Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಗಡಿಯಲ್ಲಿ ಸೈನಿಕ

ಗಡಿಯಲ್ಲಿ ನಿಂತಿರುವೆ ವೀರ ಸೈನಿಕನಾಗಿ
ಅಂಜದೇ ಎದೆಗುಂದದೇ ನಾ
ಈ ನಾಡ ತಾಯಿಯ ಹೆಮ್ಮೆಯ ಮಗನಾಗಿ!!

ಕೊರೆವ ಚಳಿಯಲ್ಲಿಯೂ
ಉರಿವ ಬಿಸಿಲಲ್ಲಿಯೂ
ರೋಮ ರೋಮವು ಕಾದಿಹುದು
ಈ ನೆಲದ ಹಿತಕಾಗಿ!!

ಬಿಸಿ ನೆತ್ತರು ಬೆವರಾಗಿ
ಬಸಿದು ನುಡಿದಿಹುದು
ಮಡಿದರೂ ಮರಳುವೆನು
ಗಡಿ ಕಾಯುವ ಕಣ್ಣಾಗಿ!!

ಹೆಗಲೇರಿ ಕುಳಿತಿದ್ದ ಬಂದೂಕ ನುಡಿದಿಹುದು
ಕದನದಲಿ‌ ನಾ ನುಗ್ಗಿ ಸದೆಬಡೆವೆ ಶತ್ರುಗಳ
ಮದ್ದು ತುಂಬಿಸಿ ತನ್ನ ಹುರಿದುಂಬಿಸೆಂದು!!

- ಪಿ.ಜಿ.ಜ್ಯೋತಿ

01 Jul 2017, 10:17 am

*ಗೂಡು*

ಹೂ ಗಿಡದ ಪೊದೆಯೊಳಗೆ
ಹಕ್ಕಿಗಳು ಗೂಡುಕಟ್ಟಿ
ಮಿನುಗು ಕೀಟಗಳ ಹಿಡಿದು
ಸಿಕ್ಕಿಸಿದೆ ದೀಪವಾಗಿ
ಮೊಟ್ಟೆಗಳಾ ಹೊಡೆದು
ಮುಂಜಾನೆ ಮಂಜಿಗೆ ಅಡಗಿ
ಬಳ್ಳಾನೆ ಹಾಡಾಡುತಾವೆ
ಬೆಳ್ಳನೆಯ ಜೊಡಕ್ಕಿ
ಎರಡೆತ್ತು ಕಾಲ್ಗೆಜ್ಜೆಗೆ
ಮುಸುಕಾಗಿ ಕಣ್ಬಿಟ್ಟು
ನೆಲದ ಗಮಲಿಗೆ ಹೊರಟಾವೆ
ಬೇಟೆಗೆ
ಅವುಗಳಿಗೆ ಗೊತ್ತಿಲ್ಲ
ನೆಲದ ಬಲೆಯ ಗಮಲು

- ಹೇಮಚಂದ್ರ

30 Jun 2017, 09:49 pm

... ತ್ಯಾಗಮಯಿ...

ಮೂರು ಲೋಕದ ದೊರೆಗಳು ದೇವರಾದರು
ಇವರ ಹೆತ್ತ ತಾಯಿ ತಾನು ತ್ಯಾಗಿಯಾದಳು ದೈವಕ್ಕಿನ ದೊಡ್ಡೊರಿಲ್ಲ
ತಾಯಿ ತ್ಯಾಗ ಸಣ್ಣದಲ್ಲ
ಈ ಜಗದ ಜನನೀಯೇ... ತಾಯಿ..!

ತ್ಯಾಗಗಳ ಮೂಲ ಇವಳೊಡಲು
ತ್ಯಾಗಗಳ ರೂಪ ಹಲವಾರು
ತಾಯ್ತನವ ಪಡೆವ ಪ್ರತಿ ಹೆಣ್ಣು
ಆಗುವಳು ಅಂದೆ ತ್ಯಾಗಮಯಿ...

ಜಗವನೆ ಆಡಿಸುವ ದೇವರಿಗೂ
ಇವಳು ಆಡಿಸಿ ಬೆಳೆಸಿದಳೂ
ಪ್ರತಿ ಜೀವ ಜಗದೊಳಗು ಇರುವ ತ್ಯಾಗಿ ತಾಯೀ......

ಮೂರು ಲೋಕದ ದೊರೆಗಳು ದೇವರಾದರು
ಇವರ ಹೆತ್ತ ತಾಯಿ //ತಾನು ತ್ಯಾಗಮಯಿ//

ಪಿ ಅನಿ...

- ಪಿ ಅನಿ...

30 Jun 2017, 07:36 pm

ಅವಳ ಮೇಲೆ ಒಂದು.........

