ಕರಗುತಿರಲು ಬೆಳದಿಂಗಳ ಚಂದಿರನು
ಉದಯಿಸುತಿರುವನು ಆ ನೇಸರನು
ಸರಿಸುತ ಮುಂಜಾವಿನ ಚುಮುಚುಮು ಚಳಿಯನು
ಪ್ರೀತಿಯಲಿ ಮುತ್ತಿಕುತ ಎಲೆಯ ಮೇಲಿನ ಹಿಬ್ಬನಿಯನು
ಆ ಹಿಬ್ಬನಿಯೂ ಕರಗಿದೆ ನೋಡಿ ಅವನ ಪ್ರೀತಿಯನು
ಹಸಿರು ನಾಚಿ ನಕ್ಕು ರಂಗೇರಿದೆ ಕಂಡು ಪ್ರೇಮದ ಸವಿಯನು ಸುರಿಯುತ ಬರುತಿರುವ ರವಿಯು ಭುವಿಗೆ ಎಳೆಯ ಬಿಸಿಲನು
ಮುಂಜಾವಿನ ಸೂರ್ಯ ರಶ್ಮಿ ಇಮ್ಮಡಿಸಿದೆ ಭೂಮಿಯ ಕಾಂತಿಯನು
ಕೋರುತಿವೆ ಸ್ವಾಗತ ಬೆಳಗಿಗೆ ಹಕ್ಕಿಗಳು ಹಾಡುತ ಇಂಚರವನು
ಕೈ ಕಟ್ಟಿ ತಣ್ಣನೆ ಉಸಿರೊಡನೆ
ಬೆಳ್ಳಂಬೆಳಗ್ಗೆ ಬೆಚ್ಚಗೆ ಚಳಿಯೊಡನೆ
ಹಕ್ಕಿ ಪಿಕ್ಕಿಗಳ ಹಾಡಿನೊಡನೆ
ಕರಗುವ ಹಿಬ್ಬನಿಯ ಪ್ರೀತಿಯೊಡನೆ
ಸವಿಯುವ ಮನಸಿರಲು ಭೂಮಿಯ ಸೌಂಧರ್ಯವನೆ
ಭುವಿಯೊಳು ನಿಜ ಧನ್ಯನು ಅವನೆ
ಇನ್ನು ಎಷ್ಪುದಿನ ಈ ಒಂಟಿತನ
ಕಾಯುತ್ತಿರುವೆ ನಾ ನೀನ್ನ ನೆನಪಲೆ ಪ್ರತಿಕ್ಷಣ
ನೀ ಮರೆತರು ನಾ ಮರೆಯುವುದಿಲ್ಲ
ನೀ ನಾಡಿದ ಮಾತುಗಳನ್ನ
ಈ ಜನ್ಮ ಒಂದೆ ಸಾಕು ನೀ ನನ್ನ ಜೀವ ಇನ್ನ
ನೀ ಬರುವ ವರೆಗೂ ಕಾಯುವೆ ನೀನ್ನ ನೆನಪುಗಳ ಸುಳಿಯಲಿ
ನೀ ಬೇಗ ಬರಲಿ ಎಂದು ನಾ ಬೇಡುವೆನು ಆ ದೇವರಲಿ.....
....by
.....Hanu.m.....
ಸೋಲುವ ಮನಕೆ
ಎಲ್ಲರೂ ಕಾಡುವರು ಯಾಕೆ
ಅವರಿಗೂ ಇರಲಾರದೆ ಬಯಕೆ
ಎಂದು ತಿಳಿಯುವುದು ಮನಸು ಈ ಜಗಕೆ...
ಎಲ್ಲರ ಮೊಗದಲು ನಗುವ ನೋಡ ಬಯಸುವುದೆ ತಪ್ಪೆ
ಬಯಸಿದ ತಪ್ಪಿಗೆ ಆ ಮನಸನೆ ಮಾಡಿ ಬಿಡುವರು ಸಪ್ಪೆ
ಅವಶ್ಯಕತೆ ಮುಗಿದ ಮೇಲೆ ಅವರೇನಿದ್ದರು ಕೇವಲ ಸಿಪ್ಪೆ
ತಂದಿಡುವರು ಸ್ಥಿತಿ ನೆಮ್ಮದಿಯಾಗಿ ಮುಚ್ಚಿಲಾಗದಂತೆ ರೆಪ್ಪೆ..
ಮುಖವಾಡ ಧರಿಸಿ ಜೊತೆಗೆ ನಗುತ ಇದ್ದರೆ ಸಾಕೆ
ಮುಕ್ತ ಮನಸಿಗೆ ಬೆಲೆ ಕೊಡರು ಯಾರು ಏತಕೆ
ಬದುಕೆಂದರೇನು ಕೇವಲ ಮಾತ್ರ ಆಡಂಬರ ತೋರಿಕೆ
ಒಮ್ಮೆ ಕೊಂದರೆ ಮುಗ್ಧ ಮನಸ ಮತ್ತೆ ಸಿಗದು ಜೋಕೆ....
ಏನೆ ಆದರು ನೋಡಲಾಗದು ಯಾರದೆ ಕಣ್ಣೀರು
ಎಂದೆಂದೂ ಎಲ್ಲರ ಬದುಕಾಗಿರಬೇಕು ಪನ್ನೀರು
ನಗುತಲಿರುವ ಮನಸುಗಳೆ ಕಟ್ಟುವುದು ಬಾಳಿಗೆ ತಳಿರು
ಕಾಡಿಸಿದವರು ನಮ್ಮವರಲ್ಲದೆ ಮತ್ತೆ ಇನ್ಯಾರು
ಮತ್ತೆ ನಗಿಸಿ ನಕ್ಕು ಬದುಕಿಬಿಟ್ಟರಾಯಿತು ಶಾಶ್ವತವಾಗಿ ಭುವಿಯ ಮೇಲೆ ಉಳಿಯರು ಯಾರು
ನಾ ಬೆಳೆದೆ ಒಬ್ಬಂಟಿಗನಾಗಿ,
ತಂದೆ ತಾಯಿಯರ ಮುದ್ದಿನ ಮಗನಾಗಿ,
ನನಗೂ ಇದ್ದು ಸಾಕಾಗಿತ್ತು ಒಂಟಿಯಾಗಿ,
ಪ್ರೀತಿಯ ಜಗಳವಾಡುವವರಿಲ್ಲ ಜೊತೆಯಾಗಿ,
ಬಂದಿರಿ ನೀವು ಪ್ರೀತಿಯ ಚಿಲುಮೆಗಳಾಗಿ,
ಒಂಟಿಯಾದ ನನ್ನ ಜೊತೆಯಾಗಿ,
ಮಾತು ಕೊಡುವೆನು ನಾನು ನಿಮಗಾಗಿ,
ಇರುವೆನೆಂದು ಸದಾ ನಿಮ್ಮ ನೆರಳಾಗಿ,
ಬೇಡುವೆ ನಾ ಆ ದೇವರ ಶಿರಬಾಗಿ,
ಹೀಗೆಯೇ ಸಾಗುತಲಿರಲೆಂದು ನಮ್ಮ ಪ್ರೀತಿಯ ಭೋಗಿ,
ಪೂರ್ವ ಜನ್ಮದಾ ಪುಣ್ಯ ಕಾದಿತ್ತು ನನಗಾಗಿ,
ಪಡೆಯಲೆಂದು ನಿಮ್ಮನ್ನು ನನ್ನ ತಮ್ಮ ತಂಗಿಯರಾಗಿ.
----- tippu -----