ಅವಳಿ ಮಾವಿನ ಮರಕೆ
ಅವಳಿ ಕಾಯಿಯ ಟೊಂಗೆ!!
ಅವಳಿ ಕಾಯಿಯ ಟೊಂಗೆಗೆ
ಅವಳಿ ಹಕ್ಕಿಯ ಗೂಡು!!
ಅವಳಿ ಹಕ್ಕಿಯ ಗೂಡಲಿ
ಅವಳಿ ಪುಟ್ಟ ಮರಿಯು!!
ಅವಳಿ ಪುಟ್ಟ ಮರಿಯದು
ಅವಳಿ ಚಿಲಿ ಪಿಲಿ ಹಾಡು!!
ಅವಳಿ ಚಿಲಿ ಪಿಲಿ ಹಾಡದು
ಅವಳಿ ಅಳಿಯದದೋ!!
ಕಾರಿರುಳ ಕಾದಂಬರಿಯೊಂದ ಬರಿಯಬೇಕಿದೆ ನಿದ್ದೆ
ಮಂಪರಿನಲ್ಲಿ ನಿನ್ನ ನೆನಪುಗಳ ತಡೆ ತಡೆದು ನಿಲ್ಲಿಸಿ ನವಿರಿನೊಂದಿಗೆ, ಸಹಕರಿಸುವೆಯಾ ಬೆವೆತ ಅಂಗೈಯ
ನೋವ ಆಲಿಸಿ ನಿನ್ನ ಬೆರಳ ಸೇರಿಸಿ.
ನೂರಾರು ವರ್ಷಗಳಿಂದ ಆಡಬೇಕೆನಿಸಿದೆ
ಸಾವಿರಾರು ಮಾತು ತಾರೆಗಳ ತವರಲ್ಲಿ ತಂಪಾಗಿ
ನಿದ್ರಿಸುತ್ತಿವೆ, ನಿನ್ನ ಕಂಡ ಕೂಡಲೇ ಸುಮ್ಮನಾಗಿ
ನೀ ಅರಿಯುವೆ ಎಂದು ನನ್ನ ಮೌನವಾಗಿ.
ನಗುವಿಗೆ ಹೊಸದಾದ ಪರಿಚಯ ಹೃದಯಗಳ ಸಂದೇಶ ವಿನಿಮಯ, ಮಾತಿಲ್ಲ ಕಥೆಯಿಲ್ಲ ಹೇಳುವ ಆತುರವೂ ಇಲ್ಲ ,ಹೇಳದ ಕಾತುರವೂ ಇಲ್ಲ ನಿನ್ನೊಡನೆ ಕಳೆಯದ
ಕ್ಷಣಗಳ ಎಣಿಕೆಯೊಂದು ಬಿಟ್ಟು ಮನಕೆ.
ಒಮ್ಮೊಮ್ಮೆ ಕರಿಯುವಾಸೆ ಮತ್ತೊಮ್ಮೆ ಮರೆಯುವಾಸೆ, ಮಗದೊಮ್ಮೆ ಬೈಯುವಾಸೆ ಇತ್ತೀಚೆಗೆ ಬೈಯಿಸಿಕೊಳ್ಳುವಾಸೆ ಹೊಸದಾಗಿ ಕಿತ್ತಾಡುವಾಸೆ ಹಳೆಯ ಜಗಳ ಮರೆಸುವಾಸೆ ನಿನ್ನೊಡನೆ ಸೇರಿ ಒಲವೇ..
ಬೇಡವೆಂದು ಬಿಡಿಸಿಕೊಳ್ಳುವ ಆಸೆ ಎಲ್ಲಿಯೂ ಬಿಡದಂತೆ ಕಟ್ಟಿ ಹಾಕುವ ಆಸೆ, ಮುದ್ದಾಗಿ ಮುದ್ದಾಡುವ ಆಸೆ ಕಿರು ಕೋಪದಿ ಚಿರಾಡುವಾಸೆ..
ಜೊತೆಗೊಂದಿಷ್ಟು ದೂರ ನಡೆಯುವಾಸೆ ನಡೆ ನಡೆದು ಸುಮ್ಮನೆ ನಿನ್ನ ನೋಡುತ್ತಾ ನಿಲ್ಲುವಾಸೆ, ನೀ ನನ್ನ ಕರೆದ ಕ್ಷಣ ಓಡಿ ಬಂದು ಬಿಗಿದಪ್ಪಿ ಅಳುವ ಆಸೆ ನಿನ್ನ ಕಣ್ಣಲ್ಲಿ ನನ್ನ ನೋಡಿ ನಗುವ ಆಸೆ ಮನವೇ..
ನೆನ್ನೆ ಇರದಂತ ಮೊನ್ನೆ ಇರದಂತ ಹೊಸ ಅನುಭವ,
ಏತಕೋ ಈ ಕ್ಷಣ ಬಚ್ಚಿಟ್ಟ ಆಸೆಗಳು ಅರಳಿದವು ಹೂದೋಟವಾಗಿ.
