ದಿಟ್ಟೆ ಹೆಣ್ಣು ಗೌರಿ
ಸೇರಿದಳು ಗೋರಿ
ಬೆದರಿಕೆಗೆ ಬಗ್ಗದ ಹೋರಾಟಗಾರ್ತಿ
ಬಂದು ಹೊತ್ತೊಯ್ದಿದೆ ಅವಳ ಸಾವಿನ ಸರತಿ
ಲೇಖನಿಯ ಬರಹ ಖಡ್ಗಕ್ಕಿಂತ ಹರಿತ
ಆ ಬರವಣಿಗೆಯೆ ಕೊಟ್ಟಿತವಳಿಗೆ ಗುಂಡಿನ ಹಿರಿತ
ದುಷ್ಟ ಶಕ್ತಿಗಳ ಕೈ ಮೇಲಾಯಿತು
ಗುಂಡಿನ ಮೊರೆತ ಕೇಳಿಯೆ ಬಿಟ್ಟಿತು
ಸುಳ್ಳು ಮೋಸ ದ್ವೇಷ ಕೆಟ್ಟ ಶಕ್ತಿ ಗೆದ್ದೆ ಬಿಟ್ಟಿತು
ಕಾಣದ ಕೈ ಮೋಸದಾಟ ಆಡಿಯಾಯಿತು
ಮುಗ್ಧ ಜೀವ ಸಾವಿನ ಮನೆ ಸೇರಿತು
ನ್ಯಾಯ ನಿಷ್ಠೆ ಹೋರಾಟ ಮಣ್ಣ ಪಾಲಾಯಿತು
ಜನ ಜೀವನಕ್ಕಾಗಿ ಹೋರಾಟ
ಆಯಿತವಳಿಗೆ ಸಾವು ಬದುಕಿನೊಂದಿಗೆ ಆಟ
ನಕ್ಸಲರ ಮನಸನ್ನೆ ಕರಗಿಸಿದವಳು
ಸಮಾಜದೊಳಗೇ ಇರುವ ರಾಕ್ಷಸರನ್ನು ಮರೆತಳು
ಮನುಷ್ಯ ಮುಖದವರು ವ್ಯಾಘ್ರ ರೂಪ ತಾಳಿದರು
ಜೀವಕೆ ಬೆಲೆಯೆ ಇರದೆ ಕಾದು ಇರುಳಲಿ ಕೊಂದರು
ತೆಗೆದರೇನಂತೆ ಜೀವ, ಮಣ್ಣಾದರೇನು ದೇಹ
ನಿಲ್ಲದು ನ್ಯಾಯ ನೀತಿ ಬದುಕಿಗಾಗಿನ ಹೋರಾಟದ ದಾಹ
ಸುಧಾರಕಿ, ಹುಟ್ಟು ಹೋರಾಟಗಾರ್ತಿ, ವಿಚಾರವಾದಿ
ನಿರಂತರ ಸಮಾಜದಲಿ ಸವೆಸಿ ಹೋದರು ಬದುಕಿನ ಹಾದಿ
ಬದುಕಿಗಾಗಿನ ಹೋರಾಟಕೆ ಇಂತವರೇ ಗುರುವಿನ ರೀತಿ
ಈ ಸಾವು, ಉಳಿದವರ ನ್ಯಾಯಕ್ಕಾಗಿ ಹೋರಾಡಬೇಕು ದೂರತಳ್ಳಿ ಭೀತಿ
ಬೇಕಿಲ್ಲ ಹೋರಟದಲ್ಲಿ ಜೀವ ಕಳೆದುಕೊಂಡವರಿಗಾಗಿ ಅಶ್ರುತರ್ಪಣ
ಮಾಡಿಕೊಳ್ಳಬೇಕಾಗಿದೆ ನಮ್ಮನ್ನು ಸಮಾಜ ಸುಧಾರಣೆಗಾಗಿ ಅರ್ಪಣ
ಈ ಸಾವಿನಿಂದಾಗಿ ಹುಟ್ಟಿದರೆ ಹೋರಾಟಕ್ಕಾಗಿ ಒಂದು ಬಣ
