Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಜಾತಿ ಮಾಯೇ ಅತಿಯಾಯ್ತೇ

ಕಮ್ಮಾರ ಬೆಳೆದ ಕಾಳು ಅದೇ,
ಕುರುಬ ಬೆಳೆದರೂ ಬೆಳೆವುದೂ  ಅದೇ ಕಾಳು,
ಬೆಳೆದ ಕಾಳಿಗೇನು ಗೋತ್ತು ಬೆಳದವ ಯಾರೆಂದು?
ಅದಕ್ಕೆ ಗೊತ್ತಿರುವುದು ಬೇಯುವುದು,
ಬೆಂದು, ಹಸಿವ ನೀಗಿಸುವುದು,
ಇದನ್ನು ಅರಿಯೇ ಮತವೇ ಮನುಜ ಮತ,
ಈ ಚಿಂತನೆಯೇ ಜಗಕ್ಕೆ ಹಿತ.


  ..........   

- Harshavardhana

04 Jun 2018, 09:14 pm

ನೀನೆ

ಕರೆದಲ್ಲಿಗೆ ಬರುವೆನೆಂದು ಸದರ
ತಿಳಿಯಬೇಡ
ಬರುವ ಜರೂರ್ ಇದೆ
ನೀ ನನ್ನ ಪ್ರೀತಿಯೆಂದು
ಅರ್ಥವಿಲ್ಲದ ಮೌನ ಬದ್ಧತೆ
ಇಲ್ಲದ ನುಡಿಗಳು
ಅಸಂಬಧವಾಗಿವೆ
ಶುದ್ಧನಾಗು ಇಲ್ಲ ನಿಶಬ್ದನಾಗು ನಿಶಬ್ಧನಾಗು

- RaviThondgere

04 Jun 2018, 12:26 pm

ಹೃದಯಕ್ಕೆ ಕೊಳ್ಳಿ

ನನ್ನವಳ ತವರೂರು ಹುಬ್ಬಳ್ಳಿ'''--
ನನ್ನ ಮದುವೆಯಲ್ಲಿ ಕೊಟ್ಟಾಳ ಬಹಳ ಬಂಗಾರ ಬೆಳ್ಳಿ
ವರದಕ್ಷಿಣೆ ತೆಗೆದುಕೊಂಡ ಕಾರಣಕ್ಕಾಗಿ ನನ್ನ ದೂರ ತಳ್ಳಿ
ಇಟ್ಟಾಳ ನನ್ನ ಹೃದಯಕ್ಕೆ ಕೊಳ್ಳಿ***

- Prakash Angadi

03 Jun 2018, 04:28 pm

ಮನ ಸೆಳೆಯುತಿಹುದು..

ಮನ ಸೆಳೆಯುತಿಹುದು ಮಾಧವ ನಿನ್ನ ಮುರಳಿಗಾನವ ಕೇಳಿ, ಧ್ವನಿ ಮಾಧುರ್ಯತೆ ತಿಳಿಯಲು ಕೊಳಲ ಕೋರಳುಗಚ್ಚಿದ ನಿನ್ನ ತುಟಿಯ ಸವಿಯಲ್ಲಿ.

ಕಾರಣ ಕೇಳದಿರು ನೀನು ವಿವಿಧ ರಾಗಗಳ ಕೇಳಿ ಸವಿ ಮುತ್ತಿನ ಮಾಲೆ ಕಟ್ಟಿ ನಿನ್ನ ಕೊರಳಿಗೆ ನಸು ನಾಚಿ ಸಮರ್ಪಿಸಿದಲ್ಲಿ.

ಪರಿ ಪರಿ ಕುಸುಮಗಳ ಘಮವ ತುಂಬಿರುವೆಯಾ ನಿನ್ನ ಉಸಿರ ಸುಧೆಯಲ್ಲಿ ಕೂಗಿ ಕರೆಯುತಿವುದು ನನ್ನ ನೆರಳಡಿಯ ಮನಮೋಹಕ ರೂಪ ಬಂದು ಸೇರೆಂದು ನಿನ್ನಲ್ಲಿ.

ಬರಗಾಲ ಬಂದಿಹುವುದು ಸೇರಗ ಮಿಂಚಿಗೆ ನಿನ್ನ ಕೈಬೆರಳ ಸ್ಪರ್ಶ ಸೋಕದೇನೆ ಮುದುಡಿ ಮಲಗಿದ ತುಟಿಯ ನಗುವನು ಕೊಂಚ ದಯಮಾಡಿ ಎಬ್ಬಿಸು ನಿನ್ನ ಕಣ್ಣ ಸಹ್ನೆಯಲ್ಲಿ ತುಂಟ ಮಾಧವ.