ಸಂಜೆಯ ಚಂದಿರ ಹೊಂಚು ಹಾಕಿ ಕಾದಿಹನು,
ನನ್ನವಳ ನಗು ಕದಿಯಲು ,
ನಾನೆ ತುಂಬಿರಬಹುದೆ ಅವಳ ಮನಸಲ್ಲಿ,
ಸಂಶಯ ಬೇಡ ಅವಳೆ ಇರುವಳು ನನ್ನಲ್ಲಿ,
ಎಷ್ಟು ಹೇಳಿಕೊಳ್ಳಲ್ಲಿ ನನಗೆ ನಾನೆ
ಅವಳಿಗೂ ಒಮ್ಮೆ ಹೇಳಲೆ ನನ್ನ ಪ್ರೀತಿ,
ಆದರೇನು ಮಾಡಲಿ ಕಂಡರೆ ನಾನೆ
ಕಳೆದು ಹೋಗುವ ಗುಣದವಳು,
ಅವಳಿಗೂ ಹೀಗೇ...?
ಛೇ ಸಾಧ್ಯವೇ ಇಲ್ಲ
ಅದು ಹೆಣ್ಣು ಪ್ರಾಣಿಯಲ್ಲವೆ,
ಅವರಿಗೆ ಸಿಗಬಹುದೇನೊ ಹೊನ್ನು
ಸತಾಯಿಸಿ ನಮ್ಮನ್ನು,
ಅನಿಸುತ್ತೆ ನನಗೆ ಹುಟ್ಟಿನಿಂದ
ಅರ್ಥಮಾಡಿಸಬೇಕು ಗಂಡು ಹೈಕಳ
ಬಗ್ಗೆ ಅವರಿಗೆ...!
ಆದರೂ ಅವರು ಮಾಡುವುದೇ ಸರಿಯೆ?
ಉತ್ತರ ಸಿಗದ ಪ್ರಶ್ನೆ ಸೃಷ್ಟಿಸಿದ ದೇವರಿಗೊಂದು
ಉಪ್ಪಿಲ್ಲದ ಪಲಾವ್ ನೈವೇದ್ಯಕ್ಕೆ,
ಭಕ್ತರೆ ನನ್ಗೊಂದು ಕ್ಷಮೆ ಇರಲಿ,
ಆದರೂ......

ಸಾಕು ಬಿಡಿ ಒಡಿಬೇಡಿ...!

ಮನೋಜ್

- manoj kumar

30 Jun 2017, 07:29 pm

ಹೂವಲ್ಲಿ ಹುಟ್ಟಿದ ಮಕರಂದ

ಹೂವಲ್ಲಿ ಹುಟ್ಟಿದ ಮಕರಂದದ
ಅಂದ ನೀನು ಮನವರಿತ ಗೆಳತಿ...........
ನೂರು ವರುಷಗಳ ನನ್ನ ನಗುವಿನ ಹರುಷ
ನಿನ್ನದಾಗಲಿ ಪ್ರೀತಿಯ ಗೆಳತಿ...........

ನೀನು ಹುಟ್ಟಿದ ಕ್ಷಣದಿಂದ ಇದುವರೆಗೂ
ನೀನಿಟ್ಟ ಪ್ರತಿಯೊಂದು ಹೆಜ್ಜೆ ಲೆಕ್ಕವಿಟ್ಟು ಭೂತಾಯಿಗೆ ನಾ ಹೇಳಲೇ ಧನ್ಯವಾದ ನಿನ್ನನ್ನು ನನ್ನಲ್ಲಿಗೆ ಕರೆತಂದು ಬಿಟ್ಟಿದ್ದಕ್ಕಾಗಿ........

ನಿನ್ನ ಕಂಡ ನಿಮಿಷದಲ್ಲೇ ನಿಂತುಹೋಯಿತು ನನ್ನ ಕಂಬನಿಯ ಹನಿಗಳು ನಿನ್ನ ನಗುವಲ್ಲಿ..........
ತಿಳಿಯಲಿಲ್ಲ ನನಗೆ ಎಲ್ಲಿಂದ ನಿನ್ನ ಕಣ್ಣು ಸೆರೆಮಾಡಿತೋ ನನ್ನ ಉಸಿರಿನ ವೇಗವನ್ನು ನಿನ್ನ ಹೃದಯದ ಬಡಿತದಲ್ಲಿ........

ನನ್ನ ಮನದ ಗೂಡಿನಲ್ಲಿ ನೆಲೆಯಾದ ಒಲವಿನ
ಶ್ರೀಲಕ್ಷ್ಮೀಯ ಹುಟ್ಟುಹಬ್ಬದ ದಿನವಿದು ಎಲ್ಲರ ಮನಮೆಚ್ಚಿ ನೂರು ವರ್ಷ ಬಾಳು ಗೆಳತಿ ಅಂಬರದ ತಾರೆಯಾಗಿ ಮನದಲ್ಲಿನ ಮಹಾಲಕ್ಷ್ಮಿಯಾಗಿ..............