ಆಗಲೇ ಆ ಜೀವದ ತ್ಯಾಗಕ್ಕೆ ನಿಜವಾದ ಅರ್ಥ ಸಿಗುವುದೆಂದು ತಿಳಿಯಬೇಕು ನಮ್ಮ ಮನ
ಹಿರಿಯರು ಪದ ಕಟ್ಟಿ ಕುಣಿದ ಸಾಹಿತ್ಯ
ಜನಪದ ಕಲೆಗಳು....ಅಂತ್ಯವಾಗುತ್ತಿವೆ
ನಮ್ಮಿಂದ
ಕೋಲಾಟ. ಬಯಲಾಟಗಳು ಸುಗ್ಗಿ
ಕುಣಿತಗಳು............ಅಂತ್ಯವಾಗುತ್ತಿವೆ
ನಮ್ಮಿಂದ
ಜಕಣಚಾರಿಯಂತವರ ಮಹಾನ್ ಶಿಲ್ಪಿಗಳ
ವರವಾಗಿದ್ದ ಕಲೆಗಳು .... ಅಂತ್ಯವಾಗುತ್ತಿವೆ
ನಮ್ಮಿಂದ
ಪಂಪರನ್ನಾದಿಗಳು.. ರಚಿಸಿದ ಪದ್ಯಗಳ
ಸಾಹಿತ್ಯ...ಬೆಳವಣಿಗೆ ಅಂತ್ಯವಾಗುತ್ತಿವೆ
ನಮ್ಮಿಂದ
ವಾಲ್ಮೀಕಿವ್ಯಾಸ ಮಹರ್ಷಿಗಳು ಬರೆದ
ರಾಮಾಯಣಮಹಾಭಾರತಗಳ ಮಹತ್ವ
ಅಂತ್ಯವಾಗುತ್ತಿವೆ....... ನಮ್ಮಿಂದ
ಪೂರ್ವಜರಿಂದ ಬಂದ ನಮ್ಮ ........
ಮಾತೃಭಾಷೆಗಳು... ಅಂತ್ಯವಾಗುತ್ತಿವೆ
ನಮ್ಮಿಂದ
ನಾಲ್ಕನೆ ಶತಮಾನದಲ್ಲೇ ಉಲ್ಲೇಖವಾಗಿತ್ತು
ನಮ್ಮ ಕನ್ನಡ ಭಾಷೆ ದಾಯಬಿಟ್ಟು ನಮ್ಮ
ನಿಮ್ಮೆಲ್ಲರ ಮಾತೃ ಭಾಷೆಯಾದ ಕನ್ನಡವನ್ನ
ಉಳಿಸಿ....ಬೆಳೆಸಿ
ಓ ಸದ್ಗುರುವೇ
ನೀನು ಹೇಳಿದ್ದು ಪುಣ್ಯಕೋಟಿಯ ಹಾಡು
ಪಾಪಿಗಳ ಪ್ರಾಯಶ್ಚಿತ್ತ
ಭಂಡರು,ಪುಂಡರು,ಪ್ರಚಂಡರು
ಬೈರಾಗಿಗಳಾಗುವ ಮಾತು.
ಬೌಧ್ದಿಕ ವಿವೇಚನಾರಹಿತ
ಭಂಡರು,ಸೋಗಲಾಡಿಗಳಿಗೆ
ಕಿವಿ ಹಿಂಡುವರಾರು?
ಓ ಸದ್ಗುರುವೇ
ನೀನು ಕಲಿಸಿದ್ದು ಮೌನ,ಧ್ಯಾನ
,ಪ್ರಾರ್ಥನೆಯಂತಹ ಚಿಂತನೆ
ಜಗದ ಜನರ ಕೊಲ್ಲುವ ಪರಿಪಾಠ
ಹನುಮನ ಬಾಲದಂತೆ ಬಳೆಯುತ್ತಿದೆ
ಸಮುದಾಯದಲ್ಲಿ!
