Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಪ್ರಪಂಚದಲ್ಲಿ ಯಾವುದೇ ನೋವಿರಲಿ
ತಾಯಿಯ ಮಡಿಲಲ್ಲಿ ಮಲಗಿ ಮರೆಯಬಹುದು.
ಆದರೆ ಆ ತಾಯಿಯೇ ಕಷ್ಟ ಕೊಟ್ಟರೆ
ಪ್ರಪಂಚವೆಲ್ಲಾ ಸಮಾಧಾನ ಪಡಿಸಿದರೂ ಸಾಲದು.
ಜೀವನ ಪೂರ್ತಿ ಜೊತೆಗಿದ್ದು ಕಾಯಬೇಕಾದ
ಧೈರ್ಯವೇ ಮಧ್ಯದಲ್ಲಿ ಬಿಟ್ಟು ಹೋದರೆ
ಕೈ ಹಿಡಿದು ನಡೆಸುವವರ್ಯಾರು
ನಿನ್ನ ಪ್ರೀತಿ ಮರಳಿ ಕೊಡುವವರರು......
ಒಳ್ಳೆಯ ಮಕ್ಕಳಿಗೆ ಒಳ್ಳೆಯ ತಂದೆ-ತಾಯಿ ಸಿಗಲ್ಲ.
ಒಳ್ಳೆಯ ತಂದೆ-ತಾಯಿಗೆ ಒಳ್ಳೆಯ ಮಕ್ಕಳು ಸಿಗಲ್ಲ.
ದೇವರಿಗಂತು ಇವರ ನೋವು ತಿಳಿಯಲ್ಲ
ಯಾಕೆಂದರೆ ಅವನಿಗೂ ಯಾರು ಇಲ್ಲ.......
- ಚುಕ್ಕಿ
19 Mar 2017, 06:09 pm
ಗಾಂಧಿತಾತ! ಗಾಂಧಿತಾತ!
ನಿಂತುಬಿಟ್ಟೆಯೇ ನಗುತ! ನಗುತ!
ಆಳುವವರಿಂದಲೆ ನಿನಗೆ ಮೌಲ್ಯ
ಅಧಿಕಾರ ಉಳ್ಳವರಿಂದಲೆ ನಿನ್ನ ಅಪಮೌಲ್ಯ
ಮೆರೆಯುತಿದ್ದೆ ಆರ್ಥಿಕತೆಯ ಅರಸನಾಗಿ
ಸದ್ದಿಲ್ಲದೆ, ಸಮಾದಿಯಾದೆ ಮೌನವಾಗಿ
ನಿನಗಾಗಿ ಅಲೆಯುವವರು ಒಂದುಕಡೆ
ನಿಂತಲ್ಲಿಯೆ ನಿಂತು ಕೊಳೆಯುವೆ ಇನ್ನೊಂದುಕಡೆ
ಉಳ್ಳವರ ಬಾಳಲ್ಲಿ
ಇಲ್ಲದವರ ಮನದಲ್ಲಿ
ಇಳೆಯಲ್ಲ ನೆರಳಾಗಿ
ನಿನಗೆಲ್ಲ ಮರುಳಾಗಿ
ಬೆಳಗಿದೆ ಎಲ್ಲರ ಬೆಳಕಾಗಿ
ಕ್ಷಣಹೊತ್ತಿನ ಆಣಿಮಾತಿನಲ್ಲಿ
ಕರಗಿದೆ ಮಸುಕಾಗಿ
ಎಲ್ಲಿ ಸೇರಿವೆ? ಏಕಾಂಗಿಯಾಗಿ!