- ಚುಕ್ಕಿ

30 Jun 2017, 07:18 pm

ನನ್ನ ಕವನ

ಚಿಲಿಪಿಲಿ ಕಲರವ ಪಕ್ಷಿಗಳ ಗುಣದಲ್ಲಿ,
ಕವನದ ನಾಮ ಪದಗಳು,
ನನ್ನನ್ನು ಹುಡುಕುತ್ತ ಬಂದ ಕ್ಷಣಗಳು,
ನಾ ಬರೆದ ಕವನ ನನ್ನ ಕವನ ಶ್ರೀ ಯಾದಳಲು.

- Srinivasakavana

30 Jun 2017, 06:47 pm

ಕಳ್ಳ ಚಂದಿರ

ಕದ್ದು ನೋಡುವ ಕಳ್ಳ ಚಂದ್ರ ನಿನ್ನ ತೋರಿ ನನ್ನ ನಚಿಕೆಯನು ಅವನಲ್ಲಿ ಬಚ್ಚಿಟ್ಟುಕೊಂಡನು ನೀನೇ ಅವನ ಪ್ರತಿರುಪವೆಂದು................

ಕೆಂಪುಕೆನ್ನೆಯ ಮುದ್ದಾಡಿ ನನ್ನ ಕಾಂತೀಯ ಕದಿಯಲೆಂದು ನಿನ್ನ ರೂಪದಲ್ಲಿ ತಾನಿಂದು......
ನನ್ನ ಅಂಗೈಯಲ್ಲಿ ನಿಂತು ತಿಳಿಯಾದ ಮಂಜಲ್ಲಿ ಮನಸಾರೆ ನೋಡೆಂದನು ನಿನ್ನನು..........

ಮನಕದ್ದ ಶಶಿಯೋ ನನ್ನ ಕದ್ದ ಒಲವಿನ ಸಂಗಾತಿಯೊ ತಿಳಿಯದಾದೆ ನಾನು ನಿನ್ನನ್ನು ನೋಡುತ್ತಾ ಇರುಳಿನ ಸಮಯದಲ್ಲಿ ಶಶಿಯ ಬೆಳದಿಂಗಳ ಮಡಿಲಲ್ಲಿ..............

- ಚುಕ್ಕಿ

30 Jun 2017, 06:33 pm

ನನ್ನವಳು

( ನನ್ನವಳು )

ಕನಸಲ್ಲಿ ಬಂದವಳು .
ಕಲ್ಪನೆಯ ಕಡಲಿವಳು
ಮಿಂಚಿನಂತೆ ಹೊಳೆಯುವಳು.
ಮುತ್ತಿನಂತಹ ಹೆಣ್ಣಿವಳು. || ನನ್ನವಳು ||

ಅಪ್ಸರೆಯಂತಹ ಮೊಗದವಳು.
ಮೀನಿನಂತಹ ಕಣ್ಣವಳು.
ಹುಣ್ಣಿಮೆ ಚಂದಿರನಂತೆ ಹೊಳೆಯುವ ತುಟಿಯವಳು.
ಮಾತಲ್ಲೆ ಮೈ ಮರೆಸುವಳು.
ನೊವನ್ನೆಲ್ಲ ಧರೆಗೆ ಉರುಳಿಸುವಳು .
||ನನ್ನವಳು||

ಕರುಣೆಯಲ್ಲಿ ತಾಯಿವಳು.
ಹೂವಿನಂತಹ ಮನಸ್ಸವಳು.
ಕಣ್ಣಿಗೆ ಕುಕ್ಕುವಂತಹ ಅಮ್ರುತ ಶಿಲೆಯಲ್ಲಿ ಕೆತ್ತಿದಂತಹ ದಂತದ ಬೊಂಬೆ ಇವಳು.
ಅವಳೆ ನನ್ನವಳು. || ನನ್ನವಳು ||

ನನ್ನ ಕನಸಲ್ಲಿ ಕಂಡಂತಹ ಕಲ್ಪನೆಯ ಪ್ರತಿಬಿಂಬ ಇವಳು .
ನನ್ನ ಭಾವನೆಯಿಂದ ಕವನವಾಗಿ ಹೊರಹೊಮ್ಮಿದ ಚೆಲುವೆ ಇವಳು.
ಅವಳೆ ನನ್ನವಳು.