ಎದೆಹಾಲು ನೀಡಿದ ತಾಯಿಯೇ
ಕತ್ತು ಹಿಸುಕಿ ಕೊಂದು ಸಾಯಿಸುವಂತೆ.
ಕಾರ್ಕೋಟಕ ವಿಷ ಸರ್ಪಕ್ಕೂ
ಕರುಣೆ,ಅಂತಃಕರಣ ಇದೆ.
ಒಣ ಮಾತು ಹೇಳುವ ಮನಜರಲ್ಲಿ
ಮಮಕಾರದ ಮಾತು ಇನ್ನೆಲ್ಲಿ?
ಓ ಸದ್ಗುರುವೇ
ಮಾರುಕಟ್ಟೆಯಲ್ಲಿ ಈಗ ಸಾಲು
ಸಾಲಾದ ಕೊಲೆಗಳು
ಕೊಂಡು ಕೊಳ್ಳುವವರೆಲ್ಲರು ಬಕಾಸುರರು
ಸಮಾಜ ತಿದ್ದುವ ಸೋಗಲಾಡಿಗಳು
ಮಂಚದ ಮೇಲೆ ಮಲಗಿದ್ದಾರೆ
ಕಾಣುವ ಬ್ರಿಟಿಷರರನ್ನು ಕೊಂದ ಚಿತ್ರಪಟ
ನೇತುಹಾಕಿದ್ದಾರೆ ಅದಕ್ಕೆ
ಬಹಳ ಬೆಲೆ ಕಡಿಮೆ.
ಕಾಣದ ಬ್ರಿಟಿಷರನ್ನು ಹುಡುಕಿ ಕೊಡಲು
ತುಂಬಾ ಬೆಲೆಯುಳ್ಳ
ಜಾಹೀರಾತು ಹೆಚ್ಚಾಗಿ ಮಾರಟವಾಗುತ್ತಿದೆ.
ಯಾವುದನ್ನು ಖರೀದಿಸಲಿ.
ಓ ಸದ್ಗುರುವೇ
ನೀನು ಕಲಿಸಿದ ಪದ್ಯ ಅರ್ಥವಾಗುತ್ತಿಲ್ಲ
ಹಸಿದ ಹೆಬ್ಬುಲಿಯೊಂದು
ಹುಸಿಯಾಗಿ ನುಡಿಯದ ತಾಯಿ ಹೃದಯದ
ಗೋವಿನ ಹಾಡು.
ಹಿಂಸಿಸದೆ,ಜರಿಯದೆ, ಹರಿದು ತಿನ್ನದೆ ,ಹವಣಿಸುತ್ತಿತ್ತು
ಹೊಂಚು ಹಾಕಿ ತಿನ್ನದೆಯೇ
ಹಸಿವೆಯಿಂದ ಬಳಲುತ್ತಿತ್ತು.
'ಸತ್ಯಂ ವದ ದರ್ಮಂ ಚರ'ಎಂದು
ಹಸಿದ ಹುಲಿ ಹಾರಿ ನೆಗೆಯಿತು.
ಆದರೆ
ಇಂದೇಕೆ ಬಲಯಾದಳು ಆ ಗೌರಿ.?
ಓ ಸದ್ಗುರುವೇ
ಹುಟ್ಟು ಆಕಸ್ಮಿಕ ಸಾವು ಸಹಜ
ಇದು ನೀನು ಕಲಿಸಿದ ದಿವ್ಯಪಾಠ
ಮಣ್ಣಲ್ಲಿ ಮಣ್ಣಾಗಿ ಹೋಯಿತಲ್ಲ.
ಹೋದವರೆಲ್ಲರೂ
ಹಾರಾಡಿ ,ತೂರಾಡಿ ,ರಕ್ತ ಚಲ್ಲಾಡಿದ
ಮರುಳು ಸಾಮ್ರಾಟರು.