ಬಹುಜನರ ಹವಣಿಸುತ್ತಿದ್ದ ನೀಗಿಸಲು
ಹಲವರ ಅಡಗಿಡು ಮಾಡಲು
ಕಪ್ಪನ್ನು - ಬಿಳಿಯಾಗಿಸಿ
ದೇಶವ ಮುನ್ನುಗ್ಗಿಸಿ
ವಿಜಯದ ಕಹಳೆ ಮೊಳಗಿಸಲೆಂದು
ನಿನ್ನ ಬಣ್ಣವ ಬದಲು ಮಾಡಿ
ನಿನಗೊಂದು ಆಕಾರ ನೀಡಿ
ಹಲವು ನಿಯಮಗಳ ಮಾಡಿ
ಕರೆದರು, ಕರೆಮಾಡಿ
ಇದೇ ಜನನಾಕನ ನುಡಿ.
-ಶಾರದೆ
- ಶಕುಂತಲಾ
19 Mar 2017, 05:16 pm
ಮುದ್ದಾದ ಮಗುವನ್ನು ಮಣ್ಣಲ್ಲಿ ಮುಚ್ಚಿಟ್ಟು
ಆ ಮಣ್ಣಮೇಲೆ ನೀನೆಗೆ ನಿಂತಿರುವೆ
ಕ್ರೂರವಾದ ತಂದೆಯೇ......
ಅಮ್ಮನ ಗರ್ಭದಲ್ಲಿ ನವಮಾಸಗಳು ಅಡಗಿದ್ದು
ರೂಪುಗೊಂಡ ಗೊಂಬೆಯನ್ನು ಆ ತಾಯಿ ನೋಡುವ ಮುನ್ನವೇ ಭೂ ತಾಯಿಯ ಮಡಿಲು
ಹೇಗೆ ನೀ ಸೇರಿಸಿದೆ..........?
ಪಾಪ ಆ ಮಗುವಿಗೆ ಸತ್ತಮೇಲೂ ತಿಳಿದಿಲ್ಲ
ಅದು ಒಂದು ಹೆಣ್ಣು ಮಗುವೆಂದು.
ಅದರ ಜನನವೇ ಮರಣಕ್ಕೆ ದಾರಿಯಾಯಿತೆಂದು.
ಹೇಗೆ ನೀನು ಸಾಯಿಸಿದೆ ಆ ಕಣ್ಣು ತೆರಿಯದ
ಮಗುವನ್ನು...............
ಎಂದಿಗೂ ಮರೆಯದಿರು ನೀನು....!!!
ನಿನ್ನ ಹೆತ್ತ ತಾಯಿಯು ಒಂದು ಹೆಣ್ಣೆಂದು.
ಪುರುಷ ಪ್ರಧಾನ ಪ್ರಪಂಚದಲ್ಲಿ ನೀನೊಂದು
ಮರೆತಿರುವರೆ.
ಈ ಸೃಷ್ಠಿಗೆ ಮೂಲ ಆಧಾರ ಸ್ತ್ರೀ ಮಾತ್ರವೆಂದು.
- ಚುಕ್ಕಿ
19 Mar 2017, 03:50 pm
ಪ್ರಪಂಚವೇಲ್ಲಾ ಸುತ್ತಿ ನೋಡೊಣ ಸುಸ್ತಾಗೋವೆರೆಗೂ .
ಆ ಆಕಾಶಕ್ಕೆ ಹಾರಿ ಹೋಗೋಣ ಸ್ವತಂತ್ರದ ಹಕ್ಕಿಗಳಾಗಿ .
ಈ ಚಿಕ್ಕ ಲೋಕವನ್ನೇ ನೋಡಿಬರೋನ ಒಂದು ಅಂಗುಲವು ಮರಿಯದಹಾಗೆ .
ಅಂದವಾದ ಪ್ರಕೃತಿಯ ಆಸ್ವದೀಸೋನ ಅರ ಗಳಿಗೆಯೂ ಕಣ್ಣು ಮುಚ್ಚದೆ .
ನಿಲ್ಲದ ಕಾಲದ ಜೊತೆ ಹೋಡೋನ
ಗಾಳಿಗೆ ಪರಿಚಯವಾಗುವ ಹಾಗೆ .
ಮುಗುಳ್ನಗೆಯಿಂದ ಸಾಗೋಣ ಸ್ನೆಹವೇಂಬ ಜಗತ್ತಿನಲ್ಲಿ .
