ಏನು ಶಕ್ತಿ ಅದೆಂಥಾ ಭಲಾಢ್ಯ,
ಮೂಡಣ ದಿಕ್ಕಿನಿಂದೊಂದಿಷ್ಟು,
ಪಡು,ತೆಂಕ,ಬಡಗಣದಿಂದೊಂದಷ್ಟುಷ್ಟು,
ಅಪ್ಪಳಿಸಿ ಬೊಬ್ಬಿರಿಸಿ ಬೋರ್ಘರೆಸಿ,
ತೀರಕ್ಕೆ ತಲುಪಿಸಿ ಉಪ್ಪು ನೀರನು,
ಕ್ಷಣಾರ್ಧದಲಿ ವಾಯುಗಾರನು...!!
ಕಡಲದೆಷ್ಟು ಸುಂದರ ನಗರಿ,
ಜಲಜೀವನವು ನಿತ್ಯಾಭಾರಿ,
ಹೊಳೆವ ರತ್ನ ಕಡಲ ಸಿಂಧೂರಿ,
ಸಂಧ್ಯಾರಾಗವಾಡಿ ಸೂರ್ಯನ ತಾ ನುಂಗಿ,
ಕರಾಳ ಕತ್ತಲಿಗೆ ಸದ್ದು ಗದ್ದಲಗಳೇ ರೂವಾರಿ,
ಒಮ್ಮೊಮ್ಮೆ ಮನುಕುಲಕೆ ಅದೆಷ್ಟು ಕ್ರೂರಿ...!!
ಅಲೆಗಳ ತೂಗಾಟಕೆ ತೂಗಿ ತಲೆದೂಗಿ,
ಮಿರ ಮಿರ ಮಿಂಚು ಮಧ್ಯಾಹ್ನದ ಹೊತ್ತಿಗೆ,
ಹುರುಪು ಅದೇ ಹೊರೆಯು ಅದೇ,
ಉತ್ಸಾಹಕೆ ಕೊನೆಯಿಲ್ಲ,
ಅಲೆಗಳ ಜೀವಕ್ಕೆ ಸಾವಿಲ್ಲ,
ಮನದ ಮುದಕೆ ತುಸುತಾಸು ತೀರದಲ್ಲಿ ಸಾಕಲ್ಲ...!!
ಆಗಾಗ ಮರಳಿಂದ ಇಣುಕಿ ಓಡಿ,
ಗುಳಿಗಳೊಳಗೆ ಸೇರೋ ಏಡಿಯ ಹೆಜ್ಜೆ
ಅಳಿಸಲು ಹರಿದು ಬಿಳಿನೊರೆಯ ನೀರು,
ಇನ್ನಾರದೋ ಹೆಜ್ಜೆಗೆ ಮರಳಿ ಸೇರಿಸಿ ಮರಳು,
ಮಾತಿಲ್ಲ ಕಥೆಯಿಲ್ಲ ಕೆಲಸಕ್ಕೆ ರಜೆಇಲ್ಲ,
ಅಪ್ಪಳಿಸಿ ಕುಪ್ಪಳಿಸಿ ಬರುವ ಅಲೆಗಿಲ್ಲಿ ಅಳಿವಿಲ್ಲ..!!
ಪ್ರೀತಿಯ ಪುಟಗಳ ಮೇಲೆ ನೀ ಬರೆದ ಆ ಹೆಸರು ನನ್ನ ಹೆಸೆರಲ್ಲ
ಹೃದಯದ ಮಹಲಿನಲ್ಲಿ ನೀ ಕೊರೆದ ಆ ಹೆಸರು ನನ್ನ ಹೆಸರಲ್ಲ
ನಿನ್ನ ಕಣ್ಣಿನ ಕನ್ನಡಿ ಅಲ್ಲಿ ತುಂಬಿ ತುಳುಕಿದ ಭಾವನೆ ನನಗಲ್ಲ
ಆದರೂ ನೀನೆ ಏಕೆ ನನಗೆಲ್ಲಾ?
ಅನಾಮಿಕ..........
ಅಂದು ಸಂಜೆ............................ .. ಅಂದು ಸಂಜೆ ಕಡುಗೆಂಪು ಬೆಳಕಿನಲಿ
ಅ ದಿಬ್ಬದ ಮೇಲಿನ ಒಂಟಿ ಮಾವಿನ ಮರದ ಕೆಳಗೆ ಕುಳಿತು ಯೋಚಿಸುತ್ತಿದ್ದೆ ಅವಳ ನೀರೀಕ್ಷೇಯಲಿ.
ತಂಗಾಳಿ ಬೀಸುತ್ತಿತ್ತು ಎಲ್ಲೆಡೆ ಚಿಗುರೋಡೆದಿತ್ತು ನನ್ನ ಮನಸ್ಸು ಆರಳಿತ್ತು.
ನನ್ನ ಮುಂದೆ ಹಾದು ಹೋಗುವ ಕಾಲುದಾರಿಯನ್ನೆ ನೋಡುತ್ತಿದ್ದೆ ತದೇಕ ಚಿತ್ತದಿಂದ.
ದೂರದಿಂದೊಂದು ಆಕಾರ ಸಕಾರಗೊಳ್ಳುತ್ತ ಬಂದು ನನ್ನೆದಿರು ನಿಂತಿತು ಆ ಹುಡುಗಿಯ ರೂಪದಲಿ.
ನನ್ನನ್ನು ನಾನು ನಂಬದಾದೆ
ಹೃದಯ ತಲ್ಲಣಿಸಿತ್ತು ತಳಮಳಗೊಂಡೆ
ಇರಲಿ ಎಂದು ಬಿಗಿದಪ್ಪಿ ಮುತ್ತು ಕೊಟ್ಟೆ
ಹಾಗೆಯೇ ಮಾಯವಾದಳು ಆ ಹುಡಗಿ. ಬೆಚ್ಚಿಬಿದ್ದು ಕೂಗಿ ಕರೆದೆ ಸುತ್ತೆಲ್ಲ ಹುಡುಕಿದೆ
ಸಿಗಲ್ಲಿಲ್ಲ ,ಕಾಣಸಲಿಲ್ಲ..
ಎಲ್ಲೆಲ್ಲೂ ಅನುರಣಿಸಿದಂತಾಯಿತು
"ನಾನು ನಿನ್ನ ಕನಸಲಿ ಮನಸಲಿ ಮಾತ್ರ ಇರುವೆ
ನಾನು ನಿನ್ನ ನೆನಪಲಿ ನೆನಪಾಗಿ ಉಳಿವೆ
ನಾನು ತಿರುಗಿಬಾರದ ನಾಡಲ್ಲಿರುವೆ".