ಸಾಮ್ರಾಜ್ಯಶಾಹಿಗಳಿಗೊಂದು ಸವಾಲಾಗಿ
ಬದುಕಿದ್ದವಳು ನಮ್ಮ ಗೌರಿ
ಹೇಳು ಗುರುವೇ
ಗಜಮುಖನೇ ಬಲಿತೆಗೆದುಕೊಂಡನೇ?
ವೈಚಾರಿಕ ನೆಲೆಗಟ್ಟು ಅಲ್ಲಾಡಿಸುವ
ಧ್ಯೇಯ ಮಹಾವಾಕ್ಯ
ನೆನಪಾಗುತ್ತಿದೆ ಇಂದು ನನಗೆ
ಓ ಸದ್ಗುರುವೇ
ಇಂದೇ ದೀಕ್ಷೆ ನೀಡು ನನಗೆ ,
ಪಾತಕಿಗಳನ್ನು ಕೊಲ್ಲಲೇ?
ವೈಚಾರಿಕ ಕ್ರಾಂತಿ ಎಬ್ಬಿಸಲೇ?
ಅಹಂ ಬ್ರಹ್ಮಾಸ್ಮಿ ಜಪಿಸುತ್ತಲಿರಲೇ?
ಹೇಳು ಓ ಸದ್ಗುರುವೆ ನೀನೊಬ್ಬನೇ
ವೈಚಾರಿಕ ಪುರುಷೋತ್ತಮ.
ಭೀಕರ ಬರಗಾಲ ಬಡವರ ಜೀವದ
ಸವಿಯ ನೋಡಲೆಂದು ಮಳೆಹನಿಯು ಮೊಡದಲ್ಲಿ ಹಿಡಿದಿಟ್ಟು ಬಂದಿದೆ ಬರಡು ಭೂಮಿಗೆ ಇರುವ ನೀರು ನುಂಗಿ ಬಿರುಕು ಹೊಡೆಯಲೆಂದು..................
ತನ್ನೊಡಲ ದಣಿವು ತೀರಿಸಿಕೊಳ್ಳಲು ರೈತರ ಕಂಬನಿಯ ಕುಡಿದು ಅಟ್ಟಹಾಸದಿ ಅಟ್ಟಕ್ಕೇರಿದೆ ನಾನಿಂದು ನಿಮ್ಮ ಅಪೇಕ್ಷೆಗಳನ್ನು ನಿರಾಸೆಗೊಳಿಸಿದೆ ಎಂದು................
ತಂಗಾಳಿಗೆ ಹೊಯ್ಯ್ಯ್ಯ್ಯ್ ಎಂದು ನಿಂತು ಕುಣಿದಾಡುವ ಬೆಳೆದು ನಿಂತ ಬೆಳೆಗಳು ಹೊಲದಲ್ಲಿ ನೀರಿಲ್ಲದೆ ಸತ್ತು ಬಿದ್ದಿವೆ............
ಬೆನ್ನು ಮೂಳೆಗೆ ಅಂಟಿಕೊಂಡಿದೆ ಬಡ ರೈತನ ಹೊಟ್ಟೆಯಿಂದು ಮಕ್ಕಳ ಬಾಡಿಹೋದ ನಗು ಮುಖಗಳು ಹೂವಿನ ಹಾಗೆ ಅರಳಲೆಂದು ಬೇಡಿದೆವು ಸರ್ಕಾರವ ಒಂದೊತ್ತು ಊಟವಿಡಲೆಂದು...............
ನಮ್ಮ ಕರುಳ ಕೂಗು ಅಧಿಕಿರಿಗಳ ಕಿವಿ ಸೇರುವಷ್ಟರಲ್ಲಿ ನಮ್ಮಲ್ಲಿ ಉಳಿದ ರಕ್ತ ಮಾಂಸಗಳು ಕಿತ್ತು ತಿಂದರೂ ಲಂಚದ ರೂಪದಲ್ಲಿ ನ್ಯಾಯ ಕೇಳಲು ನಾವಾಕಿದ ಪ್ರತಿ ಹೆಜ್ಜೆಗೂ..................
