Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀ ಮರೆತ ಒಂದು ಕ್ಷಣ

ನೀ ಮರೆತ ಒಂದು ಕ್ಷಣ
ನಾ ನೊಂದ ಕೋಟಿ ಕ್ಷಣ!!
ಈ ಜನುಮ ಬಹಳ ದಿನ
ಜನನಕ್ಕೆ ಒಂದು ದಿನ!!

ಸಂಭ್ರಮ ನನಗಿಲ್ಲ
ಸಂಬಂಧ ಜೊತೆಗಿಲ್ಲ!!
ಇರುವ ಖುಷಿ ನೀ ಒಂದೇ
ನೀ ಅದನು ಅರಿತಿಲ್ಲ!!

ಮರೆತರೂ ನೆನಪಿಸಿಕೊ
ಮರೆತ ಕ್ಷಣ ಮರಳೊಲ್ಲ!!
ಹೇಗಾದರೂ ಸರಿಯೇ
ಓ ಖುಷಿಯೇ ನೀ ಅರಿಯೇ!!

- ಪಿ.ಜಿ.ಜ್ಯೋತಿ

03 Oct 2018, 07:31 pm

ಕಳೆದು ಹೋಗಿವೆ

ನನ್ನ ಕನಸುಗಳು ಕಳೆದು ಹೋಗಿವೆ
ಯಾರಿಗಾದರೂ ಸಿಕ್ಕಿದ್ದಾವ?

ಮನಸು ಮೈಮರೆತು ಮೌನವಾಗಿ
ಮುದುರಿದೆ ಕಂಡಿದ್ದೀರಾ?

ಹ್ರೃದಯ ಸೋತು ನೊಂದು
ತುಡಿಯುತಿದೆ ನೋಡಿದಿರಾ?

ಕಾಲನ ಹೊಡೆತಕ್ಕೆ ಸಿಕ್ಕು ದೇಹ
ಸವೆದಿದೆ ಸಂತೈಸುವಿರಾ?

ಆ ದೇವನ ಕೃಪೆಗೆ ಕಾಯುತಿರುವೆ
ನನ್ನ ಮನವಿ ತಿಳಿಸುವಿರಾ?

ನನ್ನ ಕನಸುಗಳು ಕಳೆದು ಹೋಗಿವೆ
ನನ್ನ ಕನಸುಗಳು ಕಳೆದು ಹೋಗಿವೆ

ಕವಿ ರಾಜ

- kavita Rajesh

03 Oct 2018, 11:13 am

ಅವಳು

ಅವಳು ಹಾಗೆಲ್ಲ ಬರುವುದಿಲ್ಲ
ಸಾರಾಯಿ ಅಂಗಡಿಗೆ
ಎಳೆತರಲಾಗುವುದು ಅವಳನು
ಮತ್ತ ಗಂಡಸರ ಮಾತುಗಳಲಿ
* * *
ಈ ಜನನಿಬಿಡ ಮಾರುಕಟ್ಟೆಯಲಿ
ನೂಕು ನುಗ್ಗಲಿನ ಸರತಿ ಸಾಲಿನಲಿ
ನಮ್ಮ ಕವಿಯೂ ನಿಂತಿದ್ದಾನೆ
ತನ್ನ ನಾಲ್ಕು ಸಾಲಿನ ಕವಿತೆಗೆ
ನಾಲ್ಕು ಹೊಗಳಿಕೆಯ ಮಾತು
ಬರೆಸಿಕೊಂಡು ಹೋಗಲು
* * *
ವಿಶ್ವದ ಯಾವುದೋ ಮೂಲೆಯ
ಅದ್ಭುತವನು ಕಾಣಲು
ಪ್ರವಾಸ ಹೋದವನು
ನಿಬ್ಬೆರಗಾಗುವುದು
ತನ್ನ ನೆರೆಯವನನು ಅಲ್ಲಿ ಕಂಡು
* * *
ಕೇಳುವ ಕಿವಿಗಳಿದ್ದರೆ
ಕರಟಿದ ಪಾತ್ರೆಗಳೂ
ಒಂದರೆಗಳಿಗೆ ಕೂತು
ಅಡುಗೆಯವಳ
ಕಮರಿದ ಬದುಕಿನ
ಕಥೆ ಹೇಳುತ್ತಿದ್ದವು
* * *
ಈ ಜನರಿಗೇನಾಗಿದೆಯೋ
ಹಣ ಕೊಟ್ಟು
ಇಷ್ಪಿಷ್ಷೇ ಖರೀದಿಸುತ್ತಿದ್ದಾರೆ
ಉಚಿತವಾಗಿ ಸಿಗುವ
ಪ್ರೀತಿಯನು
- ಕಾದಂಬಿನಿ

