Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನವಳು..............

ಬೆಳದಿಂಗಳ ಬೆಳಕಲ್ಲಿ ಮಿನುಗುವ
ತಾರೆಯಾದ ನನ್ನ ಪ್ರೇಯಸಿ
ಚುಂಬನದಿ ನಗಿಸುತ್ತಾಳೆ ನನ್ನ
ಶಶಿಯ ರೂಪದಲ್ಲಿ ಖುಷಿಯಾಗಿ.

ಬರಿದಾದ ಕತ್ತಲಲ್ಲಿ ಬಾಡಿರುವ
ನನ್ನ ಹೃದಯಕ್ಕೆ ಸಿಹಿಯಾದ
ಕ್ಷೀರವಾಗಿ ಬರುವಳು
ಅಮೃತಧಾರೆಯಾಗಿ.............

ಸೊಗಸಾದ ಮಾತಲ್ಲಿ ಮೃದುವಾಗಿ
ನಗುತ್ತಾ ಉತ್ತರಿಸುವಳು ನನ್ನ
ರೂಪಕ್ಕೆ ಪ್ರತಿಬಿಂಬ ತಾನೆಂದು.
ನನ್ನಲ್ಲೇ ಅವಳು ಇರುವಳೆಂದು......

ಅವಳಿಗಾಗಿ ಮುಗಿಲ ಕಡೆ ತಲೆಯೆತ್ತಿ
ನೋಡುತ್ತಾ ನಿಂತಾಗ ಇಷ್ಟೊಂದು
ಕಷ್ಟ ಬೇಡವೆಂದು ಮುಂದೆ ನಿಂತು
ನೋಡು ನಾನು ನಿನ್ನ ಕಣ್ಣಲ್ಲೇ ಇರುವೆನೆಂದು ನೆನಪಿಸುವಳು ನನ್ನವಳು

ಅವಳು ನನ್ನವಳು............

- ಚುಕ್ಕಿ

13 May 2017, 02:28 pm

ನಿನ್ನೊಲವ ಪಾಠಶಾಲೆ.....

ತೆರೆಯೆ ಒಮ್ಮೆ ನಿನ್ನೊಲವ‌ ಪಾಠಶಾಲೆ
ಅರಿಯಬೇಕು ನಿನ್ನ ಕನಸಿನ ಮಾಲೆ
ನಿನ್ನೊಲವ‌ ಶಾಲೆಗೆ ನಾನೊ‌ಬ್ಬನೆ ಶಿಕ್ಷಾರ್ಥಿ
ಆಗಲೇ ಬೇಕು ನಿನ್ನ ಮೆಚ್ಚಿನ ವಿದ್ಯಾರ್ಥಿ

ಹಾಕುವೆನು ಎಂದೂ ತಪ್ಪದೆ ಹಾಜರಾತಿ
ನೀನಿರಲು ಹೇಗೆ ತೋರಲಿ‌ ಅನುಪಸ್ಥಿತಿ
ನಿನ್ನೊಲವ ತಿಳಿಯಲು ಇರುವುದೇನೆ ಮಿತಿ
ನಿನ್ನ ನೋಡುತ ಕಳೆದೋಗುವುದು‌ ನನ್ನಯ ಮತಿ

ಹೊತ್ತು ತರುವೆನೆ ಪ್ರೀತಿಯ ಪಾಠಿಚೀಲ
ಒಲವ ಕಲಿಸಿ ಬೆಳಗೆ ನನ್ನಯ ಬಾಳ
‌ಎರೆಯೆ ನಿನ್ನೊಲವಿನ ಪ್ರೀತಿಯ‌ ಧಾರೆ
ನಾನೆಂದು ನಿನಗೆ ನೋವನು ತೋರೆ

ನನಗಾಗಿ ತೆರೆದು ನೋಡು ನಿನ್ನೊಲವ ಶಾಲೆ
ನಿನಗಾಗಿ ಕಲಿತು ಬರುವೆ ಪ್ರೀತಿಯ ಲೀಲೆ
ನೀನೆ ಹಾಕಬೇಕು ನನ್ನ‌ ಕೊರಳಿಗೆ ಮಾಲೆ
ನಿನ್ನ ಬಿಟ್ಟು ಬಾಳಲಾರೆನು ನನ್ನ ತಿಳಿಯೆ ಬಾಲೆ

- ಶ್ರೀಕಾವ್ಯ

13 May 2017, 12:08 pm

ವಿರಹ

ನಿನ್ನಾಕಾಶವೆಂಬ ಮೊಗದಲ್ಲಿ
ನಕ್ಷತ್ರವೆಂಬ ಕಣ್ಣುಗಳು ನನ್ನ ಸೆಳೆದು
ಮುಗಿಲಾಚೆಯ ಆ... ಚುಕ್ಕಿಗಳು
ನನ್ನ ನೋಡಿ ಅಣಕಿಸುಹುವು
ಹೆಂಡ್ತಿ ನೀ........ಇಲ್ಲದ ವೇಳೆ
ವಿರಹದ ನೋವು ತಾಳಲಾರೆ.

