Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪರಾರಿ

ನಗುತ್ತಿದ್ದಳೊಬ್ಬ ಚೆಲುವೆ ನನ್ನ ನೋಡಿ
ನನಗರಿಯದೆ ನಾನಾದೆ ಅವಳಿಗೆ ಮೋಡಿ
ಆದರೆ
ನನ್ನ ಹಿಂದೆ ನಿಂತಿದ್ದು ಅವನ ಗಂಡನೆಂದು ತಿಳಿದಾಗ
ನಾ ಹೋದೆ ಅಲ್ಲಿಂದ ಓಡಿ!

- ಪ್ರಿಯಾಂಕ

23 Nov 2017, 07:55 pm

ನಿಂದಿಸಿದರು ಎಲ್ಲ....

ಅಳದಿರು ಎಲ್ಲ ನಿಂದನೆಗಳ ಸಹಿಸಿ
ಬಂದಿರುವೆಯಲ್ಲ ನಿನ್ನ ನೋವ ಅರಿಯುವವರೂ
ಯಾರು ಇಲ್ಲ....
ಹುಟ್ಟಿದಾಗ ಅಯ್ಯೋ ಅಂದ ಮೊದಲ ಕೂಗೆ
ಇಲ್ಲಿಯವರೆಗು ತಂದಿದೆ ಯಲ್ಲ.....
ನೆರೆಹೊರೆಯವರು ನಿನ್ನ ನಿಂದಿಸಿದರಲ್ಲ
ಹೆಣ್ಣಾಯಿತೆ ಎಂದು.....
ಸಂಬಂದಿಕರು ಆಡಿಕೊಂಡರಲ್ಲ
ಆ ಮಾತು ಮನದಲ್ಲಿ ಬೇರುರಿದೆ....
ಮರವಾಗಿ ಬೆಳೆಯುತ್ತಲೆ ಇದೆ
ತಂದೆ ತಾಯಿಯರ ನೋವು ಕೂಡ ಒಂದು
ಹೆಣ್ಣೆಂದು......
ಮದುವೆಯ ಮೆರವಣಿಗೆಯಲ್ಲು
ನಿಂದನೆ ತಪ್ಪಲಿಲ್ಲ ನಿನಗೆ
ಗಂಡನ ಮನೆಯಲ್ಲು ಯಲ್ಲರು ನಿನ್ನ ನಿಂದಿಸುವವರೆ.....
ಎಲ್ಲಿಯು ತಪ್ಪಿದ್ದಲ ಈ ನಿಂದನೆ
ಒಂದು ಹೆಣ್ಣಿಗೆ ಅವಳ ಜೊತೆಗೆ
ಅಕ್ಕನಂತೆ ಹುಟ್ಟಿರುತ್ತದೆ
ಯಾರು ಅದನ್ನು ಬಿಡಿಸಲು ಸಾದ್ಯವಿಲ್ಲ
ಅವಳು ಸ್ಮಷಾಣ ಸೇರುವ ವರೆಗು....
ನಿಂದಿಸಿದರು ಎಲ್ಲ ಒಂದು ಹೆಣ್ಣು ಎಂದು...
ಆದರೆ ಅವರಿಗೆ ತಿಳಿದಿಲ್ಲ ಹೆಣ್ಣಿಲ್ಲದೆ ಜಗತ್ತೆ ಇಲ್ಲವೆಂದು....
ಎಲ್ಲ ನಿಂದನೆಗಳ ಸಹಿಸುವುದು ಅವಳಿಗೆ
ಎಲ್ಲರನ್ನು ಹೆದರಿಸುವ ಸಾಮರ್ಥ್ಯ ಇಲ್ಲವೆಂದಲ್ಲ
ಅದು ಅವಳ ಗುಣ ತಾಳ್ಮೆ.....
ನಿಂದನೆಗಳೆ ನಿನ್ನ ಒಡಹುಟ್ಟಕ್ಕ.....
ಕೊರಗದಿರು ಎಂದೆದಿಗು......

- ರಾಗಸಿರಿ....