- ಕಾದಂಬಿನಿ

03 Oct 2018, 11:03 am

ಪ್ರೀತಿಯಂದರೆ..?

ಸರಿಯಿದ್ದಾಗ ಒಬ್ಬರನೊಬ್ಬರು ಹೊಗಳುವ ಮನ್ನಣೆ..
ಮರೆಯಾದಗ ನಿದ್ದೆಗೆಸುವ ಶಿವರಾತ್ರಿಯ ಜಾಗರಣೆ..
ಖರೆಯಿದ್ದಾಗ ರುಚಿಯನಚ್ಚುವ ಮಂಡಾಳ ಒಗ್ಗರಣೆ..
ಪರಿಬಂದಾಗ ಶೆಟ್ಟರ ಅಂಗಡಿಯಲ್ಲೂ ನಡೆಯದ ಎಂಟಾಣೆ..

ಚೆಂದವಿದ್ದಾಗ ಚುಂಬನಗಳ ಸುರಿಮಳೆ..
ಬಂದಬಿದ್ದಾಗ ಸಿಕ್ಕಲ್ಲಿಗೆ ಚುಚ್ಚುವ ಗೋಡೆಮಳೆ..
ಅಂದವಿದ್ದಾಗ ಸುಂದರಕೆ ಹಾಕುವ ಕೈಬಳೆ..
ಕಂದಆದಾಗ ಹುಚ್ಚನಿಗಾಕುವ ಕಾಲ್ಬಳೇ..

ಸಖತ್ತಾಗಿದ್ದಾಗ ತಣ್ಣನೆಯ ಇಂಪಾದ ಗಾಳಿ..
ಎಕ್ಕುಟ್ಟೋದಾಗ ಗಧ-ಗಧ ನಡುಗುವ ಚಳಿ..
ಮಿಕ್ಕೆಚ್ಚೆದಾಗ ಲೋಕದ ಜ್ಞಾನವಿಲ್ಲದ ಚಾಳಿ..
ಇಕ್ಕಟ್ಟಾದಾಗ ಕಣ್ಣು-ಮುಚ್ಚುವಷ್ಟು ಕೆಟ್ಟ ಹುಳಿ..
ಸುಗ್ಗಿ..

- ಆರ್ ಎಸ್ ಸುಗ್ಗಿ.

02 Oct 2018, 08:45 pm

ಯುದ್ಧದ ಹಾದಿ

ಯಾರ ಮಹಲನು ಕಟ್ಟುತ್ತಾ ಕಟ್ಟುತ್ತಾ
ಕುಸಿ ಕುಸಿದು ಕಡಿದು ಬೀಳುವುದು
ಯಾರಿಗೋ ತುಂಬಿ ಕೊಡಲು
ಒಂದೊಂದನೇ ಜೋಡಿಸುತ್ತಾ ಜೋಡಿಸುತ್ತಾ
ಒಡೆದೊಡೆದು ಚೂರಾಗಿ ಚದುರಿಹೋಗುವುದು
ಯಾರ ಗೋಪುರಕೋ 
ಮಣ್ಣು ಹೊರುತ್ತಾ ಹೊರುತ್ತಾ 
ಮಣ್ಣಲ್ಲಿ ಮಣ್ಣಾಗುವುದು
ಯಾರ ಕೊಳೆ ತೊಳೆಯುತ್ತಾ ತೊಳೆಯುತ್ತಾ
ಮಲಿನವಾಗಿ ನಾರುವುದು