ನೀ ಬಿಟ್ಟು ಹೋದ ಮೇಲೆ ನೀ ಕೊಡಿಸಿದ ಗಡಿಯಾರವನ್ನು ಕಿತ್ತೋಸೆಯಬೇಕೆನಿಸಿತ್ತು. ಆದರೆ ಸಮಯ ಪಾಠ ಕಲಿಸಿತ್ತು. ಪಾಠ ಕಲಿಸಿದ ಆ ಸಮಯಕ್ಕೆ ಬೆಲೆ ಕೊಡಬೇಕೆಂದು ಆ ಗಡಿಯಾರವನ್ನ ನನ್ನಲ್ಲಿಯೇ ಉಳಿಸಿಕೊಂಡಿದ್ದೇನೆ
ಬೀಜವಾಗಿ ಭೂಮಿಗೆ ಬಿದ್ದು
ಅರಳೆಯಾಗಿ ಬೆಳೆದು
ಹತ್ತಿಯಾಗಿ,ನೂಲಾಗಿ
ಪರಿವರ್ತನೆಯ ಗಾಳಿಯಲ್ಲಿ
ಮಾರುಕಟ್ಟೆಯ ದೂಳಿನಲ್ಲಿ
ದಳ್ಳಾಳಿಗಳ ಹಗ್ಗ-ಜಗ್ಗಾಟದಲ್ಲಿ
ನಲುಗಿ ಸೇರುವೆನು ಮಗ್ಗದ ಮಡಿಲಲ್ಲಿ
ಹಲವು ವರ್ಣಗಳ ತಾಳಿ
ಸಾಗುವೆನು ವರ್ತಕನ ಬೆನ್ನೇರಿ
ದರಗಳೇರಿಳಿತದ ತೇರನೇರಿ
ಸ್ಥಿರನಾಗುವೆ ಗಿರಾಕಿಗಳ ಸೇರಿ
ಮುಗಿಸುವೇ ನನ್ನೀ ಅಲೆದಾಟದ ದಾರಿ
ಅವಳು ಹಾಗಿದ್ದಳು ಸ್ವಪ್ನಲೋಕದ ಸುಂದರಿಯೇನಲ್ಲ ಆದರೆ ತನ್ನ ಚೆಲುವನ್ನೆಲ್ಲ ಆ ಕಣ್ಣಗಳಲ್ಲೇ ತುಂಬಿಕೊಂಡಿದ್ದಳು
ತನಷ್ಟಕ್ಕೆ ತಾನೇ ಮಾತಾಡಿಕೊಂಡ೦ತೆ
ತನಗೆ ತಾನೇ ತಾನಾಗಿದ್ದವಳು ಬಾನಲ್ಲಿಯ
ಒಂಟಿ ಹಕ್ಕಿಯಂತೆ.
ನನ್ನ ಅಪ್ರಬುದ್ಧ ಪ್ರೀತಿಗೆ, ಅಸ೦ಖ್ಯ ಕಲ್ಪನೆಗಳಿಗೆ ಕಾರಣಳಾದವಳು ಅದ್ಭುತವಾದೊಂದು
ಬಾವ ಲಹರಿಗೆ ಸ್ಫೂರ್ತಿಯಾಗಿದ್ದಳು
ನನ್ನ ಅತಿರೇಕದ ವತ೯ನೆಗೆ ತುಂಟಾಟಗಳಿಗೆ ಅವಳ ಉತ್ತರ! ..,ನಿರಂತರ ಮೌನದ....ನಿರುತ್ತರ
ಅದು ಯಾವ ಸೃಷ್ಟಿಯ ಮಾಯೆಯೋ?ಸಹಜ ಅನುಭೂತಿಯೋ?
ಕತ್ತಲ ಕೂಪಕ್ಕೆ ತಳ್ಳುವವರ ನಡುವಿನಿಂದ ಕೈ ಹಿಡಿದು ಎಳೆದು ತಂದು ಬದುಕಿನ ಹಲವು ಆಯ್ಕೆಗಳ ಕವಲುದಾರಿಯಲ್ಲಿ ನಿಲ್ಲಿಸಿ ಹೋಗಿದ್ದಳು
ಅಸಾಮಾನ್ಯಳೆeನಲ್ಲ ಅತೀ ಸಾಧಾರಣ ಹುಡುಗಿ
ಆದರೆ ಅವಳ ಚೆಲುವನ್ನೆಲ್ಲ ಅವಳ ಕಣ್ಣುಗಳಲ್ಲೇ ಕಂಡಿದ್ದೆನು
ಕೆನೆಹಾಲ ಬಣ್ಣದವಳೇನಲ್ಲ ಅರೆಗಪ್ಪು ಬಣ್ಣದ ಹುಡುಗಿ
ನೆನಪಾದಳಷ್ಟೇ ಮರೆಯುವ ಮುನ್ನ !
