾಗಿ.

ಉಳಿಸಿ ಬಿಡು ನನ್ನನ್ನೊಮ್ಮೆ ಮನದ ಹಾಳೆಯ ಮೇಲೆ ಬಣ್ಣದ ಅಕ್ಷರವಾಗಿ.

ಉಳಿಸಿ ಬಿಡು ನನ್ನನ್ನೊಮ್ಮೆ
ಮನೆಯ ಹೊಸ್ತಿಲ ಮೇಲಿನ ಮಾಸದ ಅರಿಶಿನವಾಗಿ.

ಉಳಿಸಿ ಬಿಡು ನನ್ನನ್ನೊಮ್ಮೆ
ಬಿಸಿ ಹಾಲಿನ ಮೇಲೆ ಮೃಧು ಕೆನೆಯಾಗಿ.

ಉಳಿಸಿ ಬಿಡು ನನ್ನನ್ನೊಮ್ಮೆ
ಒಲವ ದಾಹಕ್ಕೆ ನೀರಾಗಿ, ನಿನ್ನ ಮುದ್ದಾದ ನಗುವಿನ ಹಿಂದೆ ಕಾರಣವಾಗಿ.

ಉಳಿಸಿ ಬಿಡು ನನ್ನನ್ನೊಮ್ಮೆ ನಿನ್ನಲ್ಲಿ ನೀನಾಗಿ❤

- ಚುಕ್ಕಿ

03 Feb 2019, 03:01 pm

ಪಿಸುಮಾತು

ಮಾತಿನಲ್ಲಿ ಮೌನ
ಆದರೆ ಇದರಲ್ಲೂ್ಂಟು
ಭಾವ, ನಂಬಿಕೆ, ಸನ್ನೆ, ಗೌಪ್ಯತೆ ಹಾಗೂ ಸಂಕೀಪ್ಷತೆ!

ಈ ಮೌನಮಾತು ತಲುಪಿ, ಸಂಚಲಿಸಿ
ಶಬ್ದಕೋಶ ತಡಕಿ, ಅರ್ಥೈಸಿ,
ತನು ಮನ ದರಿಸಿ ನರನಾಡಿಗಳಲ್ಲಿ ಆವರಿಸಿ
ಪ್ರತಿಬಿಂಬಿಸುವಲ್ಲಿ ಯಶಸ್ವಿ!

- ಮದುರ

- ಮದನ್

02 Feb 2019, 06:32 am

ತಿಂಗಳ ಚಂದ್ರನ

ತಿಂಗಳ ಚಂದ್ರನ
ಬೆಳ್ಳಿಯ ಬಟ್ಟಲು
ಮಮತೆಯ ತುತ್ತನ್ನು
ಕಂದಗೆ ನೀಡಲು!!

ಮುಗಿಲನು ಏರಲು
ಬೆಳದಿಂಗಳ ಮೆಟ್ಟಿಲು
ತಾರೆಯ ಜೊತೆಯಲಿ
ಕಂದನು ಆಡಲು!!

ಮಿಂಚಿನ ಬಳ್ಳಿಯು
ತೊಟ್ಟಿಲ ಕಟ್ಟಲು
ಮೋಡದ ಹಾಸಿಗೆ
ಕಂದಗೆ ಮೀಸಲು!!

ತಂಗಾಳಿಯು ಬೀಸುತ
ಜೋಗುಳವ ಹಾಡಲು
ಚೆಂದದ ಸ್ವಪ್ನವು
ಕಂದನು ವಿರಮಿಸಲು!!

- ಪಿ.ಜಿ.ಜ್ಯೋತಿ

31 Jan 2019, 07:15 pm

ಕಣ್ಣಳತೆಯ ದೂರದಲ್ಲಿ

ಕಣ್ಣಳತೆಯ ದೂರದಲ್ಲಿ
ನಾ ಬಂದು ನಿಂತರೂನೂ
ನೋಡಲಾರದೇ ನನ್ನ ನೀನು
ಮರೆಮಾಚುವುದು ಏನನು!!

ಮಾಯದ ಪರದೆಯೊಂದು
ಮುಸುಕಿರಲು ನಿನ್ನನು
ಕಂಡರೂ ಕಾಣದಂತೆ ಇರುವ
ನಟನೆಯೂ ನಿನ್ನದೇ!!

