Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಯಾವ ಮಾಯೆಯು
ಮುಸುಕಿತು ನಿನ್ನನು!!
ಮರೆತು ಹೋದೆ ಹೇಗೆ
ನೀ ಈ ಪ್ರೇಮದ ಬಗೆ!!
ಎಲ್ಲ ತಿಳಿದೂ ತಳಿಯದಂತೆ
ನಟನೆ ಏತಕೆ ನನ್ನ ಬಳಿಗೆ!!
ಎಲ್ಲ ಸತ್ಯವ ಸುಳ್ಳು ಮಾಡುವ
ಪಣವ ತೊಟ್ಟೆ ನೀ ಏತಕೆ!!
ಏನ ಹೇಳಲಿ ನಿನ್ನ ವರಸೆಗೆ
ಮೋಸ ಹೋದೆನೇ ತಿಳಿಯೆನು!!
ಏನೇ ಆದರೂ ಮುಸುಕ ಸರಿಸಿ
ನೋಡಬಾರದೇ ಒಮ್ಮೆ ನನ್ನನು!!
- ಪಿ.ಜಿ.ಜ್ಯೋತಿ
17 Jul 2017, 12:32 pm
ಯಾಕಾಗಿ ಇರುಳ
ತಂದೆ ನೀ ಓ ನೇಸರ!!
ಯಾಕಾಗಿ ಬಂತು ನನಗೆ
ಇಂದು ಈ ಬೇಸರ!!
ಈ ಇರುಳಿನ ಏಕಾಂತಕೆ
ನಾನೇತಕೆ ಮಣೆ ಹಾಕಿದೆ!!
ಅವನಿಲ್ಲದ ಈ ಇರುಳಿನ
ಅರಿವೇತಕೆ ಹೀಗಾಗಿದೆ!!
ಸುಡು ಬಿಸಿಲಿನ ಉರಿ ತಾಪವು
ಹಿತ ನೀಡಿತೇ ಈ ಮನಸಿಗೆ!!
ಈ ಇರುಳಿನ ಸಂತಾಪವು
ನನ್ನ ಜಡವಾಗಿಸಿ ನಗುವಂತಿದೆ!!
ಇರುಳಲ್ಲಿ ವಿರಹ ಗೀತೆ
ಮನದಲ್ಲಿ ಮನೆ ಮಾಡಿ!!
ಸಾಕಾಯಿತು ಈ ಇರುಳ
ನೋವನ್ನು ಕೊನೆ ಮಾಡು!!
ಓ ನೇಸರ ನೀ ಬೇಗ ಬಾರ
ಇರುಳನು ಸರಿಸಿ ಬೆಳಕ ತಾರ!!
ಅಂಧಕಾರದ ಬದುಕ ನೀನು
ಅಂದವಾಗಿಸು ಬೇಗ ಬಾರ!!
- ಪಿ.ಜಿ.ಜ್ಯೋತಿ
17 Jul 2017, 12:21 pm
ಬೃಂದಾವನದಿ ಹಾಲಿನ ಬೆಳದಿಂಗಳು
ಕೃಷ್ಣನ ಕಾಣದೆ ರಾಧೆ ಕನವರಿಸಿದಳು
ಮೆಲ್ಲನೆ ಕಳ್ಳ ಕೃಷ್ಣನ ಹೆಜ್ಜೆ ಕಂಡಿತು
ರಾಧೆಯ ಕಣ್ಣಲ್ಲಿ ಹುಸಿಮುನಿಸು ಮೂಡಿತು
ಕೊಳಲ ನಾದವ ನುಡಿಸಲು ಕೃಷ್ಣ
ಮೋಡ ಮುಸುಕಿ ಹನಿಯು ಜಿನುಗಿತು
ರಾಗದಿ ತಾಳಕೆ ಕುಣಿಯಲು ರಾಧೆ
ಮಳೆಯಲಿ ಮಿಂದ ಮೊಗವು ಮಿನುಗಿತು
ದೂರದಿ ಬೀಸಲು ಚಳಿಗಾಳಿ
ಸನಿಹಕೆ ಬಂದಳು ಓಡೋಡಿ
ಮೋಹನನು ಕೈ ಹಿಡಿದು ಸೆಳೆಯಲು
ಮೋಹನಾಂಗಿಯು ಕರಗಿದಳು
ಕಣ್ಣ ರೆಪ್ಪಯ ಬಡಿಯಲು ರಾಧೆ
ಮದನನು ಕಣ್ಚುಂಬಿಸಿದನು
ಹೂವಿನ ಅದರದಂತೆ
ತುಟಿಯ ಜೆನು ಸವಿದನು
- Jayanthi
17 Jul 2017, 11:43 am
ಕನ್ನಡದಲ್ಲಿ ಕಲರವ
ಮೂಡಿಸಿದ ಹೆಮ್ಮೆಯ
ಕನ್ನಡ ಕವನ!!