೨
ಸಿದ್ದಾಥ೯ ...........
ಕಾಠಿಣ್ಯತೆಯ ಪರಮಾವಧಿ ಅನುಸರಿಸಿ
ಮನೋನಿಗ್ರಹಮಾಡಿ ಮೋಕ್ಷ ಪಡೆದವರಲ್ಲಿ ಆನೇಕರು
ಇವನು ಅವರನ್ನು ಅನುಕರಸಿ ಮೋಕ್ಷ ಪಡೆಯಲೆತ್ನಿಸಿ ಸೋತಿದ್ದನು
ಮತ್ತೆ
ಜೀವನ ಸಾಥ೯ಕತೆಯ ರಹಸ್ಯ ಜ್ಞಾನಾನ್ವೇಷಣೆಯ ಹಿಂದೆ ಬಿದ್ದು ಮಧ್ಯೆ ದಾರಿಯಲ್ಲೆಲ್ಲೋ ಏನೂ ಅಥ೯ವಾಗದೆ ಬದುಕು ನಿರಥ೯ಕವೆನಿಸಿ ನಿರಾಸೆಗೊಂಡು ಏನೂ ಸಾಧಿಸದ ಸಾಧಕನ ಮನಃಸ್ಥಿತಿಯಲ್ಲಿದ್ದನು
ಆಗ ಎಲ್ಲರನ್ನು ತೊರೆದು ಎಲ್ಲವನ್ನು ತ್ಯಜಿಸಿ ನಡೆದವನು
ಈಗ ಪ್ರಕೃತಿಯು ನಿಯಮ ಮೀರದೆ
ಮಾನವ ಸಹಜ ಮನೋಭಾವಗಳಿಗೆ ಹಿಂತಿರುಗಿ
ಎಲ್ಲರಲ್ಲಿದ್ದುಕೊಂಡು ಎಲ್ಲರೊಳೊಂದಾಗಿ
ಎಲ್ಲರ ಜೊತೆಯಾಗಿ ಎಲ್ಲರನ್ನೋಳಗೊಂಡ ಸಮಬಾಳ್ವೆಯ ಸಮಸಮಾಜವೊಂದನ್ನು ಸಿೃಷ್ಠಿಸಿ ನಿಜದ ಜ್ಞಾನ ಪಡೆದು ಬದುಕಿನ ಸಾಥ೯ಕತೆಯನ್ನು ಕಂಡುಕೊಂಡನು
ಎಲ್ಲರ ಪ್ರಶಾಂತ ಪ್ರಾಂಜಲ ಮನಸ್ಸಿನ
ಪ್ರತೀಕವಾಗಿರಿವವನು
ತನ್ನ ಆ ನಿಮ೯ಲ ಸ್ನಿಗ್ಧ ಮುಗಳ್ನಗೆಯಿಂದಲೇ ಎಲ್ಲರನ್ನು ಗೆದ್ದಿರುವವನು
ನನ್ನ ಜಗತ್ತು ನನ್ನೊಂದಿಗೆ ಸಿೃಷ್ಠಿಯಾಗಿ ನನ್ನೊಂದಿಗೆ ಕೊನೆಯಾಗುವುದೆಂದು ನಂಬಿರುವ ನನ್ನನ್ನು
ತನ್ನ ನಿಗೂಢ ಪ್ರಶ್ನೆಗಳಿಂದ ಚಿಕ್ಕ೦ದಿನಿ೦ದಲೂ ಕಾಡುತ್ತಲೇ ಬಂದಿರುವನು ..........
ಒಕ್ಕೂರುಳ ಭಕ್ತಿಯ ಧ್ವನಿಗೆ
ಮುಕ್ಕೊಟಿ ದೇವರು ಗಟ್ಟಿ ಮಲಗಿ ಬಿಟ್ಟರೇನೊ...!?
ತಾಂಡವಾಡುತ್ತಿರುವ ಪವಿತ್ರ ಭೂಮಿಯಲ್ಲಿ
ಹುಳುಮನುಜನ ಹಗ್ಗಜಗ್ಗಾಟವ ನೋಡಿ ನಗುತಿರುವರೇನೊ??
ಭಯವೇ ಇಲ್ಲದ ಭಕ್ತಿ ನಿನಗೇಕೆ ಇನ್ನು
ಸಾಕು ಮಾಡು ಭಗವಂತ ನಿನ್ನ ಮೌನವನ್ನು
ಇನ್ನಾದರೂ ಬಿಟ್ಟು ಬಿಡು ನಿನ್ನ ಆ ಮೂರನೆ ಕಣ್ಣು.
ಸರ್ವನಾಶವಾಗಿ ಹೋಗಲಿ ಭಕ್ತಿ ಇಲ್ಲದ ಈ ಮಣ್ಣು.