23 Nov 2017, 05:37 pm

ಅಳು......‌

ಹುಟ್ಟ ಕ್ಷಣವೇ ಅತ್ತೇ
ನಡೆವಾಗ ಬಿದ್ದತ್ತೇ
ಅಮ್ಮನ ಬೈಗಳಿಂದತ್ತೇ
ಅಪ್ಪನೇಟಿನಿಂದತ್ತೇ
ಓದಿ,ಬರೆಯಲಾಗದತ್ತೇ
ಟೀಚರ್ ಒಡೆದರೆಂದತ್ತೇ
ಪರೀಕ್ಷೇ ಬಂತೆಂದತ್ತೇ
ಪಾಸಾಗಲಾರದತ್ತೇ
ಹುಡ್ಗೀ ಕೈಕೊಟ್ಲುಅಂತ್ತತ್ತೇ
ಬಾರಲ್ಲಿ ಜೇಬ್ಕಾಲಿಯಾಯ್ತಂತತ್ತೇ
ಕೆಲಸ ಸಿಗದೇ ಅತ್ತೇ
ಸಿಕ್ಕ ಕೆಲಸ ಮಾಡಲಾಗದತ್ತೇ
ತಲೆ ಬೋಳಾಗುತ್ತಿದೆಯಂತತ್ತೇ
ಬೊಜ್ಜು ಬಾಚಿತಬ್ಬಿದೆಯಂತತ್ತೇ
ನೋಡಲೋದ ಹುಡ್ಗಿಯಿಂದತ್ತೇ
ತಾಳಿಕಟ್ಟಿದೆಂಡತಿಯಿಂದೂ ಅತ್ತೇ
ಬೆಳೆಯಲಾಗದೆ ಅತ್ತೇ
ಬೆಳೆದವರ ನೋಡಿ ಅತ್ತೇ
ಇನ್ನೇನು ಸಾಯುತ್ತೇನಂದತ್ತೇ

ಸತ್ತಮೇಲೆ ನಿವತ್ತೀರಷ್ಟೇ......‌..........ಡಿ.ಸಿ

- ಡಿ.ಸಿ.ಎನ್@100%

23 Nov 2017, 04:00 pm

ಗೆಳತಿ

ಹುಟ್ಟಿದ್ದು ಜೋತೆಯಲ್ಲಿ
ಓದಿದ್ದು ಜೊತೆಯಲ್ಲಿ
ಬೆಳೆದಿದ್ದು ಜೊತೆಯಲ್ಲಿ
ಆ ನಿನ್ನ ಮುಖವು ಕಾಡುತ್ತದೆ
ಬರೆ ನೆನಪು ಆಗಿ ಹೋಗಿದೆ
ಆ ಬಾಲ್ಯದ ನೆನಪುಗಳು ಮಾತ್ರ ಓ ನನ್ನ ಗೆಳತಿ.

- ನೆನಪಿನ ನಾವಿಕ

23 Nov 2017, 03:48 pm

ಬಿಕ್ಷುಕರೇ..... ಭಕ್ಷಕರಲ್ಲ ನನ್ನವ್ವನಾಣೆ

ಕಾಣದು ಲೋಖದ ಜನರಕಣ್ಗೇ
ರಾತ್ರಿಯ ಮಂಚದ ಬಲೆಯ ಬೀಸುವುದು
ಕತ್ತಲೆ ರಾತ್ರಿಯಲಿ ಕದಿಯಲು ಕರೆಯುವುದು
ನನ್ನವರು, ಬಿಕ್ಷುಕರೇ ಭಕ್ಷಕರಲ್ಲ ನನ್ನವ್ವನಾಣೆ

ಹರಕಲು ಚಿಂದಿಯ ತೊಟ್ಟು
ಅಳುವ ಕಂದನ ಕಂಕಳಲ್ಲಿಟ್ಟು
ಸುಡುವ ಬಿಸಿಲಿನಲಿ, ಕಂದಮ್ಮನ
ಮೇಲೆ ಕರುಣೆಯ ಬಿಟ್ಟು
ಲಜ್ಜೆಗೆಟ್ಟಿ ಭಿಕ್ಷೆ ಬೇಡುವ ಜನ
ಆಡುವ ಕಂದನ ಅಳುವಿನಲ್ಲಿ
ಹಣ ಮಾಡಲು ಬಯಸುವ ಜನ
ಯಾರ ಜನ ? ಅವರ್ಯಾರ ಜನ ?

