Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಈ ಕ್ಷಣ ನಿನ್ನದು..

ನಗುವ ನಯನಗಳ
ಮೌನ ಮಾತು
ಕಾಡುವ ಕಾಡಿಗೆಯ ಮೆರಗು

ಪಿಳಿ ಪಿಳಿ ಆಡುವ
ರೆಪ್ಪೆ ಪಕಳೆಗಳ ನಾಟ್ಯ
ಅಣಕಿಸುವ ಮುದ್ದು ತುಟಿಗಳ
ಅಂಚಲಿ ತುಂಟ ನಗು

ಕೆಂಪೇರಿದ ಮೃದು ಕೆನ್ನೆಯ
ತಾಕಿ ನಲಿವ ಮುಂಗುರುಳು

ಸಂತಸವೇ ನೀನಾಗಿರುವ
ಈ ಕ್ಷಣ ನಿನ್ನದು ಗೆಳತಿ...

- Indushekar Chinivar

19 May 2017, 06:08 pm

ನನ್ನ ಸಂಗಾತಿ

ನನ್ನ ಕನಸಿನ ಮನವೆ...
ನೀ ಬಂದು ನಿಂತೆ ಆ ಮನಸಿ‌ನ ನಡುವೆ....

ನಿನ್ನನ್ನು ಸೇರಿದೆ ಅಂದು ...
ನೀನೇ ನನ್ನ ಜೀವವಾಗಿರುವೆ ಇಂದು...


ನನ್ನ ಪ್ರೀತಿಯ ಸಂಗಾತಿಗಾಗಿ

- Shru Sush

19 May 2017, 03:57 pm

ಮುದ್ದು ಕಂದಮ್ಮ

ನನ್ನ ಮುದ್ದು ಕಂದಮ್ಮ....
ನವ ಮಾಸ ನಿನ್ನ ಮುದ್ದು ಮುಖದ ಕನವರಿಕೆ
ನಿನ್ನ ಮೂಗವ ನೋಡಿದಾಗ ಕೈಯಲ್ಲಿ ‌ಬಂದಂತೆ ಸ್ವರ್ಗ ...
ನಿನ್ನ ಕಲ್ಮಶ ನಗು ..
ನಿನ್ನ ಮುದ್ದು ಮನಸ್ಸು..
ನಿನ್ನ ತೂದಲ ಮಾತಿಂದ ಬರುವ
ಅಮ್ಮ....... ಅನ್ನೂ ಒಂದು ಮಾತು
ಸಾಕು ನನ್ನ ಜನ್ಮಕೆ ..‌


ಇಂತಿ‌
ನಿನ್ನ ಅಮ್ಮ .....

- Shru Sush

19 May 2017, 02:55 pm

ನಿನ್ನ ಬಿಟ್ಟು ನೀ ಬಾ.

ನಿನ್ನ ನೀ ಪರಿದಿಯೊಳು ಸಿಕ್ಕಿಸದೆ ಬಾ
ರೇಷ್ಮೆಯಂತೆಒಳಗೆ ನುಗ್ಗುನುರಿಯಗದೆ ಬಾ
ಹಾರಡಲು ಬಿಟ್ಟು ಮನವನ್ನು ಸ್ವಚಂದವಾಗಿ
ಜಗಕಂಟಿದ ಬಂಧನ, ನಂಟುಗಳಾಚೆ
ಬಾ ಹೊರಗೆ ಚಿಂತನ ಮಂತನಗಳ ಸೆಲೆಗೆಬಾ

ನಿನ್ನ ನೀ ಒರೆಗಲ್ಲಿಗೆ ಹಚ್ಚಿ
ಪುಟಿಪುಟಿಯುವ ಬಾವಗಳಿಗೆಜೀವ ತುಂಬಿ
ಜಗವ ಮುಷ್ಟಿಯಲ್ಲಿ ಉಜ್ಜುಗೊರಡಿಗೆ ತಿಕ್ಕಿ
ತೂಗಿ,ಜ್ಞಾನದಸಾರ ಚೆಲ್ಲಲು ಬಾ
ಬಾ,ಬಾಯಾರದ ಸಾಹಿತ್ಯ ಚಿಲುಮೆಗೆ ಬಾ

ಸಣ್ಣತೊರೆಯಾಗಿ ಹರಿದುಹರಿಯಲು ಬಾ
ಬಾವನಲೋಕದೀ ತೇಲುತ್ತಾತೇಲಲು ಬಾ
ಸಮುದ್ರದಾಳಕೆ ಜಿಗಿದು ಈಜಿಈಜಿ
ರತ್ನ ಕವನಗಳ ಹೆಕ್ಕಿತೆಗೆಯಲು ನೀ ಬಾ
ಕನ್ನಡ ಕವನ ಲೋಕಕೆ ನನ್ನೊಟ್ಟಿಗೆ ಬಾ

ಬಣ್ಣ ಬಣ್ಣದ ಲೋಕಗಳಾಚೆ
ಸುಂದರ ಸುಮಧುರ ಕನಸುಗಳಾಚೆ
ಕನ್ನಡ ಕಡಲಲಿ ಅರಳಿದ
ಕವನದ ಮಕರಂದ ಹೀರಲು ಬಾ
ಸವಿ ಜೇನು ಸವಿಯಲು ಬಾ
ನನ್ನೊಟ್ಟಿಗೆ ಬಾ ನಿನ್ನ ನೀ ಬಿಟ್ಟು ಬಾ!!

