ಹಳೆಯ ನೆನಪುಗಳ ಸರಮಾಲೆ,
ಆ ಕನಸಿನ ತಿಜೋರಿಯಲ್ಲಿದೆ.
ಆ ತಿಜೋರಿಯ ಕೀಲಿಕೈ, ಬೆಳದಿಂಗಳಿನೊಡೆಯ
ಚಂದಿರನ ಬಳಿ ಇದೆ.
ಅವನ ಕಿಸೆಗೆ ಕೈ ಹಾಕಿ ಎತ್ತಿಕೋ ಮನವೇ.
ಅದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ.
ಏಕೆಂದರೆ,
ಅವನು ನಮ್ಮೆಲ್ಲರ
ಮುದ್ದಿನ ಚಂದಮಾಮ...
...ಕನಸಿನೂರಿನ ಪಯಣಿಗ
ಶಿವಾನಂದ.ಆರ್ ನಲ್ಲ ಶಿವು
ಮುಷ್ಟಿಯಷ್ಟಗಲದ ಹೃದಯಕೆ ಸತ್ತಾಗ
ಮೂರು ಇಡಿ ಮಣ್ಣನ್ನು ಹಾಕಿ ಮುಚ್ಚಿದರು
ಆದರೆ
ಅವಳು ಮಾತ್ರ ಅರೆಕ್ಷಣವೂ ಯೋಚಿಸದೆ
ಪ್ರೀತಿ ಮತ್ತು ನಂಬಿಕೆಯ
ಒಡನಾಡಿಯಾಗಿದ್ದ ಆ ಹೃದಯಕೆ ನೋವ ತಂದಿಟ್ಟು
ನನ್ನ ಬಿಟ್ಟು ಹೊರಟೇ ಹೋದಳು
ನನ್ನ ಮನದಲ್ಲಿ ಹಚ್ಚಳಿಯದ
ನಂಬಿಕೆಯ ಪಾಠ ಕಲಿಸಿದ ಗುರುವಾದಳು.
ಕನಸಿನ ಹುಡುಗಿಯಾಗಿ..?
"ಅನಾಮಿಕನೊಬ್ಬನ ನೋವಿನ ಮಾತು"
.
...ನಲ್ಲ ಶಿವು ಶಿವಾನಂದ ಆರ್
ನೀ ನನ್ನೆದುರು ಬಂದ ಆ ಕ್ಷಣ
ಕೆಲ ಕಾಲ ಕೆದಕುವ ನೆನಪುಗಳಿಗೆ
ಪಾತರಗಿತ್ತಿಯ ಬಣ್ಣಗಳಿಂದ
ಓಕುಳಿಯಾಟ ಆಡಿಸಿ
ಒಂದು ಕ್ಷಣ ಭೂಮಿಯ ನಿಲ್ಲಿಸಿ
ನಿನ್ನ ಮುದ್ದಾಡುವಾಸೆಯಾಯ್ತು ಕಣೇ
ಆದರೆ
ತಕ್ಷಣವೇ ನಿನ್ನ ಕೈಯಲ್ಲಿದ್ದ ಮದುವೆಯ
ಆಮಂತ್ರಣ ಪತ್ರಿಕೆ ನೋಡಿದೊಡನೆಯೇ
ನನ್ನುಸಿರೆ ಸ್ಥಬ್ದವಾಯಿತು
ನನ್ನ ಮನಸ್ಸು ಸಹ ಮರುನುಡಿಯದೆ
ನಿಶ್ಯಬ್ಧವಾಯಿತು ಪೂರ್ಣವಾಗಿ...
.
ನಲ್ಲ ಶಿವು ಶಿವಾನಂದ ಆರ್
ಬೆರೆತೊಗಿರುವೆ ನಿನ್ನಲ್ಲಿನ ಭಾವನೆಯಾಗಿ ನಾನು ಮನಸ್ಸಿನ ಮಾದರಿಯ ಮಾತು ನೀನು ಹೊರಹೊಮ್ಮಿ ಬರುವೆ ಪದಗಳಂತೆ ತಿಳಿಸಲು ನನಗೆ ನಾನು ನಿನ್ನಲ್ಲೇ ಇರುವೆನೆಂದು ಕವಿತೆ..........
ಕವಿತೆ-ಕವಿ ಕಂಡ ವಿಸ್ಮಯ ತೇಜಸ್ಸಿನ ಚರಿತೆ
ನನ್ನಲ್ಲಿನ ಲೋಕಕ್ಕೆ ಒಂದು ಹೆಸರಂತೆ ಬಂದು ನನ್ನ ಅರಿತೆ ಕವಿತೆ ನೆನಿಯೇ ಮತ್ತೊಮ್ಮೆ ನನ್ನ ಬಾರೆ ನನ್ನ ನೆಚ್ಚಿನ ಸ್ನೇಹಿತೆ ಮನಸೊಳಗೆ ಮಾಧುರಿಯಂತೆ...................