ಹಣೆಯಲ್ಲಿ ಮಿನುಗುವ ಸಿಂಧೂರ ತಿಲಕ,
ಮೊಗದಲ್ಲಿ ಕಂಗೊಳಿಸೊ ಸಂಸ್ಕೃತಿಯ ಬೆಳಕು.
ಸೀರೆಯುಟ್ಟು ಕಂಗೊಳಿಸುವ ಶೃಂಗಾರದ ಮೂರ್ತಿ,
ಕನ್ನಡದ ನೆಲದಲಿ ಮೆರೆಯುವ ಸದ್ಗುಣದ ಕೀರ್ತಿ.
ನುಡಿಯಲ್ಲಿ ಸವಿಯಾದ ಕನ್ನಡದ ಬನಿ,
ಹೃದಯದಲ್ಲಿ ಮಿಡಿಯುವ ಪ್ರೀತಿಯ ಧನಿ.
ಸಂಪ್ರದಾಯದ ಹಾದಿಯಲ್ಲಿ ನಡೆಯುವ ಚಲವು,
ತಾಯ್ನಾಡ ಗೌರವವ ಹೆಚ್ಚಿಸುವ ಗೆಲವು.
ಹಿರಿಯರಿಗೆ ನೀಡುವಳು ಗೌರವದ ವಂದನೆ,
ಸಂಸ್ಕಾರವೇ ಇವಳ ಜೀವನದ ಚಂದನೆ.
ಕನ್ನಡದ ಸಂಸ್ಕೃತಿಯ ಉಸಿರಾಗಿಸಿಕೊಂಡು,
ಬಾಳುವಳು ಸದಾ ನಗೆಮುಖವ ಹೊತ್ತುಕೊಂಡು!
ಹಸಿರ ಹೊದಿಕೆಯ ಉಟ್ಟು ನಿಂತಿದೆ ಸಹ್ಯಾದ್ರಿಯ ಸಾಲು,
ಝರಿ-ನದಿಗಳ ನಾದದೊಳು ಹರಿವುದಿಲ್ಲಿ ಹಾಲು!
ಜೋಗದ ಜಲಪಾತದ ಭೋರ್ಗೆರೆವ ಅಂದ,
ಬಾನಿಗೇರಿ ನಿಂತಿದೆ ಮುಗಿಲ ಸಾಲಿನ ತಂದ.
ಕಾಫಿ ತೋಟದ ಕಂಪು, ಕೊಡಗಿನ ಹಿಮದ ಹನಿ,
ಕಾಡಿನಲಿ ಮಾರ್ದನಿಸುವ ಹಕ್ಕಿಗಳ ಇಂಚರ ಧ್ವನಿ.
ಕರಾವಳಿಯ ಅಲೆಗಳು ತೀಡುತಿವೆ ಪಾದವನ್ನು,
ಕಂಡು ಮೈಮರೆಯುವುದು ಕನ್ನಡಿಗನ ಕಣ್ಣು!
ಗಂಧದ ಗುಡಿಯಲಿ ಹೂವಿನ ಪರಿಮಳದ ಘಮಲು,
ಪ್ರಕೃತಿ ಮಾತೆಯ ಮಡಿಲಲಿ ಕಳೆವುದು ಪ್ರತಿಯೊಂದು ಹಗಲು.
ಬಂಗಾರದ ಭೂಮಿ ಇದು, ಸಿರಿಗನ್ನಡದ ಸೀಮೆ,
ಈ ನಿಸರ್ಗದ ಸೌಂದರ್ಯವೇ ನಮ್ಮೆಲ್ಲರ ಹಿರಿಮೆ!
- Chaitra Patil
02 Aug 2026, 12:05 pm
ಏಳೇಳು ಜನ್ಮಕೂ ನಾ
ಆಗಬೇಕು ನಿನಗೆ ಕೂಸೆ ?
ಅನ್ನೋದೇ ಈ ಬಡಪಾಯಿಯ
ಏಳೇಳು ಜನ್ಮದ ಕೊನೆಯ ಆಸೆ ?
ತಾಯೇ ನೀ ತಂದೆ ನನ್ನ ಜಗಕ್ಕೆ ?
ನಾ ಕೊಡುವೆನು ಪ್ರೀತಿಯ ?ಉಡುಗರೆ
ನೀ ಇರುವೆಯ ನನ್ನ ಜಗದೊಳಗೆ
ಪ್ರೀತಿಸುವೆ ಉಸಿರು ಇರುವ ವರೆಗೆ ಅಮ್ಮ ❤️
ನಮ್ಮ ನಾಡ ಕನ್ನಡ ನುಡಿ ಅಂದವೋ
ನಮ್ಮ ನಾಡ ಗುಡಿ ಶಿಲ್ಪಕಲೇ ಅಂದವೋ
ನಮ್ಮ ನಾಡ ಚಲುವ ನದಿಗಳ ಚಂದವೋ
ನಮ್ಮ ನುಡಿ ಸಿರಿ ನಮ್ಮ ವನಸಿರಿ...