ಇದೆಲ್ಲ ಕಂಡಾಗೆಲ್ಲ 
ನಗು
ಅಥವಾ ಅಸಹನೆ
ಅಥವಾ ಹೇಸಿಗೆ ನಿನಗೆ

ಉತ್ಸವ
ಪೂಜೆ
ಮೆರವಣಿಗೆ
ಮತ್ತು
ಒಳಗೊಳಗೇ ಬೇಯುವುದು
ಯಾವುದು ದಿಟವೋ ಯಾವುದು ಸಟೆಯೋ
ಅವಳಾದರೋ ನಿನ್ನ ಒಂದು ಸಿಟ್ಟಿಗೆ
ಶಿರ ಕಡಿಯಲ್ಪಡುವ ದೇವರು

ಹತ್ತಿಗೆ ಹತ್ತಿದ ಬೆಂಕಿ
ಹಬ್ಬಿದ್ದೇ ತಿಳಿಯುವುದಿಲ್ಲ
ನಿನ್ನ ಬುಡ ಸುಡತೊಡಗಿದ ಮೇಲೆ
ಅದೆಲ್ಲವೂ ನಿನಗೂ ತಿಳಿಯದೇ ಇರುವುದೂ ಇಲ್ಲ
ಎನ್ನುವುದು ಪ್ರತಿಕಾರದ ಹಾದಿ

ಪ್ರೀತಿಯ ಪೀಯೂಷದ ರುಚಿ ನೆಕ್ಕಿ
ಮತ್ತಳಾದ ಯಾವ ಒಬ್ಬಳೂ
ಈ ಹಾದಿಯಾಗಿ 
ಎಂದೂ ಪಯಣಿಸುವುದಿಲ್ಲ

ನಿನಗೆ ಗೊತ್ತಿರಲಿಕ್ಕಿಲ್ಲ
ಗಾಯಗೊಂಡಷ್ಟೂ ನಗುತ್ತ ಎದೆಯೊಡ್ಡುವ
ರಣಕಣದ ಹುಚ್ಚುಹಿಡಿದ ಯೋಧನಂತೆ 
ಅವಳೊಬ್ಬಳು ಭಂಡಳು

ಈಗ ಗೊತ್ತಾಯಿತಲ್ಲವೇ
ಸರಿ ನೀನೀಗ ಹೊರಡು
ಸೋಲು ಗೆಲುವು 
ಮೊದಲೇ ನಿರ್ಣಯವಾದ ಯುದ್ಧಕೆ
ಹೊರಡು ನೀನು
ನಿನ್ನ ಖಡ್ಗದ ನಾಲಗೆಗೆ 
ನಂಜು ಲೇಪಿಸಿಕೊಂಡು 
- ಕಾದಂಬಿನಿ

- ಕಾದಂಬಿನಿ

02 Oct 2018, 04:26 pm

ಜೇಡರ ಬಲೆ

ಜೇಡರ ಬಲೆಯೋಂದು
ಸುಂದರ ಇದೆ ಎಂದು
ಚಂದಿರ ಬಂದಾನು
ಉಯ್ಯಾಲೆ ಆಡಲು!!
ಮೈಯನು ಮರೆತಿರುವ
ಚಂದಿರ ಸಿಲುಕಿರುವ
ಅಂದದ ಬಲೆಯೊಳಗೆ
ಚಂದದಿ ತಾ ಮಲಗಿ!!