- ಚುಕ್ಕಿ
19 Mar 2017, 03:18 pm
ಸೀಮಿತ ಪ್ರಪಂಚದಲ್ಲಿ ಬೆಂದು ..
ಪಂಜರದ ಪಕ್ಷಿಯಾಗಿ ಬೆಳೆದು ..
ಕೋಮಲ ಹೃದಯಕ್ಕೇ ಗಾಸಿಮಾಡಿ ..
ಅರಿಯಲಾರದ ಮನಸ್ಸುಗಳೊಂದಿಗೆ ಬೆಳೆದು ..
ಗಡಿಯ ನೆರಳಲ್ಲಿ ಅಂಚಲೆಯಾಗಿ ಬೆಳೆದು..
ಎತ್ತರಕ್ಕೆ ಮೆರೆಯುವ ಬಾಣಗಲದವಳು..
ಬರಿ ಸೀಮಿತ, ಗಡಿಯವಳಲ್ಲ ಅವಳು ಅಂಚಲೆ ಬಾನೆತ್ತರದ ಅಂಚಲೆ..
- ಚುಕ್ಕಿ
19 Mar 2017, 03:12 pm
ಅವಳೆಂದರೆ ಅಲೆಮಾರಿಯ
ರೆಕ್ಕೆ ಮುರಿದು ಹೋದ ತರುವಾಯ
ಪೂರ್ಣ ನಗು ಚೆಲ್ಲಿದವಳು ಈಗೀಗ
ಬಡಿತಕ್ಕೂ ಸುಂಕ ಕೇಳುವವಳು
ಅರೇ..ಕನಸುಗಳೇ ಸಾವಧಾನಿಸಿ
ಅವಳಿನ್ನು ಮುಚ್ಚಿದ ಕವಾಟ ತೆರೆದಿಲ್ಲ
ಜುಮುಕಿಗೆ ಸಿಕ್ಕಿದ ಮುಂಗುರಿಳ ಕಥೆ
ಕೇಳುವಾಗಲೆಲ್ಲ ನನ್ನ ಎದೆಯೂರಿನ
ಜಾತ್ರೆ ಶುರುವಾಗುತ್ತದೆ
ಇವಳೆಂದರೆ ಮಳೆಗಾಲದ ಬಿರು
ಬಿಸಿಲಂತೆ ಪ್ರಶ್ನೆಗೂ ಮೊದಲಿನ ಉತ್ತರ
ಕೈ ಸಂಧಿಯೊಳಗೆ ಬೆರಳನ್ನು
ಬಂಧಿಸೋ ಒಪ್ಪಿಗೆ ಕೊಡದ್ದು
ಒಲವಿನ ಜುಲ್ಮಾನೆ ಹಾಕಬೇಕಾಗುತ್ತದೆ
ನನ್ನೊಳಗಿನ ಒಂಟಿತನ ತೀರಿಸುವವಳಿಗೆ
ಕನಿಷ್ಟ ರಿಯಾಯಿತಿ ಕೊಡಬೇಕೆಂದಿದ್ದೇನೆ..
ಇವಳೂರಿನ ಹಾದಿಗೆ ತುಸು ಬಿಂಕ
ಹೆಚ್ಚಂತೆ ನನ್ನ ಕಣ್ಣಾಲೆಗೂ ಸಿಲುಕದೇ
ಅವಳ ಹೆಜ್ಜೆ ಗುರುತು
ಮಾಯಿಸಿ ಬಿಡುತ್ತದೆ
ನೆರಳಿನ ಸಂಗ ಹಿಡಿಯೋಣವೆಂದರೆ
ಅವಳೊಳಗೆ ನಾನಿನ್ನು ಅಮಾವಾಸ್ಯೆ..