ನಮ್ಮಣ್ಣರಸಿ ಬಂದ ಬರಗಾಲಕ್ಕಿರುವ ಕರುಣೆಯು ಇವರಿಗಿಲ್ಲ ನಮ್ಮ ನೋವು ಅರಿತು ನ್ಯಾಯ ನೀಡುವ ಮಾನವತ್ವ ಇವರಲ್ಲಿಲ್ಲ ಉಳಿದಿಲ್ಲ.................
ಚಕ್ರದ ಭಲದಿಂದ ಗೆಲ್ಲುತ್ತ ಬಂದ
ಇಡೀ ಭಾರತ. ಖಂಡವನ್ನ
ವಿಜಯದೊಂದಿಗೆ ಬಂದು ತಲುಪಿದ
ತನ್ನ. .............. ರಾಜ್ಯವನ್ನ
ಚಕ್ರಮಾತ್ರ ನಿಂತು ಬಿಟ್ಟಿತು ರಾಜ್ಯದ
ಹೊರಗೆ......... ಒಳಬರದೆ
ಹೇಳಿತ್ತು ನೀನು ಜಯಿಸಬೇಕು ನಿನ್ನ
ತಮ್ಮಂದಿರನ್ನ ...ನಿಇನ್ನು ಪೂರ್ತಿಗೆದ್ದಿಲ್ಲವೆಂದು
ನೀ ಅವರನ್ನು ಜಯಿಸಿದರೆ ಹೊಳ ಬರುವುದಾಗಿ
ನುಡಿದಿತ್ತು ಆ ಸುದರ್ಶನ ಚಕ್ರ..ಅಂದು
ಭರತ ಆಹ್ವಾನಿಸಿದ್ದ ಯುದ್ದಕ್ಕೆ ತಮ್ಮಂದಿರನ್ನ
ಅಣ್ಣನಿಗೆ ಬೆಲೆಕೊಟ್ಟು ಸಾಮ್ರಾಜ್ಯ ಬಿಟ್ಟು
ಸನ್ಯಾಸತ್ವಕ್ಕೆ ಹೊರಟು ಹೋದರೆಲ್ಲ
ಒಬ್ಬ ತಮ್ಮ ಮಾತ್ರ ಎದುರಿಸಿ ನಿಂತಿದ್ದ
ಭರತನನ್ನ.................
ಆತನೇ ಅಜಾಂಡ........... ಬಾಹುಬಲಿ
ಭರತನಿಗೆ ಅಲುಗಡಿಸಲಾಗಲಿಲ್ಲ.....
ಮಲ್ಲಯುದ್ದಲ್ಲಿ..... ಬಾಹುಬಲಿಯನ್ನ
ಬಾಹುಬಲಿಯನ್ನ ದಿಟ್ಟಿಸಿ ನೋಡಲಾಗಲಿಲ್ಲ
ದೃಷ್ಟಿಯುದ್ಧದಲ್ಲಿ
ಬಾಹುಬಲಿ ತಡೆಯಲಾಗಲಿಲ್ಲ ..........
ಜಲಯುದ್ದದಲ್ಲಿ ............
ಕೊನೆಗೂ ಸೋತು ಸುಣ್ಣವಾಗಿದ್ದ ಭರತನಲ್ಲಿ
ಯಾವ ರಾಜ್ಯದಾಸೆಗೂ ಅಣ್ಣನ ವಿರುದ್ಧ
ನಿಲ್ಲಲಿಲ್ಲ.............ಬಾಹುಬಲಿ
ಅವ ಮಾಡಿದ್ದ ಅಣ್ಣನ ತಪ್ಪಿನ ಜ್ಞಾನೋದಯಕ್ಕಾಗಿ
ಇಂದಿಗೂ ಆತನು ನಿಂತಿದ್ದಾನೆ ಯಾವುದರ
ಆಸೆ ಇಲ್ಲದೆ........... ಬೆತ್ತಲೆಯಲ್ಲಿ