- ರಾಘವೇಂದ್ರ

13 May 2017, 11:25 am

ಕಂಬನಿ....

ಜಾರದಿರೆ‌ ಕಂಬನಿ
ನೀ ಅಲ್ಲ ಕೇವಲ ಕಣ್ಣ‌ ಹನಿ
ನನ್ನ ನೋವಿಗೆ ಸಂಗಾತಿ ನೀ
ನಗುವಲ್ಲು ಮಿಂಚಿ ಹೋಗುವೆ ನೀ

ಹೋಗಬೇಡ ಕಣ್ಣಂಚಲಿ ತಂದು ಬರ
ಜಾರಿ ಕೇಳಬೇಡ ಬೇಡವಾದೆನೆ ತೀರ
ನಾನೂ ಬಯಸೆನು ನೋಡಲು ಕಂಬನಿಯ ಸರ
ನೀ ಜಾರಿದಾಗಲೆಲ್ಲ ಮನದಲಿ ತುಂಬಿದೆ ಬೇಸರ

ನೀನೆ ನೋವ ಮರೆವಿಗೆ ಸಂಚಾಲಕ
ಬೇಸರವ ಹೊತ್ತೊಯ್ಯುವ ಚಾಲಕ
ಮನಸ ಭಾವನೆಗಳು ಸಂಚರಿಸುವ ವಾಹಕ
ಸಾಗುವೆ ಕಣ್ಣಂಚಿಂದ ನಾನಾದಗೆಲ್ಲ ಭಾವುಕ

ನೀನೆ ನೋವಿನ ಹಾಡಿನ ಸ್ವರ
ಜಾರಿ ಹೊತ್ತು ಹೋಗುವೆ ಮನಸಿನ ಭಾರ
ನೀನಿರದೆ ಹೇಗೆ ಇಳಿಸಲಿ ನೋವಿನ ಸಾರ
ಕ್ಷಮಿಸೆ ನನ್ನ ,ಮಾಡುತಿರುವೆ ನಿನ್ನ ಕಣ್ಣಂಚಿಂದ ದೂರ

- ಶ್ರೀಕಾವ್ಯ

13 May 2017, 11:15 am

ಕೋಪ - ಕಣ್ಣೀರು

ಕಣ್ಣೀರಿಗೂ ನಿನ್ನ ಕೋಪದ ಉಷ್ಣತೆ ತಿಳಿದುಹೋಗಿದೆ.
ಅದು ಕೂಡ ಉರಿಯುತ್ತಿರುವ ಕೋಪದ ಧಗೆಯನ್ನು ತಾಳದೆ ಹೊರಗೆ ಬಂದು ಕೆನ್ನೆಯ ಮೇಲೆ ಕುಳಿತು ನಿಟ್ಟುಸಿರು ಬಿಡುತ್ತಿದೆ.

ಕೋಪವನ್ನು ಕಣ್ಣೀರಿನಿಂದ ಆರಿಸುವ ಪ್ರಯತ್ನದಲ್ಲಿ . .

ವ.ರಾ.ಚ

- ವ.ರಾ.ಚ

13 May 2017, 10:40 am

... ನಲ್ಲೆಯ ಕಾಲ್ಗೆಜ್ಜೆ...

ಅವಸರದಿ ನಡೆದಿರಲು ನಲ್ಲೆ
ಅವಳ ಕಾಲ್ಗೆಜ್ಜೆ ಹೇಳಿತು
ದಿನವೂ ಹಿಂದೆ ಬರುತ್ತಿದ್ದ ನಲ್ಲ
ಇಂದೆಕೋ ದೂರದಿಬರುತಿರುವ,
ನಿಧಾನಿಸು ಅವನ ವಲವಿಗೆ ಸ್ಪಂದಿಸು......

- ಪಿ ಅನಿ...

13 May 2017, 08:39 am

ಹನಿ..

ನಿನ್ನ
ಮೆಲ್ಲುಸಿರ ಸೋಕಿ ಮೆಲ್ಲನೆ
ಚಂದಿರ
ಕರಗುವ ಇರುಳು...

- Indushekar Chinivar

12 May 2017, 09:39 pm

ಮನಸು.........

ಮನಸ್ಸಿಗೂ ಮೆದುಳಿಗೂ ನಡೆದ
ಸಂಘರ್ಷಯಲ್ಲಿ ತನ್ನ ಅಧಿಕಾರವನ್ನು
ನಡೆಸುತ್ತಿದ್ದ ಮೆದುಳು ಮನಸ್ಸನ್ನು
ಕ್ಷಣಬಿಡದೆ ನೋಯಿಸಿತು...............