ಪ್ರೀತಿಯ ಆಳಕೆ ಇಳಿದು
ಸಂಭ್ರಮಿಸುತಿರಲು ನಾನು
ನೆನಪು ಅಳಿಸಿದಂತೆ ನಟಿಸಿ
ತೊರೆದೆಯಾ ನನ್ನನು ನೀನು!!

ಯಾವ ತಪ್ಪಿಗಾಗಿ ಈ ಶಿಕ್ಷೆ
ಮರಳಿ ನೀಡು ಪ್ರೀತಿಯ ಭಿಕ್ಷೆ
ಪರದೆ ಸರಿಸಿ ಒಮ್ಮೆ ನೋಡು
ಕಾದಿರುವೆ ನಿನಗಾಗಿ ನಾನು!!

- ಪಿ.ಜಿ.ಜ್ಯೋತಿ

31 Jan 2019, 07:04 pm

ಪ್ರೇಮ ಎಂಬ ಕಣ್ಣು

ಪ್ರೇಮ ಎಂಬ ಕಣ್ಗಳೆರಡು
ರೆಪ್ಪೆ ಅದಕೆ ಕಾವಲು!!
ಕಣ್ಣ ಅಪ್ಪಿ ಕಾಯುತ್ತಿದ್ದರೂ
ಮನದ ನೋವ ಅರಿಯದು!!

ಬೀಸಿ ಬರುವ ತಂಪು ಗಾಳಿ
ನಿನ್ನ ನೆನಪ ತರುವುದು!!
ಉಕ್ಕಿ ಬರುವ ಕಣ್ಣ ನೀರ
ರೆಪ್ಪೆ ತಾನು ತಡೆಯದು!!

ಕಣ್ಣ ನೀರು ಕೆನ್ನೆ ಮೇಲೇ
ಹರಿದು ಕೊರಳ ಸೇರಿತು!!
ಕೊರಳಿನಿಂದ ಎದೆಗೆ ಜಾರಿ
ಮನದ ನೋವ ಕೇಳಿತು!!

ಮಿಡಿಯುತಿರುವ ಹೃದಯವು
ನಿನ್ನ ಹೆಸರು ನುಡಿಯಿತು!!
ನೀನು ಇರದೆ ಉಳಿಯಲಾರೆ
ಎಂಬ ಸತ್ಯವ ತಿಳಿಸಿತು!!

ನೀನು ಒಂದು ನೆನಪು ಮಾತ್ರ
ಎಂಬುದೇ ಇಂದು ಸತ್ಯವು!!
ಮರೆಯಬೇಕು ಅಂದರೂನೂ
ನಿನ್ನ ನೆನೆಯುವೆ ನಿತ್ಯವೂ!!

- ಪಿ.ಜಿ.ಜ್ಯೋತಿ

31 Jan 2019, 03:16 pm

ದೇಹವು ಬೇಡಿದೆ

ತಂಪು ಗಾಳಿಯೇ
ನೀ ಉಸಿರ ಮಾಯೆಯೇ
ನೀಡು ಉಸಿರನು
ಜಡ ದೇಹವು‌ ಇಲ್ಲಿದೇ!!

ನನ್ನಯ ಕಾಯವು
ಅದು ನನ್ನನು ಕಾಯದೇ
ನನ್ನನೇ ತೊರೆಯುವ
ಮನಸನು ಮಾಡಿದೆ!!

ದಾರಿಯು ಕಾಣದಂತೆ
ಇರುಳು ಕವಿದಿರುವಾಗ
ಬೆಳಕ ತೋರಲು ನನಗೆ
ಹಣತೆಯೂ ದೊರೆಯದೀಗ!!

ಕಣ್ಣನು ಮುಚ್ಚಿ
ನಾ ಸುಮ್ಮನೇ ಮಲಗಲು
ಅರಿಯದೇ ಬಂದರು
ನನ್ನ ಪ್ರಾಣವ ಒಯ್ದರು!!

ಪ್ರಾಣವೇ ಇಲ್ಲದೇ
ಜಡ ದೇಹವು ಮಲಗಿದೆ
ಮರು ಪ್ರಾಣದ ಭಿಕ್ಷಯ
ಈ ದೇಹವು ಬೇಡಿದೆ!!

- ಪಿ.ಜಿ.ಜ್ಯೋತಿ

31 Jan 2019, 03:12 pm