ನನ್ನ ಜನ ಅವರ ಮನ
ಯಾರ ಹೊಟ್ಟೆಯೂ ಹೊಡೆಯದೆ
ಬಿಕ್ಷೆ ಬೇಡಲೇಳುವುದು ಅವರ ತನ
ಅವರೇ ನನ್ನ ಜನ, ಸಿರಿವರ
ದಬ್ಬಾಳಿಕೆಗೆ ನಲಿಯದೇ, ಮೋಸಾಗ್ನಿಗೇ
ಮಡಿಯದೇ ಸಾವನೋವನುಂಡುತಿದೆ
ಅವರ ಮನ, ಅವರೇ ನನ್ನ ಜನ

- ಡಿ.ಸಿ.ಎನ್@100%

23 Nov 2017, 11:47 am

ಹೇ ಗೆಳೆಯನೇ....

ಹುಸಿ ಕೋಪವ ನೀ ತೋರದಿರು ಓ ಮುದ್ದು ಮೊಗದವನೇ..
ತುಂಟು ನಗೆಯ ಬೀರುತ್ತಿರು ಓ ಗುಳಿ ಕೆನ್ನೆಯ ಹುಡುಗನೇ..
ತೇಲಾಡಿದೆ ನನ್ನೀ ಮನ ನಿನ್ನ ನೆನೆದಾಗ..
ಹಿಡಿಯಲು ಆಗುತ್ತಿಲ್ಲ ನನ್ನೊಳಗಿನ ಭಾವನೆಗಳ..
ನಿನಗಂತಲೇ ಬರೆದಿರುವೆ ಈ ಅರ್ಥವಿಲ್ಲದ ಸಾಲುಗಳ..
ನೀನಿರದ ಈ ಬದುಕು ನೀರಿಲ್ಲದ ಕೆರೆಯಂತೆ..
ನಾ ಅದರೊಳಗೆ ನೀರಿಗಾಗಿ ಕಾದಿರುವೆ ಮೀನಿನಂತೆ..

- ನಮಿತ ಗಟ್ಟಿ

23 Nov 2017, 10:44 am

ನೆನಪೊಂದೆ ಕೊನೆತನಕ

(ನೆನಪೊಂದೆ ಕೊನೆತನಕ)

ಕಣ್ಣಲ್ಲಿ‌ ಕಂಡ ರೀತಿ. ಮನದಲ್ಲಿ ಮೊಳೆತ ಪ್ರೀತಿ
ನಿನ್ನಲ್ಲಿ ಬೆರೆತು‌. ಉಸಿರಲ್ಲಿ ಕಲೆತು.
ನಿನಗಾಗಿ ಕಾದು ಕುಳಿತಿರುವೆ ಸದಾ ನಿನಗೆಂದು.

ಸರಸಕೆಂದು ಬಂದ ಹ್ರುದಯ ವಿರಸವಾಗಿ
ಹೊರಟ‌ ಸಮಯ.
ಸರಸರನೆ ಸರಿದು ಜರಿಯಾಗಿ ಹರಿದು.
ಬರಿದಾದ ಕಣ್ಣಲ್ಲಿ ನೆತ್ತರಾಗಿ ನೀ ಸುರಿದು.
ಸುತ್ತುವರೆದೆ ನೀ ಎಂದೆಂದೂ.

ನೋವೆಂಬ ಮಸಣದಲ್ಲಿ . ಚಿಂತೆ ಎಂಬ ಚಿತೆಯಲ್ಲಿ. ಬಸ್ಮವಾಗಿ ನಾ ಮಡಿದು
ಗಂಗೆಯಲ್ಲಿ ಲೀನವಾಗಿ.
ಕಲ್ಪನೆಯಲ್ಲಿ ನಮ್ಮ ನೆನಪನ್ನು ನಾ ನೆನೆದು.