#ಅವಿಜ್ಞಾನಿ
- ಅವಿಜ್ಞಾನಿ
19 Mar 2017, 02:14 pm
ಹುಡುಗಿಯ ತಿಳಿಕುಡಿಯ ಕಣ್ಣೋಟ ಹುಡುಗನ ಮನಸಿನ ಓಲಾಟ
ಹುಡುಗಿಯ ಅಂದದ ವಯ್ಯಾರದ ಮೈಮಾಟ ಹುಡುಗನಿಗೆ ಮತ್ತಿನ ತೇಲಾಟ
ಹುಡುಗಿಯ "ಅಣ್ಣ " ಎನ್ನುವ ಕೂಗಾಟ
ಹುಡುಗನಿಗೆ ನುಂಗಲಾರದ ತುತ್ತಿನ ಊಟ
ಕೊನೆಗೆ ಕಾಲ್ಕಿತ್ತು ಓಡುವ ಮೇರಥಾನ ಓಟ....
- Irayya Mathad
19 Mar 2017, 11:51 am
ಗೆಳತಿ ನೀ... ಕಾಡಿದೆ ಕಾದಂಬರಿಯಾಗಿ
ನಾ ಕರಗಿದೆ ಕಡಲಾ ನೀರಾಗಿ
ಬರುವೆಯ ಹೃದಯದ ಒಡತಿಯಾಗಿ
ಕಾಯುವೆ ಕಣ್ಣರೇಪೆಯಾಗಿ
ಪ್ರದೀಪ್.ಡಿ ಸೊಬಗು
- ಪ್ರದೀಪ್.ಡಿ
19 Mar 2017, 11:02 am
ಹೇಗಿರುವೆ ಗೆಳತಿ ಪ್ರೀತಿಯ ಇಲ್ಲದ ಆ ಪಾಪಿಗಳ ಬಾನಿನಂಗಳದಲಿ
ಬರುವುದಾದರೆ ಬಾ..........
ನಿನಗಾಗಿಯ ಕಾದು ಕುಳಿತಿರುವೆ
ಈ ಹೃದಯ ದ ಬಾಗಿಲು ತೆರೆದು..
"ಶಶಿ loves ನೇತು "
- Shashi
19 Mar 2017, 10:11 am
ಎಂತಹ ಲೋಕವಿದು ಪೂರ್ತಿ
ಸ್ವರ್ತದಿಂದಲೇ ತುOಬಿರುವುದು .
ಈ ಮನುಷ್ಯರು ಮಾನವತ್ವವೇ
ಇಲ್ಲ ಇವರಲ್ಲಿ ಕಿನ್ಚಿತ್ತು.........
ಒಂದು ಕಾಲದಲ್ಲಿ ದೇವರು ಕೂಡ
ಭೂಮಿ ಮೇಲೆಯೆ ಇದ್ದನOತೆ .
ಮನುಷ್ಯರ ಪಾಪಗಳ ನೋಡಿ
ತಡಿಯಲಾರದೆ ಮಾಯವಾದನoತೆ .
ದೇವರು ಹಣ ಕಂಡು ಇಡಿದಿಲ್ಲ
ಕೊಡು ಎಂದು ಕೇಳಿದರೆ ಕೊಡುವುದು ಇಲ್ಲ .
ಅವನು ಯಾರಿಗೂ ಬಂದುವಲ್ಲ,
ಹಾಗೆ ಇನ್ನಾರಿಗೂ ಶತ್ರುನೂ ಅಲ್ಲ .
ದೇವರೆOದರೆ ನOಬಿಕೆ ,ದೇವರೆOದರೆ
ದೈರ್ಯ ,ದೇವರೆOದರೆ ನಿನ್ನ ಆತ್ಮ ಸಾಕ್ಷಿ .
ಅವನು ಎಲ್ಲೋ ಇರುವುದಿಲ್ಲ ನಿನ್ನಲ್ಲೇ
ಅಡಗಿರುವನಲ್ಲಾ .
ಬೇರೆಯವರ ಒಳಿತು ನೀ ಬಯಸಿದಗೆಲ್ಲಾ
ನಿನ್ನ ರೂಪದಲ್ಲಿ ಅವರಿಗೆ ಕಾಣುವನು .
- ಚುಕ್ಕಿ
18 Mar 2017, 11:09 pm