ಕರುನಾಡ ಕಡಲುತೀರ... ಸುಂದರ ತಾಣವೋ
ರನ್ನ ಪೊನ್ನ ಕವಿಕಾಳಿದಾಸ ರಚಿಸಿದ ಕಾವ್ಯದ
ಹೊನ್ನನೂಡಿಯೇ ಈ ಕನ್ನಡದ ಸಿರಿಯೇ
ನಮ್ಮ ನುಡಿ ಸೌಂದರ್ಯದ ಸವಿ ಪದದ
ಕನ್ನಡ ಕಸ್ತೂರಿ ಪರಿಮಳದ ಪದ್ಯದ ಪರಿಯೇ
ಕನ್ನಡವ ಕಣ್ಣು ರೆಪ್ಪೆಯ ಹಾಗೆ ಕಾಪಾಡೋ
ಕನ್ನಡ ಕಂದ ಹೊನ್ನುನೂಡಿಗೆ ಹೊರಾಡೋ
ಕನ್ನಡದ ಕಂದ ಎಲ್ಲರ ಮನಸಿಗೆ ಚಂದ ಆನಂದ
ಅಕ್ಕ ಅಣ್ಣ ನುಡಿಗಳು ಈ ನಾಡಿನ ನುಡಿ ಅಂದ
ಈ ನಾಡ ಗುಡಿಯಲಿ ಕನ್ನಡತನವೇ ಶ್ರೀಗಂಧ
ಹೊಸ ಗಾಯನ... ಹಾಡುವ ಸಂಭ್ರಮ...
ಹೊಸ ಜೀವನ ನಿಡೆಂದು ಬೇಡುವೆನು ಆ ದೇವನ
ಎಂದೆಂದೂ ನಿಡೆಂದು ಬೇಡುವೆನು ಆ ದೇವನ
ಸಂತೋಷವೇ ಬಾಳಲಿ, ಸಂಭ್ರಮವೇ ಬಾಳಲಿ
ಸಂಗೀತವೇ, ಸಂತಸವೇ ಶೃಂಗಾರವೇ ಬಾಳಲಿ
ಹೀಗೆ ನಗುವಿನಲಿ ತೆಲುತಲಿರಲಿ ನನ್ನ ಜೀವನ
ಹೀಗೆ ಸಾಗುತಿರಲಿ ನನ್ನ ಪ್ರೀತಿ ನನ್ನ ಪಯಣ
ಗರೀಬಿಚ್ಚಿ ಕುಣಿದ ನವಿಲು ಸಂತಸದ ಹಾಡಿದ ಕೋಗಿಲೆ
ಈ ಸುದಿನ ಈ ದಿನ ಹೀಗೆ ಇರಲೆಂದು ಬಾಳಲಿ..
ವಸಂತ ಮಾಸದ ಚಿಗುರಿದ ಗಿಡ ಮರ ಹೂ ಬಳ್ಳಿ
ಮಲ್ಲಿಗೆಹೂವೇ ತಾವರೆಹೂವೆ ಗುಲಾಬಿ ಹೂವೇ
ಎಂದೆಂದಿಗೂ ಸುಗoಧ ಪರಿಮಳ ಸುಸುತಲಿರಲಿ
ಎಲ್ಲವೂ ಚಂದವೇ... ಎಲ್ಲವೂ ಆನಂದವೇ...
ನನ್ನ ಬದುಕಲಿ ಎಲ್ಲಾ ಹೊಸತನವೇ...
ಆಕಾಶದಲಿ ನಕ್ಷತ್ರ ಮಿನುಗುವ ಚಂದಕ್ಕಿಂತ ಚಂದ
ಮೋಡದ ಮರೆಯಲಿ ತೆಲಿ ಬಂದ ಚಂದಿರ ಅಂದ
ಹಕ್ಕಿಗಳ ಚಿಲಿಪಿಲಿ, ನದಿಗಳ ಕಲರವೇ ಚಂದವೇ
ಈ ನಾಡು ಶ್ರೀಗಂಧ ಈ ನಾಡ ಸೌಂಗಂದ
ಎಲ್ಲೆಲ್ಲೂ ಹರಡಲಿ ಸುಮಧುರ ಸುವಾಸನೆ...