ಚಿಲಿಪಿಲಿ ಹಾಡುವ
ಹಕ್ಕಿಯ ಗೂಡಿದು
ನಮ್ಮ ಕನ್ನಡ ಕವನ!!
ನವ ಯುವ ಕವಿಗಳ
ಹೊಸ ಹೊಸ ಭಾವದಿ
ತುಂಬಿಹ ಕನ್ನಡ ಕವನ!!
ಹೊಸ ಬರಹಗಳ
ಚಿಗುರಿನ ಹಸಿರನು
ಹುರಿದುಂಬಿಸಿದ ಕವನ!!
ನವರಸ ತುಂಬಿಹ
ರಸ ಭಾವ ಇದು
ನಲುಮೆಯ ಕನ್ನಡ ಕವನ!!
ಸಾರುತ ಚಿಲುಮೆಯ
ಸಾಗಲಿ ಎಲ್ಲೆಡೆ
ಸುಮಧುರ ಕನ್ನಡ ಕವನ!!
- ಪಿ.ಜಿ.ಜ್ಯೋತಿ
17 Jul 2017, 11:35 am
ಹಸಿವು ಎಂಬ ಕ್ರೂರ ಮೃಗವು
ನನ್ನನ್ನು ಬೇಟೆಯಾಡಿ ಕಿತ್ತು ತಿನ್ನುವಾಗ
ನಾ ಹೇಗೆ ಯೋಚಿಸಲಿ ಹೇಳು
ನೆನೆದು ಬೇರೆ ಭಾಗ್ಯದ ಯೋಗವ!!
ಧೂಳು ಕಣಗಳು ಗಾಳಿಯಲ್ಲಿ ಬೆರೆತು
ಆಹಾರವಾಗಿ ನನ್ನ ಉದರ ಸೇರಬಾರದೇ
ಸೇರಿ ತೀರಿಸಬಾರದೇ ನನಗೆ ಅಂಟಿರುವ
ಈ ಹಸಿವಿನ ರಣ ಬಾಧೆಯನು!!
ತುತ್ತು ಅನ್ನದ ಋಣವು ಎತ್ತ ಹೋಯಿತು ಕಾಣೆ
ಅರಿವು ಮೂಡಿಸಿತೇ ಆ ನೆತ್ತಿ ಸುಡುವ ಬಿಸಿಲು
ಯಾವ ಬೇಧವ ನಾ ಮಾಡಿ ತೀರಲಿ ಹೇಳು
ನೆನೆದಾಗ ಕಡು ಶಾಪ ಬಂದು ನನ್ನ ಕಾಡಿತೇ!!
- ಪಿ.ಜಿ.ಜ್ಯೋತಿ
17 Jul 2017, 11:18 am
ನನ್ನವಳ ನೆನಪು ಸದಾ ನನ್ನ ಮನದಲ್ಲಿರಲು,
ನನ್ನ ನೆನಪು ಅವಳಿಗೆ ಒಮ್ಮೊಯೂ
ಬಾರದಿರಲು,
ಆದರೂ ಬೇಸರವಿಲ್ಲ ಎನಗೆ ಕಾರಣ, ಅವಳು ನನ್ನವಳು..