-ಅನಿಲ್ ಕುಮಾರ್.ಜಿ.

- ಅನಿಲಕುಮಾರ್.ಜಿ.

19 May 2017, 01:31 pm

ಜೊತೆಗಿರುವೆಯಲ್ಲಾ.............

ಜಾರಿಬಿಡಲು ಆಸೆ ಇಲ್ಲ
ಹಾಗಂತ ಕೈಗೆಟುಕದ ಸ್ನೇಹವು ಅಲ್ಲ ...........

ಸುಮ್ಮನೆ ಬಿಡಲು ಅಪರಿಚಿತನಲ್ಲಾ
ಜೊತೆಗಿರಲು ಪರಿಚಿತನು ನಿನಲ್ಲ......

ಕಂಬನಿಯಲ್ಲೂ ನಗುತ್ತಿರುವೆಯಲ್ಲಾ
ನನ್ನ ನೋವಲ್ಲೂ ಕಣ್ಣೀರಾಗಿ ಜೊತೆಗಿರುವೆಯಲ್ಲಾ..................

ಮಾತಿಲ್ಲದೆ ಇಂದು ನೀನು
ಮೌನಿಯಾದೆಯಲ್ಲಾ ನನ್ನ ಮಾತಿಗೂ
ಮೌನ ತಂದು ಕೊಟ್ಟೆಯಲ್ಲಾ.................

ಆ ಮೌನದಲ್ಲೂ ನಿನ್ನ ನಗೆಯೇ ಕೇಳುತ್ತಿದೆಯಲ್ಲಾ ಮತ್ತೆ ನನ್ನ ಜೊತೆಗಿರಳು ಗಾಳಿಯಾಗಿ ಸುತ್ತ ನೀನೇ ಹರಡಿರುವೆಯಲ್ಲಾ...........

- ಚುಕ್ಕಿ

19 May 2017, 12:57 pm

ಆಸೆಗಳ ಕಣ್ಣಲ್ಲೆ ಕೂಡಿಸಿ

ಆಸೆಗಳ ಕಣ್ಣಲ್ಲೆ ಕೂಡಿಸಿ
ಮನಸುಗಳ ಜೊತೆಯಾಗಿ ಸೇರಿಸಿ
ಹಾಡುಲೇನು ಒಂದು ಹಾಡು ನಾನು
ಬರುವೆಯ ಹಾಡಿಗೆ ಜೊತೆಯಾಗಿ ನೀನು

ನನ್ನ ಹಾಡಿಗೆ ಉಸಿರೆ ನೀನು
ನೀನಿಲ್ಲದೆ ಆ ಹಾಡು ಹುಟ್ಟಬಹುದೇನು
ಆ ಹಾಡಿಗಾಗೆ ಜೀವ ಹಿಡಿದು ಕಾದಿರುವೆನು
ಈ ಪ್ರೀತಿಯ ಹಾಡಿಗೆ ಉಸಿರಾಗುವೆಯೇನು




ಆ ಹಾಡು ಕೇವಲ ಹಾಡು ಅಷ್ಟೆಯೇನು
ಅದು ನಿನ್ನೊಲವು ತುಂಬಿದ ಸಿಹಿ ಬಟ್ಟಲ ಜೇನು
ಆ ಸವಿಯ ಸವಿಯದೆ ಇರಬಲ್ಲೆನೆ ನಾನು
ಆ ಹಾಡಿನ ಉಸಿರಾಗಲು ಕಾಯುತಿರುವೆನು

ನೀನೆನೆ‌ ನನ್ನೊಲವಿನ ಪ್ರೀತಿಯ ಹೆಜ್ಜೇನು
ಇನ್ನೂ ಹೆಚ್ಚೇನು ನಿನಗೆ ಹೇಳಲಾರೆ ನಾನು
ನನ್ನ ಪ್ರೀತಿಯ ಮಕರಂದ ನಿನಗಾಗೆ ಎಂದು
ನೀ ಬಂದು ಸೇರುವೆಯ ಈಗಲೆ ನನ್ನ ಇಂದು

- ಶ್ರೀಕಾವ್ಯ

18 May 2017, 10:32 pm

ಕತ್ತಲೆಯ ಬೆಳಕು

ಕತ್ತಲೆಯ ರಾತ್ರಿಯಲ್ಲಿ
ಒಂಟಿ ದೀಪವ ಹಿಡಿದು
ಮುದ್ದಿಸಲೇ ನಾ ನಿನ್ನ
ಬದುಕಿನ ಬೆಳಕೇ!!