ಜೇಡರ ಹುಳುವೊಂದು
ಬೇಟೆಯ ತಾ ಕಂಡು
ಬಲೆಯಲಿ ಸಿಲುಕಿರುವ
ಚಂದಿರನೆಡೆ ಬಂತು!!
ಇರುಳಿನ ಸೆಲೆಯಲ್ಲಿ
ಹೊಳೆಯುವ ಮೈ ಕಾಂತಿ
ಚಂದದಿ ಮಲಗಿರುವ
ಸುಂದರ ಬಲೆಯೊಳಗೆ!!

ಚಂದಿರನನು ಕಂಡಾಗ
ಶುರುವಾಯಿತು ಅನುರಾಗ
ಜೇಡರದು ಒಂದೇ ಕೋರಿಕೆ
ನೀ ಬೇಕು ನನಗೀಗ!!
ದಿಗಿಲಾದ ಚಂದಿರಗೆ
ನೆನಪಾಯಿತು ಆ ಬಾನು
ಮುಗಿಲಿಗೂ ಮಿಗಿಲಾದ
ಉಯ್ಯಾಲೆ ಬೇಕೇನು!!

ತಾರೆಗಳ ಕಥೆ ಹೇಳಿ
ಹಿಂದಿರುಗುವ ಮಾತಿಟ್ಟು
ಕಾಯುವಂತೆ ಹೇಳಿ ಹೊರಟ
ಚಂದಿರನು ನೆಪವೊಡ್ಡಿ!!
ಚಂದಿರನ ಮಾತ ನಂಬಿ
ಕಾಯುತಿರುವ ಜೇಡರಗೆ
ಅವನ ಆಟ ತಿಳಿದಿಲ್ಲ
ಅವನು ಬರನು ಹಿಂದಿರುಗಿ!!

- ಪಿ.ಜಿ.ಜ್ಯೋತಿ

02 Oct 2018, 02:42 pm

ಮಹಾತ್ಮಾ ಗಾಂಧೀಜಿ

ಸತ್ಯಾಗ್ರಹ ಎಂಬ ಪದಕ್ಕೆ ಮಾಡಿದೆ ನೀನು ನಾಂದಿ,
ಅಹಿಂಸಾತ್ಮಕವಾಗಿ ಹೋರಾಡಿ ನೀನು ಸ್ವಾತಂತ್ರ್ಯವನ್ನು ತಂದಿ,
ನಿನ್ನ ಆದರ್ಶವನ್ನು ಮೆಚ್ಚಿ ಪಾಲಿಸಬೇಕು ನಮ್ಮ ಮಂದಿ,
ಜೈ ಹೋ ರಾಷ್ಟ್ರಪಿತ ಮಹಾತ್ಮ ಗಾಂಧಿ,,,,

- shridhartalawar

02 Oct 2018, 01:42 pm

ಹುಟ್ಟುಹಬ್ಬದ ಶುಭಾಶಯಗಳು

ಬದುಕಿನ ಹಳಿಯ ಮೇಲೆ ಹಾದು ಹೋಗಿದೆ ಸಿಹಿ ಕಹಿಯ ಸವಿ ನೆನಪಿನ ಫಲಕಗಳು...
ಬರೆದಿದ್ದು ಯಾರೋ.. ಅಚ್ಚಳಿಯದೆ ಉಳಿದಿವೆ ಕಳೆದೊದ ಆ ಸುಂದರ ಕ್ಷಣಗಳು....

ಕಳೆದೊದ ಸಮಯ ಮತ್ತೆ ಬಾರದಿದ್ದರೇನು ಹಳೆ ನೆನಪಿನ ಜೊತೆ ಜೀವನದ ಪಯಣ ನಡೆಸೋಣ
ಮೇಣದಾ ಬತ್ತಿ ಹಚ್ಚುವ ಮೂಲಕ ಮತ್ತೆ ಮತ್ತೆ ಆ ಕ್ಷಣವ ಆರದಂತೆ ಆಚರಿಸೋಣ.....