ನೊಂದು ನೊಂದು ಸಹನೆ ಕಳೆದುಕೊಂಡ
ಮನಸು ತಾನು ಇನ್ನು ಅಳಲು ಕಣ್ಣೀರು ಉಳಿದಿಲ್ಲವೆಂದು
ಮೆದುಳಿನ ಮಾತನ್ನು ನಿರಾಕರಿಸಿ
ಸ್ವಚ್ಛಂದವಾಗಿ ಹಾರಡಲು ಸಿದ್ಧವಾಯಿತಿಂದು......

- ಚುಕ್ಕಿ

12 May 2017, 02:14 pm

ಮನಸು ಕನಸು

ಕಪ್ಪು ಬಿಳುಪಿನ ಮನಸು
ಪಡೆದಿರುವುದು ಬಣ್ಣ ಬಣ್ಣದ ಕನಸು
ಹೋಗುವ ಆಸೆಯು‌ ಅದಕೆ‌ ಕಾಮನಬಿಲ್ಲನೆ‌ ಹರಸಿ
ತನ್ನೊಳಗೆ ತುಂಬಿದ ಕಪ್ಪು ಬಿಳುಪಿನ ಚಿತ್ರವ ಸರಿಸಿ

ಯಾರೊ‌ ಮನಸೊಳಗೆ‌ ಕುಂಚವ ತಂದು ಇಟ್ಟರು
ಮತ್ಯಾರೋ ಬಣ್ಣವ ಕೊಂಡು ತಂದರು
ಇನ್ಯಾರೋ ರಂಗಿನ ಕಾಮನಬಿಲ್ಲ ಬಿಡಿಸಿದರು
ಕಾಮನಬಿಲ್ಲ ನೋಡಿ ಮನಸು ಮಾಡುವುದು ತಕರಾರು

ಕಾಮನೆಗಳದೊ ಕಣ್ಣಮುಚ್ಚಾಲೆ ಆಟ
ಕಣ್ಣ ಮುಚ್ಚಿ ಬಿಡುವುದರೊಳಗೆ ತರುವವು ತೊಳಲಾಟ
ಇವುಗಳ ಪಡೆಯಲು ಮನಸಲಿ ಹುಟ್ಟಲು ಹಠ
ಮನಸೊಳಗೆ ಶುರು ಎಂದು ನಿಲ್ಲದ ಹುಡುಕಾಟ

ಗೆಲ್ಲಿಸ ಬಲ್ಲವು ಬದುಕ, ಮನಸ ಮೇಲೆ‌‌ ಮಾಡಿ ಸವಾರಿ
ಕಾಮನೆಗಳು ಆಗುವವು ಆಗಾಗ ವೇಷ ಧರಿಸಿ ‌ಪುಡಾರಿ
ಎಚ್ಚರ ತಪ್ಪಿ ಅಪ್ಪಿದರೆ ಮಾಡುವವು ಪ್ರಪಂಚದಿಂದಲೆ ಪರಾರಿ
ಆಗ ಕಾಪಾಡಲು ಆಗದು ಧರೆಗಿಳಿದು ಬಂದರು ಮುರಾರಿ

- ಶ್ರೀಕಾವ್ಯ

12 May 2017, 01:36 pm

ಮನಸ್ಸಿಗೆ ಮಾತಿದ್ದರೆ........✍

ನನ್ನ ಮನಸ್ಸಿಗೆ ಮಾತಿದ್ದರೆ
ಅದು ತನ್ನಲ್ಲಿ ಏನೂ ಬಚ್ಚಿಡಲ್ಲವೆಂದು
ದೇವರು ಅದಕ್ಕೆ ಮೌನವ ವರವಾಗಿ ಕೊಟ್ಟಿದ್ದಾನೇನೋ..........

ಮೌನ ಮಾತಿಲ್ಲದೆ ಮೌನವಾಯಿತೆಂದು
ತನ್ನಲ್ಲಿ ಅಡಗಿಟ್ಟ ನೆನಪುಗಳನ್ನು ಮೆಲಕು ಹಾಕುತ್ತಾ ಕುಳಿತಿದೆ......

ಹರಿದು ಹೋದ ಕಣ್ಣೀರು
ಮತ್ತೆ ತಾನಿದ್ದ ಕಣ್ಣು ನೆನಪಾಗಿ
ಹಿಂತಿರುಗಿ ನೋಡಿ ಕೇಳಿತು
ನಿನಗೆ ನಾನು ಬೇಡವಾದನೆ ಎಂದೂ......

- ಚುಕ್ಕಿ

12 May 2017, 01:34 pm