ಅಂಧಕಾರವ ಅಳಿಸಿ
ಇರುಳನು ನೀ ಮರೆಸಿ
ಬೆಳಕ ತಂದೆಯಾ ನೀ
ಈ ಬಾಳ ಬನಕೆ!!

ಕತ್ತಲಿನ ಬಸಿರಿಂದ
ಜನಿಸಿದ ಕೂಸಂತೆ
ಸರಿಸಬಂದೆಯಾ ನೀ
ಈ ಬಾಳ ಇರುಳ!!

ನಕ್ಷತ್ರ ಲೋಕದ
ನಗುವೊಂದು ಭೂವಿಯಲ್ಲಿ
ಜನನವಾಯಿತೇ ಇಂದು
ನಿನ್ನ ರೂಪದಲ್ಲಿ!!

- ಪಿ.ಜಿ.ಜ್ಯೋತಿ

18 May 2017, 04:52 pm

ಸೆರೆ ಸಿಕ್ಕ ಜೀವ

ಪ್ರೀತಿಯ ಸೆರೆಯಲ್ಲಿ ಸಿಕ್ಕ ನನ್ನ ಜೀವ
ಬಿಡಿಸಿಕೊಳ್ಳುವಷ್ಟರಲ್ಲಿ ತಾನೇ ಬದಲಾಯಿತು
ನಿನ್ನ ಹೆಸರೇ ತನ್ನದೆಂದು ನಾಣ್ಯರೋ ಅದಕ್ಕೆ ಗೊತ್ತಿಲ್ಲವೆಂದು.........

ಅದೆಷ್ಟು ಮಾಯೆ ಗೊಳಿಸಿರುವೆ ನನ್ನ
ನೆರಳನ್ನು ನೀನಿಲ್ಲದೇ ತಾನು ನನ್ನ
ಜೊತೆ ಬರುವುದಿಲ್ಲವೆಂದು ನನನ್ನೇ
ಬಿಟ್ಟು ನಿನ್ನಿಂದೆ ನಡೆದಿದೆಯಲ್ಲಾ ........

ತಂಗಾಳಿ ನಿನ್ನಲ್ಲೇ ನೆಲೆಯಾಯಿತೆ
ನನ್ನ ಉಸಿರಿಗೆ ತಾನು ಹೆಸರಾಗನೆಂದು
ಜೀವಿಸಲು ಅವಶ್ಯಕವಾದ ಗಾಳಿಯೇ
ನನ್ನ ಬಿಟ್ಟು ನಿನ್ನಲ್ಲೇ ಇರುವಾಗ..........

ನಾನೆಗೆ ಬದುಕಲಿ ನೀನಿಲ್ಲದೆ ಗೆಳಯಾ...........

- ಚುಕ್ಕಿ

18 May 2017, 04:27 pm

ಗೃಹಪ್ರವೇಶ

ಪ್ರೀತಿಯೇನೆಂಬ ಮನೆಕಟ್ಟಿ
ಮಮತೆಯೆಂಬ ಹೊಸಲು ಇಟ್ಟಿ
ಕನಸೆನೆಂಬ ವಸ್ತುಗಳನ್ನು
ಖರೀದಿ ಮಾಡಿ ನೂರು ಆಸೆಗಳೊತ್ತು

ವಿಜ್ನಾವಿನಾಯಕನಿಗೆ ಮೊದಲ ಪೂಜೆಸಲ್ಲಿಸಿ
ಅರ್ಚನೆಯಿಂದ ಆರಾಧನೆ ಗೈದು
ನೂತನ ಗೃಹಕ್ಕೆ ಸಂಗಾತಿಯ ಜೊತೆಗೂಡಿ
ಪ್ರವೇಶಿಸುವ ಶುಭಕಾರ್ಯ ಗೃಹ ಪ್ರವೇಶ.

- ಚುಕ್ಕಿ

18 May 2017, 11:32 am

ಹನಿ..

ದೂರ‌ ದಿಗಂತದಲಿ
ಕಾರ್ಮುಗಿಲ ಕಂಡ
ಭುವಿಯು
ಮುಂಗಾರನ್ನು ಸ್ವಾಗತಿಸಲು
ಸಂಭ್ರಮದಿ ಅಣಿಯಾದ
ಬೆಳಗು...

- Indushekar Chinivar

18 May 2017, 07:27 am