- ishwar

02 Oct 2018, 10:09 am

ಸಮಯ ಹೇಳಿದ ಹಾಗೆ....

ಗಡಿಯಾರದ ಮುಳ್ಳು ಗಡಿ ದಾಟಿ ಹೋಗಿದೆ
ಬದುಕಿನ ಚಲನಕ್ಕೆ ಕೈ ಸಿಗದೆ....
ಒಂದೊಂದು ಕ್ಷಣಗಳು ಒಂದೊಂದು ಯುಗವಾಗಿವೆ
ಕಷ್ಟವಾಗಿದೆ ಬದುಕು ಅಂಗ್ಯಯನ ಮುಷ್ಠಿಯಲ್ಲಿ ಗಡಿಯಾರ ಜೊತೆ ಇಲ್ಲದಿರುವಾಗ...

ಆದರೇನು.......
ಗಡಿ ದಾಟದಂತೆ ತಡೆವ ನನ್ನ ಸ್ನೇಹ ಬಳಗ ಜೊತೆಗೂಡಿ ತಡೆ ಹಿಡದಿದೆ
ಬರುವ ಅಡ್ಡ ಗೋಡೆಯ ಮೇಲೆ ಮನೆ ಕಟ್ಟಿ ಬದುಕಿ ತೋರಿಸುವೆ.........

- ishwar

02 Oct 2018, 10:08 am

ಚೊಂಬಣ್ಣ

ಹಿಂದೂಗಳಿಗೆ ರಾಮಣ್ಣ..
ಮುಲ್ಲರಿಗೇ ಅಲ್ಲಾಣ್ಣಾ..
ಕ್ರಿಶ್ಚಿಯನ್ನೆರಿಗೆ ಯೇಸಣ್ಣಾ..
ಅವರ ರೀತಿ-ನೀತಿ ಗೊತ್ತೇನಣ್ಣಾ??

ಲಿಂಗಾಯತರಿಗೆ ಬಸಣ್ಣ..
ಕುರುಬರಿಗೆ ಕನಕಣ್ಣ..
ಆಗಸರಿಗೆ ಅಪ್ಪಣ್ಣ..
ಅವರ ತತ್ವದ-ಸತ್ವ ಪಾಲಿಸಿರೇನಣ್ಣಾ??

ಗೌಡರಿಗೆ ಕೆಂಪಣ್ಣ..
ಬೇಡರಿಗೆ ಮಹರ್ಷಿಣ್ಣಾ..
ಮರಾಠರಿಗೆ ಶಿವಣ್ಣ...
ಅವರ ಶೌರ್ಯದ-ಮೌರ್ಯ ಗೊತ್ತೇನಣ್ಣಾ??

ಹರಿಜನರಿಗೆ ಭೀಮಣ್ಣ..
ಬ್ರಾಹ್ಮಣರಿಗೆ ಕೃಷ್ಣಣ್ಣಾ..
ರೆಡ್ಡಿಯರಿಗೆ ವಾಸಣ್ಣ..
ಅವರ ಜಪದ-ತಪವ ಅರಿತಿರೇನಣ್ಣಾ??

ಮನುಷ್ಯತ್ವಕೆ ಬೆಲೆ ಎಂದಣ್ಣ??
ಜಾತಿ-ಧರ್ಮಕೆ ಕಚ್ಚಾಟ ಯಾಕಣ್ಣ??
ರಾಜಕೀಯದವರ ಆಟಕೆ ಬಲಿ ಬೇಡಣ್ಣ!!
ಕೊನೆಗೆ ಹೋಗುವಾಗ ಸಿಗುವುದು ಚೊಂಬಣ್ಣ!!!
ಸುಗ್ಗಿ..

- ಆರ್ ಎಸ್ ಸುಗ್ಗಿ.

30 Sep 2018, 09:17 pm