ನನ್ನ ತನುವಿನೊಡೆಯ ಮನದ ಮಡಿಯ ಹೊಡೆದು ಸೇರಿರುವೆ, ಯಾವ ರೀತಿಯ ನ್ಯಾಯವಿದು ನನ್ನ ಮನಸ್ಸ ಕದ್ದು ನಿನ್ನಲ್ಲಿ ಬಚ್ಚಿಡುವುದು ಕೃಷ್ಣ❤

- ಚುಕ್ಕಿ

01 Jun 2018, 08:02 pm

ಪ್ರೀತಿಯ ಆಸೆ..........

ನಗುವಿನೊಳಗೆ ನಗುವೊಂದೆ
ಕಾಣುವೆ ಆಸೆ......‌‌‌‌.
ಪುಟ್ಟ ಮನದೊಳಗೆ
ಪುಟ್ಟದೊಂದು ಗೂಡು
ಕಟ್ಟುವ ಆಸೆ.....‌‌..
ಮನಸೊಳಗೆ ಮನಸೊಂದು
ಮನೆ ಮಾಡಿ ಆಡಿ ನಲಿಯುವ ಆಸೆ.......
ಆಕಾರವಿಲ್ಲದ ಆಸೆಗೆ ಅಂದವ ಕೊಟ್ಟು
ಸಿಂಗರಿಸಿ ನೋಡುವ ಆಸೆ.............
ಯಾರಿಲ್ಲದ ಆ ಉರಲ್ಲಿ ನನ್ನೊಡೆಯನ
ಆಸೆಯೊಂದೆ ಅರಿಯುವ ಆಸೆ...........
ಅವನ ನಗುವಲ್ಲಿ ಮುದ್ದಾದ ಮಗುವಂತೆ
ಆಡಿ ನಲಿಯುವ ಆಸೆ............
ಆಸೆಯ ಪ್ರೀತಿಯ ಗುರುತು.........

- ರಾಗಸಿರಿ....

01 Jun 2018, 02:43 pm

'ಕವನ' ಸಂಜಿವಿನಿ

ಕವನಗಳ ಬಯಸುತಿದೆ ನನ್ನ ಈ ಮನ
ಅರಿಯದೆ ಕನವರಿಸುತ್ತಿದೆ ಗಾಯದ ಹೃದಯ
ಸಂಜಿವಿನಿಯಂತೆ ಮುದ ನಿಡುವುದೆ
ಅ ನಿನ್ನ ಮನಸಿನ 'ಕವನ',,,,,,,,,,,,!!!!!!


ರಚನೆ :-
ಕನಸು.

- NatarajuN

31 May 2018, 10:40 pm

ಮನ್ನಿಸೇನಾ ಮನಸೇ....

ಏಕೋ ಪ್ರೀತಿಸುತ್ತಿದ್ದ ಹೃದಯ ಇಂದು ನನ್ನ ತೊರೆಯುತ್ತಿದೆ .
ನೀನೇ ಬೇಕು ,ನೀನೇ ಬೇಕು ಎಂದು ಹಟವಿಡಿದು ಕುಳಿತಿದೆ .

ಈ ಹೃದಯದ ಪ್ರತಿ ಬಡಿತಗಳಲ್ಲಿಯೂ ನಿನ್ನ ಹೆಸರನ್ನೇ ಸ್ಮರಿಸುತ್ತಿರುವೆ,
ನನ್ನ ಪ್ರತಿ ಉಸಿರಿನ ಕಣ ಕಣದಲ್ಲೂ ನಿನ್ನ ಪ್ರೀತಿಯೇ ತುಂಬಿದೆ ಕಣೋ .

ನೀನೇಕೋ ನನ್ನ ತೊರೆಯುವಾ ನಿರ್ದಾರವೇಕೋ ಮಾಡುತಲಿರುವೆ,

ಹುಡುಕುಬೇಡ ,ಹುಡುಕಿದಷ್ಟು ನಾ ಇನ್ನಷ್ಟು ದೂರ ದೂರಾ ಹೋಗುವೆ ಮತ್ತೆ ಬಾರದ ಲೋಕಕ್ಕೆ ...

ಮನ್ನಿಸೋ ಎನ್ನ ಮುದ್ದು ಮನಸೇ ,ಇನ್ನಷ್ಟು ನೋವ ಅನುಭವಿಸುವಷ್ಟು ಈ ಮನಸು ಶಕ್ತಿಯ ಒಂದಿಲ್ಲ ....


ಮನ್ನಿಸೋ ನನ್ನ ,ಇನೊಂದು ಜನ್ಮವೊಂದಿದರೆ ,ಆ ಜನ್ಮದಲ್ಲಿ ಆದರೂ ನಿನ್ನ ಪ್ರೀತಿಗೆ ಅರ್ಹಳಾಗಿರುವೆ ...

