ಸಿಹಿ ಜೇನಿಗಿಂತ ಸವಿಯಾದ ಮಾತುಗಳು ಮನದಲ್ಲಿ ಎಂದಿಗೂ ತೊಳೆಯಲಾಗದ
ಕಲ್ಮಶ ಸುಟ್ಟರು ಹೋಗುವುದಿಲ್ಲ ಈ ಸ್ವಾರ್ಥ ಜನರಲ್ಲಿ...................
ಮಣ್ಣಿಗಿಲ್ಲದ ಸ್ವಾರ್ಥ ಗಾಳಿಗಿಲ್ಲದ ಸ್ವಾರ್ಥ
ನೀರಿಗಿಲ್ಲದ ಸ್ವಾರ್ಥ ಅವುಗಳ ಮೇಲೆ
ಆಧರಿತವಾಗಿ ಬದುಕುವ ಈ ಅನ್ಯಾಯದ ಪಾಪಿ ಜನರಿಗೆತಕೆ ಎಂದು ತಿಳಿಯಲ್ಲ ನನಗೆ..............
ಒಬ್ಬರ ಸಂತೋಷ ನೋಡಲಾರರು
ತಾವೆಂದು ಸಂತೋಷವಾಗಿರಲಾರರು
ಮಾತು ಬಾರದ ಲೋಕವೊಂದಿದ್ದರೆ ಎಷ್ಟು ಚಂದ ಆಗೇನಾದರು ಇದ್ದಲ್ಲಿ ಯಾವ ಮನುಷ್ಯನು ಜೀವಂತವಾಗಿ ಸತ್ತ ಮನಸ್ಸಿನೊಡನೆ ಬದುಕುವ ಪರಿಸ್ಥಿತಿ ಬರಲಾರದು ಎಂದಿಗೂ..............
#ಕೊನೆಗೂ ಸಿಲಿಕಿತು ಇ ಹೃದಯಪ್ರೀತಿಯ ಸುಳಿಗೆ
ಈ ಸೃಷ್ಟಿಯ 7 ಅದ್ಭುತಗಳಲ್ಲಿ ನೀನೊಂದು ಅದ್ಬುತವು ನನಗೆ
ಪ್ರತಿ ರಾತ್ರಿಯೂ ನಿನ್ನ ಕನಸುಗಳು ಬಗೆ ಬಗೆ
ನಿನ್ನಜೊತೆ ಕಳೆಯೋ ಪ್ರತಿ ಕ್ಷಣವೂ ಸಂತೋಷದ ಗಳಿಗೆ
ನಿನ್ನ ಪ್ರೀತಿ ಇಲ್ಲದ ಮೇಲೆ
ಕಾರಣವಿಲ್ಲದೇ ಹರಿಯುತ್ತಿದೆ ಕಣ್ಣೀರಿನ ಹೊಳೆ.
ಸಾಕೆನಿಸಿದೆ ಈ ಮಹತ್ತರ ಜೀವನದ ಸಂಕೋಲೆ
ಇಷ್ಟಾದರೂ ಮತ್ತೆ ಮತ್ತೆ ಬರೆಯಬೇಕೆಂದೆನಿಸಿದೆ ನಿನಗಾಗಿ,
ಪ್ರೇಮದ ಓಲೆ!
ಕಂದ ನಿನ್ನ ನೆನಪಲ್ಲಿ
ನನ್ನ ಪೂರ್ತಿ ಜೀವನ ಕಳೆಯಲಿ..........
ಮುದ್ದು ಮುಖದ ಗಂಧದ
ಗೊಂಬೆ ನೀನು ಕಿರುನಗೆಯ ಕಿನ್ನರಿ
ತೊದಲು ಮಾತನಾಡುವ ಬಂಗಾರಿ.........
ಕಾಲ್ಗೆಜ್ಜೆ ಸದ್ದು ಕದ್ದು ಕದ್ದು ನಿನ್ನ
ಪುಟ್ಟ ಪುಟ್ಟ ಪಾದಗಳನ್ನು ಮುದ್ದಾಡುತ್ತಿದೆ
ನನ್ನ ಕಣ್ಣು ಮುಚ್ಚಿ ಮಗಳೇ.............
ನವ ಮಾಸಗಳೊತ್ತರೇನು
ಮಲ್ಲಿಗೆಯಂತೆ ಮೃದು ನೀನು
ಈ ಅಮ್ಮನಿಗೆ ಮರು ಜನ್ಮ ಕೊಟ್ಟ
ತಾಯಿ ನೀನು..............
ಅಳುತ ನೀನು ನಗುತ ನೀನು
ನನ್ನ ಗಮನವ ಸೆಳೆಯುವೆ ಪುಟ್ಟ
ಕಡೆವೆರೆಗೂ ನಿನ್ನೊಡನೆ ನಾನಿಲ್ಲದಿದ್ದರು
ನನ್ನುಸಿರ ಹೆಸರು ಬೆರೆಸಿಕೊಡುವೆ ಗಾಳಿಗೆ ನೀನಿರುವವರೆಗೂ ನನ್ನ ಮಗಳ ಕಾಯೆ ಗಾಳಿ ಎಂದು..................
ನಿನ್ನ ಆದಿಯಲ್ಲಿಂದ ಮುಳ್ಳುಗಳೆಲ್ಲಾ ನನ್ನ ಕಣ್ಣೀರ ಹನಿಗಳಾಗಿ ನೆಲ ಸೇರಲಿ ನಿನ್ನ ಪ್ರತಿ ಹೆಜ್ಜೆಗೆ ದುಂಬಿಮುಟ್ಟದ ಹೂವಾಗಿ ಮಗಳೇ......
ಮಾನ್ವಿತಾ ಎಲ್ಲರ ಮನದಲ್ಲಿ
ಅರಳಿದ ಮೊಗ್ಗಾಗಿ ನಿ ಬಾಳು ನಿನ್ನ ನೆನೆದ ಕ್ಷಣಮಾತ್ರದಲ್ಲಿ ಮಂದಹಾಸದ ಸವಿಯಾಗಿ ನೀ ಸೇರು ನನ್ನಲ್ಲಿ ನೀನಿರುವ ನನ್ನ ಹೃದಯದಲ್ಲಿ............