ನದಿಯಾಗಿ ನಾ ಹರಿದು ಪ್ರಕ್ರುತಿಯ ಮಡಿಲ ನಾ ಸೇರುವೆನು ನಾನಿಂದು.
ನೀ ಇಲ್ಲದ ಪರಪಂಚ ನನಗೆ ಬೇಡವೆಂದು ನೆನಪಲ್ಲೆ ನಾ ಮಡಿಯುವೆ ಮನವೇ

ನೆನಪಿನ ನಾವಿಕ ಸಂತೋಷ್ ( ಸೊನು )

- ಸಂತೋಷ್//ಜೀತು

23 Nov 2017, 08:52 am

ಕಾದಿರುವಳು

ಕಾದಿರುವಳು ಮದನಾರಿ
ಹಸಿರು ಸೀರೆಯನು ಉಟ್ಟು
ಅದೇನಿಹುದೋ ಸಿಂಗಾರಿ
ನಿನ್ನ ಮನದೊಳಗಣ ಗುಟ್ಟು ?

ತೆರೆದ ಬಾಗಿಲ ಕಡೆಯೇ
ಕ್ಷಣಕೊಮ್ಮೆ ನೋಡುವಳು,
ಮುಖದಿ ಹೂ ನಗುವನ್ನು
ಬಹುವಾಗಿ ಅರಳಿಸಿಹಳು.

ಮುಡಿದ ಮಲ್ಲಿಗೆ ಹೆರಳು
ತುಡಿದ ನರುಗೆಂಪು ಬೆರಳು
ಕಳೆದ ಏಕಾಂತದಿರುಳು
ಕಾಂತನ್ನೆಲ್ಲೋ ದೂರದಲಿರಲು!

ಯಾರ ಬರುವಿಕೆಗಾಗಿ
ಹೆಣ್ಣೇ ಈ ಅಲಂಕಾರ ?
ಬಂದರೆನಗೆ ದೊರೆತೀತೇ
ನಿನ್ನೊಲುಮೆಯ ಸತ್ಕಾರ ?

- ಶ್ರೀಗೋ.

23 Nov 2017, 07:08 am

ಮರಿಚಿಕೆ...||

ಬಿರಿಬಿಸಿಲ ಬೆಂಕಿಯಲ್ಲಿ
ಮುಖವು ಮುಸುಕಿನಿಂದ ಕವಿದಿರಲು,
ಕಾಣದ ಆ ನಿನ್ನ ಕಣ್ಣುಗಳು
ನನ್ನ ಕಂಡಿತೇಕೆ, ಕಂಡು ನಕ್ಕು ನಾಚಿತೇಕೆ..??

ಕಾರಣ ಕೇಳಲು
ನಿನ್ನ ಬಳಿ ನಾ ಬರಲು,
ಗೆಳತಿ,
ನೀನಾದೆ ಒಮ್ಮೆಲೆ ಮರಿಚಿಕೆ..
ಮರಿಚಿಕೆ...||

- Spb...@#

23 Nov 2017, 02:31 am

ಅವಳೆಂದರೆ

ಅವಳ ರೂಪ ಇರುಳ ಬಾನ ಬೆಳಗುವ ಪೂರ್ಣ ಚಂದಿರ .
ಅವಳ ಹೃದಯ ನನ್ನ ಜೀವನ ಕಷ್ಟಗಳ ಮರೆಸೊ ಮಂದಿರ

ಅವಳ ಗುಣಗಳು ಸುತ್ತಲರಡಿ
ಕಂಪ ಸೂಸುವ ಚಂದನ
ಅವಳ ನಿಷ್ಕಲ್ಮಶ ನಗು
ತೇಯ್ದಷ್ಟು ಘಮಿಸೊ ಚಂದನ

ಅವಳನಪ್ಪಿರೆ ಮೈಮರೆಸುವ
ಮೈಗಂಧವು ಕಂಪಿನ ಚಂದನ
ಅವಳಿಂದಲೇ ನನ್ನ ಬಾಳಾಗಿದೆ ಹೂಗಳು ತುಂಬಿದ ನಂದನ

- ನೆನಪಿನ ನಾವಿಕ

22 Nov 2017, 09:47 pm