ಹುಚ್ಚು ಪ್ರೀತಿ ನನ್ನದು ಕಣೋ ಎಷ್ಟೋ ಹುಚ್ಚು ಕನಸ ,ಆಸೆಗಳ ಹೇಳ ಬಯಸಿದೆ ಆದರೆ ಎಲ್ಲ ಎಲ್ಲವೂ ಮಣ್ಣು ಪಾಲಾಯಿತು ...........


ನೀನೇ ನನ್ನ ಜೀವ ಎನ್ನುವಷ್ಟು ಪ್ರೀತಿಸಿದೆ ...ನೀ ನನ್ನ ಆರ್ತೈಸಿಕೊಳ್ಳಲು ಪ್ರಯತ್ನ ಕೂಡ ಮಾಡದೆ ಹೋದೆ



ಮನ್ನಿಸೆನ್ನಾ ಗೆಳೆಯಾ ನಾ ಮಾಡಿದ ತಪ್ಪೇನು ಎನ್ನುವುದು ಇಂದಿಗೂ ತಿಳಿಯಲಿಲ್ಲ ನಾ
ಮನ್ನಿಸು ನನ್ನ ಮುದ್ದು ಮನಸೇ


..

- Acchu love

31 May 2018, 04:58 pm

ನಾ ಹೇಗೆ ತಡೆಯಲಿ

ನಾ ಹೇಗೆ ತಡೆಯಲೀ
ನೀ ನನ್ನದೆಯ ಸೀಳಿಕೊಂಡು ಹೊರಟು ನಿಂತಿರಲು....
ಬೆಚ್ಚನೆಯ ನನ್ನೆದೆಯ ಗುಬ್ಬಚ್ಚಿ
ಗೂಡಲ್ಲಿ ನಿನ್ನ ಬಚ್ಚಿಟ್ಟುಕೊಂಡರೂ
ನನ್ನೊಲವು ನಿನಗೆ ವಿಷವಾದ ಮೇಲೆ
ಹುಸೀ ನಗೆಯ ಬೀರಿ ನೀ ಹೊರಟು
ನಿಂತಿರಲು ನಾ ಹೇಗೆ ತಡೆಯಲೀ......
ಮನವೆಂಬ ತಿಳೀ ನೀಲಿ ಕೊಳದೊಳಗೆ ಕಲ್ಲೊಂದು ಎಸೆದು
ಕೊಲ್ಲುವ ಕಟುಕನಿಗಿಂತಲೂ ನೀ
ಕಟುವಾದ ಮೇಲೆ
ನಾ ಹೇಗೆ ತಡೆಯಲೀ.......

- shruthi AS

31 May 2018, 01:28 am

ವಸಂತ ಗಳಿಗೆಯ ಹಾರೈಕೆ,,,

ನಿಸರ್ಗದ ಸಿರಿಯನ್ನೆ ಮೈದುಂಬಿ
ಮಲಗಿರುವ ತವರೂರಿನ ಒಡತಿಗೆ,,,,!!

ಮುಗುಳು ನಗೆಚೆಲ್ಲಿ ಎಲ್ಲರ ಮನಗೆಲ್ಲುವ
ನನ್ನ ನಲುಮೆಯ ಚಲುವೆಗೆ ,,,,,,,,!!!

ಮನದುಂಬಿ ಹೇಳುವೆ ನಾ ಎಂದೆಂದಿಗೂ
ನಗುತಿರು ಏ ನನ್ನ ಗೆಳತಿ,,,,!!

ಹಾರೈಸುವೆ ನಾನಿಂದು ಈ ಜಗಕೆ ನೀ ಕಾಲಿಟ್ಟ
ವಸಂತಗಳಿಗೆಯ ನೆನೆನೆನೆದು,,,,,!!!


@ ಕನಸು

- NatarajuN

31 May 2018, 12:39 am

ಮತ್ತೇ ಮುಂಗಾರು....!

ಬಸವಳಿದ ರೈತನ ಬದುಕಿಗೆ ಬರವಸೆಯ ಮಿಂಚು ಮುಂಗಾರು.‌‌..

ಸೋತಹ ಬುಜಗಳಿಗೆ ಆಸರೆಯ ಶಕ್ತಿ ಮುಂಗಾರು..

ಬತ್ತಿದ ಬೆಂಗಾಡಿಗೆ ತಂಪಿನ ಸಿಂಚನ ಮುಂಗಾರು..

ಒಣಗಿದ ಜಲಚರ ಗರಿಕೆಗೆ ಮರುಜನ್ಮ ಮುಂಗಾರು..

ಯಾವ ಸರ್ಕಾರವು ಕೊಡಲಾಗದ ಅಭಯ ಈ ಮುಂಗಾರು...

ದುರ್ಗೆಶಾ....!

- Duragesh

30 May 2018, 08:09 pm