Spb..@#
- Spb...@#
17 Jul 2017, 11:08 am
ಸಾಲು ಕಂಬಗಳ ಹಾದಿಯಲ್ಲಿ
ಸಾಲು ದೀಪಗಳ ನಡುವೆ ರಾತ್ರಿಯಲ್ಲಿ!!
ಏಕಾಂಗಿಯಾಗಿ ನನ್ನವಳು
ಸಾಗಿ ಬರುತಿಹಳು ನಾನು ಇರುವಲ್ಲಿ!!
ಆ ಮೋಡದ ರವಿಕೆಯನು ಹೊದ್ದು
ನೀಲ ಬಾನಿನ ಸೀರೆ ಮೈಗೆ ಸುತ್ತಿಸಿಕೊಂಡು!!
ತಾರೆಗಳ ಒಡವೆಯ ಮಣಭಾರ ಹೇರಿಕೊಂಡು
ಬೀಗುತಲೇ ನನ್ನೆಡೆಗೆ ಸಾಗಿ ಬಂದಿಹಳು!!
ಚಂದ್ರನನೇ ಹಣೆಬೊಟ್ಟಾಗಿಸಿ ನಗುನಗುತಲೇ
ಬೆಳದಿಂಗಳ ತಾ ಹೊತ್ತು ತಂದಿಹಳು!!
ನೈದಿಲೆಯ ನಾಚಿಕೆಯು ತುಂಬಿರುವ ಕಣ್ಣುಗಳು
ಅನುರಾಗದಿಂದ ನನ್ನ ಬಾ ಎಂದು ಕರೆದಿಹವು!!
ಆ ಮದನ ಕನ್ನಿಕೆಗೆ ಶರಣಾಗಿ ನಿಂತಿರುವೆ
ವಲಿದು ಬಂದವಳ ನಾ ದೂರಲಾರದೇ!!
ಭಾವದಲಿ ಮೈ ಮರೆತು ಬೆಸೆದುಕೊಂಡಿಹ
ಒಲವು ಬೆರೆತು ಹೋಯಿತು ಈ ಬದುಕಿನೊಡನೆ!!
- ಪಿ.ಜಿ.ಜ್ಯೋತಿ
17 Jul 2017, 09:45 am
ದೇವರು ಮಾಡಿದ ಮೋಸಕೆ ನನ್ನ ಈ ಜನ್ಮ ಮತ್ತು ಈ ಜನ,
ಕೊಳಕು ಮನಸ್ಸಿನ ಮನುಜರಿಗೆ ದೇವಸ್ಥಾನದಲ್ಲಿ ಮಜ್ಜನ,
ನಾ ಬಯಸಿದ್ದೆನೆ ಈ ರೀತಿ ಜನ್ಮ..??
ಸಾಕು ಸಾಕಾಯಿತು ಈ ನಯವಂಚಕ ಜನರ ಜೊತೆ ಈ ಜನುಮ,
ಕರುಣಿಸು ದೇವಾ ಪ್ರಾಣಿಪಕ್ಷಿ ಸಂಕುಲದಲ್ಲಿ
ನನ್ನ ಮುಂದಿನ ಮರುಜನ್ಮ.....
Spb..@#
- Spb...@#
17 Jul 2017, 01:01 am
ಕರಗಿದರೂ ಕಲ್ಲು,
ಕರಗದೆ ನಿನ್ನ ಕಲ್ಲು ಮನಸು,
ಕರಗದ ಆ ಮನಸು,
ಕರಗುವ ಕಲ್ಲಿಗಿಂತ ಕಡೆ
ಓ ಮನಸೇ...
- Spb...@#
16 Jul 2017, 06:03 pm
ಬಾ ಬಾ ನನ್ನ ಚೆಲುವಿನ ತಾರೆ
ಬೊರ್ಗರೆವ ಕಡಲ ತೊರೆಯಂತೆ
ಉಕ್ಕುವ ಹಾಲಿನ ನೊರೆಯಂತೆಣ್
ನಲುಮೆಯ ಭಾವ ಸೊಗಸಾದ
ಹೂವಂತೆ .
- shree
16 Jul 2017, 05:41 pm