ಉಸಿರಲ್ಲಿ ಬೆರೆತವಳು .
ನನಗಾಗಿ ಇ ಧರೆಯಲ್ಲಿ ಜನಿಸಿದವಳು.
ನನಗಾಗಿ ಕಾದಿಹಳು... || ನನ್ನವಳು ||


( ಸಂತೋಷ್|| ಜೀತು )

- ಸಂತೋಷ್//ಜೀತು

30 Jun 2017, 06:33 pm

ಜನರಿಲ್ಲದ ಜಗತ್ತು........?

ಜನರಿಲ್ಲದ ಜಗತ್ತಿದು ಮುಖವಾಡಹೊತ್ತ
ಮನುಜರ ನೆರಳಿನಿಂದ ಸೃಷ್ಟಿಯಾಗಿರುವುದು...........

ಕಣ್ಣಿದ್ದೂ ನಿಜವನು ಕಾಣಳಾಗದ
ಕುರುಡರೆಲ್ಲರು............
ಸುಳ್ಳಿಗೆ ತಲೆಬಾಗಿ ನಿನ್ನಿಂದೆ ನಾವೆಂದು
ಸುಳ್ಳುಗಳ ಸಾಮ್ರಾಜ್ಯ ಸ್ಥಾಪಿಸಿ ಕಣ್ಣು
ಮುಚ್ಚಿ ನಡೆವರು............

ಹಣವೆಂಬ ದುಷ್ಟನಿಗೆ ಪಟ್ಟಕಟ್ಟಿ
ಜೀವನಕ್ಕೆ ದುಡ್ಡು ಬೆಕೆಂಬುದು ಬಿಟ್ಟು
ದುಡ್ಡಿಗಾಗಿ ಜೀವನವೆಂದು ತಳಿಸಿಕೊಟ್ಟರು
ಮಾನವತ್ವದ ಮೌಲ್ಯ ಮರೆತುಬಿಟ್ಟರು..........

ಜನರಿಲ್ಲದ ಜಗತ್ತಿದು ಸ್ವಾರ್ಥಿಗಳ
ಮೂರ್ತಿಗಳಿಂದ ತುಂಬಿರುವುದು...........
ನಾಟಕಗಳ ಮಜವಿಲ್ಲಿ ಆಡುವವರಿಗೆ
ಆಟ ಆಟ ನೋಡುವವರಿಗೆ ಮನರಂಜನೆಯಾ ಬಾಡೂಟ ನಡುವಲ್ಲಿ ಸಿಕ್ಕ ಅಮಾಯಕರಿಗೆ
ಸತ್ತು ಸಾಯದ ನರಕದಲ್ಲಿನ ಕಾಟ..............

ಜನರಿಲ್ಲದ ಜಗತ್ತಿದು

- ಚುಕ್ಕಿ

30 Jun 2017, 04:50 pm

ಚಿಗುರಿವೆ ಹೊಸ ಕನಸು....

ಸೆಳೆದಿರಲು ನಗುತಲೆ‌ ನೀನು ನನ್ನ ಮನಸು
ಚಿಗುರಿವೆ ಎದೆಯಲಿ ಹೊಸ ಹೊಸ ಕನಸು
ನಯನಗಳು ನಿನ್ನನೆ ನೋಡುತ ನನ್ನ ಮರೆತಿರಲು
ಶಿಲೆಯಾಗಿರುವೆನು ನಾನು ಆಗದೆ‌ ಅಲುಗಾಡಲೂ

ನಿನ್ನ ಭಾವಗಳು ಎಂಥ ಸೊಗಸೆ
ನಿನ್ನಲೇ ನಾನು ಸೇರಿ ಹೋಗುವ ಆಸೆ
ನನ್ನ ತಿರುಗಿ ನೋಡಿ ಕೊಂಚ ಕನಿಕರಿಸೆ
ನನ್ನನೆ‌ ಮರೆತಿರುವೆನು ತಿಳಿಯದೆ ಸಹಕರಿಸೆ
ಕಾಯುತಿರುವೆನು ಸೇರಿ ಹೋಗಲು ನಿನ್ನಲಿ ಸಮ್ಮತಿಸೆ

ಓ ನನ್ನ ಪ್ರಿಯ ಮನಸೆ
ನೀ ನನ್ನ ಬಾಳಿನ ಸವಿಗನಸೆ
ನನ್ನ ಮನಸಿನ ಪ್ರೀತಿಯ ಆದರಿಸೆ
ಸಾಯುತಿರುವೆ ಬಂದು ಉತ್ತರಿಸೆ
ತಿರುಕನ‌ ಕನಸೆಂದಾದರು ಹೇಳಿ‌ ತಿರಸ್ಕರಿಸೆ
ಕಾದಿರುವೆನು ಓ ಮನಸೆ ನೀನಾಗದಿರು ಬರಿ ಕನಸೆ

- ಶ್ರೀಕಾವ್ಯ

30 Jun 2017, 02:54 pm